ಬಾಲಿವುಡ್ನ ಒಂದು (Bollywood Actor Sanjay Dutt) ಕಾಲದ ನಾಯಕ ನಟ ಸಂಜಯ್ ದತ್ ಈಗ ಕನ್ನಡದಲ್ಲಿ ಬಹು ಬೇಡಿಕೆಯ ನಟರೂ ಆಗಿದ್ದಾರೆ. ಕೆಜಿಎಫ್ ಚಿತ್ರದಲ್ಲಿ ಅಭಿನಯಿಸಿದ ಬಳಿಕ, ಸಂಜಯ್ ದತ್ ಬೇಡಿಕೆ ದಕ್ಷಿಣದಲ್ಲಿ (Kannada KD Movie) ಹೆಚ್ಚಾಗುತ್ತಲೇ ಇದೆ. ಈ ನಿಟ್ಟಿನಲ್ಲಿಯೇ ಸುಮಾರು ಆಫರ್ಗಳು ಸಂಜಯ್ ದತ್ರನ್ನ ಹುಡುಕಿಕೊಂಡು ಹೋಗಿದ್ದವು. ಆ ಒಂದು ಸಾಲಿನಲ್ಲಿ ನಟ-ನಿರ್ದೇಶಕ (Jogi Prem Direction) ಜೋಗಿ ಪ್ರೇಮ್ ಕೂಡ ಈ ಒಂದು ಪ್ರಯತ್ನ ಕೂಡ ಮಾಡಿದ್ದಾರೆ. ತಮ್ಮ KD ಚಿತ್ರದ ಟೈಟಲ್ ರಿಲೀಸ್ಗೂ ಕರೆದುಕೊಂಡು ಬಂದಿದ್ದರು. ಅದೇ ರೀತಿನೇ ಈಗ ಕೆಡಿ ಚಿತ್ರಕ್ಕೆ (Sanjay Dutt) ಸಂಜಯ್ ದತ್ ಕಾಲ್ ಶೀಟ್ಗೆ ಕೊಟ್ಟಿದ್ದಾರೆ ಅನ್ನೋ ಸುದ್ದಿ ದಟ್ಟವಾಗಿಯೇ ಹರಿದಾಡುತ್ತಿದೆ. ಇದರ ಅಧಿಕೃತ ಮಾಹಿತಿ ಇಲ್ಲಿದೆ.
ಸಂಜಯ್ ದತ್ ಕನ್ನಡಕ್ಕೆ ಮತ್ತೆ ಬಂದೇ ಬಿಟ್ರು!
ಬಾಲಿವುಡ್ ನಟ ಸಂಜಯ್ ದತ್ ಕನ್ನಡದ ಎರಡನೇ ಚಿತ್ರ ಒಪ್ಪಿದ್ದಾರೆ. ಒಂದಲ್ಲ ಎರಡಲ್ಲ ಹೆಚ್ಚು ಕಡಿಮೆ 60 ದಿನಕ್ಕೂ ಹೆಚ್ಚು ದಿನದ ಕಾಲ್ ಶೀಟ್ ಕೊಟ್ಟಿದ್ದಾರೆ.
ಸಂಜಯ್ ದತ್ ಪಾತ್ರದ ಮೂಲಕವೇ KD ಶೂಟಿಂಗ್ ಶುರು
ಸಂಜಯ್ ದತ್ ಪಾತ್ರದ ಮೂಲಕವೇ KD ಸಿನಿಮಾ ಶೂಟಿಂಗ್ ಆರಂಭಗೊಳ್ಳಲಿದೆ. ಈಗಾಗಲೇ ಡೈರೆಕ್ಟರ್ ಜೋಗಿ ಪ್ರೇಮ್ ಎಲ್ಲ ತಯಾರಿನೂ ಮಾಡಿಕೊಂಡಿದ್ದಾರೆ. ಅದಕ್ಕಾಗಿಯೇ ಈಗ ಶೂಟಿಂಗ್ ಪ್ಲಾನ್ ಕೂಡ ಆಗಿದೆ.
ಇದೇ ತಿಂಗಳ 25 ರಿಂದ KD ಚಿತ್ರದ ಶೂಟಿಂಗ್ ಆರಂಭ
ಕನ್ನಡದ KD ಸಿನಿಮಾದ ಶೂಟಿಂಗ್ ಇದೇ ತಿಂಗಳ 21 ರಿಂದ ಆರಂಭಗೊಳ್ಳುತ್ತದೆ ಎಂಬ ಸುದ್ದಿ ಇತ್ತು. ಆದರೆ ಈಗ ಅದು ನಾಲ್ಕು ದಿನ ಮುಂದಕ್ಕೆ ಹೋಗಿದೆ. ಅಲ್ಲಿಗೆ ಇದೇ ತಿಂಗಳ 25 ರಿಂದ ಶೂಟಿಂಗ್ ಶುರು ಆಗುತ್ತದೆ.
ಡೈರೆಕ್ಟರ್ ಜೋಗಿ ಪ್ರೇಮ್ ಶೂಟಿಂಗ್ ಪ್ಲಾನ್ ಏನು?
ಡೈರೆಕ್ಟರ್ ಜೋಗಿ ಪ್ರೇಮ್ ಇದೇ ತಿಂಗಳ 25 ರಿಂದ ಶೂಟಿಂಗ್ ಪ್ಲಾನ್ ಮಾಡಿದ್ದಾರೆ. ಬೆಂಗಳೂರಲ್ಲಿಯೇ ಚಿತ್ರದ ಚಿತ್ರೀಕರಣ ಮಾಡೋಕೆ ಈಗಾಗಲೇ ಸಿದ್ಧತೆ ಮಾಡಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಎಲ್ಲವನ್ನೂ ಗೌಪ್ಯವಾಗಿಟ್ಟುಕೊಂಡು ಚಿತ್ರೀಕರಣಕ್ಕೆ ಪ್ಲಾನ್ ಮಾಡಿದ್ದಾರೆ.
ಜೋಗಿ KD ಚಿತ್ರದಲ್ಲಿ ಭರ್ಜರಿ ಆ್ಯಕ್ಷನ್ ಅಬ್ಬರ
KD ಸಿನಿಮಾದಲ್ಲಿ ಸಾಕಷ್ಟು ಭರ್ಜರಿ ಸಾಹಸಗಳೇ ಇರುತ್ತವೆ. ಈ ಹಿನ್ನೆಲೆಯಲ್ಲಿ ಜೋಗಿ ಪ್ರೇಮ್ ತಮ್ಮ ಈ ಚಿತ್ರದ ಆ್ಯಕ್ಷನ್ ಸೀನ್ಗಳಿಂದ ಚಿತ್ರೀಕರಣ ಆರಂಭಿಸುತ್ತಿದ್ದಾರೆ. ಆ್ಯಕ್ಷನ್ ಸೀನ್ಗಳಲ್ಲಿ ಬಾಲಿವುಡ್ ನಟ ಸಂಜಯ್ ದತ್ ಕೂಡ ಭಾಗಿ ಆಗುತ್ತಿದ್ದಾರೆ.
ಚಿತ್ರದ ಶೂಟಿಂಗ್ ಲೆಕ್ಕದಲ್ಲಿ ಮೊದಲು ಆ್ಯಕ್ಷನ್ ದೃಶ್ಯಗಳ ಚಿತ್ರೀಕರಣ ಪ್ಲಾನ್ ಮಾಡಲಾಗಿದೆ. ಆ ಮೇಲೆ ಒಟ್ಟೊಟ್ಟಿಗೆ ಒಂದು ಶೆಡ್ಯೂಲ್ ಆ್ಯಕ್ಷನ್ ಮತ್ತು ಇನ್ನೊಂದು ಶೆಡ್ಯೂಲ್ ಮಾತಿನ ಭಾಗದ ಚಿತ್ರೀಕರಣ ಪ್ಲಾನ್ ಮಾಡಲಾಗಿದೆ.
KD ಸಿನಿಮಾದ ಶೂಟಿಂಗ್ಗಾಗಿಯೇ ಅದ್ದೂರಿ ಸೆಟ್
KD ಚಿತ್ರ ರೆಟ್ರೋ ಕಥೆಯನ್ನೆ ಹೊಂದಿದೆ. ಈ ಹಿನ್ನೆಲೆಯಲ್ಲಿಯೇ ಹಳೆ ಕಾಲದ ಸೆಟ್ಗಳನ್ನ ಕೂಡ ಈ ಚಿತ್ರಕ್ಕಾಗಿಯೇ ಹಾಕಲಾಗಿದೆ. ತುಂಬಾ ಸೀಕ್ರೆಟ್ ಪ್ಲೇಸ್ ಅಲ್ಲಿಯೇ ಈ ಒಂದು ಭಾಗದ ದೃಶ್ಯಗಳನ್ನ ತೆಗೆಯಲಾಗುತ್ತದೆ ಅನ್ನೋ ಸುದ್ದಿನೂ ಇದೆ.
ಇದನ್ನೂ ಓದಿ: Sushant Singh Rajput: ಸುಶಾಂತ್ ಸಾವಿನ 3 ವರ್ಷದ ನಂತರ ನಟನ ಫೇವರಿಟ್ ನಾಯಿ ಸಾವು
ಒಟ್ಟಾರೆ KD ಚಿತ್ರಕ್ಕೆ ಸಂಜಯ್ ದತ್ ಬರೋದು ಪಕ್ಕಾ ಆಗಿದೆ. ಜನವರಿ 25 ರಿಂದ ಸಂಜಯ್ ದತ್ KD ಚಿತ್ರದ ಚಿತ್ರೀಕರಣದಲ್ಲಿ ಭಾಗಿ ಆಗುತ್ತಿದ್ದಾರೆ. ತಮ್ಮ ಕನ್ನಡದ ಎರಡನೇ ಚಿತ್ರದ ಬಗ್ಗೆ ಅಷ್ಟೇ ಉತ್ಸುಕರಾಗಿದ್ದಾರೆ. ಈ ಹಿಂದೇನೆ ಜೋಗಿ ಪ್ರೇಮ್ ಹೇಳಿದ ಚಿತ್ರದ ಕಥೆ ಕೇಳಿ ಸಂಜಯ್ ದತ್ ಥ್ರಿಲ್ ಆಗಿದ್ದಾರೆ. ಉಳಿದಂತೆ ಬೇರೆ ಅಪ್ಡೇಟ್ಸ್ ಕೊಡ್ತಾ ಇರ್ತೀವಿ ಕಾಯ್ತಾಯಿರಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ