HOME » NEWS » Entertainment » ACTOR SANCHARI VIJAY BRAIN DEAD CONFIRMED BY APOLLI HOSPITAL DOCTOR SESR

Sanchari Vijay: ಸಂಚಾರಿ ವಿಜಯ್​ ಬ್ರೈನ್​ ಡೆಡ್​ ದೃಢಪಡಿಸಿದ ವೈದ್ಯರು; ನಾಳೆ ರವೀಂದ್ರ ಕಲಾಕ್ಷೇತ್ರದಲ್ಲಿ ಅಂತಿಮ ದರ್ಶನಕ್ಕೆ ಅವಕಾಶ

ಅಂಗಾಂಗ ದಾನದ ಬಳಿಕ ನಾಳೆ ಬೆಳಗ್ಗೆ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಗುವುದು

news18-kannada
Updated:June 14, 2021, 9:22 PM IST
Sanchari Vijay: ಸಂಚಾರಿ ವಿಜಯ್​ ಬ್ರೈನ್​ ಡೆಡ್​ ದೃಢಪಡಿಸಿದ ವೈದ್ಯರು; ನಾಳೆ ರವೀಂದ್ರ ಕಲಾಕ್ಷೇತ್ರದಲ್ಲಿ ಅಂತಿಮ ದರ್ಶನಕ್ಕೆ ಅವಕಾಶ
ಸಂಚಾರಿ ವಿಜಯ್​
  • Share this:
ನಟ ಸಂಚಾರಿ ವಿಜಯ್​ ಅವರ ಬ್ರೈನ್​ ಡೆಡ್​ ಆಗಿದೆ ಎಂದು ಅಪೋಲೋ ಆಸ್ಪತ್ರೆ ವೈದ್ಯರ ತಂಡ ಸ್ಪಷ್ಟಪಡಿಸಿದ್ದಾರೆ. ಈ ಕುರಿತು ಮಾತನಾಡಿರುವ ಆಸ್ಪತ್ರೆಯ ನರ ರೋಗ ತಜ್ಞ ಡಾ. ಅರುಣ್​ ನಾಯ್ಕ್​, ಸಂಚಾರಿ ವಿಜಯ್​ ಅವರ ಮಿದುಳು ಕಾರ್ಯ ನಿರ್ವಹಿಸುತ್ತಿರುವ ಕುರಿತು ಎರಡು ಬಾರಿ ಆ್ಯಪ್ನಿಯ ಪರೀಕ್ಷೆ ನಡೆಸಲಾಗಿದೆ. ಆರು ಗಂಟೆಗಳ ಅಂತರದಲ್ಲಿ ಈ ಪರೀಕ್ಷೆ ನಡೆಸಲಾಗಿದ್ದು, ಎರಡು ಬಾರಿ ಪರೀಕ್ಷೆಯಲ್ಲೂ ಬ್ರೈನ್​ ಕೆಲಸ ಮಾಡುತ್ತಾ ಇಲ್ಲ ಎಂದು ವರದಿ ಬಂದಿದೆ. ಅವರ ಬ್ರೈನ್​ ಡೆಡ್​ ಆಗಿದೆ. ಅವರ ಕುಟುಂಬಸ್ಥರು ಸಂಚಾರಿ ವಿಜಯ್​ ಅಂಗಾಂಗ ದಾನಕ್ಕೆ ತೀರ್ಮಾನಿಸಿದ್ದು, ರಾತ್ರಿ 9. 30ರ ಬಳಿಕ ಈ ಪ್ರಕ್ರಿಯೆ ಶುರವಾಗಲಿದೆ. ಆ ಬಳಿಕ ಅವರ ಸಾವು ದೃಢ ಕುರಿತು ತಿಳಿಸಲಾಗುವುದು ಎಂದರು.

ಸಂಚಾರಿ ವಿಜಯ್​ ಅವರ ದೇಹದಿಂದ ಯಕೃತ್​ (ಲಿವರ್​), ಮೂತ್ರಪಿಂಡ (ಕಿಡ್ನಿ) ಮತ್ತು ಕಣ್ಣುನ್ನು ದಾನ ಮಾಡಲು ಕುಟುಂಬಸ್ಥರು  ನಿರ್ಧರಿಸಿದ್ದಾರೆ. ಈ ಅಂಗಾಂಗ ದಾನ ಪ್ರಕ್ರಿಯೆ ಮೆಡಿಕೋ ಲೀಗಲ್​ ಮೂಲಕವೇ ನಡೆಯಲಿದೆ. ಇದಾದ ಬಳಿಕ ನಾಳೆ ಬೆಳಗ್ಗೆ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಗುವುದು.

ಬ್ರೈನ್​ ಡೆಡ್​ ಆದ ಮೇಲೂ ಮನುಷ್ಯರು ಹಲವಾರು ಗಂಟೆಗಳ ಕಾಲ ಇನ್ನೂ ಜೀವಂತವಾಗಿರುತ್ತಾರೆ. ಹೃದಯದ ಬಡಿತ ನಿಂತ ಮೇಲೆ ಮರಣ ಎಂದು ಘೋಷಿಸಲಾಗುತ್ತದೆ.

ಬ್ರೈನ್​ ಡೆಡ್​ ಕುರಿತು ವೈದ್ಯರ ವರದಿ


ಸಂಚಾರಿ ವಿಜಯ್​ ಮಿದುಳು ಡೆಡ್​ ಆಗಿದೆಯಾ ಇಲ್ಲ ಎಂಬ ಕುರಿತು ಎರಡು ಬಾರಿ  ಆ್ಯಪ್ನಿಯಾ ಪರೀಕ್ಷೆ ನಡೆಸಲಾಗಿದೆ. ಬೆಳಗ್ಗೆ 12 .25 ಗಂಟೆಗೆ ಒಮ್ಮೆ ಸಂಜೆ 7.50  ಗಂಟೆಗೆ ಒಮ್ಮೆ ಆ್ಯಪ್ನಿಯಾ ಪರೀಕ್ಷೆ ನಡೆಸಲಾಗಿತ್ತು. ಆ್ಯಪ್ನಿಯಾ ಪರೀಕ್ಷೆ ವೇಳೆ ಕಣ್ಣಿನ ಮೇಲೆ ಹತ್ತಿಯಿಂದ ಸವರುವುದು, ಕಿವಿಯಲ್ಲಿ ತಣ್ಣೀರು ಹಾಕುವುದು, ಹೀಗೆ ಹತ್ತು ರೀತಿ ಪರೀಕ್ಷೆಯನ್ನು ನಡೆಸಲಾಗಿತ್ತು. ಈ ಪರೀಕ್ಷೆಗಳಲ್ಲಿ ಮೆದುಳು ಸ್ಪಂದಿಸದ ಕಾರಣ ಅವರ ಬ್ರೈನ್​ ಡೆಡ್​ ಎಂದು ಘೋಷಿಸಲಾಗಿದೆ.

ಬ್ರೈನ್​ ಡೆಡ್​ ಆಗಿದ್ದರೂ ಅವರು ಉಸಿರಾಡುತ್ತಿದ್ದು,ಅವರ ದೇಹ ಸ್ಥಿತಿ ಸ್ಥಿರವಾಗಿದ್ದು ಅವರನ್ನು ಮಾನಿಟರ್​ ಮಾಡಲಾಗುತ್ತಿದೆ. ಕುಟುಂಬದ ಇಚ್ಛೆ ಅನುಸಾರ ನಂತರ ಪ್ರಕ್ರಿಯೆಯಲ್ಲಿ  ಅವರ ಅಂಗಾಂಗ ದಾನ ನಡೆಯಲಿದೆ. ಪ್ರೋಟೋಕಾಲ್​ ಪ್ರಕಾರವಾಗಿ ಅಗತ್ಯ ಇರುವವರಿಗೆ ಅವರ ಅಂಗಾಂಗ ದಾನ ಕಸಿ ಶಸ್ತ್ರ ಕ್ರಿಯೆ ನಡೆಸಲಾಗುವುದು. 9.30ರ ಬಳಿಕ ಈ ಪ್ರಕ್ರಿಯೆ ಆರಂಭವಾಗಲಿದ್ದು, ಬೆಳಗ್ಗೆ ವರೆಗೂ ನಡೆಯಲಿದೆ. ನಂತರ ವಿಜಯ್​ ಅವರ ಮೃತ ದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗುವುದು.

ಇದನ್ನು ಓದಿ: ವಿಜಯ್​ರನ್ನು​ ಜೀವಂತವಾಗಿಡಲು ಕುಟುಂಬದ ಕೊನೆ ಪ್ರಯತ್ನ; ಸಾರ್ಥಕತೆಯತ್ತ ಸಂಚಾರಅಂತಿಮ ದರ್ಶನಕ್ಕೆ ಅವಕಾಶ

ಅಗಲಿದ ರಾಷ್ಟ್ರ ಪ್ರಶಸ್ತಿ ವಿಜೇತ ನಟನ ಅಂತಿಮ ದರ್ಶನವನ್ನು ಅಭಿಮಾನಿಗಳಿಗೆ ಕಲ್ಪಿಸಲು ನಿರ್ಧರಿಸಲಾಗಿದೆ.  ಸರ್ಕಾರದ ಕಡೆಯಿಂದಲೇ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ನಾಳೆ ಬೆಳಿಗ್ಗೆ 8-10 ಗಂಟೆವರೆಗೂ ರವೀಂದ್ರ ಕಲಾಕ್ಷೇತ್ರದಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ನಿರ್ದೇಶಕ‌ ಮನ್ಸೋರೆ ತಿಳಿಸಿದ್ದಾರೆ.

ಗೆಳೆಯ ನವೀನ್ ಜೊತೆ ಸಂಚಾರಿ ವಿಜಯ್ ಅವರು ಶನಿವಾರ ರಾತ್ರಿ ಬೈಕ್​ನಲ್ಲಿ ಹೋಗುತ್ತಿದ್ದಾಗ ಅಪಘಾತ ಸಂಭವಿಸಿತ್ತು. ಜೆಪಿ ನಗರ 7ನೇ ಹಂತದಲ್ಲಿ ಅಪಘಾತ ಸಂಭವಿಸಿದ್ದು, ಗೆಳೆಯ ನವೀನ್​ಗೂ ತೀವ್ರ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮೊನ್ನೆ ರಾತ್ರಿ 11 ಗಂಟೆಗೆ ಘಟನೆ ನಡೆದಿದ್ದು, ಮಳೆ ಜೋರಾಗಿದ್ದ ಕಾರಣ ವೇಗವಾಗಿ ಬೈಕ್​ ಓಡಿಸಿದ್ದೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ನವೀನ್​ ಅವರೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರ ಸ್ಥಿತಿ ಸಹ ಚಿಂತಾಜನಕವಾಗಿದೆ
Published by: Seema R
First published: June 14, 2021, 8:59 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories