• Home
  • »
  • News
  • »
  • entertainment
  • »
  • Salman Khan: ಸಲ್ಮಾನ್​ ಖಾನ್ ಕುಟುಂಬಕ್ಕೆ ಕಂಟಕ, ಅಪ್ಪ ಮಗನ ಕಥೆ ಮುಗಿಸ್ತಿವಿ ಅಂದಿದ್ದು ಯಾರು?

Salman Khan: ಸಲ್ಮಾನ್​ ಖಾನ್ ಕುಟುಂಬಕ್ಕೆ ಕಂಟಕ, ಅಪ್ಪ ಮಗನ ಕಥೆ ಮುಗಿಸ್ತಿವಿ ಅಂದಿದ್ದು ಯಾರು?

ನಟ ಸಲ್ಮಾನ್​ ಖಾನ್​

ನಟ ಸಲ್ಮಾನ್​ ಖಾನ್​

Threat Letter to Salman Khan: ಪತ್ರದಲ್ಲಿ ಉಲ್ಲೇಖಿಸಿರುವ ಬೆದರಿಕೆಯ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಲಾಗಿದೆ ಎಂದು ಮೂಲಗಳು ತಿಳಿಸಿದ್ದು, ಪೊಲೀಸರು ಆ  ಪ್ರದೇಶದಲ್ಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

  • Share this:

ಬಾಲಿವುಡ್​ ನಟ ಸಲ್ಮಾನ್ ಖಾನ್ (Salman Khan) ಮತ್ತು ಅವರ ತಂದೆ ಹಾಗೂ ಹಿರಿಯ ಬರಹಗಾರ-ನಿರ್ಮಾಪಕ ಸಲೀಂ ಖಾನ್ (Salim Khan) ಅವರಿಗೆ ಜೀವ ಬೆದರಿಕೆ ಪತ್ರ (threat letter) ಬಂದಿದೆ ಎಂದು ಮುಂಬೈ ಪೊಲೀಸರು ಭಾನುವಾರ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಈ ಪ್ರಕರಣದಲ್ಲಿ ಅಪರಿಚಿತ ವ್ಯಕ್ತಿಯ ವಿರುದ್ಧ ಬಾಂದ್ರಾ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಮತ್ತು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಸುದ್ದಿ ಸಂಸ್ಥೆ ಎಎನ್‌ಐ ತಿಳಿಸಿದೆ. 


ಟೈಮ್ಸ್ ಆಫ್ ಇಂಡಿಯಾ ವರದಿಯ ಪ್ರಕಾರ,  ಸಲೀಂ ಅವರ ಭದ್ರತಾ ಸಿಬ್ಬಂದಿಗೆ ಈ  ಬೆದರಿಕೆ ಪತ್ರ ಸಿಕ್ಕಿದ್ದು, ವರದಿಯ ಪ್ರಕಾರ “ಸಲೀಂ ಖಾನ್ ಅವರು ತಮ್ಮ ಭದ್ರತಾ ಸಿಬ್ಬಂದಿಯೊಂದಿಗೆ ವಾಕಿಂಗ್ ಹೋಗುವ ಅಭ್ಯಾಸವನ್ನು ಹೊಂದಿದ್ದು, ಪ್ರತಿದಿನ ಹೋಗುತ್ತಾರೆ. ಹಾಗೆಯೇ ವಾಕಿಂಗ್ ಹೋದಾಗ ಸಾಮಾನ್ಯವಾಗಿ ಒಂದು ಸ್ಥಳದಲ್ಲಿ ವಿಶ್ರಾಂತಿ ತೆಗೆದುಕೊಳ್ಳಲು ಕೂರುತ್ತಾರೆ. ಆ ಬೆಂಚಿನ ಮೆಲೆ ಈ ಪತ್ರ ಸಿಕ್ಕಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರಂತೆ.


ಪೊಲೀಸರಿಂದ ತನಿಖೆ ಆರಂಭ


ಪತ್ರದಲ್ಲಿ ಉಲ್ಲೇಖಿಸಿರುವ ಬೆದರಿಕೆಯ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಲಾಗಿದೆ ಎಂದು ಮೂಲಗಳು ತಿಳಿಸಿದ್ದು, ಪೊಲೀಸರು ಆ  ಪ್ರದೇಶದಲ್ಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ಪಂಜಾಬಿ ಗಾಯಕ ಸಿಧು ಮೂಸೇ ವಾಲಾ ಹತ್ಯೆಯಲ್ಲಿ ಲಾರೆನ್ಸ್ ಬಿಷ್ಣೋಯ್ ಪ್ರಮುಖ ಆರೋಪಿ ಎಂಬ ವಿಚಾರ ಹೊರ ಬಂದ ನಂತರ, ನಟ ಸಲ್ಮಾನ್ ಭದ್ರತೆಯನ್ನು ಹೆಚ್ಚಿಸಲಾಗಿದೆ ಎಂದು ಹೇಳಲಾಗುತ್ತಿತ್ತು. ಇದೀಗ ಈ ಬೆದರಿಕೆ ಪತ್ರ ಬಂದಿದ್ದು ಆತಂಕಕ್ಕೆ ಕಾರಣವಾಗಿದೆ.


ಇದನ್ನೂ ಓದಿ: ಯಶೋಮಾರ್ಗ ಮೂಲಕ ಕಲ್ಯಾಣಿ ಜೀರ್ಣೊದ್ಧಾರ, ಯಶ್​ ಕಾರ್ಯಕ್ಕೆ ಶಿವಮೊಗ್ಗ ಮಂದಿ ಖುಷ್


ಸಲ್ಮಾನ್ ಒಮ್ಮೆ ಲಾರೆನ್ಸ್ ಬಿಷ್ಣೋಯ್ ಅವರ ಹಿಟ್​ ಲಿಸ್ಟ್​ನಲ್ಲಿದ್ದರು ಎಂಬ ಸುದ್ದಿ ವರದಿಯಾಗಿತ್ತು. 2018 ರಲ್ಲಿ, ಕೃಷ್ಣಮೃಗ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟನನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ ನಂತರ ಬಿಷ್ಣೋಯ್  ಸಹಚರ ಒಬ್ಬನನ್ನು ಬಂಧಿಸಲಾಗಿತ್ತು.  “ನಾವು ಸಲ್ಮಾನ್ ಖಾನ್ ಅವರ ಒಟ್ಟಾರೆ ಭದ್ರತೆಯನ್ನು ಹೆಚ್ಚಿಸಿದ್ದೇವೆ. ರಾಜಸ್ಥಾನದ ಗ್ಯಾಂಗ್‌ನಿಂದ ಯಾವುದೇ ಅನೈತಿಕ ಚಟುವಟಿಕೆ ನಡೆಯದಂತೆ ನೋಡಿಕೊಳ್ಳಲು ಪೊಲೀಸರು ಸಲ್ಮಾನ್ ಖಾನ್ ಅಪಾರ್ಟ್‌ಮೆಂಟ್‌ನ ಸುತ್ತಲೂ ಬಿಗಿ ಬಂದೋಬಸ್ತ್ ಮಾಡಿದ್ದು, ಎಲ್ಲಾ ರೀತಿ ವ್ಯವಸ್ಥೆ ಮಾಡಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಕಳೆದ ವಾರ ಹಿಂದೂಸ್ತಾನ್ ಟೈಮ್ಸ್‌ಗೆ ತಿಳಿಸಿದ್ದರು.


ಏನಿತ್ತು ಪತ್ರದಲ್ಲಿ? 


ಆರೋಪಿ ಬಿಷ್ಣೋಯ್ ಸದ್ಯ ದೆಹಲಿಯ ತಿಹಾರ್ ಜೈಲಿನಲ್ಲಿದ್ದು, ಆತನ ಪ್ರಕಾರ ಕೃಷ್ಣಮೃಗ ಬಹಳ ಪೂಜನೀಯ ಪ್ರಾಣಿ, ಇದನ್ನು ಸಲ್ಮಾನ್ ಖಾನ್​ ಸಾಯಿಸಿದ್ದರು. ಈ ಕಾರಣದಿಂದ ಅವರ ಮೇಲೆ ಹಲ್ಲೆ ಮಾಡಲು ಸಂಚು ರೂಪಿಸಿದ್ದ ಎಂಬ ಮಾಹಿತಿ ಇತ್ತು. ಇನ್ನು ಈಗ ಸಿಕ್ಕಿರುವ ಬೆದರಿಕೆ ಪತ್ರದಲ್ಲಿ ನೀನೂ ಮೂಸೆವಾಲಾನ ರೀತಿ ಕೊನೆಯಾಗುತ್ತೀಯ ಎಂದು ಬರೆದಿದೆ ಎನ್ನಲಾಗುತ್ತಿದೆ.


ಇದನ್ನೂ ಓದಿ: ತಮಿಳುನಾಡಿನಲ್ಲೂ ಚಾರ್ಲಿ ಹವಾ, ಈ ಥರ ಕಟೌಟ್​​ ಯಾವ್​ ಹೀರೋಗಳಿಗೂ ಹಾಕಿಲ್ಲ ರೀ


ಈ ಮಧ್ಯೆ, IIFA 2022 ಕಾರ್ಯಕ್ರಮವನ್ನು ನಿರೂಪಣೆ ಮಾಡಿದ್ದ ನಟ ಸಲ್ಮಾನ್ ಮೊನ್ನೆಯಷ್ಟೇ ಅಬುಧಾಬಿಯಿಂದ ಹಿಂದಿರುಗಿದ್ದಾರೆ. ಇನ್ನು ಅವರ ಚಿತ್ರಗಳ ವಿಚಾರಕ್ಕೆ ಬಂದರೆ ಸಲ್ಮಾನ್ ಬಳಿ ಕೆಲವು ಚಲನಚಿತ್ರಗಳಿವೆ. ಅವರು ಕತ್ರಿನಾ ಕೈಫ್ ಜೊತೆಗೆ ಟೈಗರ್ 3 ಮತ್ತು ಕಭಿ ಈದ್ ಕಭಿ ದಿವಾಲಿ ಚಿತ್ರಗಳಲ್ಲಿ ಬ್ಯುಸಿ ಇದ್ದಾರೆ. ಅಲ್ಲದೇ ಇನ್ನೂ ಹಲವಾರು ಕತೆಗಳನ್ನು ಕೇಳುತ್ತಿದ್ದು, ನಟ ಶಾರುಖ್ ಖಾನ್ ಅವರ ಪಠಾನ್‌ನಲ್ಲಿ ಅತಿಥಿ ಪಾತ್ರವನ್ನು ಸಹ ಮಾಡಲಿದ್ದಾರೆ.

Published by:Sandhya M
First published: