Bike Accident: ಆಸ್ಪತ್ರೆಯಿಂದಲೇ ಟ್ವೀಟ್​ ಮಾಡಿದ ಟಾಲಿವುಡ್ ನಟ Sai Dharam Teja

ನಟ ಸಾಯಿ ಧರಮ್ ತೇಜ ಅವರು ಟ್ವಿಟರ್ ಹಾಗೂ ಇನ್​ಸ್ಟಾಗ್ರಾಂನಲ್ಲಿ ಒಂದು ಪೋಸ್ಟ್​ ಮಾಡಿದ್ದಾರೆ. ಅಪಘಾತವಾದ (Sai Dharam Tej accident) ನಂತರ ಇದೇ ಮೊದಲ ಸಲ ಆಸ್ಪತ್ರೆಯಿಂದಲೇ ಸಾಯಿ ಧರಮ್ ತೇಜ ಪೋಸ್ಟ್ ಮಾಡಿದ್ದಾರೆ. ಜೊತೆಗೆ ತಮ್ಮ ಆರೋಗ್ಯದ ಕುರಿತಾಗಿ ಒಂದು ಅಪ್ಡೇಟ್ ಕೊಟ್ಟಿದ್ದಾರೆ.

ನಟ ಸಾಯಿ ಧರಮ್ ತೇಜ ಹೆಲ್ತ್​ ಅಪ್ಡೇಟ್​

ನಟ ಸಾಯಿ ಧರಮ್ ತೇಜ ಹೆಲ್ತ್​ ಅಪ್ಡೇಟ್​

  • Share this:
ಬೈಕ್ ಅಪಘಾತದಿಂದಾಗಿ (Bike Accident) ಗಾಯಗೊಂಡು ಆಸ್ಪತ್ರೆ ಸೇರಿರುವ ಮೆಗಾ ಕುಟುಂಬದ ಸದಸ್ಯ ಹಾಗೂ ನಟ ಸಾಯಿ ಧರಮ್ ತೇಜ  (Sai Dharam Tej) ಜ್ಯೂಬ್ಲಿ ಹಿಲ್ಸ್​ನಲ್ಲಿರುವ ಆಸ್ಪತ್ರೆಯಲ್ಲೇ ಕಳೆದ 21 ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ. ನಟನ ಆರೋಗ್ಯ ಕುರಿತಾಗಿ ಆಸ್ಪತ್ರೆಯ ವೈದ್ಯರು ಆಗಾಗ ಹೆಲ್ತ್ ಬುಲೆಟಿನ್ ರಿಲೀಸ್ ಮಾಡುತ್ತಲೇ ಇದ್ದಾರೆ. ಇನ್ನು ಸಂಪೂರ್ಣವಾಗಿ ಗುಣಮುಖರಾಗುವರೆಗೂ ಸಾಯಿ ಧರಮ್​ ತೇಜ ಆಸ್ಪತ್ರೆಯಲ್ಲೇ ಇರಲಿದ್ದಾರೆ. ಅವರ ಆರೋಗ್ಯ ಸ್ಥಿರವಾಗಿದ್ದು, ಯಾವುದೇ ಸಮಸ್ಯೆ ಇಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಆದರೆ, ಬೈಕ್ ಅಪಘಾತದಲ್ಲಿ ಸಾಯಿ ಧರಮ್ ತೇಜ ಅವರ ಕಾಲರ್ ಬೋನ್ ಮುರಿದಿದ್ದು, ಅದನ್ನು ಸರಿಪಡಿಸಲು ವೈದ್ಯರು ಸರ್ಜರಿ ಮಾಡುವ ಮೊದಲು ತುಂಬಾ ಯೋಚನೆ ಮಾಡಿದ್ದರಂತೆ. ಅಪಘಾತವಾದ ನಂತರ 24 ಗಂಟೆಗಳು ವೈದ್ಯರ ನಿಗಾದಲ್ಲೇ ಇಡಲಾಗಿತ್ತು. ನಂತರ ಸೆ. 12ರಂದು ಅವರಿಗೆ ಶಸ್ತ್ರ ಚಿಕಿತ್ಸೆ ಮಾಡಲಾಯಿತು. ಇದಾದ ನಂತರ ಸಾಯಿ ಧರಮ್ ತೇಜ ಅವರ ಹೆಲ್ತ್​ ಬುಲೆಟ್​​ ಅನ್ನು ಆಸ್ಪತ್ರೆಯವರು ಬಿಡುಗಡೆ ಮಾಡಲೇ ಇಲ್ಲ. ನಂತರ ಅಭಿಮಾನಿಗಳು ನೆಚ್ಚಿನ ನಟನ ಆರೋಗ್ಯದ ಬಗ್ಗೆ ತಿಳಿದುಕೊಳ್ಳಲು ಪರದಾಡುತ್ತಿದ್ದರು. ಹೀಗಿರುವಾಗಲೇ ನಟ ಸಾಯಿ ಧರಮ್ ತೇಜ ಮೊದಲ ಬಾರಿಗೆ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಆರೋಗ್ಯ ಕುರಿತಾಗಿ ಅಪ್ಡೇಟ್​ ಕೊಟ್ಟಿದ್ದಾರೆ. 

ನಟ ಸಾಯಿ ಧರಮ್ ತೇಜ ಅವರು ಟ್ವಿಟರ್ ಹಾಗೂ ಇನ್​ಸ್ಟಾಗ್ರಾಂನಲ್ಲಿ ಒಂದು ಪೋಸ್ಟ್​ ಮಾಡಿದ್ದಾರೆ. ಅಪಘಾತವಾದ (Sai Dharam Tej accident) ನಂತರ ಇದೇ ಮೊದಲ ಸಲ ಆಸ್ಪತ್ರೆಯಿಂದಲೇ ಸಾಯಿ ಧರಮ್ ತೇಜ ಪೋಸ್ಟ್ ಮಾಡಿದ್ದಾರೆ. ಜೊತೆಗೆ ತಮ್ಮ ಆರೋಗ್ಯದ ಕುರಿತಾಗಿ ಒಂದು ಅಪ್ಡೇಟ್ ಕೊಟ್ಟಿದ್ದಾರೆ.

ಸಾಯಿ ಧರಮ್ ತೇಜ ಅವರು ಮಾಡಿದ ಪೋಸ್ಟ್​ ನಂತರ ಅಭಿಮಾನಿಗಳು ಖುಷಿಯಲ್ಲಿದ್ದಾರೆ. ಸಾಯಿ ಧರಮ್ ತೇಜ ಅವರು ಥಮ್ಸ್​ ಅಪ್​ ಮಾಡಿ ತೆಗೆದಿರುವ ಚಿತ್ರವನ್ನು ಹಂಚಿಕೊಂಡಿದ್ದು. ಥ್ಯಾಂಕ್ಸ್​ ಹೇಳುವುದು ತುಂಬಾ ಚಿಕ್ಕ ಶಬ್ದವಾಗುತ್ತದೆ. ನಿಮ್ಮ ಪ್ರೀತಿ ನನ್ನ ಹಾಗೂ ನನ್ನ ಸಿನಿಮಾ ರಿಪಬ್ಲಿಕ್​ ಮೇಲೆ ಹೀಗೆ ಇರಲಿ. ಶೀಘ್ರದಲ್ಲೇ ಸಿಗುತ್ತೇನೆ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Sai Dharam Tej Accident: ಅಪಘಾತಕ್ಕೆ ಕಾರಣವಾಯ್ತಾ ಅತಿಯಾದ ವೇಗ: ಸಾಯಿ ಧರಮ್ ತೇಜ ಬಳಸಿದ ಬೈಕ್ ವಿವರ ಇಲ್ಲಿದೆ

ಇದನ್ನು ಆಸ್ಪತ್ರೆಯವರು ಇತ್ತೀಚೆಗೆ ಬಿಡುಗಡೆ ಮಾಡಿರುವ ಹೆಲ್ತ್​ ಬುಲೆಟಿನ್​ನಲ್ಲಿ ಸಾಯಿ ಧರಮ್ ತೇಜ ಅವರ ಆರೋಗ್ಯ ಸ್ಥಿರವಾಗಿದೆ. ಅವರು ಚೇತರಿಸಿಕೊಳ್ಳುತ್ತಿದ್ದಾರೆ. ಕಾಲರ್ ಬೋನ್​ ಶಸ್ತ್ರ ಚಿಕಿತ್ಸೆ ಮಾಡಿದ ನಂತರ ನಟನಿಗೆ ಪ್ರಜ್ಞೆ ಬರುವುದು ಕೊಂಚ ತಡವಾಗಿತ್ತು. ಆದರೆ, ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿದೆ. ಅವರು ಇನ್ನೂ ವೈದ್ಯರ ನಿಗಾದಲ್ಲೇ ಇದ್ದಾರೆ ಎಂದು ಹೆಲ್ತ್​ ಬುಲೆಟಿನ್​ನಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: ಬೈಕ್ ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ Sai Dharam Tej ಸ್ಥಿತಿ ಗಂಭೀರ

ಸೆ.10ರಂದು ರಾತ್ರಿ 8 ಗಂಟೆಯ ಆಸುಪಾಸಿನಲ್ಲಿ ಹೈದರಾಬಾದಿನ ಚೆರುಪು ಫ್ಲೈ ಓವರ್ ಬಳಿ ಬೈಕ್​ನಲ್ಲಿ ಹೋಗುತ್ತಿದ್ದಾಗ ಸಾಯಿ ಧರಮ್ ತೇಜ ಅವರು ಆಯಾ ತಪ್ಪಿ ಬಿದ್ದಿದ್ದಾರೆ. ಬೈಕ್ ಅಪಘಾತಕ್ಕೆ ಕಾರಣ ಅತಿಯಾದ ವೇಗೆ ಎನ್ನಲಾಗಿದ್ದು, ಈ ಸಂಬಂಧ ಈಗಾಗಲೇ ಪೊಲೀಸ್​ ಠಾಣೆಯಲ್ಲಿ ನಟನ ವಿರುದ್ಧ ಅತಿಯದ ವೇಗ ಹಾಘೂ ನಿರ್ಲಕ್ಷ್ಯದ ಪ್ರಕರಣ ದಾಖಲಾಗಿದೆ. ಇನ್ನು ಆಪಘಾತವಾದ ಕೂಡಲೇ ಹತ್ತಿರವಿದ್ದ ಮೆಡಿ ಕವರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಯಿತು. ನಂತರ ಅವರನ್ನು ಜೂಬ್ಲಿ ಹಿಲ್ಸ್​ ಆಸ್ಪತ್ರೆಗೆ ಶಿಫ್ಟ್​ ಮಾಡಲಾಯಿತು.
Published by:Anitha E
First published: