Sai Dharam Tej: ಬರ್ತ್​ಡೇ ದಿನವೇ ಗುಣಮುಖರಾಗಿ ಆಸ್ಪತ್ರೆಯಿಂದ ಮನೆಗೆ ಮರಳಿದ ನಟ ಸಾಯಿ ಧರಮ್ ತೇಜ್

Sai Dharam Tej Discharged From Hospital: ಸೆ.10 ರಾತ್ರಿ ನಟ ಸಾಯಿ ಧರಮ್​ ತೇಜ್​ ತಮ್ಮ ದುಬಾರಿ ಸ್ಪೋರ್ಟ್ಸ್‌ ಬೈಕ್‌ನಲ್ಲಿ ರೈಡ್ ಹೋಗಿದ್ದರು. ಹೈದರಾಬಾದ್‌ನ ಮಾಧಾಪುರ್‌ ರಸ್ತೆಯ ಬ್ರಿಡ್ಜ್ ಬಳಿ ಸಾಯಿ ಧರಮ್ ಬೈಕ್ ಚಲಾಯಿಸುತ್ತಿದ್ದ ವೇಳೆ ಅಪಘಾತವಾಗಿತ್ತು.

ನಟ ಸಾಯಿ ಧರಮ್ ತೇಜ್

ನಟ ಸಾಯಿ ಧರಮ್ ತೇಜ್

  • Share this:
    ಸೆಪ್ಟೆಂಬರ್ 10ರ ರಾತ್ರಿ ಬೈಕ್​ ಅಪಘಾತ(Bike Accident)ದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ನಟ ಸಾಯಿ ಧರಮ್​ ತೇಜ್(Sai Dharm Tej)​ ಆಸ್ಪತ್ರೆ(Hospiyal)ಯಿಂದ ಡಿಸ್ಚಾರ್ಜ್(Discharge) ಆಗಿದ್ದಾರೆ. ಇಲ್ಲಿನ ಅಪೋಲೋ(Apolo) ಆಸ್ಪತ್ರೆಯಲ್ಲಿ ಚಿಕಿತ್ಸೆ(Treatment) ಪಡೆಯುತ್ತಿದ್ದ ತೆಲುಗು ನಟ ಸಾಯಿ ಧರಮ್​ ತೇಜ್​ ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ. ನಿನ್ನೆ ಅವರ ಜನ್ಮದಿನ(Birthday)ದಂದೇ ​ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಸಾಯಿ ಧರಮ್​ ತೇಜ್​ ಮನೆಗೆ ಮರಳಿದ್ದಾರೆ. ಈ ವಿಚಾರ ಮೆಗಾ ಕುಟುಂಬದಲ್ಲಿ ಹಬ್ಬದ ಸಂಭ್ರಮವನ್ನು ಹೆಚ್ಚಿಸಿದೆ.35 ದಿನಗಳ ಕಾಲ ಚಿಕಿತ್ಸೆ ಪಡೆದು ವಿಜಯದಶಮಿ ಹಬ್ಬದ ಹಾಗೂ ಹುಟ್ಟುಹಬ್ಬದ ದಿನದಂದೇ ಮನೆಗೆ ಬಂದಿರುವು ಸಾಯಿ ಧರಮ್​ ತೇಜ್​ ಅಭಿಮಾನಿಗಳು ಕೂಡ ನಿಟ್ಟಿಸಿರು ಬಿಡುವಂತೆ ಮಾಡಿದೆ. ಜೊತೆಗೆ ತಮ್ಮ ನೆಚ್ಚಿನ ನಾಯಕನ ಬರ್ತ್​ಡೇಗೆ ವಿಶ್(Wish)​ ಮಾಡಿ ಶುಭ ಹಾರೈಸಿದ್ದಾರೆ. ಇನ್ನೂ ಈ ಬಗ್ಗೆ ತೇಜ್​ ಅವರ ಮಾವ, ಮೆಗಾಸ್ಟಾರ್(Megastar) ಚಿರಂಜೀವಿ​(Chiranjeevi) ಟ್ವೀಟ್ ಮಾಡಿ ಸಂತಸ ವ್ಯಕ್ತಪಡಿಸಿದ್ದಾರೆ.

    ಸಂತಸ ವ್ಯಕ್ತಪಡಿಸಿದ ಮಾವ ಮೆಗಾಸ್ಟಾರ್​

    ‘ಈ ಬಾರಿ ವಿಜಯ ದಶಮಿಯ ವಿಶೇಷ ಏನೆಂದರೆ, ಸಾಯಿ ಧರಮ್​ ತೇಜ್​ ಸಂಪೂರ್ಣ ಗುಣಮುಖರಾಗಿ ಮನೆಗೆ ಬರುತ್ತಿದ್ದಾರೆ. ಭೀಕರ ಬೈಕ್​ ಅಪಘಾತದಲ್ಲಿ ಅವರು ಬದುಕಿ ಬಂದಿದ್ದಾರೆ. ಇದು ನಮ್ಮೆಲ್ಲರಿಗೂ ಖುಷಿ ನೀಡಿದೆ. ಅವರಿಗೆ ಇದು ಪುನರ್ಜನ್ಮ’ ಎಂದು ಚಿರಂಜೀವಿ ಟ್ವೀಟ್​ ಮಾಡಿದ್ದಾರೆ. ಜೊತೆಗೆ ಚಿರಂಜೀವಿ ಕೂಡ ಬರ್ತ್​ಡೇ ವಿಶ್​ ಮಾಡಿದ್ದಾರೆ. ಇನ್ನೂ ಚಿತ್ರರಂಗದ ನಟ, ನಟಿಯರು ಕೂಡ ಸಾಯಿ ಧರಮ್​ ತೇಜ್​ ಗುಣಮುಖರಾಗಿರುವುದಕ್ಕೆ ಸಂತಸ ವ್ಯಕ್ತಪಡಿಸುವುದರ ಜತೆಗೆ ಜನ್ಮದಿನಕ್ಕೆ ಶುಭ ಕೋರಿದ್ದಾರೆ.

    ಸಿನಿಮಾ ರಿಲೀಸ್​ ಆದಾಗಲೂ ಕೋಮಾದಲ್ಲಿದ್ದ ತೇಜ್​

    ಬೈಕ್​ ಅಪಘಾತದ ಬಳಿಕ ಒಂದು ತಿಂಗಳಿಗೂ ಹೆಚ್ಚು ದಿನಗಳ ಕಾಲ ಸಾಯಿ ಧರಮ್​ ತೇಜ್​ ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಹಲವು ದಿನಗಳ ಕಾಲ ಕೋಮಾದಲ್ಲಿದ್ದರು ನಟ ಸಾಯಿ ಧರಮ್​ ತೇಜ್​. ಇವರು ನಟಿಸಿದ್ದ ‘ರಿಪಬ್ಲಿಕ್​’ ಸಿನಿಮಾ ಅಕ್ಟೋಬರ್​ 1ರಂದು ಚಿತ್ರಮಂದರಿಗಳಲ್ಲಿ ತೆರೆಕಂಡಿತ್ತು. ಆಗಲೂ ಅವರು ಕೋಮಾದಲ್ಲೇ ಇದ್ದರು. ತೇಜ್​ ಅನುಪಸ್ಥಿತಿಯಲ್ಲೇ ಚಿತ್ರತಂಡ ಸಿನಿಮಾ ಬಿಡುಗಡೆ ಮಾಡಿತ್ತು. ಈ ಚಿತ್ರದ ಪ್ರೀ- ರಿಲೀಸ್​ ಕಾರ್ಯಕ್ರಮಕ್ಕೆ ಬಂದಿದ್ದ ಪವನ್​ ಕಲ್ಯಾಣ್​ ಅವರು ತಮ್ಮ ಸೋದರ ಅಳಿಯನ ಆರೋಗ್ಯದ ಬಗ್ಗೆ ಮಾಹಿತಿ ನೀಡಿದ್ದರು. ಇನ್ನೂ ಆತ ಕಣ್ಣು ಬಿಟ್ಟಿಲ್ಲವೆಂದು ಪವನ್​ ಕಲ್ಯಾಣ್​ ಬೇಸರದಲ್ಲಿ ಹೇಳಿದ್ದರು. ಇದು ಅವರ ಅಭಿಮಾನಿಗಳಲ್ಲಿ ಆತಂಕ ಉಂಟುಮಾಡಿತ್ತು. ಆದರೆ ಈಗ ಸಂಪೂರ್ಣ ಗುಣಮುಖರಾಗಿ ಮನೆಗೆ ಮರಳಿರುವುದು ಅಭಿಮಾನಿಗಳಿಗೆ ಸಂತಸ ಮೂಡಿಸಿದೆ.

    ಸೆ.10 ರಾತ್ರಿ ನಟ ಸಾಯಿ ಧರಮ್​ ತೇಜ್​ ತಮ್ಮ ದುಬಾರಿ ಸ್ಪೋರ್ಟ್ಸ್‌ ಬೈಕ್‌ನಲ್ಲಿ ರೈಡ್ ಹೋಗಿದ್ದರು. ಹೈದರಾಬಾದ್‌ನ ಮಾಧಾಪುರ್‌ ರಸ್ತೆಯ ಬ್ರಿಡ್ಜ್ ಬಳಿ ಸಾಯಿ ಧರಮ್ ಬೈಕ್ ಚಲಾಯಿಸುತ್ತಿದ್ದ ವೇಳೆ ಅಪಘಾತವಾಗಿತ್ತು. ತಮ್ಮ ಮುಂದೆ ಚಲಿಸುತ್ತಿದ್ದ ಆಟೋ ರಿಕ್ಷಾವನ್ನು ರಾಂಗ್ ಸೈಡ್​ನಿಂದ ಓವರ್ ಟೇಕ್ ಮಾಡಲು ಸಾಯಿ ಧರಮ್ ತೇಜ್ ಪ್ರಯತ್ನಿಸಿದ ವೇಳೆ ಈ ಅಪಘಾತ ನಡೆದಿತ್ತು. ಅಪಘಾತದ ಸಂಪೂರ್ಣ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ತೀವ್ರವಾಗಿ ಗಾಯಗೊಂಡಿದ್ದ ತೇಜ್​ರನ್ನ ಆಸ್ಪತ್ರೆಗೆ ಸೇರಿಸಲಾಗಿತ್ತು.ಕೆಲ ದಿನಗಳ ಕಾಲ ಕೋಮಾದಲ್ಲಿದ್ದ ನಟ ಬಳಿಕ ಚೇತರಿಸಿಕೊಂಡಿದ್ದರು. ಇದೀಗ ಮತ್ತೆ ಮರಳಿ ಮನೆ ಸೇರಿರುವುದು ಎಲ್ಲರಿಗೂ ಸಂತಸ ಮೂಡಿಸಿದೆ.

    ವರದಿ - ವಾಸುದೇವ್​. ಎಂ
    Published by:Latha CG
    First published: