Sabarinath Passes Away: ಹೃದಯಾಘಾತದಿಂದ ಮಲಯಾಳಂ ನಟ ಶಬರಿನಾಥ್ ನಿಧನ

ಗೆಳೆಯರ ಜೊತೆ ಶಬರಿನಾಥ್​ ಬ್ಯಾಡ್ಮಿಂಟನ್​ ಆಡುತ್ತಿದ್ದರು. ಈ ವೇಳೆ ಅವರಿಗೆ ಹೃದಯಾಘಾತವಾಗಿದೆ. ತಕ್ಷಣಕ್ಕೆ ಅವರನ್ನು ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗಿತ್ತು. ಆದರೂ ಯಾವುದೇ ಪ್ರಯೋಜನವಾಗಿಲ್ಲ.

ಶಬರಿನಾಥ್

ಶಬರಿನಾಥ್

 • Share this:
  2020 ಮನರಂಜನೆ ಲೋಕದ ಪಾಲಿಗೆ ಕರಾಳ ವರ್ಷವಾಗಿದೆ ಎಂಬುದು ಪದೇ ಪದೇ ಸಾಬೀತಾಗುತ್ತಲೇ ಇದೆ. ಒಬ್ಬರಾದ ಮೇಲೆ ಒಬ್ಬರಂತೆ ಕಲಾವಿದರು ಹಾಗೂ ನಿರ್ದೇಶಕರು ಮೃತಪಡುತ್ತಿದ್ದಾರೆ. ಈಗ ಮಲಯಾಳಂನ ಕಿರುತೆರೆ ನಟ ಶಬರಿನಾಥ್​ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಅವರಿಗೆ 43 ವರ್ಷ ವಯಸ್ಸಾಗಿತ್ತು. ಕಿರುತೆರೆಯಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದ ಅವರು ಮೃತಪಟ್ಟಿರುವುದು ಅಭಿಮಾನಿಗಳಿಗೆ ಬೇಸರ ಮೂಡಿಸಿದೆ.

  ಗೆಳೆಯರ ಜೊತೆ ಶಬರಿನಾಥ್​ ಬ್ಯಾಡ್ಮಿಂಟನ್​ ಆಡುತ್ತಿದ್ದರು. ಈ ವೇಳೆ ಅವರಿಗೆ ಹೃದಯಾಘಾತವಾಗಿದೆ. ತಕ್ಷಣಕ್ಕೆ ಅವರನ್ನು ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗಿತ್ತು. ಆದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ. ಮೃತರು ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

  ಮಿನ್ನುಕೆಟ್ಟು, ಅಮಲಾ, ಸ್ವಾಮಿ ಅಯ್ಯಪ್ಪನ್​ನಂಥ ಧಾರಾವಾಹಿಗಳ ಮೂಲಕ ಶಬರಿನಾಥ್​ ಮಲಯಾಳಂ ವೀಕ್ಷಕರ ಬಾಯಲ್ಲಿ ಮನೆಮಾತಾಗಿದ್ದರು. ಅವರನ್ನು ಕಳೆದುಕೊಂಡಿದ್ದಕ್ಕೆ ಅನೇಕರ ಸಂತಾಪ ಸೂಚಿಸಿದ್ದಾರೆ.
  View this post on Instagram

  My heart felt condolences Still can't believe 🙏🙏🙏🙏


  A post shared by Shiju AR (@ar.shiju_official) on

  View this post on Instagram

  Cant believe 😔😔😔 RIP🙏🙏🙏


  A post shared by Archana Suseelan (@archana_suseelan) on
  ಇನ್ನು ಶಬರಿನಾಥ್​ ಸಾವಿಗೆ ಅನೇಕ ಗಣ್ಯರು ಸಂತಾಪ ವ್ಯಕ್ತಪಡಿಸುತ್ತಿದ್ದಾರೆ.
  Published by:Rajesh Duggumane
  First published: