ಶ್ರೀಮುರಳಿ ನಟನೆಯ ‘ಮದಗಜ‘ ಸಿನಿಮಾದ ಟೈಟಲ್ ಬದಲಾವಣೆ; ಯಾಕೆ ಗೊತ್ತೇ?

ನಿರ್ದೇಶಕ ಎಸ್​ ನಾರಯಣ್​ ಅವರ ದ್ವಿತೀಯ ಪುತ್ರ ಪವನ್​ ಮೊದಲ ಸಿನಿಮಾದ ಮುಹೂರ್ತ ಕಾರ್ಯಕ್ರಮಕ್ಕೆ ಶ್ರೀಮುರಳಿ ಆಗಮಿಸಿದ್ದರು. ಈ ವೇಳೆ ‘ಮದಗಜ‘ ಸಿನಿಮಾ ಬೇರೆ ಟೈಟಲ್​ನಲ್ಲಿ ಬರಲಿದೆ ಎಂದು ಹೇಳಿದ್ದಾರೆ.

news18-kannada
Updated:December 3, 2019, 6:21 PM IST
ಶ್ರೀಮುರಳಿ ನಟನೆಯ ‘ಮದಗಜ‘ ಸಿನಿಮಾದ ಟೈಟಲ್ ಬದಲಾವಣೆ; ಯಾಕೆ ಗೊತ್ತೇ?
ಮದಗಜ
  • Share this:
ರೋರಿಂಗ್​ ಸ್ಟಾರ್​ ಶ್ರೀಮುರಳಿ ‘ಮದಗಜ‘ ಸಿನಿಮಾದಲ್ಲಿ ನಟಿಸುತ್ತಿರುವುದು ಎಲ್ಲರಿಗೂ ಗೊತ್ತೇ ಇದೆ. ಇದೀಗ ಈ ಸಿನಿಮಾದ ಶೀರ್ಷಿಕೆ ಬದಲಾವಣೆ ಮಾಡಲಾಗಿದೆ. ಈ ವಿಚಾರವನ್ನು ನಟ ಶ್ರೀಮುರಳಿ ತಿಳಿಸಿದ್ದಾರೆ.

‘ಭರಾಟೆ‘ ಸಿನಿಮಾದ ನಂತರ ನಟ ಶ್ರೀಮುರಳಿ ‘ಮದಗಜ‘ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇದೀಗ ಸಿನಿಮಾದ ಕಥೆಯನ್ನು ಕೊಂಚ ಬದಲಾವಣೆ ಮಾಡಲಾಗಿದ್ದು, ಹಾಗಾಗೀ ಸಿನಿಮಾದ ಶೀರ್ಷಿಕೆಯನ್ನು ಕೂಡ ಬದಲಾಯಿಸಲು ಮುಂದಾಗಿದ್ದೇವೆ ಎಂದು ನಟ ಶ್ರೀ ಮರಳಿ ಹೇಳಿದ್ದಾರೆ.

ನಿರ್ದೇಶಕ ಎಸ್​ ನಾರಯಣ್​ ಅವರ ದ್ವಿತೀಯ ಪುತ್ರ ಪವನ್​ ಮೊದಲ ಸಿನಿಮಾದ ಮುಹೂರ್ತ ಕಾರ್ಯಕ್ರಮಕ್ಕೆ ಶ್ರೀಮುರಳಿ ಆಗಮಿಸಿದ್ದರು. ಈ ವೇಳೆ ‘ಮದಗಜ‘ ಸಿನಿಮಾ ಬೇರೆ ಟೈಟಲ್​ನಲ್ಲಿ ಬರಲಿದೆ ಎಂದು ಹೇಳಿದ್ದಾರೆ.

ಸಿನಿಮಾದ ಕಥೆಯಲ್ಲೂ ಕೂಡ ಬದಲಾವಣೆಯಾಗಿರುವ ಕಾರಣ ಸಿನಿಮಾದ ಶೀರ್ಷಿಕೆಯಲ್ಲೂ ಬದಲಾವಣೆ ಮಾಡಿದ್ದೇವೆ. ಸಿನಿಮಾದ ಕಥೆಗೆ ಟೈಟಲ್​ ಸರಿಹೊಂದುತ್ತಿರಲಿಲ್ಲ. ಹಾಗಾಗಿ ‘ಮದಗಜ‘ ಒಳ್ಳೆಯ ಟೈಟಲ್​ ಅದಕ್ಕೆ ತೊಂದರೆ ಆಗಬಾರದು ಎಂದು ಶ್ರೀಮರಳಿ ಹೇಳಿದ್ದಾರೆ.

‘ಮದಗಜ‘


ಈ ಸಿನಿಮಾ ಮಹೇಶ್​ ಕುಮಾರ್ ನಿರ್ದೇಶನಲ್ಲಿ ಹಾಗೂ ಉಮಾಪತಿ ನಿರ್ಮಾಣದಲ್ಲಿ ಮೂಡಿ ಬರುತ್ತಿದೆ. ಮಹೇಶ್​ ಅವರು ಈ ಹಿಂದೆ ಅಯೋಗ್ಯ ಸಿನಿಮಾವನ್ನು ನಿರ್ದೇಶನ ಮಾಡಿದ್ದರು. ಉಮಾಪತಿ ‘ಹೆಬ್ಬುಲಿ' ಸಿನಿಮಾಗೆ ಬಂಡವಾಳ ಹಾಕಿದ್ದರು. ಸದ್ಯ 'ರಾಬರ್ಟ್'​ ಸಿನಿಮಾಗೂ ಬಂಡವಾಳ ಹೂಡಿದ್ದಾರೆ.

ಇನ್ನು ಸಿನಿಮಾದ ಹೊಸ ಟೈಟಲ್​ ಬಗ್ಗೆ ಸದ್ಯದಲ್ಲೇ ಘೋಷಣೆಯಾಗಲಿದೆಇದನ್ನೂ ಓದಿ: ಅಬ್ಬಾ..! ನಟಿ ಮಲೈಕಾ ಅರೋರಾ ಧರಿಸಿರುವ ಬಳೆಯ ಬೆಲೆಯೆಷ್ಟು ಗೊತ್ತಾ?

ಇದನ್ನೂ ಓದಿ:  ಗ್ಯಾಲಕ್ಸಿ ಎಸ್10 ಸ್ಮಾರ್ಟ್​ಫೋನಿಗೆ ಸೆಡ್ಡು ಹೊಡೆಯಲು ಸಿದ್ಧವಾಗಿದೆ ವಿವೋ ‘ವಿ17‘ ಸ್ಮಾರ್ಟ್​ಫೋನ್​​!

ಇದನ್ನೂ ಓದಿ: ಕಿರುತೆರೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ ಚಾಲೆಂಜಿಂಗ್ ಸ್ಟಾರ್ ದರ್ಶನ್!? 
First published: December 3, 2019, 6:14 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading