ಕಳೆದ ವಾರವಷ್ಟೇ ನಟಿ ಜೆನಿಲಿಯಾ (Actress Genelia) ಅವರು ಸುಮಾರು 10 ವರ್ಷಗಳ ನಂತರ ಮತ್ತೊಮ್ಮೆ ಸಿನೆಮಾ ರಂಗಕ್ಕೆ (Cinema) ಮರಳುತ್ತಿದ್ದಾರೆ ಎಂಬ ಸುದ್ದಿ ಬಂದಿತ್ತು. ಜೆನಿಲಿಯಾ ಅವರು ಬಾಲಿವುಡ್ ನಟ ರಿತೇಶ್ ದೇಶಮುಖ್ (Riteish Deshmukh) ಅವರೊಡನೆ ಮದುವೆಯಾದ ನಂತರ ಅಷ್ಟಾಗಿ ನಟನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರಲಿಲ್ಲ. ಆದರೆ ಈಗ 10 ವರ್ಷಗಳ ವಿರಾಮದ ನಂತರ, ನಟಿ ಜೆನಿಲಿಯಾ ವಿವಿಧ ಭಾಷೆಗಳಲ್ಲಿ ಹಲವಾರು ಪ್ರಾಜೆಕ್ಟ್ ಗಳೊಂದಿಗೆ (Projects) ಚಲನಚಿತ್ರಗಳಿಗೆ ಮರಳಲು ಸಜ್ಜಾಗಿದ್ದಾರೆ ಅಂತ ಸುದ್ದಿ ನೋಡಿದ್ದೆವು. ಈಗ ಮತ್ತೊಮ್ಮೆ ನಟಿ ಜೆನಿಲಿಯಾ ಅವರು ಸುದ್ದಿಯಲ್ಲಿದ್ದಾರೆ.
ಅದ್ದೂರಿಯಾಗಿ ಗಣೇಶ ಚತುರ್ಥಿಯನ್ನುಆಚರಿಸಿದ ದಂಪತಿಗಳು
ಹೌದು.. ನಟ ರಿತೇಶ್ ದೇಶಮುಖ್ ಮತ್ತು ಜೆನಿಲಿಯಾ ಡಿಸೋಜಾ ಗಣೇಶ ಚತುರ್ಥಿಯನ್ನು ಇತರ ಸೆಲೆಬ್ರಿಟಿಗಳಂತೆ ಅದ್ಧೂರಿಯಾಗಿಯೇ ಆಚರಿಸುತ್ತಾರೆ. ದಂಪತಿಗಳು ನಟಿ ಶಿಲ್ಪಾ ಶೆಟ್ಟಿ ಅವರ ಮನೆಗೆ ಗಣೇಶ ಚತುರ್ಥಿ ಆಚರಿಸಲು ಮಕ್ಕಳಾದ ರಿಯಾನ್ ಮತ್ತು ರಾಹಿಲ್ ಜೊತೆಗೆ ಬಿಳಿ ಬಣ್ಣದ ಉಡುಪು ಧರಿಸಿಕೊಂಡು ಮಧ್ಯಾಹ್ನ ಹೋಗಿದ್ದರೆ, ನಂತರ ಸಂಜೆ, ಗಣೇಶ ಚತುರ್ಥಿ ಹಬ್ಬವನ್ನಾಚರಿಸಲು ಅರ್ಪಿತಾ ಖಾನ್ ಶರ್ಮಾ ಅವರ ಮನೆಯಲ್ಲಿ ಕಾಣಿಸಿಕೊಂಡರು.
ಇವರ ಹೊಸ ಕಾರಿನ ಬೆಲೆ ಎಷ್ಟು?
ನಂತರ ಈ ಸ್ಟಾರ್ ದಂಪತಿಗಳು ತಮ್ಮ ಹೊಸ ಬಿಎಂಡಬ್ಲ್ಯೂ ಕಾರಿನಲ್ಲಿ ಈ ಇಬ್ಬರೂ ಸೆಲೆಬ್ರಿಟಿಗಳ ಮನೆಗೆ ಆಗಮಿಸಿದ್ದು, ಕ್ಯಾಮೆರಾ ಕಣ್ಣಿಗೆ ಹೊಸ ಕಾರು ಸೆರೆಯಾಗಿದೆ. ಬಿಎಂಡಬ್ಲ್ಯೂ ಕಾರು ಸುಮಾರು 1.16 ಕೋಟಿ ಆರಂಭಿಕ ಬೆಲೆಯನ್ನು ಹೊಂದಿದೆ ಎಂದು ವರದಿಯಾಗಿದೆ. ರಿತೇಶ್ ಮತ್ತು ಜೆನಿಲಿಯಾ ಡಿಸೋಜಾ ಗಣೇಶ ಚತುರ್ಥಿ ಉತ್ಸವಕ್ಕೆ ಆಗಮಿಸಿದಾಗ ಅಲ್ಲಿದ್ದ ಛಾಯಾಗ್ರಾಹಕರು ಇವರ ಕಾರಿನ ಮತ್ತು ದಂಪತಿಗಳ ಫೋಟೋಗಳನ್ನು ತೆಗೆದರು.
View this post on Instagram
ಇದನ್ನೂ ಓದಿ: Shwetha Srivastav: ಗಣೇಶ ಹಬ್ಬಕ್ಕೆ ಟ್ರೆಡಿಷನಲ್ ಡ್ರೆಸ್ನಲ್ಲಿ ಮಿಂಚಿದ ನಟಿ ಶ್ವೇತಾ ಶ್ರೀವಾತ್ಸವ್, ಮಗಳು
ಕುಟುಂಬದ ಫೋಟೋಗಳು ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್
ದಂಪತಿಗಳು ತಮ್ಮ ಮಕ್ಕಳಾದ ರಿಯಾನ್ ಮತ್ತು ರಾಹಿಲ್ ಅವರೊಂದಿಗೆ ಛಾಯಾಗ್ರಾಹಕರ ಕ್ಯಾಮೆರಾಗಳಿಗೆ ಸಂತೋಷದಿಂದ ಪೋಸ್ ನೀಡಿದರು. ಇದಕ್ಕೂ ಮೊದಲು ಬುಧವಾರ, ಜೆನಿಲಿಯಾ ಅವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯ ಪುಟದಲ್ಲಿ ಸಂತೋಷ ಕುಟುಂಬದ ಫೋಟೋವನ್ನು ಹಂಚಿಕೊಂಡಿದ್ದಾರೆ ಮತ್ತು ಅವರು ಅದಕ್ಕೆ "ನಮ್ಮ ಕುಟುಂಬದಿಂದ ನಿಮಗೆ.. ಈ ಶುಭ ದಿನದಂದು ಶುಭ ಹಾರೈಕೆಗಳು, ಸಮೃದ್ಧಿ, ಸಂತೋಷ ಮತ್ತು ಪ್ರೀತಿ ನಿಮ್ಮದಾಗಲಿ. ಗಣೇಶ ಚತುರ್ಥಿಯ ಶುಭಾಶಯಗಳು" ಎಂದು ಶೀರ್ಷಿಕೆಯನ್ನು ಬರೆದುಕೊಂಡಿದ್ದರು.
ಜೆನಿಲಿಯಾ ಮತ್ತು ರಿತೇಶ್ ಬಗ್ಗೆ ಒಂದಿಷ್ಟು ಮಾಹಿತಿ
ಜೆನಿಲಿಯಾ ಮತ್ತು ರಿತೇಶ್ ಅವರು 2003 ರಲ್ಲಿ ತೆರೆಕಂಡ 'ತುಝೆ ಮೇರಿ ಕಸಮ್' ಚಿತ್ರದ ಸೆಟ್‌ನಲ್ಲಿ ಭೇಟಿಯಾದರು. ಎಂಟು ವರ್ಷಗಳ ಕಾಲ ಡೇಟಿಂಗ್ ಮಾಡಿದ ನಂತರ 2012 ರಲ್ಲಿ ಈ ದಂಪತಿಗಳು ವಿವಾಹವಾದರು. ಈ ದಂಪತಿಗಳು ಮಸ್ತಿ, ತೇರೆ ನಾಲ್ ಲವ್ ಹೋಗಯಾ ಮತ್ತು ಲಾಯ್ ಭಾರಿ ಚಿತ್ರಗಳಲ್ಲಿ ನಟಿಸಿದ್ದಾರೆ. ರಿತೇಶ್ ಅವರ ಮರಾಠಿ ಚಿತ್ರ ‘ಮೌಲಿ’ ಯಲ್ಲಿರುವ ಧುವೂನ್ ಟಾಕ್ ಹಾಡಿನಲ್ಲಿ ಈ ಜೋಡಿ ಒಟ್ಟಿಗೆ ಸ್ಕ್ರೀನ್ ಅನ್ನು ಹಂಚಿಕೊಂಡಿದ್ದರು.
ಇದನ್ನೂ ಓದಿ: Katrina Kaif - Vicky Kaushal: ಕ್ಯೂಟ್ ಜೋಡಿಯಿಂದ ಗುಡ್ ನ್ಯೂಸ್, ಅಭಿಮಾನಿಗಳು ಖುಷ್
ರಿತೇಶ್ ಅವರ ಮುಂದಿನ ಪ್ರಾಜೆಕ್ಟ್ ಗಳು
ಇನ್ನೂ ಕೆಲಸದ ವಿಷಯಕ್ಕೆ ಬಂದರೆ, ನಟ ರಿತೇಶ್ ಅವರು ‘ಪ್ಲ್ಯಾನ್ ಎ ಪ್ಲ್ಯಾನ್ ಬಿ’ ಎಂಬ ಪ್ರಾಜೆಕ್ಟ್ ನೊಂದಿಗೆ ಸ್ಟ್ರೀಮಿಂಗ್ ದೈತ್ಯ ನೆಟ್‌ಫ್ಲಿಕ್ಸ್ ನ ಮೂಲಕ ಡಿಜಿಟಲ್ ಪಾದಾರ್ಪಣೆ ಮಾಡಲು ಸಜ್ಜಾಗಿದ್ದಾರೆ ಮತ್ತು ಇದನ್ನು ಶಶಾಂಕ ಘೋಷ್ ನಿರ್ದೇಶಿಸಲಿದ್ದಾರೆ. ಈ ಚಿತ್ರದಲ್ಲಿ ಬಾಹುಬಲಿ ಚಿತ್ರದಲ್ಲಿ ನಟಿಸಿದ್ದ ನಟಿ ತಮನ್ನಾ ಭಾಟಿಯಾ ಕೂಡ ನಟಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.
ಜೆನಿಲಿಯಾ ಅವರ ಮುಂಬರುವ ಸಿನೆಮಾಗಳು
ಇನ್ನೂ ಜೆನಿಲಿಯಾ ಅವರು ‘ಮಿಸ್ಟರ್ ಮಮ್ಮಿ’ ಮತ್ತು ‘ಟ್ರಯಲ್ ಪೀರಿಯಡ್’ ಎಂಬ ಎರಡು ಹಿಂದಿ ಚಿತ್ರಗಳಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇಷ್ಟೇ ಅಲ್ಲದೆ ಇವರು ‘ವೇದ್’ ಎಂಬ ತಮ್ಮ ಚೊಚ್ಚಲ ಮರಾಠಿ ಚಿತ್ರಕ್ಕೆ ಸಜ್ಜಾಗುತ್ತಿದ್ದಾರೆ, ಇದನ್ನು ಅವರ ಪತಿ, ನಟ ರಿತೇಶ್ ಅವರು ನಿರ್ದೇಶಿಸಲಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ