ನಿರ್ದೇಶಕ, ನಟ ರಿಷಬ್ ಶೆಟ್ಟಿ (Rishabh Shetty) ತಮ್ಮ ಮಗಳು ರಾಧ್ಯಾ ಹುಟ್ಟುಹಬ್ಬದ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದಾರೆ. ಮುದ್ದಿನ ಮಗಳ ಬರ್ತ್‍ಡೇಯನ್ನು ನೆನೆಪಿಸಿಕೊಂಡಿದ್ದಾರೆ. ಮಾರ್ಚ್ 3ರಂದು (March 3rd) ರಾಧ್ಯಾ ಹುಟ್ಟುಹಬ್ಬ. ಮಗಳು ರಾಧ್ಯಾ ಮೊದಲನೇ ವರ್ಷದ ಹುಟ್ಟುಹಬ್ಬ (Birthday) ತುಂಬಾ ಗ್ರ್ಯಾಂಡ್ ಆಗಿ ಆಚರಿಸಿದ್ದರು. ಸಿನಿಮಾ ರಂಗದ ಮತ್ತು ರಾಜಕೀಯ ಗಣ್ಯರು ಹುಟ್ಟುಹಬ್ಬದ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದ್ದರು. ಬಟರ್ ಪ್ಲೈ (Butterfly) ಥೀಮ್‍ನಲ್ಲಿ ಬರ್ತ್‍ಡೇ ಆಚರಣೆ ಮಾಡಲಾಗಿದೆ. ರಿಷಬ್ ಶೆಟ್ಟಿ, ಪ್ರಗತಿ ಶೆಟ್ಟಿ, ಮಗಳು, ಮಗ ಎಲ್ಲರೂ ಮುದ್ದಾಗಿ ಕಾಣ್ತಾ ಇದ್ದಾರೆ. ವಿಡಿಯೋ ಸಹ ಅದ್ಭುತವಾಗಿ ಮೂಡಿ ಬಂದಿದೆ.
ಕಾಂತಾರ ಹೀರೋ ಶೈನಿಂಗ್
ರಿಷಬ್ ಶೆಟ್ಟಿ ಕಾಂತಾರ ಸಿನಿಮಾ ಮಾಡಿದ ಮೇಲೆ ಪ್ಯಾನ್ ಇಂಡಿಯಾ ಹೀರೋ ಆಗಿ ಮಿಂಚುತ್ತಿದ್ದಾರೆ. ಎಲ್ಲೇ ಹೋದ್ರೂ ಕಾಂತಾರದ ಹೊಗಳಿಕೆ ಇನ್ನೂ ನಿತಿಲ್ಲ. ಸಿನಿಮಾ ನೋಡಿದ ಪ್ರತಿಯೊಬ್ಬರು ವಾವ್ ಎಂದಿದ್ದಾತೆ. ರಿಷಬ್ ಶೆಟ್ಟಿ ನಟನೆ ನೋಡಿ ಎಲ್ಲರೂ ಬೆನ್ನು ತಟ್ಟಿದ್ದಾರೆ. ಎಲ್ಲೇ ಹೋದ್ರೂ ಶೈನ್ ಆಗ್ತಿದ್ದಾರೆ ರಿಷಬ್ ಶೆಟ್ಟಿ.
ಮಗಳ ಹುಟ್ಟುಹಬ್ಬ
ನಟ ರಿಷಬ್ ಶೆಟ್ಟಿ ಮತ್ತು ಪ್ರಗತಿ ಶೆಟ್ಟಿ ಅವರು ಮಗಳು ರಾಧ್ಯಾ ಹುಟ್ಟುಹಬ್ಬವನ್ನು ಇತ್ತೀಚೆಗೆ ಗ್ರ್ಯಾಂಡ್ ಆಗಿ ಸೆಲೆಬ್ರೇಟ್ ಮಾಡಲಾಗಿತ್ತು. ಮಗಳು ಹುಟ್ಟುಹಬ್ಬಕ್ಕೆ ವಿಶೇಷವಾದ ಫೋಟೋ ಶೂಟ್ ಮಾಡಿಸಲಾಗಿತ್ತು. ಅದರಲ್ಲಿ ಪುಟಾಣಿ ಕಂದ ತುಂಬಾ ಚೆನ್ನಾಗಿ ಕಾಣ್ತಾ ಇದ್ದಾರೆ. ರಿಷಬ್ ಶೆಟ್ಟಿ ಮತ್ತು ಪ್ರಗತಿ ಶೆಟ್ಟಿ ಅವರು ಮಗಳ ಬರ್ತ್‍ಡೇ ವಿಡಿಯೋ ಹಂಚಿಕೊಂಡಿದ್ದಾರೆ.
ವೆಲ್ ಕಮ್ ರಾಧ್ಯಾಳ ಬಟರ್ ಫ್ಲೈ ವರ್ಡ್
ವಿಡಿಯೋದಲ್ಲಿ ಮೊದಲು ರಾಧ್ಯಾಳ ಡ್ರೆಸ್, ಶೂ, ಅಲಂಕಾರವನ್ನು ತೋರಿಸಲಾಗಿದೆ. ಬಟರ್ ಫ್ಲೈ ಥೀಮ್‍ನಲ್ಲಿ ಕಾರ್ಯಕ್ರಮ ಸಿದ್ಧವಾಗಿತ್ತು. ನಂತರ ಒಬ್ಬಬ್ಬರೇ ಅತಿಥಿಗಳು ಬಂದು ಪುಟಾಣಿ ರಾಧ್ಯಾಗೆ ವಿಶ್ ಮಾಡಿದ್ದಾರೆ. ನೂರ್ಕಾಲ ಸುಖವಾಗಿ ಬಾಳು ಎಂದು ವಿಶ್ ಮಾಡಿದ್ದಾರೆ.
ಯಾರೆಲ್ಲಾ ಬಂದಿದ್ದರು?
ರಾಧ್ಯಾ ಹುಟ್ಟುಹಬ್ಬದ ಆಚರಣೆಗೆ ಹಲವು ಗೆಸ್ಟ್ ಗಳು ಬಂದಿದ್ದರು. ನಟ ಅನಿರುದ್ಧ್ ಮತ್ತು ಅವರ ಪತ್ನಿ, ಸ್ಯಾಂಡಲ್‍ವುಡ್ ಮೋಹಕತಾರೆ ರಮ್ಯಾ, ರವಿಚಂದ್ರನ್ ಹಾಗೂ ಅವರು ಪುತ್ರರು. ನಟ ಉಪೇಂದ್ರ, ನಟಿ ಸಪ್ತಮಿ ಗೌಡ ಸಹ ರಿಷಬ್ ಶೆಟ್ಟಿ ಮಗಳ ಹುಟ್ಟುಹಬ್ಬದಲ್ಲಿ ಭಾಗಿ ಆಗಿ, ರಾಧ್ಯಾಳಿಗೆ ವಿಶ್ ಮಾಡಿದ್ದಾರೆ. ಒಳ್ಳೆಯದಾಗಲಿ ಎಂದು ಆಶೀರ್ವಾದಿಸಿದ್ದಾರೆ.
View this post on Instagram
ಇದನ್ನೂ ಓದಿ: Rishabh Shetty: ರಿಷಬ್ ಶೆಟ್ಟಿ ಮಗಳ ಅದ್ಧೂರಿ ಬರ್ತ್‍ಡೇ! ಯಾರೆಲ್ಲ ಬಂದಿದ್ರು ನೋಡಿ!
ರಾಜಕೀಯ ಗಣ್ಯರಿಂದಲೂ ವಿಶ್
ಸಿನಿ ರಂಗದ ಕಲಾವಿದರಲ್ಲದೇ, ರಾಜಕೀಯ ಗಣ್ಯರು ಸಹ ಹುಟ್ಟುಹಬ್ಬದಲ್ಲಿ ಭಾಗಿಯಾಗಿದ್ದರು. ಮೈಸೂರು ಸಂಸದ ಪ್ರತಾಪ್ ಸಿಂಹ, ಸಿಟಿ ರವಿ, ಅಶ್ವತ್ಥ್ ನಾರಾಯಣ್, ಡಿ.ಕೆ ಶಿವಕುಮಾರ್, ಆರ್. ಅಶೋಕ್ ಸೇರಿ ಪ್ರಮುಖರು ಭಾಗಿಯಾಗಿದ್ದರು. ಎಲ್ಲರೂ ಪುಟ್ಟ ರಾಧ್ಯಾಗೆ ವಿಶ್ ಮಾಡಿ ಚೆನ್ನಾಗಿ ಬಾಳು ಎಂದು ಹಾರೈಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ