Rishabh Shetty New Movie: ಈಗಾಗ್ಲೇ ಮದ್ವೆಯಾಗಿರೋ ರಿಷಭ್ ಶೆಟ್ಟಿ 'ಬ್ಯಾಚುರಲ್ ಪಾರ್ಟಿ' ಮಾಡ್ತಿದ್ದಾರೆ!

Bachelor Party: ಸ್ಯಾಂಡಲ್​ವುಡ್ ನಟ ರಕ್ಷಿತ್ ಶೆಟ್ಟಿ ಹಾಗೂ ರಿಷಭ್ ಶೆಟ್ಟಿ ಅವರ ಹೊಸ ಮೂವಿ ಸೆಟ್ಟೇರುತ್ತಿದೆ. ನಟ ರಕ್ಷಿತ್ ಶೆಟ್ಟಿ ಪೋಸ್ಟರ್ ರಿಲೀಸ್ ಮಾಡಿದ್ದಾರೆ.

ಬ್ಯಾಚುರಲ್ ಪಾರ್ಟಿ ಪೋಸ್ಟರ್

ಬ್ಯಾಚುರಲ್ ಪಾರ್ಟಿ ಪೋಸ್ಟರ್

  • Share this:
ಸ್ಯಾಂಡಲ್​ವುಡ್ (Sandalwood) ನಟ ಹಾಗೂ ನಿರ್ದೇಶಕರಾಗಿ ಕೆಲಸ ಮಾಡಿರುವ ಯುವ ಜನರ ನೆಚ್ಚಿನ ಕಾಂಬಿನೇಷನ್ ಮತ್ತೆ ಒಟ್ಟಾಗಿ ಕೆಲಸ ಮಾಡಲಿದೆ. ಹೌದು ರಕ್ಷಿತ್ ಶೆಟ್ಟಿ (Rakshith Shetty) ಹಾಗೂ ರಿಷಭ್ ಶೆಟ್ಟಿ (Rishab Shetty) ಜೊತೆಯಾಗಿ ಸಿನಿಮಾ (Cinema) ಮಾಡುತ್ತಿದ್ದು, ಅವರ ಸಿನಿಮಾ ಪೋಸ್ಟರ್  (Poster) ರಿಲೀಸ್ ಮಾಡಲಾಗಿದೆ. ನಟ ರಕ್ಷಿತ್ ಶೆಟ್ಟಿ ತಮ್ಮ ಇನ್​​ಸ್ಟಾಗ್ರಾಮ್ (Instagram) ಪೋಸ್ಟ್​ನಲ್ಲಿ ಈ ಸಿನಿಮಾದ ಪೋಸ್ಟರ್ ಶೇರ್ ಮಾಡಿದ್ದಾರೆ. ಪರಂವಾಹ್ ಸ್ಟುಡಿಯೋಸ್​ನ (Paramvah Studios) ಮುಂದಿನ ಪ್ರಾಜೆಕ್ಟ್, ಸಾಹಸ ಹಾಸ್ಯ ಚಿತ್ರ "ಬ್ಯಾಚುಲರ್ ಪಾರ್ಟಿ" (Bachelor Party) ಅನ್ನು ಘೋಷಿಸಲು ಖುಷಿಪಡುತ್ತಿದ್ದೇವೆ. ರಿಷಭ್ ಶೆಟ್ಟಿ, ದಿಗಂತ್, ಅಚ್ಚುತಣ್ಣ ತಮ್ಮ ನಿರೂಪಣೆಯೊಂದಿಗೆ ನಮ್ಮನ್ನು ಮೋಜಿನ ಸವಾರಿಗೆ ಕರೆದೊಯ್ಯಲು ಸಿದ್ಧರಾಗಿದ್ದಾರೆ. ಇದು ಸೆವೆನ್ ಆಡ್ಸ್ ಮತ್ತು ಪರಂವಾಹ್‌ನ ಭಾಗವಾಗಿ ನಿಮ್ಮೊಂದಿಗೆ ಸಂತೋಷದಾಯಕ ಪ್ರಯಾಣವಾಗಲಿದೆ. ನಿಮ್ಮ ಚೊಚ್ಚಲ ಪಂದ್ಯಕ್ಕೆ ಶುಭ ಹಾರೈಸುತ್ತೇನೆ. ಯೋಜನೆಯಲ್ಲಿರುವ ಇಡೀ ತಂಡಕ್ಕೆ ನನ್ನ ಶುಭಾಶಯಗಳು ಎಂದು ರಕ್ಷಿತ್ ಶೆಟ್ಟಿ ಶುಭ ಹಾರೈಸಿದ್ದಾರೆ.

ಪೋಸ್ಟರ್ ಹೇಗಿದೆ?

ಪೋಸ್ಟರ್​ನಲ್ಲಿ ದಿಗಂತ್, ರಿಷಭ್ ಶೆಟ್ಟಿ, ಅಚ್ಚುತ್ ಕುಮಾರ್ ಜೊತೆಯಾಗಿ ಕಾರಿನ ಒಳಗೆ ಕುಳಿತಿರುವುದನ್ನು ಕಾಣಬಹುದು. ಕಾರಿನ ಹಿಂಭಾಗದ ಸೀಟಿನಲ್ಲಿ ಮೂವರು ಶಿಸ್ತಾಗಿ ಡ್ರೆಸ್ ಮಾಡಿಕೊಂಡು ಕುಳಿತಿದ್ದು ರಿಷಭ್ ಕೈಯಲ್ಲಿ ಭೂತ ಕನ್ನಡಿ ಹಿಡಿದು ಏನನ್ನೋ ಕುತೂಹಲದಿಂದ ನೋಡುತ್ತಿದ್ದರೆ, ಅಚ್ಚುತಣ್ಣ ಎಳನೀರು ಕೈಯಲ್ಲಿ ಹಿಡಿದು ಚಿಲ್ ಮಾಡಿದ್ದಾರೆ. ಇನ್ನು ದಿಗಂತ್ ಕೈಯಲ್ಲಿ ರೋಸ್ ಹಿಡಿದು ಬೇಸರದ ಛಾಯೆಯಲ್ಲಿ ಕಂಡುಬಂದಿದ್ದಾರೆ.






ರಕ್ಷಿತ್ ಶೆಟ್ಟಿ ಅರ್ಪಿಸುವ, ಪರಂವಾಹ್ ಸ್ಟುಡಿಯೋಸ್ ಪ್ರೊಡಕ್ಷನ್ ಸಿನಿಮಾ ಇದಾಗಿದ್ದು, ಜಿಎಸ್ ಗುಪ್ತಾ ಹಾಗೂ ರಕ್ಷಿತ್ ಶೆಟ್ಟಿ ನಿರ್ಮಿಸುತ್ತಿದ್ದಾರೆ.

ಇದನ್ನೂ ಓದಿ: Rishab Shetty: ಟಾಲಿವುಡ್​ನಲ್ಲೂ ಅಬ್ಬರಿಸೋಕೆ ರೆಡಿಯಾದ ರಿಷಬ್​ ಶೆಟ್ಟಿ! ತೆಲುಗು ಸಿನಿಮಾದ ಟ್ರೈಲರ್​ ರಿಲೀಸ್​

ಒಂದು ಗಂಟೆಯ ಹಿಂದೆ ಪೋಸ್ಟ್ ಮಾಡಲಾಗಿರುವ ಪೋಸ್ಟರ್​ಗೆ ಈಗಾಗಲೇ 13 ಸಾವಿರಕ್ಕೂ ಹೆಚ್ಚು ಲೈಕ್ಸ್ ಬಂದಿದೆ. ಪೋಸ್ಟರ್​ಗೆ ಕಮೆಂಟ್ ಮಾಡಿರುವ ಸಿನಿ ಪ್ರಿಯರು ಇದು ಕ್ರೇಝಿ ಕಾಂಬಿನೇಷನ್ ಎಂದು ಶುಭ ಹಾರೈಸಿದ್ದಾರೆ. ಬಹಳಷ್ಟು ಜನರು ಸಿನಿಮಾ ಬಗ್ಗೆ ಸೂಪರ್ ಎಕ್ಸೈಟ್ ಆಗಿರುವುದಾಗಿ ಕಮೆಂಟ್ ಬಾಕ್ಸ್​​ನಲ್ಲಿ ತಿಳಿಸಿದ್ದಾರೆ.

ಹೊಂಬಾಳೆ ಫಿಲಂಸ್ (Hombale Films)​ ಜತೆ ರಿಷಭ್ ಶೆಟ್ಟಿ ಕೈ ಜೋಡಿಸಿರುವ ಕಾಂತಾರಾ ( Kantara) ಸಿನಿಮಾ ನಿರೀಕ್ಷೆ ಮೂಡಿಸಿದ್ದು, ಸದ್ಯ ಅದರ ಬಿಡುಗಡೆ ದಿನಾಂಕವನ್ನು ಹೊಂಬಾಳೆ ಫಿಲ್ಮ್ಸ್​ ಬಿಡುಗಡೆಯಾಗಿದೆ. ಹೊಸ ಪ್ಯಾನ್​ ಇಂಡಿಯಾ ಸಿನಿಮಾ ಸೇರಿದಂತೆ ಕನ್ನಡ ಚಿತ್ರಗಳನ್ನು ಪ್ರಕಟಿಸುತ್ತಿರುವ ಕನ್ನಡ ಸಿನಿಮಾ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲಂಸ್​ನ 11ನೇ ಚಿತ್ರ ಇದಾಗಿದ್ದು, ರಿಷಭ್​ ಶೆಟ್ಟಿ ನಿರ್ದೇಶಿಸಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ ಚಿತ್ರ ಇದು. ಈ ಬಗ್ಗೆ ಹೊಂಬಾಳೆ ಫಿಲ್ಮ್ಸ್​ ಟ್ವಿಟ್ಟರ್​ನಲ್ಲಿ ಮಾಹಿತಿ ನೀಡಿದ್ದು, ದಸರಾದ ಜೊತೆಗೆ ಕಾಡ್ಗಿಚ್ಚಿನ ಬಯಲಾಟಕ್ಕೆ ಸಾಕ್ಷಿಯಾಗಿ, ಸೆಪ್ಟೆಂಬರ್ 30ರಂದು ಕಾಂತಾರ ಅನಾವರಣವಾಗಿದೆ ಎಂದು ಮಾಹಿತಿ ನೀಡಿದೆ.

ದಸರಾ ಹಬ್ಬಕ್ಕೆ ಗಿಫ್ಟ್

ಹೌದು, ಇದೇ ದಸರಾ ಸಮಯದಲ್ಲಿ ಈ ಚಿತ್ರ ಬಿಡುಗಡೆಯಾಗುತ್ತಿದ್ದು, ಈಗಾಗಲೇ ಟೀಸರ್​ ಮೂಲಕ ಜನರಲ್ಲಿ ಕಿಚ್ಚು ಹಚ್ಚಿದ್ದು, ಕಾತರದಿಂತ ಚಿತ್ರ ಬಿಡುಗಡೆಗೆ ಅಭಿಮಾನಿಗಳು ಕಾಯುತ್ತಿದ್ದಾರೆ. ಯೂಟ್ಯೂಬ್​ನಲ್ಲಿ 21 ಅಧಿಕ ವೀಕ್ಷಣೆಯನ್ನು ಈ ಚಿತ್ರದ ಟ್ರೇಲರ್ ಕಂಡಿದ್ದು, ಈ ಚಿತ್ರ ಮತ್ತೊಂದು ದಾಖಲೆ ಬರೆಯುವ ನಿರೀಕ್ಷೆ ಇದೆ. ಇನ್ನು ಈ ಚಿತ್ರದಲ್ಲಿ ರಿಷಬ್​ ಶೆಟ್ಟಿ ಜೊತೆ ಅಚ್ಯುತ್ ಕುಮಾರ್, ಪ್ರಮೋದ್​ ಶಟ್ಟಿ ಮುಂತಾದವರು ನಟಿಸುತ್ತಿದ್ದು, ರಿಷಬ್ ಅವರ ಬಹುತೇಕ ಚಿತ್ರಗಳಿಗೆ ಸಂಗೀತ ನೀಡಿರುವ ಅಜನೀಶ್​ ಲೋಕ್​ನಾಥ್​ ಈ ಚಿತ್ರಕ್ಕೂ ಸಂಗೀತ ನೀಡಿದ್ದಾರೆ.
Published by:Divya D
First published: