• Home
  • »
  • News
  • »
  • entertainment
  • »
  • Rakshith Shetty-Rishab Shetty: ರಕ್ಷಿತ್ ಶೆಟ್ಟಿ ನಿರ್ಮಾಣದ ಸಿನಿಮಾದಿಂದ ರಿಷಬ್​ ಔಟ್! ಈ ನಟ ಕೊಟ್ರು ಶಾಕಿಂಗ್ ನ್ಯೂಸ್​

Rakshith Shetty-Rishab Shetty: ರಕ್ಷಿತ್ ಶೆಟ್ಟಿ ನಿರ್ಮಾಣದ ಸಿನಿಮಾದಿಂದ ರಿಷಬ್​ ಔಟ್! ಈ ನಟ ಕೊಟ್ರು ಶಾಕಿಂಗ್ ನ್ಯೂಸ್​

ರಕ್ಷಿತ್ ಶೆಟ್ಟಿ, ರಿಷಬ್​ ಶೆಟ್ಟಿ

ರಕ್ಷಿತ್ ಶೆಟ್ಟಿ, ರಿಷಬ್​ ಶೆಟ್ಟಿ

ಕಾಂತಾರ ಸೂಪರ್​ ಹಿಟ್​ ಆಗಿದ್ದು, ಯಶಸ್ಸಿನಲ್ಲಿ ತೇಲುತ್ತಿರುವ ನಟ, ನಿರ್ದೇಶಕ ರಿಷಬ್ ಶೆಟ್ಟಿ ಅವರು ಸ್ವತಃ ಬ್ಯಾಚುಲರ್ ಪಾರ್ಟಿ ಚಿತ್ರದಿಂದ ಹೊರನಡೆದಿದ್ದಾರೆ ಎನ್ನುವ ಮಾಹಿತಿ ಹೊರಬಿದ್ದಿದೆ.

  • News18 Kannada
  • Last Updated :
  • Karnataka, India
  • Share this:

ನಟ ರಕ್ಷಿತ್ ಶೆಟ್ಟಿ (Rakshith Shetty) ಹಾಗೂ ರಿಷಬ್​ ಶೆಟ್ಟಿ (Rishab Shetty) ಇಬ್ಬರು ಸಿನಿಮಾ ಷ್ಟೇ ಅಲ್ಲದೆ ವೈಯಕ್ತಿಕವಾಗಿಯು ಅವರಿಬ್ಬರು ತುಂಬಾ ಆತ್ಮೀಯರು ಅನ್ನೋದು ಇಡೀ ಸ್ಯಾಂಡಲ್​ವುಡ್​ಗೆ (Sandalwood) ಗೊತ್ತಿದೆ. ಕಾಂತಾರ (Kantara) ಚಿತ್ರ ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡಿದ್ದು, ರಿಷಬ್​ ಕೂಡ ಬಾಲಿವುಡ್​, ಟಾಲಿವುಡ್​ ಗಳಲ್ಲಿ ಸಿನಿಮಾ ಪ್ರಮೋಷನ್ ಎಂದು ಬ್ಯುಸಿಯಾಗಿದ್ದಾರೆ. ಇತ್ತ ನಟ ರಕ್ಷಿತ್‌ ಶೆಟ್ಟಿ, ತಮ್ಮ ಪರಂವಃ ಸ್ಟುಡಿಯೋಸ್​ನಡಿ (Paramvah Studios) ನಿರ್ಮಾಪಕರಾಗಿ ಸಾಲು ಸಾಲು ಚಿತ್ರ ನಿರ್ಮಾಣದ ಜೊತೆ ತನ್ನ ಸಿನಿಮಾ ಶೂಟಿಂಗ್​ನಲ್ಲು ಬ್ಯುಸಿ ಆಗಿದ್ದಾರೆ. ಇತ್ತೀಚೆಗಷ್ಟೇ ಬ್ಯಾಚುಲರ್ ಪಾರ್ಟಿ (Bachelor Party) ಸಿನಿಮಾ ಘೋಷಿಸಿದ್ದ ಪರಂವಃ ಸ್ಟುಡಿಯೋಸ್‌ನಿಂದ ಇದೀಗ ಶಾಕಿಂಗ್​​ ನ್ಯೂಸ್​ ಒಂದು ಹೊರಬಿದ್ದಿದೆ. ಬ್ಯಾಚುಲರ್ ಪಾರ್ಟಿ ಸಿನಿಮಾದಿಂದ ರಿಷಬ್​ ಹೊರನಡೆದಿದ್ದಾರಂತೆ.


ರಕ್ಷಿತ್ ನಿರ್ಮಾಣದ ಚಿತ್ರದಿಂದ ರಿಷಬ್ ಔಟ್​


ಕಾಂತಾರ ಸೂಪರ್​ ಹಿಟ್​ ಆಗಿದ್ದು, ಯಶಸ್ಸಿನಲ್ಲಿ ತೇಲುತ್ತಿರುವ ನಟ, ನಿರ್ದೇಶಕ ರಿಷಬ್ ಶೆಟ್ಟಿ ಅವರೇ ಸ್ವತಃ ಚಿತ್ರದಿಂದ ಹೊರನಡೆದಿದ್ದಾರೆ ಎನ್ನುವ ಮಾತುಗಳು ಕೇಳಿ ಬರ್ತಿದೆ. ಈ ಬಗ್ಗೆ ನಟ ದಿಗಂತ ಮಾಹಿತಿ ಹಂಚಿಕೊಂಡಿದ್ದಾರೆ. ಮಾಧ್ಯಮ ಸಂವಾದದಲ್ಲಿ ಮಾತಾಡಿದ ನಟ ದಿಗಂತ್​, ರಿಷಬ್ ಶೆಟ್ಟಿ ಈ ಪ್ರಾಜೆಕ್ಟ್‌ನಿಂದ ಔಟ್​ ಆಗಿದ್ದಾರೆ ಎನ್ನುವ ಮಾಹಿತಿ ಬಹಿರಂಗಪಡಿಸಿದ್ದಾರೆ.


Kannada Actor Director Rishab Shetty Talks About his Dream and now it's Come True


ರಿಷಬ್​ ಪಾತ್ರಕ್ಕೆ ಮತ್ತೋರ್ವ ನಟನ ಹುಡುಕಾಟ
ಅಷ್ಟೇ ಅಲ್ಲದೇ ಚಿತ್ರತಂಡವು ರಿಷಬ್ ಅವರ ಪಾತ್ರಕ್ಕೆ ಮತ್ತೋರ್ವ ನಟನನ್ನು ಹುಡುಕುತ್ತಿದೆ ಎಂದು ದಿಗಂತ್ ಹೇಳಿದ್ದಾರೆ. ಆದ್ರೆ ಈ ವಿಚಾರವಾಗಿ ಪರಂವಃ ಸ್ಟುಡಿಯೋಸ್‌ ಪ್ರೊಡಕ್ಷನ್ ಹೌಸ್, ನಿರ್ದೇಶಕರಾಗಲಿ ಅಥವಾ ನಟ ರಿಷಬ್​ ಆಗಲಿ ಅಧಿಕೃತ ಹೇಳಿಕೆ ನೀಡಿಲ್ಲ.


ರಿಷಬ್ ಪಾತ್ರಕ್ಕೆ ಲೂಸ್​ ಮಾದ ಯೋಗಿ


ಈ ಕಾಮಿಡಿ ಎಂಟರ್‌ಟೈನರ್‌ನಲ್ಲಿ ರಿಷಬ್ ಶೆಟ್ಟಿ ಬದಲಿಗೆ ನಟ ಯೋಗೇಶ್ ಅಲಿಯಾಸ್ ಲೂಸ್ ಮಾದ ಯೋಗಿ ನಟಿಸಲಿದ್ದಾರೆ ಎಂದು ಹೇಳಲಾಗ್ತಿದೆ. ಯೋಗಿ ಅವರು ಕೊನೆಯದಾಗಿ ಡಾಲಿ ಧನಂಜಯ್ ಅಭಿನಯದ ಹೆಡ್‌ಬುಷ್ ಸಿನಿಮಾದಲ್ಲಿ ಗಂಗಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. . ಈ ಸಿನಿಮಾದಲ್ಲಿ ದಿಗಂತ್ ಜೊತೆಗೆ ಅಚ್ಯುತ್ ಕುಮಾರ್ ಸಹ ನಾಯಕರಾಗಿ ನಟಿಸಿದ್ದಾರೆ.


ಬ್ಯಾಚಲರ್​ ಪಾರ್ಟಿಗೆ ಅಭಿಜಿತ್ ಆ್ಯಕ್ಷನ್​ ಕಟ್​


ಅಭಿಜಿತ್ ಅವರ ನಿರ್ದೇಶನದಲ್ಲಿ ಬ್ಯಾಚಲರ್​ ಪಾರ್ಟಿ ಚಿತ್ರ ಮೂಡಿಬರಲಿದ್ದು, ಪ್ರಮುಖ ತಾರಾಗಣದೊಂದಿಗೆ ಸಿನಿಮಾ ಸೆಟ್ಟೇರಲಿದೆ. ಶೀಘ್ರವೇ ಸಿನಿಮಾ ಕೆಲಸ ಶುರುವಾಗಲಿದ್ದು, ರಿಷಬ್​ ಪಾತ್ರ ಬದಲಾವಣೆ ಕುರಿತು ಪ್ರೊಡಕ್ಷನ್ ಹೌಸ್‌ನಿಂದ ಅಧಿಕೃತ ಮಾಹಿತಿ ನೀಡಲಿದೆ.


ಲವ್​ ಹಾಗೂ ಮ್ಯಾರೇಜ್​ ಕಥೆಯುಳ್ಳ ಚಿತ್ರ


ಜಿ.ಎಸ್. ಗುಪ್ತಾ ಅವರೊಂದಿಗೆ ಚಿತ್ರವನ್ನು ನಿರ್ಮಿಸುತ್ತಿರುವ ನಟ ರಕ್ಷಿತ್ ಶೆಟ್ಟಿ, ಈ ಸಿನಿಮಾ ಮದುವೆ ಮತ್ತು ಲವ್ ಲೈಫ್‌ ಅನ್ನು ಸ್ಟೈಲಿಶ್ ಮತ್ತು ವಿಡಂಬನಾತ್ಮಕವಾಗಿ ತೋರಿಸುವ ಕಥೆಯನ್ನು ಒಳಗೊಂಡಿದೆ ಎಂದು ಹೇಳಿದ್ದಾರೆ.


ಬ್ಯಾಚುಲರ್ ಪಾರ್ಟಿಗೆ ಅರ್ಜುನ್ ರಾಮು ಮ್ಯೂಸಿಕ್​


ಬ್ಯಾಚುಲರ್ ಪಾರ್ಟಿಗೆ ಅರ್ಜುನ್ ರಾಮು ಸಂಗೀತ ಸಂಯೋಜಿಸಿದ್ದು, ಅರವಿಂದ್ ಕಶ್ಯಪ್ ಅವರ ಛಾಯಾಗ್ರಹಣವಿದೆ. ಬ್ಯಾಚುಲರ್ ಪಾರ್ಟಿಯ ಇತರೆ ಪಾತ್ರಗಳಲ್ಲಿ ಪವನ್ ಕುಮಾರ್, ಸೌಮ್ಯ ಜಗನ್ಮೂರ್ತಿ, ಬಾಲಾಜಿ ಮನೋಹರ್, ಪ್ರಕಾಶ್ ತುಮಿನಾಡ್, ರಘು ರಾಮನಕೊಪ್ಪ, ಶೋಭರಾಜ್ ಮತ್ತು ಗುರುಪ್ರಸಾದ್ ಮುಂತಾದವರು ಅಭಿನಯಿಸಲಿದ್ದಾರೆ.


ಇದನ್ನೂ ಓದಿ: Rishab Shetty at Kateel: ಕಟೀಲಿನಲ್ಲಿ ಕಾಂತಾರ ಹೀರೋ, ಸಿನಿಮಾ ಸಕ್ಸಸ್ ನಂತರ ರಿಷಬ್ ಶೆಟ್ಟಿ ಮೊದಲ ಭೇಟಿ


ಇನ್ನು ರಕ್ಷಿತ್​ ಸಿನಿಮಾದಿಂದ ನಟ ರಿಷಬ್​ ಶೆಟ್ಟಿ ಔಟ್​ ಆಗಿದ್ದು ಅಭಿಮಾನಿಗಳಲ್ಲಿ ಭಾರೀ ಕುತೂಹಲ ಮೂಡಿಸಿದೆ. ಯಾವುದೇ ಪ್ರಾಜೆಕ್ಟ್​ ಮಾಡಿದ್ರು ಇಬ್ಬರು ಒಟ್ಟಾಗಿಯೇ ಮಾಡುತ್ತಿದ್ದರು. ಈ ಬಗ್ಗೆ ರಿಷಬ್​ ಅವರೇ ಸ್ಪಷ್ಟನೆ ನೀಡಬೇಕಿದೆ.

Published by:ಪಾವನ ಎಚ್ ಎಸ್
First published: