ಪ್ರಧಾನಿ ನರೇಂದ್ರ ಮೋದಿ (PM Narendra Modi) ರಾಜಭವನದಲ್ಲಿ ಸ್ಯಾಂಡಲ್ವುಡ್ ಗಣ್ಯರ ಜೊತೆ ಸಂವಾದ ನಡೆಸಿದ್ರು. ಈ ಡಿನ್ನರ್ ಪಾರ್ಟಿಯಲ್ಲಿ ನಟ ಯಶ್ (Yash), ನಟ-ನಿರ್ದೇಶಕ ರಿಷಬ್ ಶೆಟ್ಟಿ (Rishab Shetty), ನಿರ್ಮಾಪಕ ವಿಜಯ್ ಕಿರಗಂದೂರು, ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್ಕುಮಾರ್, ಕಲಾವಿದೆ ಶ್ರದ್ಧಾ ಜೈನ್ (Shraddha Jain) ಕೂಡ ಭಾಗಿಯಾಗಿದ್ರು. ಪ್ರಧಾನಿ ನರೇಂದ್ರ ಜೊತೆ ನಡೆದ ಮಾತುಕತೆ ಬಗ್ಗೆ ನಟ ರಿಷಬ್ ಶೆಟ್ಟಿ ಮಾತಾಡಿದ್ದಾರೆ. ಮೋದಿ ಕಾಂತಾರ ಸಿನಿಮಾವನ್ನು (Kantara Movie) ಮೆಚ್ಚಿಕೊಂಡಿದ್ದಕ್ಕೆ ರಿಷಬ್ ಶೆಟ್ಟಿ ಫುಲ್ ಖುಷ್ ಆಗಿದ್ದಾರೆ.
ಕಾಂತಾರ ಬಗ್ಗೆ ಮೋದಿ ಮೆಚ್ಚುಗೆ ಮಾತು
ಕಾಂತಾರ ಸಿನಿಮಾವನ್ನು ಪ್ರೇಕ್ಷಕರಷ್ಟೇ ಅಲ್ಲ ಬೇರೆ ಭಾಷೆಯ ನಟ-ನಟಿಯರು ಹಾಗೂ ಅನೇಕ ಗಣ್ಯರು ಕೂಡ ಕಾಂತಾರ ಸಿನಿಮಾ ನೋಡಿ ಕೊಂಡಾಡಿದ್ದಾರೆ. ಇತ್ತೀಚಿಗಷ್ಟೇ ರಾಜ್ಯಕ್ಕೆ ಬಂದಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ಸಹ ಕಾಂತಾರ ಸಿನಿಮಾ ನೋಡಿ ಕೊಂಡಾಡಿದ್ರು. ಇದೀಗ ಸ್ಯಾಂಡಲ್ವುಡ್ ಗಣ್ಯರ ಜೊತೆಗಿನ ಸಂವಾದದಲ್ಲಿ ಪ್ರಧಾನಿ ನರೇಂದ್ರ ಮೋದಿ ಸಹ ಕಾಂತಾರ ಸಿನಿಮಾ ಬಗ್ಗೆ ಮೆಚ್ಚುಗೆ ಮಾತಾಡಿದ್ದಾರೆ.
ಸಂವಾದದಲ್ಲಿ ಪ್ರಧಾನಿ ನರೇಂದ್ರ ಯಾವ ವಿಚಾರಗಳ ಬಗ್ಗೆ ಮಾತಾಡಿದ್ರು ಎಂದು ರಿಷಬ್ ಶೆಟ್ಟಿ ವಿವರಿಸಿದ್ದಾರೆ. ಕಾಂತಾರ ಸಿನಿಮಾ ಬಗ್ಗೆ ಪ್ರಧಾನಿ ಮಾತನಾಡಿದ್ದು ಹೆಚ್ಚು ಖುಷಿ ನೀಡಿದೆ. ಇದು ಅವರ ಪಾಲಿನ ಹೆಮ್ಮೆಯ ಕ್ಷಣವಾಗಿದೆ ಎಂದು ರಿಷಬ್ ಹೇಳಿದ್ದಾರೆ.
ಕನಸು ನನಸಾದ ಕ್ಷಣ ಇದು
ಕನಸು ನನಸಾದ ಕ್ಷಣ ಇದು ಎಂದು ರಿಷಬ್ ಹೇಳಿದ್ದಾರೆ. ನಾನು ಪ್ರಧಾನಿ ನರೇಂದ್ರ ಮೋದಿ ಅವರನ್ನು ಮಹಾನ್ ನಾಯಕರೆಂದು ಕರೆಯುತ್ತೇನೆ. ಇದೀಗ ಅವರನ್ನು ಭೇಟಿ ಮಾಡಿದ್ದಕ್ಕೆ ತುಂಬಾ ಖುಷಿ ಆಗಿದೆ. ಕನ್ನಡ ಚಿತ್ರರಂಗ ಮತ್ತು ಭಾರತೀಯ ಚಿತ್ರರಂಗದಲ್ಲಿ ಏನೆಲ್ಲಾ ನಡೆಯುತ್ತಿದೆ? ನಮಗೆ ಇಲ್ಲಿ ಇನ್ನೂ ಏನೆಲ್ಲಾ ಬೇಕು ಎಂಬ ಬಗ್ಗೆ ತಿಳಿಸಿದ್ರು. ಅಷ್ಟೇ ಅಲ್ಲದೇ ಅವರ ಮುಂದಿನ ಯೋಜನೆ ಬಗ್ಗೆ ಕೂಡ ನಮಗೆ ತಿಳಿಸಿದ್ದಾರೆ ಎಂದು ರಿಷಬ್ ಶೆಟ್ಟಿ ಹೇಳಿದ್ದಾರೆ.
ನಮ್ಮ ನಾಡಿನ ಬಗ್ಗೆ ಸಾಕಷ್ಟು ತಿಳಿದಿದ್ದಾರೆ
ಕಾಂತಾರ ಸಿನಿಮಾ ಬಗ್ಗೆ ಮೋದಿ ತುಂಬಾ ಮಾತಾಡಿದ್ದೇ ನನಗೆ ಖುಷಿ ಕೊಟ್ಟಿದೆ ಎಂದು ರಿಷಬ್ ಹೇಳಿದ್ದಾರೆ. ಕಾಂತಾರ ಚಿತ್ರದ ಬಗ್ಗೆ ಅವರು ಸಾಕಷ್ಟು ತಿಳಿದಿದ್ದಾರೆ. ನಮ್ಮ ನಾಡಿನ ಕಥೆ, ನಮ್ಮ ಜನಪದ, ನಮ್ಮ ನಂಬಿಕೆ, ಸಂಪ್ರದಾಯವನ್ನು ಇಟ್ಟುಕೊಂಡು ಮಾಡಿದ ಕಾಂತಾರ ಸಿನಿಮಾ ಜಾಗತಿಕ ಮಟ್ಟಕ್ಕೆ ಹೋಗಿದ್ದಕ್ಕೆ ಅಭಿನಂದನೆ ತಿಳಿಸಿದರು. ಅವರ ಬಾಯಲ್ಲಿ ಹಲವು ಬಾರಿ ಕಾಂತಾರ ಕಾಂತಾರ ಶಬ್ದ ಕೇಳಿ ನನಗೆ ಸಿಕ್ಕಾಪಟ್ಟೆ ಖುಷಿ ಆಯಿತು ಎಂದು ರಿಷಬ್ ಶೆಟ್ಟಿ ಹೇಳಿದ್ದಾರೆ.
ಇದೇ ರೀತಿ ನಮ್ಮ ಜೊತೆಯಲ್ಲಿದ್ದ ಯಶ್, ವಿಜಯ್ ಕಿರಗಂದೂರು, ಅಶ್ವಿನಿ ಪುನೀತ್ ರಾಜ್ಕುಮಾರ್, ಅಯ್ಯೋ ಶ್ರದ್ಧಾ, ವೆಂಕಟೇಶ್ ಪ್ರಸಾದ್, ಜಾವಗಲ್ ಶ್ರೀನಾಥ್ ಅವರು ಕೂಡ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ. ಎಲ್ಲವನ್ನೂ ಅವರು ತುಂಬಾ ಶ್ರದ್ಧೆಯಿಂದ ಕೇಳಿದರು ಎಂದು ರಿಷಬ್ ಹೇಳಿದ್ರು.
ಇದನ್ನೂ ಓದಿ: PM Narendra Modi-Yash: ಪ್ರಧಾನಿ ನರೇಂದ್ರ ಮೋದಿಗೆ ರಾಕಿ ಭಾಯ್ ಸ್ಪೆಷಲ್ ಡಿಮ್ಯಾಂಡ್! ನಟ ಯಶ್ ಬೇಡಿಕೆ ಏನು?
ನಮ್ಮ ಕನ್ನಡ ಚಿತ್ರರಂಗದ ಬಗ್ಗೆ ಅವರ ಮನಸ್ಸಿನಲ್ಲಿ ಏನಿದೆ ಎಂಬುದು ಕೂಡ ತಿಳಿಸಿದರು. ಸರ್ಕಾರದಿಂದ ಚಿತ್ರರಂಗದವರು ಏನನ್ನು ನಿರೀಕ್ಷಿಸುತ್ತಿದ್ದಾರೆ ಅಂತ ವಿಚಾರಿಸಿದರು. ಚಿತ್ರರಂಗದ ಬಗ್ಗೆ ಸಣ್ಣ ಸಣ್ಣ ವಿಚಾರಗಳನ್ನು ಕೂಡ ಅವರು ತಿಳಿದುಕೊಂಡಿರುವುದು ನನಗೆ ಅಚ್ಚರಿ ಎನಿಸಿತು’ ಎಂದು ರಿಷಬ್ ಶೆಟ್ಟಿ ಹೇಳಿದ್ದಾರೆ. ಯಶ್ ಕೂಡ ಫಿಲ್ಮ್ಸಿಟಿ ನಿರ್ಮಾಣ ಬೇಡಿಕೆಯನ್ನು ಮೋದಿ ಮುಂದಿಟ್ಟಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ