• Home
  • »
  • News
  • »
  • entertainment
  • »
  • Rishab Shetty: ಹೇಳಿದಂತೆಯೇ ಹರಿಕಥೆ ಅಲ್ಲ ಗಿರಿಕಥೆ ಸಿನಿಮಾಗೆ ಹೊಸ ಪ್ರತಿಭೆಯನ್ನೇ ಆಯ್ಕೆ ಮಾಡಿದ್ದೇವೆ: ರಿಷಭ್​ ಶೆಟ್ಟಿ..!

Rishab Shetty: ಹೇಳಿದಂತೆಯೇ ಹರಿಕಥೆ ಅಲ್ಲ ಗಿರಿಕಥೆ ಸಿನಿಮಾಗೆ ಹೊಸ ಪ್ರತಿಭೆಯನ್ನೇ ಆಯ್ಕೆ ಮಾಡಿದ್ದೇವೆ: ರಿಷಭ್​ ಶೆಟ್ಟಿ..!

ಹರಿಕಥೆ ಅಲ್ಲ ಗಿರಿಕಥೆ ಸಿನಿಮಾದಲ್ಲಿ ರಿಷಭ್​ ಶೆಟ್ಟಿ

ಹರಿಕಥೆ ಅಲ್ಲ ಗಿರಿಕಥೆ ಸಿನಿಮಾದಲ್ಲಿ ರಿಷಭ್​ ಶೆಟ್ಟಿ

Harikathe Alla Girikathe: ಹರಿಕಥೆ ಅಲ್ಲ ಗಿರಿಕಥೆ ಸಿನಿಮಾದ ಲೀಡ್​ ಪಾತ್ರಧಾರಿ ತಪಸ್ವಿನಿ ಪೂಣಚ್ಚ. ಹೇಳಿದಂತೆಯೇ ಹೊಸ ಪ್ರತಿಭೆಯನ್ನು ನಾಯಕಿಯಾಗಿ ಆಯ್ಕೆ ಮಾಡಿದ್ದೇವೆ. ಇನ್ನು ಪ್ರಕಟಣೆ ನೀಡಿದಾಗ ಈ ಚಿತ್ರದಲ್ಲಿ ಇಬ್ಬರು ನಾಯಕಿಯರು ಇರಲಿದ್ದಾರೆ ಎಂದು ನಾವೂ ಎಲ್ಲೂ ಹೇಳಿರಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಮುಂದೆ ಓದಿ ...
  • Share this:

ಅನಿತಾ ಈ, 


ನಟ ಹಾಗೂ ನಿರ್ದೇಶಕನಾಗಿ ಸ್ಯಾಂಡಲ್​ವುಡ್​ನಲ್ಲಿ ಖ್ಯಾತಿ ಗಳಿಸಿರುವ ರಿಷಭ್​ ಶೆಟ್ಟಿ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಲಾಕ್​ಡೌನ್​ನಲ್ಲೇ ಒಂದು ಸಿನಿಮಾವನ್ನು ಮಾಡಿ ಪೂರ್ಣಗೊಳಿಸಿರುವ ಪ್ರತಿಭಾವಂತ ಕಲಾವಿದ. ಇತ್ತೀಚೆಗಷ್ಟೆ ಇವರ ಅಭಿನಯದ ಹೀರೋ ಸಿನಿಮಾದ ಪೋಸ್ಟರ್​ ರಿಲೀಸ್​ ಆಗಿದೆ. ಈ ಚಿತ್ರವನ್ನು ಲಾಕ್​ಡೌನ್​ನಲ್ಲೇ ಚಿತ್ರೀಕರಿಸಲಾಗಿದ್ದು, ಶೂಟಿಂಗ್​ ಸಹ ಮುಕ್ತಾಯವಾಗಿದೆ. ಇದರ ಬೆನ್ನಲ್ಲೇ ರಿಷಭ್​ ಶೆಟ್ಟಿ ನಾಯಕನಾಗಿ ನಟಿಸುತ್ತಿರುವ ಸಿನಿಮಾ ಹರಿಕಥೆ ಅಲ್ಲ ಗಿರಿಕಥೆ ಚಿತ್ರದ ಚಿತ್ರೀಕರಣ ಆರಭವಾಗಲಿದೆ. ನಿನ್ನೆಯಷ್ಟೆ ರಿಷಭ್​ ಈ ಸಿನಿಮಾದ ನಾಯಕಿಯರು ಯಾರೆಂದು ಪ್ರಕಟಿಸಿದ್ದಾರೆ. ಈ ಸಿನಿಮಾದಲ್ಲಿ ಒಬ್ಬರಲ್ಲ, ಇಬ್ಬರು ನಾಯಕಿಯರಿದ್ದಾರೆ. ಆದರೆ ಹೇಳಿದಂತೆ ಲೀಡ್​ ರೋಲ್​ನಲ್ಲಿ ಹೊಸಬರನ್ನೇ ನಾಯಕಿಯಾಗಿ ಪರಿಚಯಿಸಿದ್ದಾರೆ ರಿಷಭ್​ ಶೆಟ್ಟಿ. ಈ ಸಿನಿಮಾದ ಮುಹೂರ್ತ ನಡೆದ ನಂತರ ನಾಯಕಿಯರ ಹುಡುಕಾಟದಲ್ಲಿದ್ದ ಚಿತ್ರತಂಡ, ನಾಯಕಿ ಪಾತ್ರಕ್ಕೆ ಹೊಸಬರಿಗಾಗಿ ಹುಡುಕಾಟ ನಡೆಸುತ್ತಿರುವುದಾಗಿ ಪ್ರಕಟಿಸಿತ್ತು. 


ಅದರಂತೆ ಈಗ ಸಿನಿಮಾದ ನಾಯಕಿಯಾಗಿ ಹೊಸ ಪ್ರತಿಭೆ ತಪಸ್ವಿನಿ ಪೂಣಚ್ಚ ಅವರನ್ನು ಆಯ್ಕೆ ಮಾಡಲಾಗಿದೆ. ತಪಸ್ವಿನಿ ಪೂಣಚ್ಚ ಈ ಸಿನಿಮಾದಲ್ಲಿ ರಿಷಭ್​ ಶೆಟ್ಟಿ ಅವರಿಗೆ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಆದರೆ ಈ ಸಿನಿಮಾದಲ್ಲಿ ಮತ್ತೋರ್ವ ನಾಯಕಿಯೂ ಇದ್ದಾರೆ. ಅವರೇ ಲವ್​ ಮಾಕ್ಟೇಲ್​ ಸಿನಿಮಾದಲ್ಲಿ ಆದಿತಿ ಪಾತ್ರದಲ್ಲಿ ನಟಿಸಿರುವ ರಚನಾ ಇಂದರ್​.


ರಿಷಭ್​ ಶೆಟ್ಟಿ ನಾಯಕಿಯರ ಕುರಿತು ಪ್ರಕಟಿಸುತ್ತಿದ್ದಂತೆಯೇ ನೆಟ್ಟಿಗರೊಬ್ಬರು, ರಚನಾ ಇಂದರ್​ ಅವರನ್ನು ನೋಡಿ, ರಿಷಭ್​ ಅವರಿಗೆ ಖಾರವಾಗಿ ಕಮೆಂಟ್​ ಮಾಡಿದ್ದಾರೆ. ಮಾತಿನ ಬೆಲೆ ಗೊತ್ತಿಲ್ವಾ ನಿಮಗೆ..? ಈಗಾಗಲೇ ಗುರುತಿಸಿರುವ ನಟಿಯನ್ನು ಅಂದರೆ ರಚನಾ ಅವರನ್ನು ನಾಯಕಿಯಾಗಿ ಆಯ್ಕೆ ಮಾಡಿದ್ದೀರಿ. ಹೀಗಿರುವಾಗ ಮೊದಲು ಪ್ರಕಟಿಸುವ ಅಗತ್ಯವೇನಿತ್ತು ಎಂದು ಪ್ರಶ್ನಿಸಿದ್ದಾರೆ.


rishab shetty, Rachana Inder, thapaswini poonacha, Harikathe alla Girikathe Movie, Sri Krishna Janmashtami, Sandalwood, Ranvit Shetty, Cute photos Of Ranvit Shetty, Netizen criticized rishab shettys decision regarding Harikathe alla Girikathe lead role actress selection
ಖಾರವಾಗಿ ಕಮೆಂಟ್​ ಮಾಡಿರುವ ನೆಟ್ಟಿಗ


ಈ ಕುರಿತಾಗಿ ನ್ಯೂಸ್​ 18 ಜೊತೆ ಮಾತನಾಡಿರುವ ರಿಷಭ್​ ಶೆಟ್ಟಿ, ಈ ಸಿನಿಮಾದ ಲೀಡ್​ ಪಾತ್ರಧಾರಿ ತಪಸ್ವಿನಿ ಪೂಣಚ್ಚ. ಹೇಳಿದಂತೆಯೇ ಹೊಸ ಪ್ರತಿಭೆಯನ್ನು ನಾಯಕಿಯಾಗಿ ಆಯ್ಕೆ ಮಾಡಿದ್ದೇವೆ. ಇನ್ನು ಪ್ರಕಟಣೆ ನೀಡಿದಾಗ ಈ ಚಿತ್ರದಲ್ಲಿ ಇಬ್ಬರು ನಾಯಕಿಯರು ಇರಲಿದ್ದಾರೆ ಎಂದು ನಾವೂ ಎಲ್ಲೂ ಹೇಳಿರಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.


rishab shetty, Rachana Inder, thapaswini poonacha, Harikathe alla Girikathe Movie, Sri Krishna Janmashtami, Sandalwood, Ranvit Shetty, Cute photos Of Ranvit Shetty, Harikathe Alla Girikathe lead role actress Thapaswini Poonacha photos
ತಪಸ್ವಿನಿ ಪೂಣಚ್ಚ


ಇನ್ನೂ ಹೊಸ ಪ್ರತಿಭೆ ತಪಸ್ವಿನಿ ಪೂಣಚ್ಚ ಕುರಿತಾಗಿ ಮತ್ತಷ್ಟು ಮಾಹಿತಿ ನೀಡಿರುವ ರಿಷಭ್​ ಶೆಟ್ಟಿ, ನಾವಾಗಿಯೇ ತಪಸ್ವಿನಿ ಅವರನ್ನು ಆಡಿಷನ್​ಗೆ ಕರೆದಿದ್ದೆವು. ಈ ಸಿನಿಮಾಗಾಗಿ ಅಂದಾಜು 2ರಿಂದ 3 ಸಾವಿರ ಮಂದಿ ಕಲಾವಿದರು ಆಡಿಷನ್​ ನೀಡಿದ್ದರು. ಯಾರೂ ಸಹ ನಮ್ಮ ಸಿನಿಮಾದ ಪಾತ್ರ ಕೋರುವ ಲಕ್ಷಣಗಳನ್ನು ಹೊಂದಿರಲಿಲ್ಲ. ಈ ಕಾರಣದಿಂದ ನಾವೇ ಸಾಮಾಜಿಕ ಜಾಲತಾಣದಲ್ಲಿ ನಾಯಕಿ ಪಾತ್ರಕ್ಕಾಗಿ ಹುಡುಕಾಟ ನಡೆಸಿದೆವು. ಫೇಸ್​ಬುಕ್​, ಇನ್​ಸ್ಟಾಗ್ರಾಂನಲ್ಲಿ ಹಲವಾರು ಪ್ರೊಫೈಲ್​ಗಳನ್ನು ಜಾಲಾಡಿದಾಗ ತಪಸ್ವಿನಿ ಪೂಣಚ್ಚ ಅವರ ಖಾತೆ ಕಂಡಿತ್ತು. ಇವರು ನನ್ನ ಅಸ್ಟಿಸ್ಟೆಂಟ್​ ಅವರ ಮ್ಯೂಚ್ಯುವಲ್​ ಫ್ರೆಂಡ್​ ಆಗಿದ್ದರು. ನಂತರ ನಾವೇ ಅವರನ್ನು ಸಂಪರ್ಕಿಸಿ ಕರೆಸಿ, ಮಾತನಾಡಿ ಆಡಿಷನ್​ ಮಾಡಿಸಿದೆವು ಎಂದು ವಿವರಿಸಿದರು.


ಇದನ್ನೂ ಓದಿ: Rishab Shetty: ಹರಿಕಥೆ ಅಲ್ಲ ಗಿರಿಕಥೆ ಚಿತ್ರಕ್ಕೆ ನಾಯಕಿಯರ ಆಯ್ಕೆ: ರಿಷಭ್​ ಶೆಟ್ಟಿ ನಿಮಗೆ ಮಾತಿನ ಬೆಲೆ ಗೊತ್ತಿಲ್ವಾ ಎಂದ ನೆಟ್ಟಿಗ..!


ಇನ್ನು, ಎರಡನೇ ನಾಯಕಿ ರಚನಾ ಇಂದರ್, ಅವರ ಆಯ್ಕೆ ಪ್ರತಿಕ್ರಿಯೆ ಬಗ್ಗೆಯೂ ಮಾಹಿತಿ ಹಂಚಿಕೊಂಡ ಶೆಟ್ರು, ರಚನಾ ಸಹ ಆಡಿಷನ್​ಗೆ ಬಂದು ಆಯ್ಕೆಯಾದವರೆ. ನಮ್ಮ ಸಿನಿಮಾದಲ್ಲಿನ ಎರಡನೇ ನಾಯಕಿಯ ಪಾತ್ರಕ್ಕೆ ರಚನಾ ಒಪ್ಪುವಂತಿದ್ದರು ಅದಕ್ಕೆ ಅವರನ್ನು ಆಯ್ಕೆ ಮಾಡಿದ್ದೇವೆ. ಹರಿಕಥೆ ಅಲ್ಲ ಗಿರಿಕಥೆ ಸಿನಿಮಾದ ಆಡಿಷನ್​ಗೆ ಈಗಾಗಲೇ ಸಿನಿಮಾಗಳಲ್ಲಿ ನಟಿಸಿರುವ ಸಾಕಷ್ಟು ಮಂದಿ ಕಲಾವಿದರು ಬಂದಿದ್ದರು. ಒಂದುವೇಳೆ ಅವರಲ್ಲಿ ಯಾರಾದರೂ ಪಾತ್ರಕ್ಕೆ ಹತ್ತಿರವಾಗಿದ್ದಿದ್ದರೆ ಅವರನ್ನೇ ಆಯ್ಕೆ ಮಾಡುತ್ತಿದ್ದೆವು. ಹೊಸಬರಿಗೆ ಎಂದು ಪ್ರಕಟಣೆ ಕೊಟ್ಟ ಮಾತ್ರಕ್ಕೆ, ಪಾತ್ರಕ್ಕೆ ಸರಿಹೊಂದದವು ಸಿಗದಾಗ ಹಾಗೂ ಈಗಾಗಲೇ ನಟಿಸಿದ್ದಾರೆ ಎಂಬ ಕಾರಣಕ್ಕೆ ಪಾತ್ರಕ್ಕೆ ಒಪ್ಪುವಂತಿದ್ದಾಗಲೂ ಅವರನ್ನು ತೆಗೆದುಕೊಳ್ಳದೇ ಸರಿಯಾದ ನಿರ್ಧಾರವಾಗುವುದಿಲ್ಲ. ಪಾತ್ರಕ್ಕೆ ಸರಿ ಹೊಂದುವವರನ್ನು ಹುಡುಕುವುದೇ ನಮ್ಮ ಗುರಿಯಾಗಿರುತ್ತದೆ ಎಂದಿದ್ದಾರೆ ರಿಷಭ್​.
ಹರಿಕಥೆ ಅಲ್ಲ ಗಿರಿಕಥೆ ಸಿನಿಮಾದ ಚಿತ್ರೀಕರಣ ಇದೇ ವಾರ ಆರಂಭವಾಗಲಿದೆ. ಸಿನಿಮಾದ ಮೊದಲ ಶೆಡ್ಯೂಲ್​ನ ಮೊದಲ ದಿನ ಅಣ್ಣಾವ್ರ ಸಮಾಧಿ ಬಳಿಯಿಂದ ಆರಂಭವಾಗಲಿದೆಯಂತೆ. ಈ ಸಿನಿಮಾದಲ್ಲಿ ರಿಷಭ್​ ಸಿನಿಮಾದ ನಿರ್ದೇಶಕನಾಗಿ ಕಾಣಿಸಿಕೊಳ್ಳಲಿದ್ದಾರೆ. ಬೆಂಗಳೂರಿನಲ್ಲಿ ಒಂದು ದಿನದ ಚಿತ್ರೀಕರಣದ ಮುಗಿದ ನಂತರ, ಮೈಸೂರಿನಲ್ಲಿ ಶೂಟಿಂಗ್​ ನಡೆಯಲಿದೆ. ಇಡೀ ಸಿನಿಮಾದ ಚಿತ್ರೀಕರಣ ಮೈಸೂರಿನಲ್ಲೇ ನಡೆಯಲಿದೆಯಂತೆ.


ಇದನ್ನೂ ಓದಿ: Nikhil Kumaraswamy: ನಿಖಿಲ್​-ರೇವತಿಯ ಫನ್ನಿ ವಿಡಿಯೋಗೆ ಅಭಿಮಾನಿಗಳು ಫಿದಾ..!


ಲಾಕ್​ಡೌನ್​ನಲ್ಲೇ ಹರಿಕಥೆ ಅಲ್ಲ ಗಿರಿಕಥೆ ಸಿನಿಮಾದ  ಮುಹೂರ್ತ ಸಮಾರಂಭ ರಿಷಭ್ ಶೆಟ್ಟಿ ಅವರ ಕಛೇರಿಯಲ್ಲೇ ಸರಳವಾಗಿ ನೆರವೇರಿತ್ತು. ದೇವರ ಮೇಲೆ ಸೆರೆಹಿಡಿಯಲಾದ ಮೊದಲ ದೃಶ್ಯಕ್ಕೆ ರಿಷಭ್ ಶೆಟ್ಟಿ ಪುತ್ರ ಮಾಸ್ಟರ್ ರಣವೀತ್ ಶೆಟ್ಟಿ ಆರಂಭ ಫಲಕ ತೋರಿದ್ದರು. ನಿರ್ಮಾಪಕ ಸಂದೇಶ್ ಎನ್. ಕ್ಯಾಮೆರಾ ಚಾಲನೆ ಮಾಡಿದರು. ರಿಷಭ್ ಪತ್ನಿ ಪ್ರಗತಿ ಶೆಟ್ಟಿ, ನಟ ರಕ್ಷಿತ್ ಶೆಟ್ಟಿ, ಪ್ರಮೋದ್ ಶೆಟ್ಟಿ, ವಿತರಕ ಜಯಣ್ಣ, ಕೆಆರ್​ಪೇಟೆ ಮಂಜಣ್ಣ ಸೇರಿದಂತೆ ಇನ್ನೂ ಹಲವರು ಪೂಜೆಯಲ್ಲಿ ಪಾಲ್ಗೊಂಡು ಚಿತ್ರತಂಡಕ್ಕೆ ಶುಭಹಾರೈಸಿದ್ದರು. ಸೂಪರ್ ​ ಹಿಟ್​ ಕಿರಿಕ್ ಪಾರ್ಟಿ ಚಿತ್ರದಲ್ಲಿ ನಟಿಸಿದ್ದ ಗಿರಿಕೃಷ್ಣ, ಹರಿಕಥೆ ಅಲ್ಲ ಗಿರಿಕಥೆಗೆ ಚೊಚ್ಚಲ ಬಾರಿಗೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಕಿರಿಕ್ ಪಾರ್ಟಿಗೆ ಸಂಗೀತ ನೀಡಿದ್ದ ಅಜನೀಶ್ ಲೋಕನಾಥ್ ಈ ಚಿತ್ರದ ಜವಾಬ್ದಾರಿ ಹೊತ್ತಿದ್ದಾರೆ.
ರಿಷಭ್​ ಶೆಟ್ಟಿ ನಿರ್ದೇಶನದ ಕಿರಿಕ್ ಪಾರ್ಟಿ ಹಾಗೂ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಕಾಸರಗೋಡು ಮೂರೂ ಸಿನಿಮಾಗಳೂ ಬಾಕ್ಸಾಫಿಸ್​ನಲ್ಲಿ ಸದ್ದು ಮಾಡಿವೆ. ಈಗ ಅವರ ನಿರ್ದೇಶನದಲ್ಲಿ ಮೂಡಿ ಬರಲಿರುವ ರುದ್ರಪ್ರಯಾಗ್​ ಸಿನಿಮಾ ಸೆಟ್ಟೇರಬೇಕಿದೆ.

Published by:Anitha E
First published: