ರಾಬರ್ಟ್ ನಟನಿಗೆ ಜೀವ ಬೆದರಿಕೆ: ವೈ ಶ್ರೇಣಿಯ ಭದ್ರತೆ ನೀಡಿದ ಉತ್ತರ ಪ್ರದೇಶ ಸರ್ಕಾರ!

ಆದರೆ, ಎಲ್ಲಕಿಂತ ಹೆಚ್ಚಾಗಿ ಡ್ರಗ್ ಜಾಲದ ಬಗ್ಗೆ ಮಾತನಾಡಿದ ಬಳಿಕ ರವಿಕಿಶನ್ ಅವರಿಗೆ ಬೆದರಿಕೆ ಇರುವುದು ತಿಳಿಯಿತು. ಹೀಗಾಗಿಯೇ ತಕ್ಷಣ ವೈ ಕೆಟಗರಿ ಸೆಕ್ಯುರಿಟಿ ನೀಡಲಾಗಿದೆ. ಹೀಗಾಗಿ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಧನ್ಯವಾದ ತಿಳಿಸಿ, ಟ್ವೀಟ್ ಮಾಡಿದ್ದಾರೆ ರವಿಕಿಶನ್. 

ದರ್ಶನ್​ ಹಾಗೂ ರವಿ ಕಿಷನ್​

ದರ್ಶನ್​ ಹಾಗೂ ರವಿ ಕಿಷನ್​

  • Share this:
ಕೆಲ ದಿನಗಳ ಹಿಂದಷ್ಟೆ ಬಾಲಿವುಡ್ ನಟಿ ಕಂಗನಾ ರಣಾವತ್ ಅವರಿಗೆ ವೈ ಕೆಟಗರಿ ಸೆಕ್ಯುರಿಟಿ ನೀಡಲಾಗಿತ್ತು. ಬಾಲಿವುಡ್​ನಲ್ಲಿ ನೆಲೆಯೂರಿರುವ ಡ್ರಗ್ ಜಾಲ, ನೆಪೋಟಿಸಂ, ನಟ ಸುಶಾಂತ್ ಸಿಂಗ್ ರಜಪೂತ್ ಅನುಮಾನಾಸ್ಪದ ಸಾವು ಪ್ರಕರಣ ಸೇರಿದಂತೆ ಹಲವು ವಿಷಯಗಳ ಬಗ್ಗೆ ಮಾತನಾಡುತ್ತಿದ್ದ ಕಾರಣ ಅವರು ಹಲವರನ್ನು ಎದುರು ಹಾಕಿಕೊಂಡಿದ್ದರು. ಹೀಗಾಗಿಯೇ ಕಂಗನಾಗೆ ಜೀವಕ್ಕೆ ಬೆದರಿಕೆ ಇದೆ ಎಂದು ಭದ್ರತೆ ನೀಡಲಾಗಿತ್ತು. ಅವರ ಬೆನ್ನಲ್ಲೇ ಈಗ ಮತ್ತೊಬ್ಬ ಹೆಸರಾಂತ ನಟನಿಗೆ ವೈ ಶ್ರೇಣಿಯ ಭದ್ರತೆ ನೀಡಲಾಗಿದೆ. ಹೌದು, ಭೋಜ್​ಪುರಿ ಚಿತ್ರರಂಗದ ಅಮಿತಾಭ್ ಬಚ್ಚನ್ ಎಂದೇ ಖ್ಯಾತಿ ಗಳಿಸಿರುವ ರವಿಕಿಶನ್ ಅವರಿಗೆ ವೈ ಕೆಟಗರಿ ಸೆಕ್ಯುರಿಟಿ ನೀಡಲಾಗಿದೆ. ಉತ್ತರಪ್ರದೇಶದ ಗೋರಖ್​ಪುರ ಲೋಕಸಭಾ ಕ್ಷೇತ್ರದ ಸಂಸದರೂ ಆಗಿರುವ ರವಿಕಿಶನ್, ಇತ್ತೀಚೆಗಷ್ಟೇ ಸಂಸತ್ ಅಧಿವೇಶನದಲ್ಲಿ ಬಾಲಿವುಡ್​ನಲ್ಲಿ ಆಳವಾಗಿ ನೆಲೆಯೂರಿರುವ ಡ್ರಗ್ ಜಾಲ ಹಾಗೂ ಅದರಿಂದ ಹಾದಿ ತಪ್ಪುತ್ತಿರುವ ಯುವಕ, ಯುವತಿಯರ ಬಗ್ಗೆ ಸುದೀರ್ಘವಾಗಿ ಮಾತನಾಡಿದ್ದರು. ಅದಕ್ಕೆ ಕೆಲ ಬಾಲಿವುಡ್ ಮಂದಿ ಬೆಂಬಲ ಸೂಚಿಸಿದ್ದರೆ, ಇನ್ನೂ ಕೆಲವರು ಉಂಡ ಮನೆಗೆ ಎರಡು ಬಗೆವ ಕೆಲಸ ಮಾಡುತ್ತಿದ್ದಾರೆಂದು ಹೀಗಳೆದಿದ್ದರು.

ಆದರೆ, ಎಲ್ಲಕಿಂತ ಹೆಚ್ಚಾಗಿ ಡ್ರಗ್ ಜಾಲದ ಬಗ್ಗೆ ಮಾತನಾಡಿದ ಬಳಿಕ ರವಿಕಿಶನ್ ಅವರಿಗೆ ಬೆದರಿಕೆ ಇರುವುದು ತಿಳಿಯಿತು. ಹೀಗಾಗಿಯೇ ತಕ್ಷಣ ವೈ ಕೆಟಗರಿ ಸೆಕ್ಯುರಿಟಿ ನೀಡಲಾಗಿದೆ. ಹೀಗಾಗಿ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಧನ್ಯವಾದ ತಿಳಿಸಿ, ಟ್ವೀಟ್ ಮಾಡಿದ್ದಾರೆ ರವಿಕಿಶನ್.

आदरणीय श्रद्धेय @myogiadityanath महाराज जी ।ಮುಂದಿನ ದಿನಗಳಲ್ಲೂ ಇದೇ ರೀತಿ ಡ್ರಗ್ ಜಾಲದ ವಿರುದ್ಧ ಹೋರಾಟ ಮುಂದುವರಿಸುವುದಾಗಿ ಹೇಳಿದ್ದಾರೆ ಈ ನಟ. ಇನ್ನು ವೈ ಪ್ಲಸ್ ಸೆಕ್ಯುರಿಟಿಯಲ್ಲಿ ಇಬ್ಬರು ಕಮಾಂಡೋಗಳು ಸೇರಿದಂತೆ ಒಟ್ಟು 11 ಮಂದಿ ಅಂಗರಕ್ಷಕರನ್ನು ರವಿಕಿಶನ್ ಅವರ ರಕ್ಷಣೆಗೆ ನಿಯೋಜಿಸಲಾಗಿದೆ.

ಇದನ್ನೂ ಓದಿ: ಕೇವಲ 12 ಗಂಟೆಗಳಲ್ಲಿ ಬೆಸ್ಟ್​ ಸೆಲ್ಲರ್​ ಪುಸ್ತಕವಾಯ್ತು ಪ್ರಿಯಾಂಕಾರ ಆತ್ಮಕಥೆ ಅನ್​ಫಿನಿಶ್ಡ್

ಇನ್ನು. ಸಿನಿಮಾಗಳ ವಿಷಯಕ್ಕೆ ಬರುವುದಾದರೆ ಭೋಜ್​ಪುರಿ, ಹಿಂದಿ ಮಾತ್ರವಲ್ಲ ರವಿಕಿಶನ್ ಕನ್ನಡ, ತೆಲುಗು, ಮರಾಠಿ ಹಾಗೂ ತಮಿಳು ಭಾಷೆಗಳಲ್ಲೂ ನಟಿಸಿದ್ದಾರೆ. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಜೊತೆಗೆ ಹೆಬ್ಬುಲಿ, ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ಜೊತೆ ದ್ರೋಣ ಸಿನಿಮಾದಲ್ಲಿ ಮಿಂಚಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಜತೆ ರಾಬರ್ಟ್ ಚಿತ್ರದಲ್ಲೂ ನಟಿಸಿದ್ದು, ಇನ್ನು ಕೆಲವೇ ದಿನಗಳಲ್ಲಿ ತೆರೆಗೆ ಬರುವ ನಿರೀಕ್ಷೆಯಿದೆ.
Published by:Anitha E
First published: