• Home
  • »
  • News
  • »
  • entertainment
  • »
  • Rashmika Mandanna: ಕರ್ನಾಟಕದಲ್ಲಿ ಯಾರು ನನ್ನ ಬ್ಯಾನ್ ಮಾಡಿಲ್ಲ, ಗಾಸಿಪ್ ಮಾಡ್ಬೇಡಿ, ಕನ್ನಡ ಸಿನಿಮಾ ಅಂದ್ರೆ ನಂಗೆ ಇಷ್ಟ - ರಶ್ಮಿಕಾ

Rashmika Mandanna: ಕರ್ನಾಟಕದಲ್ಲಿ ಯಾರು ನನ್ನ ಬ್ಯಾನ್ ಮಾಡಿಲ್ಲ, ಗಾಸಿಪ್ ಮಾಡ್ಬೇಡಿ, ಕನ್ನಡ ಸಿನಿಮಾ ಅಂದ್ರೆ ನಂಗೆ ಇಷ್ಟ - ರಶ್ಮಿಕಾ

ರಶ್ಮಿಕಾ

ರಶ್ಮಿಕಾ

ಕನ್ನಡ ಚಿತ್ರರಂಗದಿಂದ ನನ್ನನ್ನು ಬ್ಯಾನ್ ಮಾಡಲಾಗಿದೆ ಎಂಬ ಮಾತು ವಾಸ್ತವವಾಗಿ ಸತ್ಯವಲ್ಲ. ಇಲ್ಲಿಯವರೆಗೂ ಈ ವಿಚಾರ ನನ್ನ ಬಳಿ ಬಂದಿಲ್ಲ ಎಂದು ನಟಿ ರಶ್ಮಿಕಾ ಮಂದಣ್ಣ ಹೇಳಿದ್ದಾರೆ.

  • Share this:

ಕರ್ನಾಟಕದಲ್ಲಿ ನನ್ನನ್ನು ಯಾರು ಬ್ಯಾನ್ ಮಾಡಿಲ್ಲ, ಕನ್ನಡ ಸಿನಿಮಾಗಳ (Kannada Film) ಮೇಲೆ ನನಗೆ  ಪ್ರೀತಿ ಇದೆ ಎಂದು ಹೇಳುವ ಮೂಲಕ ಕೊಡಗಿನ ಕುವರಿ ನಟಿ  ರಶ್ಮಿಕಾ ಮಂದಣ್ಣ (Rashmika Mandanna) ತಮ್ಮನ್ನು ಬ್ಯಾನ್ ಮಾಡುವ ವಿಚಾರಕ್ಕೆ ಸ್ಪಷ್ಟನೆ ನೀಡಿದ್ದಾರೆ.  ಹೌದು, ಕರ್ನಾಟಕದಲ್ಲಿ (Karnataka) ರಶ್ಮಿಕಾ ಮಂದಣ್ಣರನ್ನು ಬ್ಯಾನ್ ಮಾಡಲಾಗಿದೆ ಎಂಬ ಸುದ್ದಿ ಚಿತ್ರರಂಗದಲ್ಲಿ (Kannada Film Industry) ಕೆಲದಿನಗಳಿಂದ ಹರಿದಾಡುತ್ತಿದೆ. ಈ ನಡುವೆ ರಶ್ಮಿಕಾ ಮಂದಣ್ಣ ಅವರು, ಯಾರೋ ಕೆಲವರು ಈ ರೀತಿಯ ಸುದ್ದಿಗಳನ್ನು ಹಬ್ಬಿಸುತ್ತಿದ್ದಾರೆ. ಇದರಲ್ಲಿ ಯಾವುದು ಸತ್ಯವಿಲ್ಲ. ಅವರು ಹೇಳುತ್ತಿರುವುದು ಎಷ್ಟು ಸರಿ, ಎಷ್ಟು ತಪ್ಪು ಎಂಬುವುದನ್ನು ಅವರ ವಿವೇಚನೆಗೆ ಬಿಡುತ್ತೇನೆ ಎಂದಿದ್ದಾರೆ.


ನನ್ನನ್ನು ಬ್ಯಾನ್ ಮಾಡಲಾಗಿದೆ ಎಂಬ ಸುದ್ದಿ ಸತ್ಯವಲ್ಲ


ರಶ್ಮಿಕಾರನ್ನು ಬ್ಯಾನ್ ಮಾಡಬೇಕೆಂಬ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿಷ್ಟೇ ಚರ್ಚೆಯಾಗುತ್ತಿದ್ದು, ಈವರೆಗೂ ಈ ಬಗ್ಗೆ ಎಲ್ಲಿಯೂ ಯಾವ ಕಲಾವಿದರೂ ಹೇಳಿಲ್ಲ. ಅದರಂತೆ ರಶ್ಮಿಕಾ ಕೂಡ, ಕನ್ನಡ ಚಿತ್ರರಂಗದಿಂದ ನನ್ನನ್ನು ಬ್ಯಾನ್ ಮಾಡಲಾಗಿದೆ ಎಂಬ ಮಾತು ವಾಸ್ತವವಾಗಿ ಸತ್ಯವಲ್ಲ. ಇಲ್ಲಿಯವರೆಗೂ ಈ ವಿಚಾರ ನನ್ನ ಬಳಿ ಬಂದಿಲ್ಲ ಎಂದು ಹೇಳಿದ್ದಾರೆ.


ಕನ್ನಡ ಸಿನಿಮಾಗಳ ಬಗ್ಗೆ ನನಗೆ ಪ್ರೀತಿ ಇದೆ


ಕನ್ನಡದಿಂದ ಪರಭಾಷಾ ಸಿನಿಮಾದತ್ತ ಮುಖ ಮಾಡಿ ಸಕ್ಸಸ್​​ ನಟಿಯಾಗಿರುವ ರಶ್ಮಿಕಾ ಕನ್ನಡ ಚಿತ್ರರಂಗವನ್ನು ಮರೆತುಬಿಟ್ಟಿದ್ದಾರೆ ಎಂಬ ಕೆಲವರ ಹೇಳಿಕೆಗೆ, ಕನ್ನಡ ಸಿನಿಮಾಗಳ ಬಗ್ಗೆ ನನಗೆ ಸದಾ ಪ್ರೀತಿ ಇದ್ದೆ ಇರುತ್ತದೆ. ಆದರೆ ಸತ್ಯಾಂಶ ತಿಳಿದುಕೊಳ್ಳದೇ ಗಾಳಿ ಸುದ್ದಿಗಳನ್ನು ಹಬ್ಬಿಸಬೇಡಿ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.


ದಕ್ಷಿಣ ಭಾರತದ ಚಿತ್ರಗಳಲ್ಲಿ ಮಾತ್ರವಲ್ಲದೇ ಬಾಲಿವುಡ್​ಗೂ ಲಗ್ಗೆ ಇಟ್ಟಿರುವ ರಶ್ಮಿಕಾ ಮಂದಣ್ಣ ಇತ್ತಿಚೆಗಷ್ಟೇ ಕಾಂತಾರ ಸಿನಿಮಾ ನೋಡಿದ್ದೀರಾ ಎಂದು ಕೇಳಿದ ಪ್ರಶ್ನೆಗೆ ಕಾಂತಾರ ಸಿನಿಮಾ ನೋಡಿಲ್ಲ ಎಂದು ಪ್ರತಿಕ್ರಿಯಿಸಿದ್ದರು. ಇದರಿಂದ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದಲ್ಲದೇ ಸಾಕಷ್ಟು ಟ್ರೋಲ್​ಗೆ  ಒಳಗಾಗಿದ್ದರು.


ಕಾಂತಾರ ಸಿನಿಮಾ ನೋಡಿದ್ದೇನೆ ಚೆನ್ನಾಗಿದೆ


ಇದೀಗ ಈ ಬಗ್ಗೆ ಕೂಡ ಪ್ರತಿಕ್ರಿಯಿಸಿರುವ ರಶ್ಮಿಕಾ ಮಂದಣ್ಣ, ಕಾಂತಾರಾ ಸಿನಿಮಾ ಬಿಡುಗಡೆಯಾದ ಎರಡೇ ದಿನಕ್ಕೆ ಕಾಂತಾರ ಸಿನಿಮಾ ನೋಡಿದ್ರಾ ಎಂದು ಕೇಳಿದ್ದರು.  ಆಗ ನೋಡಿರಲಿಲ್ಲ ಎಂದಿದ್ದೆ. ಆದರೆ ನಂತರ ಕಾಂತಾರ ಸಿನಿಮಾ ನೋಡಿ ಬಹಳ ಚೆನ್ನಾಗಿದೆ ಎಂದು ಮೆಸೇಜ್ ಮಾಡಿದ್ದೆ. ಧನ್ಯವಾದ ಎಂದು ರಿಪ್ಲೈ ಮಾಡಿದ್ದರು ಎಂದು ತಿಳಿಸಿದ್ದಾರೆ.
ಪ್ರೊಡಕ್ಷನ್ ಹೆಸರು ಹೇಳದೇ ಕೈ ಸನ್ನೆ ಮಾಡಿದ್ದ ರಶ್ಮಿಕಾ


ಕೆಲವು ದಿನಗಳ ಹಿಂದೆಯಷ್ಟೇ ಸಂದರ್ಶನವೊಂದರಲ್ಲಿ ತಮಗೆ ಮೊದಲ ಸಿನಿಮಾದ ಆಫರ್​ ಸಿಕ್ಕ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರೊಡಕ್ಷನ್ ಹೆಸರೇ ಹೇಳದೇ, ಕೈ ಸನ್ನೆ ಮಾಡುವ ಮೂಲಕ ರಶ್ಮಿಕಾ ಉತ್ತರಿಸಿದ್ದರು. ಕಿರಿಕ್ ಪಾರ್ಟಿ ಚಿತ್ರದ ಹೆಸರನ್ನು ಹೇಳಲು ಹಿಂದೇಟು ಹಾಕಿದ್ದರು. ನಾನು ಕಾಲೇಜಿನಲ್ಲಿ ಓದುತ್ತಿದ್ದೆ ಆ ಸಮಯದಲ್ಲಿ ʻಕಿರಿಕ್ ಪಾರ್ಟಿʼ ತಂಡ ನನ್ನ ಬಳಿ ನಟಿಸುವಂತೆ ಕೇಳಿಕೊಂಡಿತ್ತು ಅಂತಾ ಹೇಳಿದ್ದರು. ಆಗ ರಶ್ಮಿಕಾ, ʻಕಿರಿಕ್ ಪಾರ್ಟಿʼ ಚಿತ್ರದ ಹೆಸರನ್ನು ಹೇಳದೇ ಸನ್ನೆ ಮೂಲಕ ಕೈ ತೋರಿಸಿದ್ದರು. ಹೀಗಾಗಿ  ಅಭಿಮಾನಿಗಳು ರಶ್ಮಿಕಾ ವಿರುದ್ಧ ಆಕ್ರೋಶ ಹೊರಹಾಕಿದ್ದರು.


ಇದನ್ನೂ ಓದಿ: Rashmika Mandanna: ಪ್ಯಾಂಟ್​ಲೆಸ್ ಆಗಿ ಟಾಪ್-ಬ್ಲೇಜರ್​ನಲ್ಲಿ ರಶ್ಮಿಕಾ ಲುಕ್


ಇದಕ್ಕೆ ಪ್ರತಿಯಾಗಿ ರಿಷಬ್​ ಕೂಡ ಸಂದರ್ಶನವೊಂದರಲ್ಲಿ, ರಶ್ಮಿಕಾ, ಕೀರ್ತಿ ಸುರೇಶ್, ಸಮಂತಾ, ಸಾಯಿಪಲ್ಲವಿ ಈ ನಾಲ್ವರಲ್ಲಿ ಯಾರ ಜೊತೆ ನಟಿಸಲು, ಕೆಲಸ ಮಾಡಲು ಇಷ್ಟ ಎಂದು ಕೇಳಿದ ಪ್ರಶ್ನೆಗೆ, ಎಲ್ಲಿಯೂ ಕೂಡ ರಶ್ಮಿಕಾ ಹೆಸರನ್ನ ಪ್ರಸ್ತಾಪಿಸದೇ ಸ್ಕ್ರಿಪ್ಟ್ ಮುಗಿದ ಮೇಲೆ ಕಲಾವಿದರ ಬಗ್ಗೆ ಯೋಚಿಸುತ್ತೇನೆ.
ಹೊಸ ಕಲಾವಿದರ ಜೊತೆ ನಟಿಸೋಕೆ ಇಷ್ಟಪಡ್ತೀನಿ. ನೀವು ಹೇಳಿದ ಹೆಸರುಗಳಲ್ಲಿ (ಕೋಟ್ ರೀತಿಯಲ್ಲಿ ಸನ್ನೆ ಮಾಡಿ) ನಟಿಯರು ನನಗೆ ಇಷ್ಟ ಇಲ್ಲ. ಸಮಂತಾ, ಸಾಯಿಪಲ್ಲವಿ ಅಭಿನಯ ತುಂಬಾ ಇಷ್ಟ ಎಂದು ರಶ್ಮಿಕಾ ಸ್ಟೈಲಿನಲ್ಲಿಯೇ ಕೌಂಟರ್​ ನೀಡಿದ್ದರು. ಇದರಿಂದ ರಿಷಬ್ ಅಭಿಮಾನಿಗಳು ಫುಲ್ ಖುಷ್ ಆಗಿದ್ದರು.

Published by:Monika N
First published: