Ranbir Kapoor: ನನ್ನ ದುರಾದೃಷ್ಟ ಆ ಆಫರ್ ನನಗೆ ಬಂದಿಲ್ಲ; ರಣ್​ಬೀರ್ ಕಪೂರ್ ಬೇಸರ

ರಣ್​ಬೀರ್ ಕಪೂರ್

ರಣ್​ಬೀರ್ ಕಪೂರ್

ರಣಬೀರ್ ಕಪೂರ್ ಪ್ರಸ್ತುತ ಮಾರ್ಚ್​ 8ರಂದು ಬಿಡುಗಡೆ ಆಗಲಿರುವ ತೂ ಜೂಟಿ ಮೈ ಮಕ್ಕಾರ್ ಚಿತ್ರದ ಪ್ರಚಾರ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಚಿತ್ರದಲ್ಲಿ ರಣಬೀರ್‌ಗೆ ಶ್ರದ್ಧಾ ಕಪೂರ್ ನಾಯಕಿಯಾಗಿ ನಟಿಸಿದ್ದಾರೆ.

  • Trending Desk
  • 5-MIN READ
  • Last Updated :
  • Share this:

ಮುಂಬೈ : ರಣಬೀರ್ ಕಪೂರ್ (Ranbir Kapoor), ಭಾರತೀಯ ಕ್ರಿಕೆಟ್‌ ಲೋಕದಲ್ಲಿ ದಾದಾ ಎಂದೇ ಹೆಸರುವಾಸಿಯಾಗಿರುವ ಸೌರವ್ ಗಂಗೂಲಿ (Sourav Ganguly) ಅವರ ಜೀವನ ಆಧರಿತ ಚಿತ್ರ ಮಾಡುತ್ತಾರೆ ಎಂಬ ಗುಸುಗುಸು ಬಾಲಿವುಡ್‌ (Bollywood) ತುಂಬಾ ಗುಲ್ಲಾಗಿತ್ತು. ಸದ್ಯ ಇಂಟರ್‌ನೆಟ್‌ನಲ್ಲಿ ಹರಿದಾಡುತ್ತಿರುವ ಕೆಲ ಫೋಟೋಗಳು ಈ ವದಂತಿ ನಿಜ ಎಂದು ಹೇಳುತ್ತಿವೆ. ಹೌದು, ಬಾಲಿವುಡ್‌ ನಟ ರಣಬೀರ್‌ ಕಪೂರ್‌ ಮತ್ತು ಸೌರವ್​ ಗಂಗೂಲಿ ಇಬ್ಬರೂ ಇತ್ತೀಚೆಗೆ ಈಡನ್‌ ಗಾರ್ಡ್‌ನಲ್ಲಿ ಜೊತೆಯಾಗಿ ಕ್ರಿಕೆಟ್​ ಆಡಿದ ಫೋಟೋಗಳು ವೈರಲ್​ ಆಗಿದ್ದು, ರಣಬೀರ್​ ಕಪೂರ್​ ಸೌರವ್​ ಗಂಗೂಲಿ ಬಯೋಪಿಕ್​ (Sourav Ganguly Biopic) ಸಿನಿಮಾ ಮಾಡೋದು ಪಕ್ಕಾ ಎನ್ನುತ್ತಿವೆ ಕೆಲ ಸಿನಿ ಮೂಲಗಳು.


ʼದಾದಾʼ ಬಯೋಪಿಕ್‌ ಮಾಡ್ತಾರಾ ರಣಬೀರ್‌ ಕಪೂರ್?


ರಣಬೀರ್​ ಕಪೂರ್ ಅಭಿನಯದ ‘ತು ಜೂಟಿ ಮೈ ಮಕ್ಕಾರ್​’ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಈ ಚಿತ್ರದ ಪ್ರಮೋಷನ್​ ಸಲುವಾಗಿ ಅವರು ಕೋಲ್ಕತ್ತಾಗೆ ತೆರಳಿದ್ದಾರೆ.


ಈ ಸಂದರ್ಭದಲ್ಲಿ ಅವರು ಸೌರವ್​ ಗಂಗೂಲಿ ಜೊತೆ ಸಮಯ ಕಳೆದಿದ್ದು, ಇವರಿಬ್ಬರು ಜೊತೆಯಾಗಿ ಕ್ರಿಕೆಟ್ ಕೂಡ​ ಆಡಿದ್ದಾರೆ. ಈಡನ್‌ ಗಾರ್ಡ್‌ನಲ್ಲಿ ಜೊತೆಯಾಗಿ ಕ್ರಿಕೆಟ್​ ಆಡಿದ ಅವರ ಫೋಟೋ ಮತ್ತು ವಿಡಿಯೋ ಈಗ ಇಂಟರ್‌ನೆಟ್‌ನಲ್ಲಿ ವೈರಲ್​ ಆಗಿವೆ. ಈಗ ಇದೇ ವಿಚಾರ ರಣಬೀರ್‌ ದಾದಾ ಅವರ ಬಯೋಪಿಕ್‌ ಮಾಡ್ತಾರೆ ಅನ್ನೋ ವಿಚಾರಕ್ಕೆ ಮತ್ತಷ್ಟು ಪುಷ್ಠಿ ನೀಡಿದೆ.‌


actor ranbir kapoor reacts sourav ganguly biopic stg mrq
ವೈರಲ್ ಫೋಟೋ


ಆಫರ್‌ ಬಂದಿಲ್ಲ ಎಂದ ರಣಬೀರ್​ ಕಪೂರ್​


ಆದರೆ ಈ ಬಗ್ಗೆ ಪ್ರತಿಕ್ರಿಯೆ ನೀಡಿದ ರಣಬೀರ್‌ ಕಪೂರ್ ಸೌರವ್​ ಗಂಗೂಲಿ ಜೀವನಾಧಾರಿತ ಸಿನಿಮಾದಲ್ಲಿ ನಾನು ನಟಿಸುತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.


‘ದಾದಾ ಅವರು ಭಾರತದಲ್ಲಿ ಮಾತ್ರವಲ್ಲ, ಇಡೀ ಪ್ರಪಂಚದಲ್ಲಿ ಜೀವಂತ ದಂತಕಥೆ. ಅವರ ಬಯೋಪಿಕ್​ ತುಂಬ ವಿಶೇಷವಾಗಿ ಇರಲಿದೆ. ದುರಾದೃಷ್ಟ ನನಗೆ ಯಾವುದೇ ರೀತಿಯ ಆಫರ್​ ಬಂದಿಲ್ಲ. ನಿರ್ದೇಶಕರು ಇನ್ನೂ ಸ್ಕ್ರಿಪ್ಟ್​ ಬರೆಯುತ್ತಿ​ದ್ದಾರೆ ಎನಿಸುತ್ತದೆ’ ಎಂದು ರಣಬೀರ್​ ಕಪೂರ್​ ಹೇಳಿದ್ದಾರೆ.
ಸಿನಿಮಾ ಗುಟ್ಟು ಬಿಟ್ಟು ಕೊಡದ ನಿರ್ಮಾಪಕರು


ಸೌರವ್ ಗಂಗೂಲಿಯವರ ಬಯೋಪಿಕ್ ಅನ್ನು 2019 ರಲ್ಲಿ ಘೋಷಿಸಲಾಯಿತು. ಈ ಬಗ್ಗೆ ಕಳೆದ ತಿಂಗಳು, ಮಾಜಿ ಬಿಸಿಸಿಐ ಅಧ್ಯಕ್ಷ ಗಂಗೂಲಿ ಪತ್ನಿ ಡೋನಾ ಗಂಗೂಲಿ ಬಹುನಿರೀಕ್ಷಿತ ಬಯೋಪಿಕ್ ಬಗ್ಗೆ ಮಾತನಾಡಿದ್ದಾರೆ.


"ಚಿತ್ರದ ಕುರಿತು ಪ್ರಶ್ನೆಗೆ ಉತ್ತರಿಸಲು ನಿರ್ಮಾಪಕರು ಮತ್ತು ನಿರ್ದೇಶಕರು ಅತ್ಯುತ್ತಮ ವ್ಯಕ್ತಿ ಎಂದು ನಾನು ಭಾವಿಸುತ್ತೇನೆ, ಏಕೆಂದರೆ ಅವರೇ ಸಿನಿಮಾ ಮಾಡುತ್ತಿದ್ದಾರೆ. ಸ್ಕ್ರಿಪ್ಟ್ ಪ್ರಕಾರ ಈ ಚಿತ್ರಕ್ಕೆ ಯಾರು ಸೂಕ್ತವಾಗಿ ಹೊಂದಾಣಿಕೆ ಆಗುತ್ತಾರೆ ಎಂಬುದನ್ನು ಅವರೇ ನಿರ್ಧರಿಸಬೇಕು" ಎಂದು ಸಿನಿಮಾ ನಾಯಕನ ಬಗ್ಗೆ ಗುಟ್ಟು ಬಿಡದೇ ಪ್ರತಿಕ್ರಿಯಿಸಿದರು.


ಇದನ್ನೂ ಓದಿ:  Pathaan: ದೆಹಲಿ ಪ್ರೊಫೆಸರ್‌ಗಳ ಪಠಾಣ್ ಡ್ಯಾನ್ಸ್! ರಾಕ್‌ಸ್ಟಾರ್ಸ್ ಎಂದು ಹೊಗಳಿದ ಶಾರುಖ್


ಮಾರ್ಚ್‌ 8ಕ್ಕೆ ತೂ ಜೂಟಿ ಮೈ ಮಕ್ಕಾರ್ ಚಿತ್ರ ಬಿಡುಗಡೆ


ಇತ್ತ, ರಣಬೀರ್ ಕಪೂರ್ ಪ್ರಸ್ತುತ ಮಾರ್ಚ್​ 8ರಂದು ಬಿಡುಗಡೆ ಆಗಲಿರುವ ತೂ ಜೂಟಿ ಮೈ ಮಕ್ಕಾರ್ ಚಿತ್ರದ ಪ್ರಚಾರ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಚಿತ್ರದಲ್ಲಿ ರಣಬೀರ್‌ಗೆ ಶ್ರದ್ಧಾ ಕಪೂರ್ ನಾಯಕಿಯಾಗಿ ನಟಿಸಿದ್ದಾರೆ.


ಲವ್ ರಂಜನ್ ನಿರ್ದೇಶನದ ಈ ಚಿತ್ರವನ್ನು ಟಿ-ಸೀರೀಸ್‌ನ ಗುಲ್ಶನ್ ಕುಮಾರ್ ಮತ್ತು ಭೂಷಣ್ ಕುಮಾರ್ ಪ್ರಸ್ತುತಪಡಿಸಿದ್ದಾರೆ. ಚಿತ್ರದ ಮತ್ತೊಂದು ವಿಶೇಷತೆ ಎಂದರೆ ರಣಬೀರ್ ಮತ್ತು ಶ್ರದ್ಧಾ ಮೊದಲ ಬಾರಿಗೆ ಸ್ಕ್ರೀನ್‌ ಅನ್ನು ಹಂಚಿಕೊಂಡಿದ್ದಾರೆ.
ಈ ವರ್ಷದ ರಣ್​ಬೀರ್ ಕಪೂರ್ ಮೊದಲ ಸಿನಿಮಾ


ಹೀಗಾಗಿ ಇಬ್ಬರ ಕೆಮಿಸ್ಟ್ರಿ ಹೇಗಿದೆ ಅಂತಾ ನೋಡಲು ಸಿನಿರಸಿಕರು ಕಾಯುತ್ತಿದ್ದಾರೆ. ಅಲ್ಲದೇ 2023ರಲ್ಲಿ ತೆರೆ ಕಾಣುತ್ತಿರುವ ರಣಬೀರ್​ ಕಪೂರ್​ ಅವರ ಮೊದಲ ಸಿನಿಮಾ ಇದಾಗಿದೆ.


ತೂ ಜೂಟಿ ಮೈ ಮಕ್ಕಾರ್ ಚಿತ್ರದ ನಂತರ ರಣಬೀರ್ ರಶ್ಮಿಕಾ ಮಂದಣ್ಣ ಜೊತೆ ಅನಿಮಲ್ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

Published by:Mahmadrafik K
First published: