News18 India World Cup 2019

ರಕ್ಷಿತ್ ಶೆಟ್ಟಿ ಸಾಮಾಜಿಕ ಜಾಲತಾಣದಿಂದ ಹೊರ ಬರಲು ಕಾರಣ ಏನು ಗೊತ್ತಾ?

news18
Updated:September 7, 2018, 1:09 PM IST
ರಕ್ಷಿತ್ ಶೆಟ್ಟಿ ಸಾಮಾಜಿಕ ಜಾಲತಾಣದಿಂದ ಹೊರ ಬರಲು ಕಾರಣ ಏನು ಗೊತ್ತಾ?
news18
Updated: September 7, 2018, 1:09 PM IST
ನ್ಯೂಸ್​ 18 ಕನ್ನಡ 

ಸಿಂಪಲ್‍ಸ್ಟಾರ್ ರಕ್ಷಿತ್ ಶೆಟ್ಟಿ ಇತ್ತೀಚೆಗೆ ಸಾಮಾಜಿಕ ಜಾಲತಾಣದಿಂದ ದೂರಾಗಿದ್ದಾರೆ. ಲಕ್ಷಾಂತರ ಅಭಿಮಾನಿಗಳನ್ನು ಸಂಪರ್ಕ ಮಾಡೋಕೆ ಸಾಧ್ಯವಾಗದಿದ್ದರೂ ಪರವಾಗಿಲ್ಲ ಅಂತ ಹೊರ ಬಂದಿರೋ ರಕ್ಷಿತ್ ಶೆಟ್ಟಿ ಯಾಕೆ ಹೀಗೆ ಮಾಡಿದ್ದು ಅನ್ನೋದರ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ.

ಆನ್‍ಲೈನ್ ಮತ್ತು ಡಿಜಿಟಲ್ ಮೀಡಿಯಾದಲ್ಲಿ ಅತ್ಯಂತ ಹೆಚ್ಚು ಆಕ್ಟೀವ್ ಆಗಿದ್ದ ನಟ ಸಿಂಪಲ್‍ಸ್ಟಾರ್ ರಕ್ಷಿತ್ ಶೆಟ್ಟಿ ಇತ್ತೀಚೆಗೆ ಫೇಸ್‍ಬುಕ್, ಇನ್​ಸ್ಟಾಗ್ರಾಂ ಮತ್ತು ಟ್ವಿಟ್ಟರ್​ನಲ್ಲಿದ್ದ ಮೂರು ಖಾತೆಗಳನ್ನು ಡಿಲೀಟ್ ಮಾಡಿ ಹೊರ ಬಂದಿದ್ದಾರೆ. ಇದಕ್ಕೆ ಅವರು ಕಾರಣವನ್ನೂ ಮಿತ್ರರ ಜೊತೆ ಹೇಳಿಕೊಂಡಿದ್ದಾರೆ. ಅದಕ್ಕೆ ಕಾರಣ ಸೋಷಿಯಲ್ ಮೀಡಿಯಾಗಳಲ್ಲಿ ಹೆಚ್ಚಾಗಿರುವ ನೆಗೆಟಿವಿಟಿ ಅಂತೆ.

ಇತ್ತೀಚೆಗೆ ರಶ್ಮಿಕಾ ಮಂದಣ್ಣ ಅಭಿನಯದ 'ಗೀತ ಗೋವಿಂದಂ' ಸಿನಿಮಾದಲ್ಲಿ ರಶ್ಮಿಕಾ-ವಿಜಯ್ ದೇವರಕೊಂಡ ಲಿಪ್​ ಲಾಕ್​ ದೃಶ್ಯ ಹಾಗೂ ಕೆಮಿಸ್ಟ್ರಿ ನೋಡಿದವರು ಸಾಕಷ್ಟು ಗಾಸಿಪ್​ ಹಬ್ಬಿಸಿದ್ದರು. ಅದರಲ್ಲೂ ರಶ್ಮಿಕಾ-ವಿಜಯ್ ಮದುವೆಯಾಗುತ್ತಾರೆ. ಪ್ರೀತಿಸುತ್ತಿದ್ದಾರೆ. ರಕ್ಷಿತ್-ರಶ್ಮಿಕಾ ಬ್ರೇಕಪ್ ಅಂತೆಲ್ಲ ಸುದ್ದಿ ಹಬ್ಬಿಸಿದ್ದು ರಕ್ಷಿತ್‍ರನ್ನು ಚಿಂತೆಗೀಡು ಮಾಡಿದೆ ಅನ್ನೋ ಸುದ್ದಿಯೂ ಇದೆ.

'ಗೀತ ಗೋವಿಂದಂ' ನಂತರ ನಾವಿಬ್ಬರೂ ಮೊದಲಿನಂತೆಯೇ ಇದ್ದೇವೆ ಮದುವೇನೂ ಆಗುತ್ತೇವೆ ಅನ್ನೋ ಕ್ಲಾರಿಫಿಕೇಷನ್ ಕೊಟ್ಟರೂ ಸೋಷಿಯಲ್ ಮೀಡಿಯಾದಲ್ಲಿ ಪುಕಾರು ಹೆಚ್ಚಿದ್ದರಿಂದ, ಈ ತಲೆ ನೋವೇ ಬೇಡ ಅಂತ ರಕ್ಷಿತ್ ಶೆಟ್ಟಿ ಸಿಂಪಲ್ಲಾಗಿರೋಕೆ ನಿರ್ಧರಿಸಿದ್ದಾರಂತೆ.
First published:September 7, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...