ಸ್ಯಾಂಡಲ್ವುಡ್ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ (Rakshit Shetty New Movie) ಅಭಿನಯದ ಬಹುನಿರೀಕ್ಷಿತ ಸಿನಿಮಾ ಸಪ್ತ ಸಾಗರದಾಚೆ ಎಲ್ಲೋ (Sapta Sagaradaache Ello Movie) ಸಿನಿಮಾ ಸೆಕೆಂಡ್ ಟೀಸರ್ ರಿಲೀಸ್ ಆಗಿದೆ. ಪ್ರೇಮಿಗಳ ದಿನದಂದು 36 ಸೆಕೆಂಡ್ ಇರುವ ಈ ಟೀಸರ್ ಬಿಡುಗಡೆ ಮಾಡಲಾಗಿದೆ. ಟೀಸರ್ನಲ್ಲಿ ರಕ್ಷಿತ್ ಶೆಟ್ಟಿ ಹಾಗೂ ರುಕ್ಮಿಣಿ ವಸಂತ್ (Rukmini Vasanth) ಮಾತ್ರ ಕಾಣಿಸಿಕೊಂಡಿದ್ದಾರೆ. ಮನು-ಸುರಭಿ ಪ್ರೇಮ ಕಥೆಯ ಝಲಕ್ ಅನ್ನು ಟೀಸರ್ ನಲ್ಲಿ (Teaser) ಕಾಣಬಹುದಾಗಿದೆ. ಟೀಸರ್san ನೋಡಿದ ಪ್ರೇಕ್ಷಕರಿಗೆ ರಕ್ಷಿತ್ ಸಿನಿಮಾ ಮೇಲೆ ಮತ್ತಷ್ಟು ನಿರೀಕ್ಷೆ ಹೆಚ್ಚಾಗಿದೆ.
ಮನು-ಸುರಭಿ ಲವ್ ಸ್ಟೋರಿ
ನಿರ್ದೇಶಕ ಹೇಮಂತ್ ರಾವ್ ಮತ್ತು ರಕ್ಷಿತ್ ಶೆಟ್ಟಿ ಕಾಂಬಿನೇಷನ್‌ನಲ್ಲಿ 'ಸಪ್ತ ಸಾಗರದಾಚೆ ಎಲ್ಲೋ' ಸಿನಿಮಾ ತಯಾರಾಗ್ತಿದೆ. ಸಿನಿಮಾದ ಶೂಟಿಂಗ್ ಬಹುತೇಕ ಮುಕ್ತಾಯಗೊಂಡಿದೆ. ಇದೀಗ ಸಿನಿಮಾದ ತಂಡ ಚಿತ್ರದ ಸೆಕೆಂಡ್ ಟ್ರೇಲರ್ ರಿಲೀಸ್ ಮಾಡಿದೆ. ಶೀರ್ಷಿಕೆ ಮೂಲಕವೇ ಕುತೂಹಲ ಮೂಡಿಸಿದ್ದ ಈ ಸಿನಿಮಾದಲ್ಲಿ ರಕ್ಷಿತ್ ಶೆಟ್ಟಿ 'ಮನು' ಪಾತ್ರಕ್ಕೆ ಜೀವ ತುಂಬಿದ್ದಾರೆ. ನಟಿ ರುಕ್ಮಿಣಿ ವಸಂತ್ ಸುರಭಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಸಾಗರದ ಜೊತೆ ಜೊತೆಗೆ ಸಾಗಲಿದೆ ಪ್ರೇಮಕಥೆ
'ಸಪ್ತ ಸಾಗರದಾಚೆ ಎಲ್ಲೋ' ಸಿನಿಮಾ ಹೆಸರೇ ಹೇಳುವಂತೆ ಸಮುದ್ರ ಕೂಡ ಈ ಚಿತ್ರದಲ್ಲಿ ಮುಖ್ಯ ಪಾತ್ರವಹಿಸಲಿದೆ ಎನ್ನಬಹುದು. ಸಿನಿಮಾ ತಂಡ ರಿಲೀಸ್ ಮಾಡಿರುವ 2 ಟೀಸರ್ಗಳಲ್ಲೂ ಸಮುದ್ರದ ಬಗ್ಗೆ ಮಾತುಕತೆ ಇದೆ. ಟೀಸರ್ನಲ್ಲಿ ನಾಯಕಿಯನ್ನು ಮನು, ಸುರಭಿ ನಿನಗೆ ಸಮುದ್ರ ಇಷ್ಟನಾ ಎಂದು ಕೇಳಿದ್ದಾರೆ. ಮೊದಲ ಟೀಸರ್ನಲ್ಲೂ ನಾಯಕಿ ಸಮುದ್ರ ಬಗ್ಗೆ ಮಾತಾಡಿದ್ದಾರೆ ಇದನ್ನೆಲ್ಲಾ ನೋಡಿದ್ರೆ ಸಮುದ್ರ ಜೊತೆ ಜೊತೆಗೆ ಈ ಸಾಗಲಿದೆ ಎಂದು ಪ್ರೇಕ್ಷಕರು ಅಭಿಪ್ರಾಯಪಟ್ಟಿದ್ದಾರೆ.
ಸಿಂಪಲ್ ಸ್ಟಾರ್ ಕಾಂಪ್ಲೆಕ್ಸ್ ಕ್ಯಾರೆಕ್ಟರ್ ಹೇಗಿದೆ?
"ಮನು" ಪಾತ್ರದಲ್ಲಿ ರಕ್ಷಿತ್ ಶೆಟ್ಟಿ ಅಭಿನಯ
ಸಪ್ತ ಸಾಗರದಾಚೆ ಎಲ್ಲೋ ಚಿತ್ರದಲ್ಲಿ ರಕ್ಷಿತ್ ಶೆಟ್ಟಿ "ಮನು" ಹೆಸರಿನ ಪಾತ್ರ ಮಾಡಿದ್ದಾರೆ. ಈ ಪಾತ್ರ ವಿಶೇಷವಾಗಿಯೇ ಇದೆ. ಇದಕ್ಕಾಗಿ ರಕ್ಷಿತ್ ಶೆಟ್ಟಿ ನಿದ್ದೆಗೆಟ್ಟಿದ್ದಾರೆ. ಈ ವಿಷಯವನ್ನ ಸ್ವತಃ ರಕ್ಷಿತ್ ಶೆಟ್ಟಿ ಹೇಳಿಕೊಂಡಿದ್ದು ಇದೆ.
ಇದನ್ನೂ ಓದಿ: Mufti Movie: ಕಾಲಿವುಡ್ನಲ್ಲಿ ಮಫ್ತಿ ಸಿನಿಮಾ; ಹೆಸರು ಬದಲು, ಚಿತ್ರಕಥೆ ಕೂಡ ಚೇಂಜ್, ಸಿಂಗ ಪಾತ್ರಧಾರಿ ಮಧು ಏನ್ ಹೇಳ್ತಾರೆ?
ಮೊನ್ನೆ ರಕ್ಷಿತ್ ಶೆಟ್ಟಿ ತಮ್ಮ ಟ್ವಿಟರ್ನಲ್ಲಿ ತಮ್ಮ ಚಿತ್ರದ ಒಟ್ಟು ಪಟ್ಟಿಯನ್ನ ಬರೆದುಕೊಂಡಿದ್ದರು. ಸಪ್ತ ಸಾಗರದಾಚೆ ಎಲ್ಲೋ, ರಿಚರ್ಡ್ ಆ್ಯಂಟನಿ, ಪುಣ್ಯ ಕೋಟಿ ಪಾರ್ಟ್-1, ಪುಣ್ಯ ಕೋಟಿ ಪಾರ್ಟ್-2, ಮಿಡ್ನೈಟ್ ಟು ಮೋಕ್ಷ ಸೇರಿ ಈ ನಾಲ್ಕು ಚಿತ್ರಗಳು ನನ್ನ ನಿದ್ದೆ ಗೆಡಿಸಿದ ಅದ್ಭುತ ಚಿತ್ರಗಳು ಅಂತಲೇ ಹೇಳಿಕೊಂಡಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ