‘ಬಿಗ್ ಬಾಸ್ ಒಟಿಟಿ’ (Bigg Boss OTT) ಭರ್ಜರಿಯಾಗಿ ಆರಂಭವಾಗಿದೆ. ಈಗಾಗಲೇ 7 ಜನ ಸ್ಪರ್ಧಿಗಳು ಬಿಗ್ ಬಾಸ್ ಮನೆಯೊಳಗೆ ಪ್ರವೇಶ ಮಾಡಿದ್ದಾರೆ. ಇದೀಗ 8ನೇ ಸ್ಪರ್ಧಿಯಾಗಿ ಕನ್ನಡದಲ್ಲಿ ಮೊದಲು ರ್ಯಾಪ್ ಸಾಂಗ್ ಮಾಡಿದ್ದ ರಾಕೇಶ್ ಅಡಿಗ (Rakesh Adiga) ಅವರು ಎಂಟ್ರಿ ನೀಡಿದ್ದಾರೆ. ವೇದಿಕೆ ಮೇಲೆ ಬರುವಾಗಲೇ ರ್ಯಾಪ್ ಸಾಂಗ್ ಹಾಡುತ್ತಲೇ ಬಂದ ರಾಕೇಶ್, ಭರ್ಜರಿಯಾಗಿ ಎಂಟ್ರಿ ನೀಡಿದ್ದಾರೆ. ಇದಕ್ಕೂ ಮೊದಲು ಆರ್ಯವರ್ಧನ್ ಗುರೂಜಿ, ಸೋನು ಶ್ರೀನಿವಾಸ್ ಗೌಡ, ರೂಪೇಶ್ ಶೆಟ್ಟಿ, ಕಾಮಿಡಿ ಕಿಲಾಡಿಗಳು ಖ್ಯಾತಿಯ ಲೋಕೇಶ್ ಕುಮಾರ್ ಸೇರಿ ಒಟ್ಟು 7 ಜನ ದೊಡ್ಮನೆ ಒಳಗೆ ಪ್ರವೇಶ ಮಾಡಿದ್ದಾರೆ. ಇವರು 8ನೇಯವರಾಗಿ ಮನೆಯೊಳಗೆ ಹೋಗಿದ್ದಾರೆ.
ಬಿಗ್ ಬಾಸ್ ಮನೆಯೊಳಗೆ ಜೋಶ್ ಹುಡಗ:
ಮೊದಲೇ ಹೇಳಿದಂತೆ ಈ ಬಾರಿ ಬಿಗ್ ಬಾಸ್ ಸಾಕಷ್ಟು ವಿಭಿನ್ನವಾಗಿರಲಿದೆ. ಸೋಶಿಯಲ್ ಮೀಡಿಯಾದವರಿಂದ ಹಿಡಿದು ಎಲ್ಲಾ ರೀತಿಯ ವರ್ಗದವರೂ ಈ ಬಾರಿ ಬಿಗ್ ಬಾಸ್ ಮನೆಯೊಳಗೆ ಹೋಗುತ್ತಿದ್ದು, ಪ್ರೇಕ್ಷಕರಲ್ಲಿ ಸಾಕಷ್ಟು ಕುತೂಹಲ ಕೆರಳಿಸಿದೆ. ಬಿಗ್ ಬಾಸ್ ಒಟಿಟಿ ಸೀಸನ್ 1ರಲ್ಲಿ 8ನೇ ಸ್ಪರ್ಧಿಯಾಗಿ ನಟ, ಗಾಯಕ ರಾಕೇಶ್ ಅಡಿಗ ಅವರು ಎಂಟ್ರಿ ಕೊಟ್ಟಿದ್ದಾರೆ.
ನಟನಾಗಿ ಗಾಯಕನಾಗಿ ಹೆಸರು ಮಾಡಿರುವ ರಾಕೇಶ್:
ರಾಕೇಶ್ ಅಡಿಗ ಕನ್ನಡ ಸ್ಯಾಂಡಲ್ವುಡ್ನ ಸಕ್ರಿಯವಾಗಿರುವ ನಟ ಮತ್ತು ಗಾಯಕ. 2009ರಲ್ಲಿ ತೆರೆಕಂಡ `ಜೋಶ್' ಚಿತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಈ ಯುವ ಪ್ರತಿಭೆ ಇದೀಗ ಕನ್ನಡ ಬಿಗ್ ಬಾಸ್ ನ ಒಟಿಟಿ ಸೀಸನ್ 1 ರಲ್ಲಿ ಭಾಗವಹಿಸಿದ್ದಾರೆ. ಜೋಶ್ ಚಿತ್ರದ ನಂತರ ಅನೇಕ ಸಿನಿಮಾಗಳಲ್ಲಿ ನಟಿಸಿದ ಇವರು, ಗಾಯಕರಾಗಿಯೂ, ರ್ಯಾಪರ್ ಆಗಿಯೂ ಸಖತ್ ಮಿಂಚಿದ್ದಾರೆ. ಅಲೆಮಾರಿ, ಕೋಟಿಗೊಂದ್ ಲವ್ ಸ್ಟೋರಿ ಸೇರಿದಂತೆ ಅಣೇಕ ಸಿನಿಮಾಗಳಲ್ಲಿ ನಟಿಸಿರುವ ರಾಕೇಶ್ 2019ರಲ್ಲಿ ರಿಲೀಸ್ ಆದ ನೈಟ್ ಔಟ್ ಚಿತ್ರದಲ್ಲಿ ನಟಿಸಿದ್ದೇ ಕೊನೆಯ ಚಿತ್ರವಾಗಿದೆ. ಇದಾದ ಬಳಿಕ ಅವರು ಚಿತ್ರರಂಗದಿಂದ ಕೊಂಚ ಬ್ರೇಕ್ ತೆಗೆದುಕೊಂಡಿದ್ದಾರೆ. ಆದರೆ ಇದೀಗ ಬಿಗ್ ಬಾಸ್ಗೆ ಬರುವ ಮೂಲಕ ಮತ್ತೆ ತಮ್ಮ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದ್ದಾರೆ.
ಇದನ್ನೂ ಓದಿ: Bigg Boss OTT: ಬಿಗ್ ಬಾಸ್ ಮನೆಗೆ 9ನೇ ಅಭ್ಯರ್ಥಿಯಾಗಿ ದಾಂಡೇಲಿ ಬೆಡಗಿ ಅಕ್ಷತಾ ಕುಕ್ಕಿ ಎಂಟ್ರಿ
ಇನ್ನು, ರಾಕೇಶ್ ಗಾಂಜಾದ ಕುರಿತು ನೇರವಾಗಿ ಮಾತನಾಡುವ ಮೂಲಕ ಒಮ್ಮೆ ಸುದ್ದಿಯಾಗಿದ್ದರು. ಅದನ್ನು ಕೇವಲ ಅಮಲಿನ ಪದಾರ್ಥ ಎಂದು ತೆಗೆದುಕೊಳ್ಳುವ ಬದಲು ಅದರಿಂದ ಔಷಧಿಯ ಗುಣಗಳೂ ಇವೆ ಎಂದು ಅವರು ಮಾತನಾಡಿದ್ದರು. ಇದು ಸಾಮಾಜಿ ಜಾಲತಾಣದಲ್ಲಿ ಸಖತ್ ವೈರಲ್ ಆಗಿತ್ತು. ಇವರ ಎಂಟ್ರಿ ಇದೀಗ ಪ್ರೇಕ್ಷಕರಲ್ಲಿ ಸಾಕಷ್ಟು ಕುತೂಹಲ ಮೂಡಿಸಿದ್ದು, ದೊಡ್ಮನೆಯಲ್ಲಿ ಮತ್ತಷ್ಟು ಮಜಾ ಬರಲಿದೆ ಎನ್ನಲಾಗುತ್ತಿದೆ. ಅಲ್ಲದೇ ಈಗಾಗಳೇ ಸಾಮಾಜಿಕ ಜಾಲತಾಣದಲ್ಲಿ ರಾಕೇಶ್ ಕೊನೆಯವರೆಗೂ ಉಳಿದು ಗೆಲ್ಲುವ ಓರ್ವ ಸಮರ್ಥ ಸ್ಪರ್ಧಿ ಎಂದು ಹೇಳಲಾಗುತ್ತಿದ್ದು, ಎಲ್ಲದಕ್ಕೂ ಬಿಗ್ ಬಾಸ್ ಉತ್ತರ ನೀಡಬೇಕಿದೆ.
ಇದನ್ನೂ ಓದಿ: Bigg Boss OTT: ಬಿಗ್‌ಬಾಸ್ ಮನೆಗೆ ಲೋಕಿ ಎಂಟ್ರಿ, ಇನ್ಮೇಲೆ ನೀವು ನಗೋದೊಂದೇ ಬಾಕಿ!
ಬಿಗ್ ಬಾಸ್ ಮನೆಯೊಳಗೆ ಲೋಕಿ:
ಕನ್ನಡ ಕಿರುತೆರೆಯ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಕಾಮಿಡಿ ಕಿಲಾಡಿಗಳು ರಿಯಾಲಿಟಿ ಶೋ ಮೂಲಕ ಕನ್ನಡಿಗರ ಮನಸ್ಸನ್ನು ಗೆದ್ದಿರುವ ಲೋಕೇಶ್ ಕುಮಾರ್ ಇದೀಗ ಬಿಗ್ ಬಾಸ್ ಮನೆಯೊಳಗೆ ಹೋಗಿದ್ದಾರೆ. ಅವರ ಈ ಜರ್ನಿಯಲ್ಲಿ ಹಾಸ್ಯ ತುಂಬಿರುತ್ತದೆಯೇ? ಏನಾಗಲಿದೆ ಎಂದು ಕಾದು ನೋಡಬೇಕಿದೆ. ಇನ್ನು, ಜೋಗಿ' ಪ್ರೇಮ್ ಅವರನ್ನು ಅನುಕರಣೆ ಮಾಡಿದ ಲೋಕೇಶ್ ಕುಮಾರ್ ಇಡೀ ಕರ್ನಾಟಕಕ್ಕೆ ಚಿರಪರಿಚಿತರಾದರು. ತಮ್ಮದೇ ವಿಭಿನ್ನ ಶೈಲಿಯ ಕಾಮಿಡಿಗೆ ಲೋಕಿ ಸಖತ್ ಫೇಮಸ್.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ