• Home
  • »
  • News
  • »
  • entertainment
  • »
  • Rajkummar Rao: ಐಷಾರಾಮಿ ಮನೆ ಖರೀದಿಸಿದ ರಾಜ್‌ಕುಮಾರ್ ರಾವ್, ಬೆಲೆ ಕೇಳಿ ಶಾಕ್ ಆಗ್ಬೇಡಿ!

Rajkummar Rao: ಐಷಾರಾಮಿ ಮನೆ ಖರೀದಿಸಿದ ರಾಜ್‌ಕುಮಾರ್ ರಾವ್, ಬೆಲೆ ಕೇಳಿ ಶಾಕ್ ಆಗ್ಬೇಡಿ!

ರಾಜ್​ಕುಮಾರ್ ರಾವ್

ರಾಜ್​ಕುಮಾರ್ ರಾವ್

ಬಾಲಿವುಡ್ (Bollywood)​ ನಟ ರಾಜ್ ಕುಮಾರ್ ರಾವ್ (Rajkummar Rao) ಕೂಡ ಮುಂಬೈನಲ್ಲಿ ಐಷಾರಾಮಿ ಅಪಾರ್ಟ್ ಮೆಂಟ್ ಖರೀದಿಸಿದ್ದಾರೆ. ರಾಜ್‌ಕುಮಾರ್ ಅವರು ತಮ್ಮ ಹೊಸ ಮನೆಯಿಂದಾಗಿ ಈಗ ಸುದ್ದಿಯಲ್ಲಿದ್ದಾರೆ.

  • Share this:

ನಟ ರಣವೀರ್ ಸಿಂಗ್ (Ranveer Singh) ಕೆಲ ದಿನಗಳ ಹಿಂದೆ ಮುಂಬೈನಲ್ಲಿ ಅಪಾರ್ಟ್ ಮೆಂಟ್ ಖರೀದಿಸಿದ್ದರು. ರಣವೀರ್ ಕೋಟ್ಯಂತರ ರೂಪಾಯಿ ಮೌಲ್ಯದ ದೊಡ್ಡ ಐಷಾರಾಮಿ ಅಪಾರ್ಟ್ಮೆಂಟ್ ಖರೀದಿಸಿದ್ದಾರೆ. ಇದೀಗ ರಣವೀರ್ ಸಿಂಗ್​ ನಂತರ ಮತ್ತೋರ್ವ್ ಬಾಲಿವುಡ್ (Bollywood)​ ನಟ ರಾಜ್ ಕುಮಾರ್ ರಾವ್ (Rajkummar Rao) ಕೂಡ ಮುಂಬೈನಲ್ಲಿ ಐಷಾರಾಮಿ ಅಪಾರ್ಟ್ ಮೆಂಟ್ ಖರೀದಿಸಿದ್ದಾರೆ. ರಾಜ್‌ಕುಮಾರ್ ಅವರು ತಮ್ಮ ಹೊಸ ಮನೆಯಿಂದಾಗಿ ಈಗ ಸುದ್ದಿಯಲ್ಲಿದ್ದಾರೆ. ವಿಶೇಷವೆಂದರೆ ರಾಜ್‌ಕುಮಾರ್ ಖರೀದಿಸಿರುವ ಮನೆಯನ್ನು ನಟಿ ಜಾನ್ವಿ ಕಪೂರ್ (Janhvi Kapoor) ಅವರಿಂದ ಖರೀದಿಸಲಾಗಿದೆ ಎಂದು ತಿಳಿದುಬಂದಿದೆ. ಹಾಗಾಗಿ ಈ ಮನೆಯ ಬಗ್ಗೆ ಹೆಚ್ಚು ಚರ್ಚೆಯಾಗುತ್ತಿದೆಯಂತೆ. ಇನ್ನು, ಈ ಮನೆಯನ್ನು ಮೊದಲು ನಟಿ ಜಾನ್ವಿ ಕಪೂರ್ ಅವರು ಖರೀದಿಸಿದ್ದರು ಎಂದು ಹೇಳಿದ್ದಾರೆ.


ಕೋಟಿ ವೆಚ್ಚದ ಮನೆ ಖರೀದಿಸಿದ ರಾಜ್​​ಕುಮಾರ್​ ರಾವ್:


ನಟ ರಾಜ್‌ಕುಮಾರ್ ರಾವ್ ಮುಂಬೈನಲ್ಲಿ ಐಷಾರಾಮಿ ಟ್ರಿಪ್ಲೆಕ್ಸ್ ಅಪಾರ್ಟ್‌ಮೆಂಟ್ ಖರೀದಿಸಿದ್ದಾರೆ ಎಂದು ತಿಳಿದುಬಂದಿದೆ. ರಾಜ್‌ಕುಮಾರ್ ಅವರು 44 ಕೋಟಿ ರೂಪಾಯಿಗೆ ಈ ಅಪಾರ್ಟ್‌ಮೆಂಟ್ ಖರೀದಿಸಿದ್ದಾರೆ. ಈ ಅಪಾರ್ಟ್‌ಮೆಂಟ್ 3456 ಚದರ ಅಡಿ ಇದ್ದು, ಪ್ರತಿ ಚದರ ಅಡಿ ಬೆಲೆ 1.27 ಲಕ್ಷ ರೂ. ಜಾಹ್ನವಿ ಈ ಅಪಾರ್ಟ್ಮೆಂಟ್ ಅನ್ನು 39 ಕೋಟಿ ರೂಪಾಯಿಗೆ ಖರೀದಿಸಿದ್ದಾರೆ. ಹಾಗಾಗಿ ಜಾಹ್ನವಿಗೆ ಈ ಡೀಲ್‌ನಿಂದ 5 ಕೋಟಿ ರೂಪಾಯಿ ಲಾಭವಾಗಿದೆ. ಹಾಗಾಗಿ ಜಾಹ್ನವಿಗೆ ಈ ಒಪ್ಪಂದದಿಂದ ಸಾಕಷ್ಟು ಲಾಭವಾಗಿದೆ.
ರಾಜ್‌ಕುಮಾರ್ ಮತ್ತು ಜಾನ್ವಿ ಕಪೂರ್ ಸಿನಿಮಾ:


ಏತನ್ಮಧ್ಯೆ, ರಾಜ್‌ಕುಮಾರ್ ಮತ್ತು ಜಾನ್ವಿ ಕಪೂರ್ ಹಾರರ್ ಕಾಮಿಡಿ ಚಿತ್ರ 'ರೂಹಿ'ಯಲ್ಲಿ ಒಟ್ಟಿಗೆ ನಟಿಸಿದ್ದಾರೆ. ಇದರ ಜೊತೆಗೆ ಜಾನ್ವಿ ಕಪೂರ್ ಮತ್ತು ರಾಜ್‌ಕುಮಾರ್ ರಾವ್ ಶೀಘ್ರದಲ್ಲೇ 'ಮಿಸ್ಟರ್ ಅಂಡ್ ಮಿಸಸ್ ಮಹಿ' ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರ ಕ್ರಿಕೆಟ್ ಆಧಾರಿತವಾಗಿರಲಿದ್ದು, ಇದನ್ನು ಶರಣ್ ಶರ್ಮಾ ನಿರ್ದೇಶಿಸಿದ್ದಾರೆ. ಇದೊಂದು ಕ್ರೀಡಾ ಸಿನಿಮಾವಾಗಿದ್ದು ಈ ವರ್ಷದ ಕೊನೆಯಲ್ಲಿ ಅಂದರೆ ಡಿಸೆಂಬರ್​ ತಿಂಗಳಾಂತ್ಯದಲ್ಲಿ ಬಿಡುಗಡೆಯಾಗಬಹುದು ಎಂದು ಹೇಳಲಾಗಿದೆ.


ಇದನ್ನೂ ಓದಿ: Bengaluru News: ಸಂಚಾರಿ ವಿಜಯ್ ಅಭಿನಯಿಸುತ್ತಿದ್ದ ನಾಟಕಗಳ ಮರುಪ್ರದರ್ಶನ; ಎಲ್ಲಿ? ಎಂದು? ವಿವರ ಇಲ್ಲಿದೆ


ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ:


ಏತನ್ಮಧ್ಯೆ, ನಟ ರಾಜ್‌ಕುಮಾರ್ ರಾವ್ ಅವರ ಜನಪ್ರಿಯತೆ ಹೆಚ್ಚುತ್ತಿದೆ. ರಾಜಕುಮಾರ್ ಅವರು ತಮ್ಮ ನಟನಾ ಕೌಶಲ್ಯದ ಬಲದಿಂದ ಚಿತ್ರರಂಗದಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದಾರೆ. ಅಲ್ಲದೇ ಸದ್ಯ ಬಾಲಿವುಡ್​ ನಟರುಗಳಲ್ಲಿ ಸಖತ್ ಬ್ಯುಸಿ ನಟರಲ್ಲಿ ಒಬ್ಬರಾಗಿರುವ ಅವರು, ಸಾಲು ಸಾಲು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಮುಂಬರುವ ಚಿತ್ರಗಳಾದ 'ಮಿಸ್ಟರ್ ಅಂಡ್ ಮಿಸಸ್ ಮಹಿ', 'ಭಿಡೆ', 'ಸೆಕೆಂಡ್ ಇನ್ನಿಂಗ್', 'ಗನ್ಸ್ ಅಂಡ್ ಗುಲಾಬ್ಸ್', ಶ್ರೀಕಾಂತ್ ಭೋಲಾ ಅವರ ಜೀವನಚರಿತ್ರೆ ಮತ್ತು 'ಸ್ವಾಗತ್ ಹೈ' ಚಿತ್ರಗಳಲ್ಲಿ ರಾಜ್‌ಕುಮಾರ್ ಕಾಣಿಸಿಕೊಳ್ಳಲಿದ್ದಾರೆ. ಹೀಗಾಗಿ ಅವರ ಮುಂಬರುವ ಸಿನಿಮಾಗಳಿಗಾಗಿ ಅಭಿಮಾನಿಗಳು ತುಂಬಾ ಉತ್ಸುಕರಾಗಿದ್ದಾರೆ.


ಇದನ್ನೂ ಓದಿ: Ranjani Raghavan: ಗೂಗಲ್ ಸೀರೆಯಲ್ಲಿ ಮಿಂಚಿದ ಕನ್ನಡತಿ, ನಿಮ್ಮನ್ನ ಇಲ್ಲೇ ಹುಡ್ಬೇಕಾ ಅಂದ್ರು ಫ್ಯಾನ್ಸ್​


ಪತ್ನಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ನಟ:


ರಾಜ್ ಕುಮಾರ್ ರಾವ್, ತಮ್ಮ ಮಡದಿ ಪತ್ರಲೇಖಾ ಅವರ ಬಗ್ಗೆ ಮಾತನಾಡುತ್ತಾ, “ಇದೊಂದು ಬಹಳ ಸುಂದರವಾದ ಅನುಭವ. ಪತ್ರಲೇಖಾಳನ್ನು ಮದುವೆಯಾಗಿ ನಾನು ಅತ್ಯಂತ ಹರ್ಷಚಿತ್ತನಾಗಿದ್ದೇನೆ. ಅವಳು ನನ್ನ ಆತ್ಮೀಯ ಸ್ನೇಹಿತೆ, ನನ್ನ ಬದುಕಿನ ಪ್ರೀತಿ, ನನ್ನ ಕುಟುಂಬ ಮತ್ತು ನನ್ನ ಎಲ್ಲವೂ ಅವಳೇ” ಎಂದು ಹೇಳಿದ್ದಾರೆ. ಮದುವೆ ಜೀವನದ ಕುರಿತ ಅವರ ದೃಷ್ಟಿಕೋನವನ್ನು ಬದಲಾಯಿಸಿದೆಯೇ ಎಂದು ಪ್ರಶ್ನಿಸಿದಾಗ, ತಾನೀಗ ಹೆಚ್ಚು ಪರಿಪೂರ್ಣನಾಗಿದ್ದೇನೆ ಎಂಬ ಅನುಭವವಾಗುತ್ತಿದೆ ಎಂದು ಅವರು ಉತ್ತರಿಸಿದ್ದಾರೆ.

Published by:shrikrishna bhat
First published: