Rajinikanth-Jailer: ಮಂಗಳೂರಲ್ಲಿ ತಲೈವಾ! ಜೈಲರ್ ಶೂಟಿಂಗ್​ನಲ್ಲಿ ರಜನಿಕಾಂತ್ ಜೊತೆ ಶಿವಣ್ಣ

ಜೈಲರ್ ಚಿತ್ರದ ಪೋಸ್ಟರ್

ಜೈಲರ್ ಚಿತ್ರದ ಪೋಸ್ಟರ್

ಸೂಪರ್​ ಸ್ಟಾರ್ ರಜನಿಕಾಂತ್ ಮಂಗಳೂರಿಗೆ ಆಗಮಿಸಿದ್ದಾರೆ. 2 ದಿನಗಳ ಕಾಲ ಮಂಗಳೂರಿನಲ್ಲಿ ಜೈಲರ್ ಸಿನಿಮಾ ಶೂಟಿಂಗ್ ನಡೆಯಲಿದ್ದು, ಇಡೀ ಜೈಲರ್​ ಸಿನಿಮಾ ತಂಡ ಮಂಗಳೂರಿಗೆ ಶಿಫ್ಟ್​ ಆಗಿದೆ.

  • News18 Kannada
  • 5-MIN READ
  • Last Updated :
  • Karnataka, India
  • Share this:

ಸೂಪರ್​ ಸ್ಟಾರ್​ ರಜನಿಕಾಂತ್​ (Rajinikanth) ಅವರಿಗೆ  71 ವರ್ಷ ವಯಸ್ಸಾದ್ರೂ ಹೊಸ ಹೊಸ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಾ ಮುನ್ನುಗ್ಗುತ್ತಿದ್ದಾರೆ. ರಜನಿಕಾಂತ್​ ಅವರ ಬಹುನಿರೀಕ್ಷಿತ ಸಿನಿಮಾ 

ಜೈಲರ್​’  (Jailer Movie) ಬಗ್ಗೆ ಅಭಿಮಾನಿಗಳು ಭಾರೀ ನಿರೀಕ್ಷೆ ಹೊಂದಿದ್ದಾರೆ. ಜೈಲರ್ ಸಿನಿಮಾವನ್ನು ಸನ್​ ಪಿಕ್ಚರ್ಸ್​ (Sun Pictures) ನಿರ್ಮಾಣ ಮಾಡುತ್ತಿದ್ದು,  ಚಿತ್ರದ ಶೂಟಿಂಗ್ ಭರದಿಂದ ಸಾಗಿದೆ.  ಚಿತ್ರೀಕರಣಕ್ಕಾಗಿ ನಟ ರಜನಿಕಾಂತ್ ಕರ್ನಾಟಕಕ್ಕೆ ಆಗಮಿಸಿದ್ದಾರೆ. 


ಮಂಗಳೂರಿನಲ್ಲಿ ಜೈಲರ್ ಶೂಟಿಂಗ್


ಜನವರಿ 29ರಂದು ಸೂಪರ್​ ಸ್ಟಾರ್ ರಜನಿಕಾಂತ್ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ್ರು. 2 ದಿನಗಳ ಕಾಲ ಮಂಗಳೂರಿನಲ್ಲಿ ಜೈಲರ್ ಸಿನಿಮಾ ಶೂಟಿಂಗ್ ನಡೆಯಲಿದ್ದು, ಇಡೀ ಜೈಲರ್​ ಸಿನಿಮಾ ತಂಡ ಮಂಗಳೂರಿಗೆ ಶಿಫ್ಟ್​ ಆಗಿದೆ. ಮಂಗಳೂರು ವಿಮಾನ ನಿಲ್ದಾಣಕ್ಕೆ ರಜನಿಕಾಂತ್ ಆಗಮಿಸುತ್ತಿದ್ದಂತೆ ನೆಚ್ಚಿನ ನಟನನ್ನು ನೋಡಲು ಅಭಿಮಾನಿಗಳು ಮುಗಿಬಿದ್ರು. ಈ ವೇಳೆ  ಪೊಲೀಸರು ಪರಿಸ್ಥಿತಿ ನಿಭಾಯಿಸಿದ್ದಾರೆ.
Actor Rajinikanth acted movie Jailer actress Tamanna Bhatiya also part of these cinema
ಜೈಲರ್ ಚಿತ್ರದ ಪೋಸ್ಟರ್
ಜೈಲರ್ ಸಿನಿಮಾದಲ್ಲಿ ಶಿವಣ್ಣ


ಕಾಲಿವುಡ್​ನ ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಜೈಲರ್ ಸಿನಿಮಾದಲ್ಲಿ ಸ್ಯಾಂಡಲ್​ವುಡ್​ನ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಸಹ ಅಭಿನಯಿಸುತ್ತಿದ್ದಾರೆ. ಮಂಗಳೂರಲ್ಲಿ ನಡೆಯುವ 2 ದಿನದ ಜೈಲರ್ ಸಿನಿಮಾ ಶೂಟಿಂಗ್​ನಲ್ಲಿ ನಟ ಶಿವರಾಜ್ ಕುಮಾರ್ ಸಹ ಭಾಗಿಯಾಗಲಿದ್ದಾರೆ.

Actor Rajinikanth in Karnataka Jailer movie shooting will be held in Mangalore for 2 days pvn


ರಜನಿಕಾಂತ್​ ಚಿತ್ರದಲ್ಲಿ ಶಿವಣ್ಣನೇ ವಿಲನ್​
ಭಾರತದ ಸೂಪರ್ ಸ್ಟಾರ್ ರಜನಿಕಾಂತ್ ಹಾಗೂ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಒಟ್ಟಿಗೆ, ಜೈಲರ್ ಸಿನಿಮಾದಲ್ಲಿ ನಟಿಸ್ತಾರೆ ಎಂಬ ಸುದ್ದಿ ಕೇಳಿಯೇ ಕನ್ನಡ ಹಾಗೂ ತಮಿಳು ಸಿನಿ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. ರಜನಿಕಾಂತ್ ಅವರ 169ನೇ ಸಿನಿಮಾ ಇದಾಗಿದ್ದು, ಪಾನ್ ಇಂಡಿಯಾ ಮೂವಿ ಆಗಿ ಹೊರ ಬರಲಿದೆ. ಈ ಸಿನಿಮಾದಲ್ಲಿ ಶಿವಣ್ಣನೇ ವಿಲನ್​ ಅನ್ನೋ ಮಾಹಿತಿ ಹೊರಬಂದಿದೆ.
ಸೂಪರ್​ ಸ್ಟಾರ್​ಗೆ ಐಶ್ವರ್ಯಾ ರೈ ನಾಯಕಿ


ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮೊದಲ ಬಾರಿಗೆ ತಮಿಳಿನ ಸಿನಿಮಾದಲ್ಲಿ ಕಾಣಿಸಿಕೊಳ್ತಿದ್ದಾರೆ. ಅದು ಕೂಡ ಸೂಪರ್ ಸ್ಟಾರ್ ರಜನಿಕಾಂತ್ ಅವರ ಜೈಲರ್ ಸಿನಿಮಾದಲ್ಲಿ ಶಿವಣ್ಣ ಬಣ್ಣ ಹಚ್ಚುತ್ತಿದ್ದಾರೆ.. ಈ ಸಿನಿಮಾ ಮೇಲೆ ಸಾಕಷ್ಟು ನಿರೀಕ್ಷೆ ಇದೆ. ಅಂದ್ಹಾಗೆ ಈ ಸಿನಿಮಾದಲ್ಲಿ ರಜನಿಕಾಂತ್ ಗೆ ಐಶ್ವರ್ಯ ನಾಯಕಿ ಎನ್ನಲಾಗಿತ್ತು. ಅವರ ಜಾಗಕ್ಕೆ ತಮನ್ನಾರನ್ನ ಕರೆತರಲಾಗಿದೆ ಎಂಬ ವದಂತಿ ಸಾಕಷ್ಟು ಸೌಂಡ್ ಮಾಡ್ತಿದೆ.


ಜೈಲರ್ ಸಿನಿಮಾಗೆ 4 ಮಂದಿ ನಾಯಕಿಯರು 


ಇದೆಲ್ಲದರ ನಡುವೆ ಈ ಸಿನಿಮಾದಲ್ಲಿ ನಾಲ್ಕು ಮಂದಿ ನಾಯಕಿಯರು ಇರಲಿದ್ದಾರೆ ಎಂಬ ಸುದ್ದಿ ಸಾಕಷ್ಟು ಸದ್ದು ಮಾಡ್ತಿದೆ. ಅಂದ್ಹಾಗೆ ರಜನಿಕಾಂತ್ ಅವರ ಅಣ್ಣಾತೆ ಸಿನಿಮಾ ಅಷ್ಟಾಗಿ ಸದ್ದು ಮಾಡಲಿಲ್ಲ ಇದೀಗ ಅವರ ಅಭಿಮಾನಿಗಳಿಗೆ ಯುವ ನಿರ್ದೇಶಕ ನೆಲ್ಸನ್ ನಿರ್ದೇಶನದ ಜೈಲರ್ ಸಿನಿಮಾದ ಮೇಲೆ ಸಾಕಷ್ಟು ನಿರೀಕ್ಷೆಯಿದೆ.
ಸನ್ ಪಿಕ್ಚರ್ಸ್​ ನಿರ್ಮಾಣದ ಜೈಲರ್​


ಜೈಲರ್ ಚಿತ್ರವನ್ನು ಸನ್ ಪಿಕ್ಚರ್ಸ್ ನಿರ್ಮಿಸಿದೆ. ಮಾಸ್ಟರ್ ಅನಿರುದ್ಧ್ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ. ಸಿನಿಮಾ ಶೂಟಿಂಗ್ ಹಂತದಲ್ಲಿದೆ. ಮೂಲಗಳ ಪ್ರಕಾರ ಜೈಲರ್ ಚಿತ್ರದಲ್ಲಿ ರಜಿನಿಕಾಂತ್ ಜೊತೆಗೆ ನಟಿ ರಮ್ಯಾ ಕೃಷ್ಣನ್ ನಟಿಸಲಿದ್ದಾರೆ ಎನ್ನಲಾಗ್ತಿದೆ. ಆದ್ರೆ ಇಲ್ಲಿ ಸ್ವಾರಸ್ಯಕರ ಸಂಗತಿಯೆಂದ್ರೆ ಈ ಸಿನಿಮಾದಲ್ಲಿ ಶಿವಣ್ಣ ವಿಲನ್ ಎನ್ನಲಾಗ್ತಿದೆ. ಕನ್ನಡದಲ್ಲಿ ಹೀರೋ ಆಗಿ , ಅನೇಕರ ರೋಲ್ ಮಾಡಲ್ ಆಗಿರೋ ಶಿವಣ್ಣ ವಿಲನ್ ಪಾತ್ರ ಹೇಗಿರಲಿದೆ ಅನ್ನೋ ಕ್ಯೂರಿಯಾಸಿಟಿ ಅಭಿಮಾನಿಗಳನ್ನ ಕಾಡ್ತಿದೆ.Published by:ಪಾವನ ಎಚ್ ಎಸ್
First published: