ಬಹುಭಾಷಾ ನಟ (Actor), ತಲೈವಾ ರಜನಿಕಾಂತ್ (Rajinikanth) ಅಭಿನಯದ ಬಹು ನಿರೀಕ್ಷಿತ ಚಿತ್ರ ಜೈಲರ್ (Movie Jailer). ಚಿತ್ರದ ಶೂಟಿಂಗ್ (Shooting) ಇನ್ನೇನು ಮುಗಿಯುವ ಹಂತಕ್ಕೆ ತಲುಪಿದೆ. ಅಂದ ಹಾಗೇ ರಜನಿಕಾಂತ್ ಅಭಿನಯದ ಜೈಲರ್ ಚಿತ್ರದಲ್ಲಿ ದಿಗ್ಗಜ ನಟರು ಮತ್ತು ನಟಿಯರಿದ್ದಾರೆ. ನಟ ರಜನಿಕಾಂತ್ ಜೊತೆಗೆ ಸೌತ್ ನ (South) ಬಹುತೇಕ ನಟ ನಟಿಯರು (Actor And Actress) ಸ್ಕ್ರೀನ್ ಶೇರ್ ಮಾಡಿದ್ದಾರೆ. ಜೈಲರ್ ಇದೊಂದು ಡಾರ್ಕ್ ಕಾಮಿಡಿ ಥ್ರಿಲ್ಲರ್ ಮೂವಿ ಆಗಿದೆ. ನಟ ರಜನಿಕಾಂತ್ ಅವರು ಚಿತ್ರದಲ್ಲಿ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ನಟ ರಜನಿಕಾಂತ್ ಅಭಿನಯದ ಜೈಲರ್ ಚಿತ್ರ ಅಭಿಮಾನಿಗಳಲ್ಲಿ ಹರ್ಷ ತಂದಿದೆ.
ಜೈಲರ್ ಚಿತ್ರದಲ್ಲಿ ಸೌತ್ ಸಿನಿ ತಾರೆಯರು
ಅಲ್ಲದೇ ಜೈಲರ್ ಚಿತ್ರವನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಈಗಾಗಲೇ ನಟ ರಜನಿಕಾಂತ್ ಅವರ 72 ನೇ ಹುಟ್ಟು ಹಬ್ಬದಂದು ಜೈಲರ್ ಚಿತ್ರದ ಟೀಸರ್ ಬಿಡುಗಡೆ ಆಗಿದೆ. ಚಿತ್ರದ ಟೀಸರ್ ಅಭಿಮಾನಿಗಳ ಕುತೂಹಲ ಮೂಡಿಸಿದೆ.
ಇನ್ನು ಜೈಲರ್ ಚಿತ್ರದಲ್ಲಿ ನಟ ರಜನಿಕಾಂತ್ ಜೊತೆಗೆ ದಕ್ಷಿಣ ಚಿತ್ರರಂಗದ ಹಲವು ಸಿನಿ ತಾರೆಯರು ಚಿತ್ರದಲ್ಲಿ ನಟಿಸಿದ್ದಾರೆ. ಇದೀಗ ನಟಿ ತಮನ್ನಾ ಭಾಟಿಯಾ ಇನ್ಸ್ಟಾಗ್ರಾಂ ನಲ್ಲಿ ತಾವು ಚಿತ್ರದಲ್ಲಿ ನಟಿಸಿರುವ ಬಗ್ಗೆ ಬರೆದುಕೊಂಡಿದ್ದಾರೆ.
ಜೈಲರ್ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ನಟಿ ತಮನ್ನಾ ಭಾಟಿಯಾ
ಜೈಲರ್ ಸಿನಿಮಾದಲ್ಲಿ ನಟನೆಗೆ ಅವಕಾಶ ಸಿಕ್ಕಿದ್ದು, ಹಾಗೂ ಸಿನಿಮಾದ ಭಾಗವಾಗಿರುವುದು ತಮಗೆ ತುಂಬಾ ಖುಷಿ ಕೊಟ್ಟಿದೆ. ಅಲ್ಲದೇ ತಲೈವಾ ರಜನಿಕಾಂತ್ ಜೊತೆಗೆ ಚಿತ್ರದಲ್ಲಿ ನಟಿಸಿದ್ದು, ಗೌರವ ತಂದು ಕೊಟ್ಟಿದೆ ಎಂದು ತಮನ್ನಾ ಇನ್ಸ್ಟಾಗ್ರಾಂ ನಲ್ಲಿ ಪೋಸ್ಟ್ ಶೇರ್ ಮಾಡಿದ್ದಾರೆ.
ಚಿತ್ರದಲ್ಲಿ ನಟಿಸಿದ ಅನುಭವ ಹಂಚಿಕೊಳ್ಳಲು ತಾವು ತುಂಬಾ ಉತ್ಸುಕರಾಗಿರುವುದಾಗಿ ನಟಿ ತಮನ್ನಾ ಹೇಳಿದ್ದಾರೆ. ಇನ್ನು ಚಿತ್ರದಲ್ಲಿ ಕೇವಲ ತಮನ್ನಾ ಮಾತ್ರವಲ್ಲದೇ ಇನ್ನೂ ಹಲವು ದಿಗ್ಗಜ ನಟ, ನಟಿಯರು ಅಭಿನಯಿಸಿದ್ದಾರೆ.
ಜೈಲರ್ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ನಟ ಮೋಹನ್ ಲಾಲ್
ಮಲಯಾಳಂ ನಟ ಮೋಹನ್ ಲಾಲ್ ಕೂಡ ಜೈಲರ್ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗಿದೆ. ಈ ಪವರ್ ಫುಲ್ ಜೋಡಿಯನ್ನು ಬೆಳ್ಳಿ ಪರದೆಯ ಮೇಲೆ ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಚಿತ್ರ ತೆರೆಗೆ ಬರುವುದನ್ನು ಎದುರು ನೋಡ್ತಿದ್ದಾರೆ. ಮೋಹನ್ಲಾಲ್ ಅವರ ರೆಟ್ರೋ ಲುಕ್ ಕಂಡು ಬಂದಿದೆ.
View this post on Instagram
ಜೈಲರ್ ಚಿತ್ರದಲ್ಲಿ ಕನ್ನಡ ಚಿತ್ರರಂಗದ ಖ್ಯಾತ ಸೂಪರ್ ಸ್ಟಾರ್ ಡಾ.ಶಿವ ರಾಜ್ ಕುಮಾರ್ ಸಹ ನಟಿಸಿದ್ದಾರೆ. ಚಿತ್ರದಲ್ಲಿ ಅವರು ಯಾವ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬುದು ರಹಸ್ಯವಾಗಿದೆ.
ತೆಲುಗು ನಟ ಸುನಿಲ್ ಜೈಲರ್ ಚಿತ್ರದಲ್ಲಿ ನಟಿಸಿದ್ದಾರೆ
ಇನ್ನು ತೆಲುಗು ಚಿತ್ರರಂಗದ ಬಹುಮುಖ ನಟ ಸುನಿಲ್ ಕೂಡ ಜೈಲರ್ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದಲ್ಲಿ ಸುನಿಲ್ ಅವರ ಫಸ್ಟ್ ಲುಕ್ ಬಿಡುಗಡೆ ಆಗಿದೆ. ಸುನಿಲ್ ರೆಟ್ರೋ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಕೇಶ ವಿನ್ಯಾಸ ವಿಭಿನ್ನವಾಗಿದೆ.
ಇದನ್ನೂ ಓದಿ: ಗುಜರಾತಿ ಸಂಪ್ರದಾಯದಲ್ಲಿ ಗೋಲ್ ಧನ ಸಮಾರಂಭ ಅಂದ್ರೆ ಏನು? ಹೇಗೆ ನಡೆಯುತ್ತೆ?
ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ನಟ ಶಿವಕಾರ್ತಿಕೇಯನ್
ಜೈಲರ್ ಸಿನಿಮಾದಲ್ಲಿ ಜನಪ್ರಿಯ ನಟ ಶಿವಕಾರ್ತಿಕೇಯನ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಜೈಲರ್ ಚಿತ್ರವನ್ನು ನೆಲ್ಸನ್ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ವಿಜಯಕನ್ ಮತ್ತು ರಮ್ಯಾ ಕೃಷ್ಣನ್ ನಟಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ