• Home
  • »
  • News
  • »
  • entertainment
  • »
  • Raj B Shetty: ಮತ್ತೆಂದೂ 'ಶಿವ'ನ ಅವತಾರ ತಾಳಲ್ವಂತೆ ರಾಜ್ ಬಿ ಶೆಟ್ಟಿ, ಈ ಸಲ ಇನ್ನೊಂದು ಡಿಫರೆಂಟ್ ಅವತಾರಕ್ಕೆ ಸಜ್ಜು

Raj B Shetty: ಮತ್ತೆಂದೂ 'ಶಿವ'ನ ಅವತಾರ ತಾಳಲ್ವಂತೆ ರಾಜ್ ಬಿ ಶೆಟ್ಟಿ, ಈ ಸಲ ಇನ್ನೊಂದು ಡಿಫರೆಂಟ್ ಅವತಾರಕ್ಕೆ ಸಜ್ಜು

ನಟ ರಾಜ್​ ಬಿ ಶೆಟ್ಟಿ

ನಟ ರಾಜ್​ ಬಿ ಶೆಟ್ಟಿ

Sandalwood: ಹೌದು, ನಿಮ್ಮ ಮುಂದಿನ ಚಿತ್ರ ಯಾವುದು ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಗ್ಯಾಂಗ್​ಸ್ಟಾರ್​ ರೀತಿಯ ಸಿನಿಮಾ ಹಾಗೂ ಕಾಮಿಡಿ ಸಿನಿಮಾಗಳನ್ನು ಮಾಡಬಾರದು ಎಂದು ನಿರ್ಧರಿಸಿದ್ದೇನೆ. ಆದರೆ ಸದ್ಯಕ್ಕೆ ನಾನು ಮುಂದಿನ ಚಿತ್ರದ ಬಗ್ಗೆ ಯಾವುದೇ ನಿರ್ಧಾರ ಮಾಡಿಲ್ಲ, ನನಗೂ ಅದರ ಬಗ್ಗೆ ಗೊತ್ತಿಲ್ಲ ಎಂದಿದ್ದಾರೆ.  

ಮುಂದೆ ಓದಿ ...
  • Share this:

ರಾಜ್​ ಬಿ ಶೆಟ್ಟಿ (Raj B Shetty) , ಯಾವಾಗಲೂ ಏನಾದರು ಹೊಸತನದ ಮೂಲಕ ಪ್ರೇಕ್ಷಕರ ಮುಂದೆ ಬಂದವರು ಈ ನಟ. ನಟನಾಗಿ, ನಿರ್ದೇಶಕನಾಗಿ (Director) ಮೋಡಿ ಮಾಡಿದವರು. ಒಂದು ಮೊಟ್ಟೆಯ ಕತೆ ನಂತರ ಗರುಡ ಗಮನ ವೃಷಭ ವಾಹನ ಚಿತ್ರದ (film) ಮೂಲಕ ಜನರಲ್ಲಿ ಹಾಗೂ ಸ್ಯಾಂಡಲ್​ ವುಡ್​ನಲ್ಲಿ (Sandalwood) ವಿಭಿನ್ನ ಕಥೆಗಳಿಗೆ ನಾಂದಿ ಹಾಡಿದವರು. ಜನರಿಗೆ ರಾಜ್​ ಬಿ ಶೆಟ್ಟಿ ಹಾಗು ಅವರ ಚಿತ್ರಗಳು ಎಂದರೆ ಬಹಳ ನಿರೀಕ್ಷೆ ಇರುತ್ತದೆ. ಅಲ್ಲದೇ ಈಗಂತೂ ಅವರ ಮುಂದಿನ ಚಿತ್ರ ಯಾವುದು? ನಟನೆಯೋ ಅಥವಾ ನಿರ್ದೇಶನವೋ ಎಂಬೆಲ್ಲಾ ಪ್ರಶ್ನೆಗಳು ಜನರ ಮನಸಲ್ಲಿ ಮುಡಿದೆ. ಅಲ್ಲದೇ ಅಭಿಮಾನಿಗಳಂತೂ ಅವರ ಮುಂದಿನ ಚಿತ್ರದ ಬಗ್ಗೆ ತಿಳಿಯಲು ಕಾತರದಿಂದ ಕಾಯುತ್ತಿದ್ದಾರೆ ಎಂದರೆ ತಪ್ಪಲ್ಲ.  


ಸದ್ಯ ನಟ ರಕ್ಷಿತ್ ಶೆಟ್ಟಿಯವರ ಬಹು ನಿರೀಕ್ಷಿತ ಚಿತ್ರ 777 ಚಾರ್ಲಿ ಚಿತ್ರದಲ್ಲಿ ಸಹ ಅವರು ಅಭಿನಯಿಸಿದ್ದು, ಅದರ ಪ್ರಚಾರ ಕಾರ್ಯದಲ್ಲಿ ಬ್ಯುಸಿ ಆಗಿದ್ದಾರೆ. ಈ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ತಮ್ಮ ಮುಂದಿನ ಯೋಜನೆಗಳ ಬಗ್ಗೆ ಹಂಚಿಕೊಂಡಿದ್ದಾರೆ.


ಗ್ಯಾಂಗ್​ಸ್ಟಾರ್ ಸಿನಿಮಾ ಮಾಡಲ್ಲ ಎಂದ ನಟ


ಹೌದು, ನಿಮ್ಮ ಮುಂದಿನ ಚಿತ್ರ ಯಾವುದು ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಗ್ಯಾಂಗ್​ಸ್ಟಾರ್​ ರೀತಿಯ ಸಿನಿಮಾ ಹಾಗೂ ಕಾಮಿಡಿ ಸಿನಿಮಾಗಳನ್ನು ಮಾಡಬಾರದು ಎಂದು ನಿರ್ಧರಿಸಿದ್ದೇನೆ. ಆದರೆ ಸದ್ಯಕ್ಕೆ ನಾನು ಮುಂದಿನ ಚಿತ್ರದ ಬಗ್ಗೆ ಯಾವುದೇ ನಿರ್ಧಾರ ಮಾಡಿಲ್ಲ, ನನಗೂ ಅದರ ಬಗ್ಗೆ ಗೊತ್ತಿಲ್ಲ ಎಂದಿದ್ದಾರೆ.  ಅಲ್ಲದೇ ನೀವು ಯಾವ ಚಿತ್ರದಲ್ಲಿ ನಟಿಸುತ್ತಿಲ್ಲವಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನಾನು 777 ಚಾರ್ಲಿ ನಂತರ ಯಾವುದೇ ಚಿತ್ರವನ್ನು ಒಪ್ಪಿಕೊಂಡಿಲ್ಲ. ನನಗೆ ನನ್ನನ್ನು ಪೂರ್ಣಗೊಳಿಸುವ ಕಥೆ ಬೇಕು, ಹಾಗಾಗಿ ಯಾವುದೇ ಚಿತ್ರವನ್ನು ಒಪ್ಪಿಕೊಳ್ಳುತ್ತಿಲ್ಲ. ನಾನು ಬ್ಯುಸಿ ಇಲ್ಲ ಎಂದಿದ್ದಾರೆ.


ಇನ್ನು ಯಾವಾಗಲೂ ಒಂದೇ ವಿಷಯವನ್ನು ಇಟ್ಟುಕೊಂಡು ಚಿತ್ರ ಮಾಡಬಾರದು. ಹೊಸ ರೀತಿಯ ವಿಚಾರಗಳನ್ನು ಹುಡುಕಿಕೊಂಡು ಮಾಡಬೇಕು. ಗೊತ್ತಿಲ್ಲದ ವಿಚಾರಗಳ ಬಗ್ಗೆ ಸಿನಿಮಾ ಮಾಡಿದಾಗ ಅದರ ಬಗ್ಗೆ ನಮಗೆ ಹೆಚ್ಚು ಮಾಹಿತಿ ಸಿಗುತ್ತದೆ. ಮುಖ್ಯವಾಗಿ ಆ ವಿಚಾರದ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳದೇ ಚಿತ್ರವನ್ನು ಅಪ್ಪಿತಪ್ಪಿ ಮಾಡಬಾರದು. ಹೊಸ ವಿಚಾರದಿಂದ ಹೊಸತದನ್ನು ಕಲಿಯುವುದರ ಜೊತೆಗೆ, ಸಿನಿಮಾ ಫ್ರೆಶ್​ ಆಗಿ ಕಾಣುತ್ತದೆ ಎಂದು ರಾಜ್ ಅಭಿಪ್ರಾಯಪಟ್ಟಿದ್ದಾರೆ.


ಇದನ್ನೂ ಓದಿ: ತಮಿಳುನಾಡಿನಲ್ಲೂ ಚಾರ್ಲಿ ಹವಾ, ಈ ಥರ ಕಟೌಟ್​​ ಯಾವ್​ ಹೀರೋಗಳಿಗೂ ಹಾಕಿಲ್ಲ ರೀ


777 ಚಾರ್ಲಿ ಸಿನಿಮಾದಲ್ಲಿ ರಾಜ್​


ರಾಜ್​ ಬಿ ಶೆಟ್ಟಿ ಹಾಗೂ ರಿಷಭ್ ಶೆಟ್ಟಿ ಅಭಿನಯದ ಗರುಡ ಗಮನ ವೃಷಭ ವಾಹನ ಚಿತ್ರ ಅಪಾರ ಜನ ಮನ್ನಣೆ ಗಳಿಸಿತ್ತು. ಈ ಚಿತ್ರಕ್ಕೆ ಜನರಿಂದ ಹಾಗೂ ಸ್ಯಾಂಡಲ್​ವುಡ್​ ತಾರೆಯರಿಂದ ಉತ್ತಮ ಪ್ರತಿಕ್ರಿಯೆ ಲಭಿಸಿತ್ತು.


ಒಂದು ಮೊಟ್ಟೆಯ ಕಥೆ ಸಿನಿಮಾ ನೋಡಿದ ಜನ ರಾಜ್​ ಬಿ ಶೆಟ್ಟಿ ಅವರನ್ನು ಕಾಮಿಡಿ ಹೀರೋ ಎಂದುಕೊಂಡಿದ್ದರು. ಆದರೆ ಗರುಡ ಗಮನ ವೃಷಭ ವಾಹನ ಸಿನಿಮಾದಲ್ಲಿ ತಮ್ಮ ಮತ್ತೊಂದು ಮುಖ ತೋರಿಸಿದ್ದಾರೆ.


ಇದನ್ನೂ ಓದಿ: ಸಲ್ಮಾನ್​ ಖಾನ್ ಕುಟುಂಬಕ್ಕೆ ಕಂಟಕ, ಅಪ್ಪ ಮಗನ ಕಥೆ ಮುಗಿಸ್ತಿವಿ ಅಂದಿದ್ದು ಯಾರು?


ಅಬ್ಬಬ್ಬಾ..ಅವರ ಕ್ರೌರ್ಯ ತೋರುವ ಪ್ರತಿ ಸೀನ್​ಗಳು ಬೆಂಕಿ. ಹೌದು, ಈ ಸಿನಿಮಾಗೆ ರಾಜ್​ ಬಿ ಶೆಟ್ಟಿಯವ ನಟನೆಯೆ ಪ್ಲಸ್​. ಇಂಟರ್​ವಲ್​ಗೂ ಮುನ್ನ ಬರುವ ದೃಶ್ಯಗಳಲ್ಲಿ ರಾಜ್​ ಬಿ ಶೆಟ್ಟಿಅವರ ನಟನೆ ನೋಡುಗರ ಹೃದಯಬಡಿತವನ್ನು ಹೆಚ್ಚಿಸುತ್ತದೆ. ನಿರ್ದೇಶನದ ಜೊತೆ ನಟನೆ ಮಾಡುವುದು ತಮಾಷೆಯ ವಿಚಾರವಲ್ಲ. ಎರಡನ್ನೂ ನಿಭಾಯಿಸಿದ್ದಾರೆ ರಾಜ್​ ಬಿ ಶೆಟ್ಟಿ. ಇವರನ್ನು ಶಿವ ಪಾತ್ರದಲ್ಲಿ ನೋಡುವುದೇ ಒಂದು ಮಜಾ. ಮತ್ತೆ ಮತ್ತೆ ಅವರ ದೃಶ್ಯಗಳನ್ನೇ ನೋಡಬೇಕು ಅನ್ನುವಷ್ಟು ಅದ್ಭುತವಾಗಿ ಅಭಿನಯಿಸಿದ್ದಾರೆ.

Published by:Sandhya M
First published: