R Madhavan: ಪತ್ನಿಯ ಮುಂದೆ ನನ್ನ ಜೀವನ ಅಪೂರ್ಣ ಎನಿಸುತ್ತಿದೆ: ನಟ ಮಾಧವನ್

ತಮ್ಮ ಹೆಂಡತಿ ಸರಿತಾ ಬಿರ್ಜೆ ಅವರು ಕೋವಿಡ್ ಸಮಯದಲ್ಲಿ  ಪ್ರಪಂಚದಾದ್ಯಂತ ಶಿಕ್ಷಣದಿಂದ ವಂಚಿತರಾಗುತ್ತಿರುವ ಬಡಮಕ್ಕಳಿಗೆ ಪಾಠ ಮಾಡುವ ವಿಡಿಯೋವನ್ನು ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ನನ್ನ ಜೀವನ ಅಪೂರ್ಣ ಹಾಗೂ ಕೆಲಸಕ್ಕೆ ಬಾರದ್ದು ಎಂದೆನಿಸುತ್ತಿದೆ ಎಂದು ಮಾಧವನ್​ ಹೇಳಿದ್ದಾರೆ.

ಪತ್ನಿಯನ್ನು ಹೊಗಳಿ ವಿಡಿಯೋ ಹಂಚಿಕೊಂಡ ನಟ ಮಾಧವನ್​

ಪತ್ನಿಯನ್ನು ಹೊಗಳಿ ವಿಡಿಯೋ ಹಂಚಿಕೊಂಡ ನಟ ಮಾಧವನ್​

  • Share this:
ಸಿನಿ ಪ್ರಪಂಚದಲ್ಲಿ ದೊಡ್ಡ  ಅಭಿಮಾನಿ ಬಳಗವನ್ನು ಹೊಂದಿರುವ ಸಾಕಷ್ಟು ನಟರಲ್ಲಿ ಆರ್ ಮಾಧವನ್ ಕೂಡ ಒಬ್ಬರು. ದೇಶದ ಅತ್ಯಂತ ಪ್ರೀತಿಪಾತ್ರ ನಟರಾದ ಆರ್ ಮಾಧವನ್ ಅವರು ಸಾಮಾಜಿಕ ಮಾಧ್ಯಮದಲ್ಲಿ ಬಹಳ ಚಟುವಟಿಕೆಯಿಂದ ಕೂಡಿದ್ದು, ಅವರು ತಮ್ಮ ವೈಯಕ್ತಿಕ ಮತ್ತು ವೃತ್ತಿಪರ ಜೀವನದಲ್ಲಿ ತುಂಬಾ ಸೂಕ್ಷ್ಮ ಜೀವಿ ಕೂಡ ಹೌದು. ಇವರ ತ್ರೀ ಈಡಿಯಟ್‍ನ ಫರ್ಹಾನ್ ಪಾತ್ರ ಮರೆಯುವಂತಿಲ್ಲ. ಇನ್ನು ಸಾಲಾ ಖಡೂಸ್, ತನು ವೆಡ್ಸ್ ಮನು, ತಂಬಿ ಸೇರಿದಂತೆ ವಿಭಿನ್ನ ಪಾತ್ರಗಳಲ್ಲಿ ಮಿಂಚಿದ್ದು ತಮ್ಮ ಪ್ರತಿಭೆ ಮತ್ತು ಉತ್ತಮ ವ್ಯಕ್ತಿತ್ವದ ಮೂಲಕ ಜನರ ಅಚ್ಚುಮೆಚ್ಚಿನ ನಟರಾಗಿ ಖ್ಯಾತಿಗಳಿಸಿದ್ದಾರೆ. ಇಂತಹ ನಟ ನಾನು ತುಂಬಾ ಚಿಕ್ಕವನು ಎಂದೆನಿಸುತ್ತಿದೆ ಎಂದು ಇನ್‍ಸ್ಟಾಗ್ರಾಂ ಖಾತೆಯಲ್ಲಿ ವಿಡಿಯೋವೊಂದನ್ನು ಶೇರ್ ಮಾಡುವ ಮೂಲಕ ಹೇಳಿಕೊಂಡಿದ್ದಾರೆ.

ಹೌದು, ತಮ್ಮ ಹೆಂಡತಿ ಸರಿತಾ ಬಿರ್ಜೆ ಅವರು ಕೋವಿಡ್ ಸಮಯದಲ್ಲಿ  ಪ್ರಪಂಚದಾದ್ಯಂತ ಶಿಕ್ಷಣದಿಂದ ವಂಚಿತರಾಗುತ್ತಿರುವ ಬಡಮಕ್ಕಳಿಗೆ ಇಂಗ್ಲಿಷ್​ ಪಾಠ ಮಾಡುವ ವಿಡಿಯೋವನ್ನು ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ನನ್ನ ಜೀವನ ಅಪೂರ್ಣ ಹಾಗೂ ಕೆಲಸಕ್ಕೆ ಬಾರದ್ದು ಎಂದೆನಿಸುತ್ತಿದೆ ಎಂದು ಮಾಧವನ್​ ಹೇಳಿದ್ದಾರೆ.
View this post on Instagram


A post shared by R. Madhavan (@actormaddy)


ಶೇರ್​ ಮಾಡಿರುವ ವಿಡಿಯೋದಲ್ಲಿ ಮಾಧವನ್ ತಮ್ಮ ಕ್ಯಾಮರಾವನ್ನು ಕೋಣೆಯ ಕಡೆ ತಿರುಗಿಸಿದಾಗ ಪತ್ನಿ ಸರಿತಾ ಬಡ ಮಕ್ಕಳಿಗೆ ವಿಡಿಯೋ ಕಾಲ್ ಮೂಲಕ ಪಾಠ ಮಾಡುತ್ತಿರುತ್ತಾರೆ. ಈ ವಿಡಿಯೋಗೆ ಸಾಕಷ್ಟು ಮಂದಿ ಮೆಚ್ಚುಗೆ ವ್ಯಕ್ತಪಡಿಸಿದ್ದು, ನಟ ದರ್ಶನ್ ಕುಮಾರ್ ಚಪ್ಪಾಳೆಯ ಇಮೋಜಿ ಹಾಕಿ ಹರ್ಷ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Bigg Boss 8 Kannada: ಈ ವಾರವೂ ಕಿಚ್ಚನ ಅನುಪಸ್ಥಿತಿಯಲ್ಲೇ ನಡೆಯಲಿದೆ ಬಿಗ್ ಬಾಸ್​: ವಿಭಿನ್ನವಾದ ಬೇಡಿಕೆಯಿಟ್ಟ ಕಿಚ್ಚನ ಅಭಿಮಾನಿಗಳು

ಇನ್ನು ನಿರ್ಮಾಪಕ ಮತ್ತು ನಿರ್ದೇಶಕ ಶೈಲೇಂದ್ರ ಸಿಂಗ್ ಕಮೆಂಟ್ ಮಾಡಿದ್ದು, ನಿಜವಾದ ರಾಕ್‍ಸ್ಟಾರ್ ಸ್ತ್ರೀ ಸ್ಟಾರ್ ಎಂದು ಹೇಳಿದ್ದಾರೆ. ಇನ್ನು ನಟಿ ಶಮಿತಾ ಶೆಟ್ಟಿ ಮತ್ತು ಸಾಹಿತ್ಯ ಬರಹಗಾರ ಮಿಲಿಂದ್ ಗದಾಕರ್ ಕೂಡ ಕಮೆಂಟ್ ಮಾಡಿದ್ದಾರೆ. ಈ ವಿಡಿಯೋವನ್ನು ನಾಲ್ಕು ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ.
View this post on Instagram


A post shared by R. Madhavan (@actormaddy)


ಮಾಧವನ್ ಮತ್ತು ಸರಿತಾ ಬಿರ್ಜೆ ಅವರು 1999ರಲ್ಲಿ ವಿವಾಹ ಜೀವನಕ್ಕೆ ಕಾಲಿಟ್ಟಿದ್ದು, ಇವರಿಗೆ ವೇದಾಂತ್ ಎಂಬ 14 ವರ್ಷದ ಮಗನಿದ್ದಾನೆ. ಇವರು ತಮ್ಮ ಹೆಂಡತಿಗೆ ಇಂದಿಗೂ ಹೊಗಳುವ ಅವಕಾಶ ಕಳೆದುಕೊಂಡವರಲ್ಲ. ಇತ್ತೀಚೆಗಷ್ಟೆ ತಮ್ಮ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದರು. ಈ ವೇಳೆ ಇಬ್ಬರು ಅಪ್ಪಿಕೊಂಡಿರುವ ಫೋಟೋ ಶೇರ್ ಮಾಡಿ ದೇವರಿಗೆ ಎಷ್ಟೇ ಧನ್ಯವಾದ ತಿಳಿಸಿದರೂ ಮುಗಿಯದು ಎಂದು ಹೇಳಿಕೊಂಡಿದ್ದರು.
View this post on Instagram


A post shared by R. Madhavan (@actormaddy)


ಆರ್ ಮಾಧವನ್ ಅವರ ಮುಂದಿನ ಸಿನಿಮಾ ರಾಕೆಟರಿ: ದಿ ನಂಬಿ ಎಫೆಕ್ಟ್ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದೆ. ಇನ್ನು ಇವರ ಮಾರಾ ಸಿನಿಮಾ ಒಟಿಟಿ ಫ್ಲಾಟ್‍ಫಾರ್ಮ್‍ನ ಅಮೆಜಾನ್ ಪ್ರೈಮ್‍ನಲ್ಲಿ ಬಿಡುಗಡೆಯಾಗಿದೆ. ಇದು ಮಲಯಾಳಂನ ಚಾರ್ಲಿ ಸಿನಿಮಾದ ರೀ ಮೇಕ್ ಆಗಿದೆ.


View this post on Instagram


A post shared by R. Madhavan (@actormaddy)


ರೆಹನಾ ಹೇ ತೇರೇ ದಿಲ್ ಮೆ ಸಿನಿಮಾದಲ್ಲಿ ಲವರ್ ಬಾಯ್​ ಮ್ಯಾಡಿ ಪಾತ್ರದಲ್ಲಿ ರಂಜಿಸುವ ಮೂಲಕ ಯುವ ಪ್ರೇಮಿಗಳಿಗೆ ರೋಲ್​ ಮಾಡೆಲ್​ ಆಗಿದ್ದ ಮಾಧವನ್​, ಅನುಷ್ಕಾ ಶೆಟ್ಟಿ ಜೊತೆ ನಿಶ್ಯಬ್ದಂ ಸಿನಿಮಾದಲ್ಲಿ ತೆರೆ ಹಂಚಿಕೊಂಡಿದ್ದಾರೆ. ಇದರ ಜೊತೆಗೆ ಬಾಲಿವುಡ್‍ನ ರಂಗ್ ದೆ ಬಸಂತಿ, 13 ಬಿ, ಗುರು  ಮತ್ತು ಜೀರೋ ಸಿನಿಮಾದಲ್ಲೂ ನಟಿಸಿದ್ದಾರೆ.
Published by:Anitha E
First published: