ಅಭಿಮಾನಿಗಳಿಗೆ ಶಾಕ್​ ನೀಡಿದ ಅಪ್ಪು: ಹುಟ್ಟುಹಬ್ಬದಂದು ಭೇಟಿ ಸಾಧ್ಯವಿಲ್ಲ ಎಂದ ಪುನೀತ್​..!

ಪ್ರತಿಬಾರಿ ಪುನೀತ್​ ತಮ್ಮ ಹುಟ್ಟುಹಬ್ಬದಂದು ಮನೆಯ ಬಳಿ ಅಭಿಮಾನಿಗಳನ್ನು ಭೇಟಿ ಮಾಡುತ್ತಿದ್ದರು. ಆದರೆ ಈ ಸಲ ಅವರು ಕಾರಣಾಂತರಗಳಿಂದಾಗಿ ಹುಟ್ಟುಹಬ್ಬದಂದು ಮನೆಯಲ್ಲಿ ಇರುವುದಿಲ್ಲ. ಅದಕ್ಕಾಗಿಯೇ ಅಭಿಮಾನಿಗಳನ್ನು ಭೇಟಿ ಮಾಡಲು ಬೇರೆ ದಿನ ಸಮಯ ನೀಡಿದ್ದು, ಸಹಕರಿಸುವಂತೆ ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ.

Anitha E | news18
Updated:March 15, 2019, 12:11 PM IST
ಅಭಿಮಾನಿಗಳಿಗೆ ಶಾಕ್​ ನೀಡಿದ ಅಪ್ಪು: ಹುಟ್ಟುಹಬ್ಬದಂದು ಭೇಟಿ ಸಾಧ್ಯವಿಲ್ಲ ಎಂದ ಪುನೀತ್​..!
ಹುಟ್ಟುಹಬ್ಬದಂದು ಪುನೀತ್ ಭೇಟಿ ಸಾಧ್ಯವಿಲ್ಲ
Anitha E | news18
Updated: March 15, 2019, 12:11 PM IST
ಅಭಿಮಾನಿಗಳಿಗೆ ತಮ್ಮ ನೆಚ್ಚಿನ ನಟನನ್ನು ನೇರವಾಗಿ ನೋಡಲು ಅವಕಾಶ ಸಿಗುವುದೇ ತುಂಬಾ ಕಡಿಮೆ. ಅದರಲ್ಲೂ ಅವರ ಹುಟ್ಟುಹಬ್ಬದಂದು ಮಾತ್ರ ನಟರು ಅಭಿಮಾನಿಗಳನ್ನು ಭೇಟಿಯಾಗಲು ಸುಲಭವಾಗಿ ಸಿಗುತ್ತಾರೆ. ಇದರಿಂದಾಗಿಯೇ ಅಭಿಮಾನಿಗಳು ಆ ದಿನಕ್ಕಾಗಿ ಕಾತರರಾಗಿ ಕಾಯುತ್ತಿರುತ್ತಾರೆ.

ಇದನ್ನೂ ಓದಿ: ಅಪ್ಪು ಹುಟ್ಟುಹಬ್ಬಕ್ಕೆ ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳ ಸಂಭ್ರಮ

ಮಾರ್ಚ್ 17ರಂದು ಅಂದರೆ ನಾಡಿದ್ದು ಪವರ್​ ಸ್ಟಾರ್​ ಪುನೀತ್ ರಾಜ್‍ಕುಮಾರ್  ಅವರ ಹುಟ್ಟುಹಬ್ಬ. ಅಂದು ಅವರಿಗೆ ಶುಭಕೋರಿ ಅವರನ್ನು ಕಣ್ತುಂಬ ನೋಡಲು ಸಾಕಷ್ಟು ಅಭಿಮಾನಿಗಳು ಕಾಯುತ್ತಿರುತ್ತಾರೆ. ಅದಕ್ಕಾಗಿಯೇ ಒಂದೆರಡು ದಿನ ಮುಂಚಿತವಾಗಿಯೇ ಎಲ್ಲರೂ ಅಪ್ಪು ಮನೆ ಮುಂದೆ ಜಮಾಯಿಸುತ್ತಾರೆ.

ಇದರಿಂದಾಗಿಯೇ ಈ ಬಾರಿ ಹುಟ್ಟುಹಬ್ಬಕ್ಕೆ ಎರಡು ದಿನ ಇರುವಾಗಲೇ ಪುನೀತ್​ ಅಭಿಮಾನಿಗಳಿಗಾಗಿ ಒಂದು ವಿಡಿಯೋ ಮಾಡಿದ್ದಾರೆ. ಅದರಲ್ಲಿ ಪ್ರತಿವರ್ಷದಂತೆ ಈ ವರ್ಷವೂ ನಿಮ್ಮನ್ನು ನೋಡುವ ಆಸೆ ಇದೆ. ಆದರೆ ನಾನು ಮಾ.16ರಂದು ಮನೆಯಲ್ಲಿ ಇರುವುದಿಲ್ಲ. 17ರಂದು ಬೆಳಿಗ್ಗೆ ಮನೆಗೆ ಬರುತ್ತೇನೆ. ಹೀಗಿಗಾಗಿ ಮಾ.16ರಂದು ನಮ್ಮ ಮನೆ ಹತ್ತಿರ ದಯವಿಟ್ಟು ಬರಬೇಡಿ ಎಂದು ಮನವಿ ಮಾಡಿದ್ದಾರೆ.17ರಂದು ನನ್ನನ್ನು ನೋಡಲು ಬರುವಾಗ ಬರಿಗೈಯಲ್ಲಿ ಬಂದು ಪ್ರೀತಿಯಿಂದ ಭೇಟಿಯಾದರೆ ಸಾಕು. ಅದೇ ನನಗೆ ಖುಷಿ. ನೀವು ನಿಮ್ಮ ಕೈಯಿಂದ ಹಣ ಖರ್ಚು ಮಾಡಿ ತರುವ ಕೇಕ್​, ಹೂ ಗುಚ್ಚಗಳನ್ನು ತರುವುದು ಬೇಡ. ಈ ಹಣವನ್ನು ಒಳ್ಳೆಯ ಕೆಲಸಕ್ಕೆ ಬಳಸಿಕೊಳ್ಳಿ ಎಂದೂ ಮನವಿ ಮಾಡಿದ್ದಾರೆ ಪುನೀತ್​.

- ರಕ್ಷಾ ಜಾಸ್ಮೀನ್​
Loading...


PHOTOS: ತಮಿಳು ನಟ ಕಾರ್ತಿಗೆ #Karthi19 ಸಿನಿಮಾ ಸೆಟ್​ನಲ್ಲಿ ಜೊತೆಯಾದ ರಶ್ಮಿಕಾ ಮಂದಣ್ಣ..!
 
First published:March 15, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...