Puneeth Rajkumar: ಅಮ್ಮನ ಆಸೆ ಈಡೇರಿಸಲಿದ್ದಾರೆ ಪುನೀತ್​ ರಾಜ್​ಕುಮಾರ್; ಕಾದಂಬರಿ ಆಧಾರಿತ ಚಿತ್ರದಲ್ಲಿ ಯುವರತ್ನ?

Puneeth Rajkumar: ಕಾದಂಬರಿಗಳನ್ನು ಓದುವ ಅತೀವ ಆಸಕ್ತಿ ಹೊಂದಿದ್ದ ಪಾರ್ವತಮ್ಮ ತಮ್ಮ ಗಂಡ ರಾಜ್​ಕುಮಾರ್​ಗೆ ಸಿನಿಮಾ ಮಾಡುವಾಗಲೂ ಕತೆಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಿದ್ದರು. ಅವರು ಕುಂ.ವೀರಭದ್ರಪ್ಪನವರ ಕನಕಾಂಗಿ ಕಲ್ಯಾಣ ಕಾದಂಬರಿಯನ್ನು ಮೆಚ್ಚಿಕೊಂಡಿದ್ದರು.

Sushma Chakre | news18-kannada
Updated:August 29, 2019, 1:40 PM IST
Puneeth Rajkumar: ಅಮ್ಮನ ಆಸೆ ಈಡೇರಿಸಲಿದ್ದಾರೆ ಪುನೀತ್​ ರಾಜ್​ಕುಮಾರ್; ಕಾದಂಬರಿ ಆಧಾರಿತ ಚಿತ್ರದಲ್ಲಿ ಯುವರತ್ನ?
ಪುನೀತ್​ ರಾಜ್​ಕುಮಾರ್
  • Share this:
ಪವರ್​ಸ್ಟಾರ್ ಪುನೀತ್​ ರಾಜ್​ಕುಮಾರ್​ಗೆ ಮೊದಲಿನಿಂದಲೂ ಕಥಾಪ್ರಧಾನವಾದ ಪ್ರಯೋಗಾತ್ಮಕ ಸಿನಿಮಾಗಳಲ್ಲಿ ನಟಿಸಬೇಕೆಂಬ ಆಸೆ. ಆದರೆ, ಆರಂಭದಿಂದಲೂ ಮಾಸ್​ ಸಿನಿಮಾಗಳಲ್ಲೇ ಕಾಣಿಸಿಕೊಂಡಿದ್ದ ಪುನೀತ್​ ಅಭಿಮಾನಿಗಳ ಒತ್ತಾಯದ ಮೇರೆಗೆ ಅಂಥದ್ದೇ ಸಿನಿಮಾಗಳಲ್ಲಿ ನಟಿಸುತ್ತಿದ್ದರು. ಉತ್ತಮ ಸ್ಕ್ರಿಪ್ಟ್​ ಸಿಕ್ಕರೆ ಕೌಟುಂಬಿಕ ಕತೆ ಇರುವ ಉತ್ತಮ ಅಭಿರುಚಿಯ ಸಿನಿಮಾದಲ್ಲಿ ನಟಿಸಲು ಬಯಸುವುದಾಗಿ ಅವರೇ ಹಿಂದೊಮ್ಮೆ ಹೇಳಿಕೊಂಡಿದ್ದರು. ಅದಕ್ಕೆ ಇದೀಗ ಕಾಲ ಕೂಡಿಬಂದಿದೆ.

ಕಾದಂಬರಿ ಆಧರಿತ ಉತ್ತಮ ಅಭಿರುಚಿಯ ಸಿನಿಮಾಗಳಲ್ಲಿ ತಮ್ಮ ಮಗ ಪುನೀತ್ ರಾಜ್​ಕುಮಾರ್ ನಟಿಸಬೇಕೆಂಬುದು ಪಾರ್ವತಮ್ಮ ರಾಜ್​ಕುಮಾರ್ ಕನಸಾಗಿತ್ತು. ಈ ಹಿಂದೆ ಶಿವರಾಜ್​ಕುಮಾರ್ ಕೂಡ ತಮ್ಮ ಮಾಮೂಲಿ ವರ್ಚಸ್ಸನ್ನು ಬಿಟ್ಟು ಶಿವರಾಮ ಕಾರಂತರ 'ಚಿಗುರಿದ ಕನಸು' ಸಿನಿಮಾದಲ್ಲಿ ನಾಯಕನಾಗಿ ಎರಡು ಶೇಡ್​ನಲ್ಲಿ ಅಭಿನಯಿಸಿದ್ದರು. ಈ ಸಿನಿಮಾವನ್ನು ಟಿ.ಎಸ್​. ನಾಗಾಭರಣ ನಿರ್ದೇಶಿಸಿದ್ದರು. ಈ ಸಿನಿಮಾ ಶಿವರಾಜ್​ಕುಮಾರ್ ಅಭಿನಯದ ಬೆಸ್ಟ್​ ಸಿನಿಮಾಗಳಲ್ಲೊಂದು ಎನಿಸಿಕೊಂಡಿದೆ.

kichchotsava: ಸುದೀಪ್ ಜನ್ಮದಿನಕ್ಕೆ ಕೌಂಟ್​ಡೌನ್; ಸಾಮಾಜಿಕ ಜಾಲತಾಣದಲ್ಲಿ ಕಿಚ್ಚೋತ್ಸವದ ಅಬ್ಬರ!

ಇದೀಗ ಪುನೀತ್ ರಾಜ್​ಕುಮಾರ್ ಕೂಡ ಅಣ್ಣನ ಹಾದಿಯಲ್ಲಿದ್ದು, ಕುಂ. ವೀರಭದ್ರಪ್ಪ ಬರೆದಿರುವ 'ಕನಕಾಂಗಿ ಕಲ್ಯಾಣ' ಆಧಾರಿತ ಸಿನಿಮಾಗೆ ಕಾಲ್​ಶೀಟ್​ ನೀಡಿದ್ದಾರೆ. ಸದ್ಯಕ್ಕೆ ಪುನೀತ್ ಅಭಿನಯದ 'ಯುವರತ್ನ' ಚಿತ್ರೀಕರಣ ನಡೆಯುತ್ತಿದ್ದು, ಆ ಬಗ್ಗೆ ಹೆಚ್ಚು ಗಮನ ನೀಡಿದ್ದಾರೆ. ಈ ಹಿಂದೆ 'ರಾಜಕುಮಾರ' ಸಿನಿಮಾ ನಿರ್ದೇಶಿಸಿದ್ದ ಸಂತೋಷ್​ ಆನಂದರಾಮ್​ ಈ ಸಿನಿಮಾಗೂ ಆ್ಯಕ್ಷನ್​, ಕಟ್ ಹೇಳಿದ್ದಾರೆ. ಈ ಸಿನಿಮಾದಲ್ಲಿ ಪುನೀತ್ ಕಾಲೇಜು ವಿದ್ಯಾರ್ಥಿಯಾಗಿ ನಟಿಸಿದ್ದಾರೆ.

puneeth rajkumar yuvarathna
'ಯುವರತ್ನ' ಸಿನಿಮಾದಲ್ಲಿ ಪುನೀತ್​ ರಾಜ್​ಕುಮಾರ್


ಕನ್ನಡದ ಹಿರಿಯ ಕಥೆಗಾರ, ಕಾದಂಬರಿಕಾರ ಕುಂ. ವೀರಭದ್ರಪ್ಪ ಅವರ 'ಕನಕಾಂಗಿ ಕಲ್ಯಾಣ' ಕಾದಂಬರಿ ಆಧರಿಸಿದ ಸಿನಿಮಾವನ್ನು ಕೈಗೆತ್ತಿಕೊಳ್ಳಲು ಪುನೀತ್​ ರಾಜ್​ಕುಮಾರ್ ನಿರ್ಧರಿಸಿದ್ದಾರೆ. ಈ ಮೂಲಕ ಅಮ್ಮನ ಕನಸನ್ನು ನನಸು ಮಾಡಲು ಅಪ್ಪು ಮುಂದಾಗಿದ್ದಾರೆ. ಕಾದಂಬರಿಗಳನ್ನು ಓದುವ ಅತೀವ ಆಸಕ್ತಿ ಹೊಂದಿದ್ದ ಪಾರ್ವತಮ್ಮ ತಮ್ಮ ಗಂಡ ರಾಜ್​ಕುಮಾರ್​ಗೆ ಸಿನಿಮಾ ಮಾಡುವಾಗಲೂ ಕತೆಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಿದ್ದರು. ಅವರು ಕುಂ.ವೀರಭದ್ರಪ್ಪನವರ 'ಕನಕಾಂಗಿ ಕಲ್ಯಾಣ' ಕಾದಂಬರಿಯನ್ನು ಮೆಚ್ಚಿಕೊಂಡಿದ್ದರು. ಆ ಕಾದಂಬರಿಗೆ ಉತ್ತಮ ಚಿತ್ರಕತೆ ಬರೆಸಿ ತಮ್ಮ ಮಗ ಪುನೀತ್​ ರಾಜ್​ಕುಮಾರ್​ಗೆ ಸಿನಿಮಾ ಮಾಡಬೇಕೆಂದು ಬಯಸಿದ್ದರು. ಈ ಬಗ್ಗೆ ಕುಂ. ವೀರಭದ್ರಪ್ಪ ಜೊತೆಗೆ ಮಾತುಕತೆ ನಡೆಸಿದ್ದರು. ಆದರೆ, ಅಷ್ಟರಲ್ಲಿ ಅವರು ಕೊನೆಯುಸಿರೆಳೆದ ಕಾರಣ ಆ ಆಸೆ ಕೈಗೂಡಿರಲಿಲ್ಲ.

Puneeth-Rajkumar
ಪುನೀತ್​ ರಾಜ್​ಕುಮಾರ್​
Video: ಕಾವೇರಿಗಾಗಿ ಮತ್ತೆ ಮೈಕ್ ಹಿಡಿದ ಪುನೀತ್ ರಾಜ್​ಕುಮಾರ್; ಜಗ್ಗಿ ವಾಸುದೇವ್​ ಹಾಡಿಗೆ ಪವರ್ಫುಲ್​ ಧ್ವನಿ

ಇದೀಗ ಆ ಸಿನಿಮಾವನ್ನು ಮತ್ತೆ ಕೈಗೆತ್ತಿಕೊಳ್ಳಲು ಪುನೀತ್ ರಾಜ್​ಕುಮಾರ್ ನಿರ್ಧರಿಸಿದ್ದಾರೆ ಎನ್ನಲಾಗಿದೆ. ದುನಿಯಾ ಸೂರಿ ಈ ಸಿನಿಮಾ ನಿರ್ದೇಶಿಸಬೇಕೆಂದು ಪಾರ್ವತಮ್ಮ ರಾಜ್​ಕುಮಾರ್ ಇಷ್ಟಪಟ್ಟಿದ್ದರು. ಆದರೆ, ಸದ್ಯಕ್ಕೆ ಈ ಸಿನಿಮಾವನ್ನು ಯಾರು ನಿರ್ದೇಶಿಸಲಿದ್ದಾರೆ ಎಂದು ನಿರ್ಧಾರವಾಗಿಲ್ಲ. ಮೂಲಗಳ ಪ್ರಕಾರ ದುನಿಯಾ ಸೂರಿ ಅಥವಾ 'ಪೈಲ್ವಾನ್' ಖ್ಯಾತಿಯ ಕೃಷ್ಣ ಈ ಸಿನಿಮಾ ನಿರ್ದೇಶಿಸುವ ಸಾಧ್ಯತೆಯಿದೆ.

ಪುನೀತ್​ ರಾಜ್​ಕುಮಾರ್ ಜೇಮ್ಸ್​, ರವಿ ಬಸ್ರೂರ್​ ನಿರ್ದೇಶನದ ಗಿರ್ಮಿಟ್ ಸಿನಿಮಾದಲ್ಲೂ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಗಿರ್ಮಿಟ್​ ಸಿನಿಮಾ ಮಕ್ಕಳ ಸಿನಿಮಾವಾಗಿದ್ದು, 5 ಭಾಷೆಯಲ್ಲಿ ತೆರೆಕಾಣಲಿದೆ. ಈ ಸಿನಿಮಾದಲ್ಲಿ 280 ಮಕ್ಕಳು ವಿಭಿನ್ನ ಪಾತ್ರಗಳಲ್ಲಿ ನಟಿಸಲಿದ್ದಾರೆ.



First published:August 29, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ