ಒಳ್ಳೆ ಹುಡುಗ ಪ್ರಥಮ್ (Pratham) ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ವಿಭಿನ್ನವಾಗಿ ಮಾತನಾಡುವ, ನನಗೆ ಎಲ್ಲ ನಟರು ಗೊತ್ತು ಎಂದು ಹೇಳುತ್ತಲೇ ಬಿಗ್ ಬಾಸ್ಗೆ ಸೆಲೆಕ್ಟ್ ಆಗಿದ್ದರು ಇವರು. ಅಲ್ಲದೇ ಬಿಗ್ ಬಾಸ್ (Bigg Boss) ಸೀಸನ್ 04ರ ವಿನ್ನರ್ ಸಹ ಆಗಿದ್ದರು. ಬಿಗ್ ಬಾಸ್ ನಿಂದ ಬಂದ ಮೇಲೆ ಪ್ರಥಮ ನಟನೆಯಲ್ಲಿ ಬ್ಯುಸಿ ಆಗಿದ್ದಾರೆ. ಪ್ರಥಮ್ ಅವರು ನಿರ್ದೇಶಿಸಿ (Direction), ನಟಿಸಿರುವ ನಟ ಭಯಂಕರ ಚಿತ್ರ ಬಿಡುಗಡೆಯಾಗಲು ಸಜ್ಜಾಗಿದೆ. ಸಿನಿಮಾ ಫೆಬ್ರವರಿ 3ಕ್ಕೆ ರಿಲೀಸ್ ಆಗಲಿದೆ. ಪ್ರಥಮ್ ನಟನೆ ಹೇಗಿರುತ್ತೆ ಅಂತ ನೋಡೋಕೆ ಅಭಿಮಾನಿಗಳು ಕಾಯ್ತಾ ಇದ್ದಾರೆ. ಈ ಸಂದರ್ಭದಲ್ಲಿ ಪ್ರಥಮ್ ಪುನೀತ್ ರಾಜ್ಕುಮಾರ್ (Puneeth Rajkumar) ಅವರನ್ನು ನೆನೆದಿದ್ದಾರೆ. ಅವರ ಜೊತೆಗಿನ ವಿಡಿಯೋವನ್ನು ಶೇರ್ ಮಾಡಿದ್ದಾರೆ.
ಫೆಬ್ರವರಿ 3ಕ್ಕೆ ನಟಭಯಂಕರ ರಿಲೀಸ್
ನಟ ಪ್ರಥಮ್ ಅವರು ಮೊದಲ ಬಾರಿಗೆ ನಿರ್ದೇಶಿಸಿರುವ ಸಿನಿಮಾ ನಟಭಯಂಕರ. ಈ ಚಿತ್ರ ಫೆಬ್ರವರಿ 3ಕ್ಕೆ ರಿಲೀಸ್ ಆಗಲಿದೆ. ತುಂಬ ಅಹಂಕಾರವಿರುವ ಮನುಷ್ಯ ಒಬ್ಬರಿಗೆ ಮಾತು ಕೊಟ್ಟಾಗ ಹೇಗೆ ಬದಲಾಗುತ್ತಾನೆ ಎಂಬುದೇ ಚಿತ್ರದ ಕಥಾವಸ್ತು. ಇನ್ನೊಂದು ಕಡೆ ಸ್ಟುಪಿಡ್ ಸೂಪರ್ ಸ್ಟಾರ್ ಹಾಗೂ ಕುರುಡಿ ದೆವ್ವದ ನಡುವೆ ನಡೆಯುವ ಕಥೆ ಕೂಡ ಇದಾಗಿದೆಯಂತೆ.
ಪುನೀತ್ ನೆನೆದ ಪ್ರಥಮ್
ತನ್ನ ಸಿನಿಮಾ ಬಿಡುಗಡೆ ಸಂದರ್ಭದಲ್ಲಿ ನಟ ಪ್ರಥಮ್ ಪುನೀತ್ ರಾಜ್ಕುಮಾರ್ ಅವರನ್ನು ನೆನೆದಿದ್ದಾರೆ. ಇವತ್ತು ನೀವಿರಬೇಕಿತ್ತು ಬಾಸ್, ಇಷ್ಟು ಖುಷಿಯಾಗಿದ್ದನ್ನ ನೋಡೋದೇ ಪುಣ್ಯ. ಜನ ಪ್ರಾಮಾಣಿಕವಾಗಿ ತೋರಿದ ಬೆಂಬಲ ನೋಡಿ ಹರಸುತ್ತಾ ಇದ್ರಿ ಎಂದು ಪ್ರಥಮ್ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಾಕಿಕೊಂಡಿದ್ದಾರೆ.
ಅಪ್ಪು ಏನ್ ಹೇಳಿದ್ರು?
'ಒಳ್ಳೆಯದಾಗಲಿ ಆಲ್ ದಿ ಬೆಸ್ಟ್. ಗಾಡ್ ಬ್ಲೆಸ್ ಯು. ಆದಷ್ಟು ಬೇಗ ಸಿನಿಮಾ ಮಾಡಿ. ನಮ್ಮ ಹುಡುಗ ಇವನು. ಒಳ್ಳೆಯದಾಗಲಿ ಎಂದಿದ್ದರು. ಆಗ ಪ್ರಥಮ್, ನೀವು ಮತ್ತು ಶಿವಣ್ಣ ಹೇಗೆ ಅಂದ್ರೆ, ನೀವು ಬ್ರೇನ್ ಇದ್ದಾಗೆ, ಶಿವಣ್ಣ ಹಾರ್ಟ್ ಇದ್ದಾಗೆ. ಎರಡೂ ಕರೆಕ್ಟ್ ಆಗಿದ್ರೆ ಮಾತ್ರ ಮನುಷ್ಯ ಚೆನ್ನಾಗಿರ್ತಾನೆ. ಆದ್ದರಿಂದ ನಿಮ್ಮ ಆಶೀರ್ವಾದ ಯಾವಾಗಲೂ ಇರಬೇಕು ಎಂದು ಪ್ರಥಮ್ ಹೇಳ್ತಾರೆ.
ಒಬ್ಬ ಕಲಾವಿದ ಊಟ ಮಾಡದೇ ಒಂದು ವಾರ ಇರ್ತಾನೆ. ನೀರು ಕುಡಿಯದೇ ಒಂದು ದಿನ ಇರ್ತಾನೆ. ಪ್ರಾಣಯಾಮ ಮಾಡಿ, ಉಸಿರಾಡದೇ ಅಣ್ಣವರ ತರ ಅರ್ಧ ಗಂಟೆ ಇರ್ತಾರೆ. ಆದ್ರೆ ನಿಮ್ಮ ಬ್ಲೆಸ್ಸಿಂಗ್ ಇಲ್ಲದೇ ಯಾವ ಕಲಾವಿದರೂ ಒಂದು ನಿಮಿಷ ಇರಲ್ಲ ಎಂದು ಪ್ರಥಮ್ ಪುನೀತ್ ಗೆ ಹೇಳಿರುತ್ತಾರೆ.
ಈ ಸಿನಿಮಾದಲ್ಲಿ ಪ್ರಥಮ್ಗೆ ನಾಯಕಿಯಾಗಿ ಫ್ರಾನ್ಸ್ನ ನಿವಾಸಿ ನಿಹಾರಿಕಾ ನಟಿಸಿದ್ದಾರೆ. ಹಾಗೆಯೇ ಚಂದನಾ ಪ್ರಮುಖ ಪಾತ್ರ ಮಾಡಿದ್ದಾರೆ. ಸ್ಪರ್ಶ ಖ್ಯಾತಿಯ ರೇಖಾ, ಸಾಯಿಕುಮಾರ್, ಓಂ ಪ್ರಕಾಶ್ ರಾವ್, ಸುಶ್ಮಿತಾ ಜೋಶಿ, ಶೋಭರಾಜ್, ಕುರಿ ಪ್ರತಾಪ್, ಶಂಕರ್ ಅಶ್ವತ್ಥ್, ಮೋಹನ್ ಜುನೇಜ, ರಮಾ, ಬಿರಾದಾರ್, ಎಂ.ಎಸ್. ಉಮೇಶ್ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ.
ಇದನ್ನೂ ಓದಿ: Serials TVR: ಮೊದಲನೇ ಸ್ಥಾನದಲ್ಲಿ ಯಾವ ಸೀರಿಯಲ್? ಸರಿಗಮಪ ಟಿವಿಆರ್ ಎಷ್ಟು?
ಮೆಹ್ತಾ ಅವರು ಚಿತ್ರಕ್ಕೆ ಕಥೆ ಬರೆದಿದ್ದು, ಚಿತ್ರಕಥೆ, ಸಂಭಾಷಣೆಯನ್ನು ಪ್ರಥಮ್ ಬರೆದಿದ್ದಾರೆ. ನಾಲ್ಕು ಹಾಡುಗಳಿರುವ ಈ ಚಿತ್ರಕ್ಕೆ ಪ್ರದ್ಯೋತನ್ ಸಂಗೀತ ನೀಡಿದ್ದಾರೆ. 'ರಿಯಲ್ ಸ್ಟಾರ್' ಉಪೇಂದ್ರ ಒಂದು ಹಾಡನ್ನು ಹಾಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ