ಸಾಮಾಜಿಕ ಜಾಲತಾಣದಲ್ಲಿ ಪ್ರಸಕ್ತ ವಿಷಯಗಳ ಕುರಿತು ತಮ್ಮ ಅಭಿಪ್ರಾಯ ಹಂಚಿಕೊಳ್ಳುವ ಮೂಲಕ ಸಕ್ರಿಯವಾಗಿರುವ ನಟ ಪ್ರಕಾಶ್ ರೈ. ಇತ್ತೀಚೆಗಷ್ಟೆ ಕೆ.ಜಿ.ಎಫ್. ಚಾಪ್ಟರ್ 2 ಚಿತ್ರತಂಡ ಸೇರಿಕೊಂಡಿರುವ ಪ್ರಕಾಶ್ ರೈ ಟ್ರೋಲ್ಗೆ ಬಲಿಯಾಗಿದ್ದರು. ಪ್ರಕಾಶ್ ರೈ ಅವರನ್ನು ಸಿನಿಮಾದಲ್ಲಿ ತೆಗೆದುಕೊಂಡಿದ್ದಕ್ಕೆ ವಿರೋಧವೂ ವ್ಯಕ್ತವಾಗಿತ್ತು. ಈಗ ಪ್ರಕಾಶ್ ರೈ ಹಿಂದಿ ಹೇರಿಕೆ ವಿರುದ್ಧ ಸಾಮಾನ್ಯ ಜನರು ಸೇರಿದಂತೆ ರಾಜಕೀಯ ನಾಯಕರು ಹಾಗೂ ಸೆಲೆಬ್ರಿಟಿಗಳು ದನಿ ಎತ್ತಿದ್ದಾರೆ. ರಾಜ್ಯದಲ್ಲಿ ಹಿಂದಿ ಹೇರಿಕೆ ಸಲ್ಲದು. ದ್ವಿಭಾಷಾ ನೀತಿ ಜಾರಿಗೆ ತರಬೇಕೆಂದು ಒತ್ತಡ ಹೇರಲಾಗುತ್ತಿದೆ. ಈ ಹಿಂದೆ ಹಲವಾರು ಸೆಲೆಬ್ರಿಟಿಗಳು ಹಿಂದಿ ಹೇರಿಕೆ ವಿರೋಧಿಸುತ್ತಿರುವವರಿಗೆ ಬೆಂಬಲ ಸೂಚಿಸಿದ್ದಾರೆ. ಈಗ ನಟ ಪ್ರಕಾಶ್ ರೈ ಸಹ ಇದಕ್ಕೆ ಜೊತೆಯಾಗಿದ್ದಾರೆ. ರಾಜ್ಯದಲ್ಲಿ ಹಿಂದಿ ಹೇರಿಕೆ ಸಲ್ಲದು ಎಂದು ಟ್ವೀಟ್ ಮಾಡಿದ್ದಾರೆ. ನನ್ನ ಮಾತೃ ಭಾಷೆ ನನ್ನ ಹೆಮ್ಮೆ ಎಂದಿದ್ದಾರೆ.
ಹಲವು ಭಾಷೆ ಬಲ್ಲೆ. ಹಲವು ಭಾಷೆಗಳಲ್ಲಿ ಕೆಲಸ ಮಾಡಬಲ್ಲೆ. ಆದರೆ ನನ್ನ ಕಲಿಕೆ, ನನ್ನ ಗ್ರಹಿಕೆ, ನನ್ನ ಬೇರು, ನನ್ನ ಶಕ್ತಿ ಹಾಗೂ ನನ್ನ ಹೆಮ್ಮೆ ನನ್ನ ಮಾತೃಭಾಷೆ ಕನ್ನಡ. ಹಿಂದಿ ಹೇರಿಕೆ ಬೇಡ ಎಂದು ಟ್ವೀಟ್ ಮಾಡಿದ್ದಾರೆ. ಪ್ರಕಾಶ್ ರೈ ಅವರ ಟ್ವೀಟ್ಗೆ ಹಲವಾರು ಮಂದಿ ಮೆಚ್ಚುಗೆ ವ್ಯಕ್ತಪಡಿಸಿದರೆ, ಸಾಕಷ್ಟು ಮಂದಿ ಟೀಕಿಸಿದ್ದಾರೆ.
ಹಲವು ಭಾಷೆ ಬಲ್ಲೆ.. ಹಲವು ಭಾಷೆಗಳಲ್ಲಿ ಕೆಲಸ ಮಾಡಬಲ್ಲೆ..ಆದರೆ ನನ್ನ ಕಲಿಕೆ..ನನ್ನ ಗ್ರಹಿಕೆ..ನನ್ನ ಬೇರು..ನನ್ನ ಶಕ್ತಿ...ನನ್ನ ಹೆಮ್ಮೆ..ನನ್ನ ಮಾತೃಭಾಷೆ ಕನ್ನಡ #ಹಿಂದಿ_ಹೇರಿಕೆ_ಬೇಡ ..NO #HindiImposition #justasking pic.twitter.com/B8RWHt8dVC
— Prakash Raj (@prakashraaj) September 13, 2020
ನಿಖಿಲ್ ಕುಮಾರಸ್ವಾಮಿ, ವಸಿಷ್ಠ ಸಿಂಹ, ಚೇತನ್ ಸೇರಿದಂತೆ ಸಾಕಷ್ಟು ಮಂದಿ ಹಿಂದಿ ಹೇರಿಕೆ ವಿರುದ್ಧ ದನಿ ಎತ್ತಿದ್ದಾರೆ. ರಾಜ್ಯದಲ್ಲಿ ಹಿಂದಿ ಹೇರಿಕೆ ಬೇಡ, ದ್ವಿಭಾಷಾ ನೀತಿ ಜಾರಿಗೆ ಬರಲಿ ಹಾಗೂ ಶಾಲೆಯ ಪಠ್ಯಗಳಲ್ಲಿ ಹಿಂದಿಯ ಅವಶ್ಯಕತೆ ಇಲ್ಲ ಎಂದು ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ ಸ್ಟಾರ್ಗಳು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ