• ಹೋಂ
  • »
  • ನ್ಯೂಸ್
  • »
  • ಮನರಂಜನೆ
  • »
  • Puneeth Rajkumar: ಪುನೀತ್ ಸ್ಮರಣಾರ್ಥ ಆ್ಯಂಬುಲೆನ್ಸ್ ನೀಡಿದ ಪ್ರಕಾಶ್​ ರಾಜ್​, ಅಪ್ಪು ಹಾಡಿ ಹೊಗಳಿದ ನಟ

Puneeth Rajkumar: ಪುನೀತ್ ಸ್ಮರಣಾರ್ಥ ಆ್ಯಂಬುಲೆನ್ಸ್ ನೀಡಿದ ಪ್ರಕಾಶ್​ ರಾಜ್​, ಅಪ್ಪು ಹಾಡಿ ಹೊಗಳಿದ ನಟ

ಪುನೀತ್ ರಾಜ್​ಕುಮಾರ್​

ಪುನೀತ್ ರಾಜ್​ಕುಮಾರ್​

Actor Prakash Raj: ಪುನೀತ್ ರಾಜಕುಮಾರ್ ಧನ ಸಹಾಯ ಮಾಡಿದ್ದರು. ಡಾ.ರಾಜ್ ಫೌಂಡೇಷನ್ ನಿಂದ ಎರಡು ಲಕ್ಷ ನೀಡಿದ್ದರು. ಪ್ರತಿಯೊಬ್ಬರಿಗೂ ಪುನೀತ್ ಸಹಾಯ ಮಾಡಿದ್ದರು ಎಂದು ಅಪ್ಪು ಕೆಲಸಗಳನ್ನು ನೆನೆದಿದ್ದಾರೆ.  

  • Share this:

ಪುನೀತ್ ರಾಜ್​ಕುಮಾರ್ (Puneeth Rajkumar) ಅವರನ್ನು ಕರ್ನಾಟಕದ (Karnataka )ಜನತೆ ಎಂದೆಂದಿಗೂ ಮರೆಯಲು ಸಾಧ್ಯವಿಲ್ಲ. ಅವರನ್ನು ನೆನೆಯಲು ಕೇವಲ ಒಂದು ಕಾರಣ ಬೇಕಷ್ಟೇ. ಅಭಿಮಾನಿಗಳಂತೂ ಒಂದೆಲ್ಲಾ ಒಂದು ನೆಪ ಹುಡುಕಿ ಅಪ್ಪು (Appu) ನೆನೆಯುತ್ತಾರೆ. ಇನ್ನು ಅಪ್ಪು ಬಗ್ಗೆ ಮಾತನಾಡಿರುವ ಹಿರಿಯ ನಟ ಪ್ರಕಾಶ್ ರೈ ಅಪ್ಪು ಕಳೆದುಕೊಂಡಾಗ ಅನಾಥ ಪ್ರಜ್ಞೆ ಕಾಡಿತ್ತು ಎಂದಿದ್ದಾರೆ.  ಪುನೀತ್ ರಾಜ್ ಕುಮಾರ್ ಸ್ಮರಣಾರ್ಥ ನಟ ಪ್ರಕಾಶ್ ರೈ (Prakash Raj) ಅವರು ಸಾಮಾಜಿಕ ಸೇವಾ ಕಾರ್ಯ ಆರಂಭಿಸಿದ್ದು, ಮೈಸೂರಿನಲ್ಲಿ ಮಿಷನ್ ಆಸ್ಪತ್ರೆಗೆ ಸುಸಜ್ಜಿತ ಆ್ಯಂಬುಲೆನ್ಸ್ ಉಡುಗೊರೆ ನೀಡಿದ್ದಾರೆ.


ಅಪ್ಪು ಅಗಲಿಕೆ ನೋವು ಕಾಡ್ತಿದೆ


ನಂತರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ನಟ, ನಾವು ನೀವೆಲ್ಲ ಸೇರಲು ಒಂದೇ ಶಕ್ತಿ ಕಾರಣ. ಅಪ್ಪು ಎಂದೆಂದಿಗೂ ಎಲ್ಲರನ್ನು ನೆನಪಿನಲ್ಲಿ ಉಳಿಯುವ ಕಥಾನಾಯಕ. ಅಪ್ಪು ನಮ್ಮನ್ನು ಅಗಲಿದ್ದಾಗ ಇಡೀ ರಾಜ್ಯಕ್ಕೆ ಅನಾಥ ಪ್ರಜ್ಞೆ ಕಾಡಿತು. ಮಾತು ಹೊರಡದ ಮೌನ ನನ್ನನ್ನು ಕೂಡ ಆವರಿಸಿತ್ತು. ಪ್ರತಿಯೊಬ್ಬರಲ್ಲೂ ಅಪ್ಪು ಅಗಲಿಕೆ ನೋವು ಕಾಡ್ತಿದೆ ಎಂದು ಅಪ್ಪು ನೆನೆದು ಭಾವುಕರಾಗಿದ್ದಾರೆ.


ಅಲ್ಲದೇ, ನಾನು ಇದುವರೆಗೆ ಯಾವ ವೇದಿಕೆಯಲ್ಲೂ ಮಾತನಾಡಿರಲಿಲ್ಲ. ಆತನನ್ನ ಒಬ್ಬ ನಟನಾಗಿ ನಾನು ನೋಡಿರಲಿಲ್ಲ. ಬಾಲ್ಯದಿಂದ ನಾನು ನೋಡಿದ್ದೆ.  ಅಪ್ಪು ಆ್ಯಂಬ್ಯುಲೆನ್ಸ್ ಇದ್ದಿದ್ದರೆ ಬದುಕುತ್ತಿದ್ದರು, ಆ ಆಲೋಚನೆ‌ ಬಂದ ತಕ್ಷಣ ನಾನು ನಿರ್ಧರಿಸಿದೆ. ಬಡವರಿಗೆ ಹೆಚ್ಚು ಅನುಕೂಲ ಆಗಲಿದೆ ಎಂಬ ಕಾರಣಕ್ಕೆ ಈ ನಿರ್ಧಾರ ಮಾಡಿದ್ದೇನೆ ಎಂದು ತಿಳಿಸಿದ್ದಾರೆ.


ಅಪ್ಪು ಸಹಾಯ ಮಾಡುವುದರಲ್ಲಿ ಯಾವಾಗಲೂ ಮುಂದು


ಜನರಿಗೆ ಅನುಕೂಲವಾಗಲಿ ಎನ್ನುವ ಕಾರಣಕ್ಕೆ ಮಿಷನರಿ ಆಸ್ಪತ್ರೆ ಆಯ್ಕೆ ಮಾಡಿಕೊಂಡೆ. ಕೋವಿಡ್ ವೇಳೆ ಪ್ರಕಾಶ್ ಫೌಂಡೇಷನ್ ವತಿಯಿಂದ ಊಟ, ವಸತಿ ನೀಡಿದ್ವಿ. ಅಲ್ಲದೇ, ಪುನೀತ್ ರಾಜಕುಮಾರ್ ಧನ ಸಹಾಯ ಮಾಡಿದ್ದರು. ಡಾ.ರಾಜ್ ಫೌಂಡೇಷನ್ ನಿಂದ ಎರಡು ಲಕ್ಷ ನೀಡಿದ್ದರು. ಪ್ರತಿಯೊಬ್ಬರಿಗೂ ಪುನೀತ್ ಸಹಾಯ ಮಾಡಿದ್ದರು ಎಂದು ಅಪ್ಪು ಕೆಲಸಗಳನ್ನು ನೆನೆದಿದ್ದಾರೆ.ಇದನ್ನೂ ಓದಿ: ಮಲಯಾಳಂ ಸಿನಿಮಾ ಒಪ್ಪಿಕೊಂಡ ಸಮಂತಾ? ಈ ಸ್ಟಾರ್ ಹೀರೋ ಜೊತೆ ರೊಮ್ಯಾನ್ಸ್​ ಮಾಡ್ತಾರಂತೆ ಸ್ಯಾಮ್


ಇನ್ನು ಆ ವ್ಯಕ್ತಿ ಇದ್ದಿದ್ದರೆ ಮಾಡುತ್ತಿದ್ದ ಕೆಲಸವನ್ನ ನಾವು ಮಾಡಬೇಕಿದೆ. ಅವರ ವ್ಯಕ್ತಿತ್ವ ಉಳಿಸಿ ಬೆಳೆಸಿಕೊಂಡು ಹೋಗುವುದು ಮುಖ್ಯ. ಅವರು ಬಾಲ‌ನಟನಾಗಿ ರಾಷ್ಟ್ರಪ್ರಶಸ್ತಿ ಪಡೆದವರು. 40 ವರ್ಷಕ್ಕೆ ಅವರಿಲ್ಲ ಎಂದಾಗ ನಾವು ಸಾಕಷ್ಟು ಕಳೆದುಕೊಂಡಿದ್ದೇವೆ. ಶ್ರೀಮಂತ ಮನೆತನದಲ್ಲಿ ಹುಟ್ಡಿದರೂ ಸರಳವಾಗಿ ಬದುಕಿದವರು.  ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಒಮ್ಮೆ ಮಾತನಾಡಿಕೊಂಡಿದ್ವಿ. ಎತ್ತರಕ್ಕೆ ಬೆಳೆಯುವುದು ಮುಖ್ಯವಲ್ಲ.ಆ ವ್ಯಕ್ತಿಯಿಂದ ಮತ್ತಷ್ಟು ಜನರು ಎತ್ತರಕ್ಕೆ ಬೆಳೆಯುವುದು ಎಂದಿದ್ದೆ.ಅದೇ ನಮ್ಮ ನಿಮ್ಮೆಲ್ಲರ ಅಪ್ಪು ಎಂದಿದ್ದಾರೆ.ಇನ್ನು ಅಪ್ಪು ಅಗಲಿಕೆಯ ನಂತರ ಅವರ ನೆನಪಿನಲ್ಲಿ ದಿನಕ್ಕೊಂದು ಸಾಮಾಜಿಕ ಕಾರ್ಯ ಮಾಡುತ್ತಾರೆ.  ಬೆಂಗಳೂರಿನ ಲಾಲ್​ಬಾಗ್​ನಲ್ಲಿ ನಡೆಯುತ್ತಿರೊ ಫಲಪುಷ್ಪ ಪ್ರದರ್ಶನದಲ್ಲಿ 500 ಕ್ಕೂ ಹೆಚ್ಚು ಹೂಗಳಲ್ಲಿ ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್ ಅವರ ಮೂರ್ತಿಯನ್ನು ನಿರ್ಮಿಸಲಾಗಿದೆ. 75ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಬೆಂಗಳೂರಿನ ಸಸ್ಯಕಾಶಿ ಲಾಲ್​ಬಾಗ್​ನಲ್ಲಿ ಫಲ ಪುಷ್ಪಪ್ರದರ್ಶನ ಮಾಡಲಾಗ್ತಿದೆ. ಈ ಬಾರಿ ಅಪ್ಪು ಮತ್ತು ಡಾ.ರಾಜ್​ಕುಮಾರ್ ​ ಥೀಮ್​ನಲ್ಲಿ ಫಲಪುಷ್ಪ ಪ್ರದರ್ಶನ ಮಾಡಲಾಗ್ತಿದೆ.


ಇದನ್ನೂ ಓದಿ: ನಿತ್ಯಾ ಮೆನನ್​ಗೆ ಮಾನಸಿಕ ಕಿರುಕುಳ ಕೊಡ್ತಿದ್ದಾನಂತೆ ಸಿನಿಮಾ ವಿಮರ್ಶಕ, ದೂರು ನೀಡಲು ಮುಂದಾದ ನಟಿ


ಅಲ್ಲದೇ, ಗಾಜನೂರಿನಲ್ಲಿ ಅಣ್ಣಾವ್ರು ಹುಟ್ಟಿದ ಮಾದರಿಯಲ್ಲಿ ಫ್ಲವರ್ ಶೋ ನಿರ್ಮಾಣ ಮಾಡಲಾಗಿದೆ. 30 ಲಕ್ಷ ವೆಚ್ಚದಲ್ಲಿ ಡಾ.ರಾಜ್ ಕುಮಾರ್ ನಟನೆಯ ಬೇಡರ ಕಣ್ಣಪ್ಪ ಚಿತ್ರದ ವಾಲ್ ನಿರ್ಮಾಣ ಮಾಡಲಾಗಿದೆ. ನವೆಂಬರ್ 1 ರಂದು ಪುನೀತ್ ರಾಜ್ ಕುಮಾರ್ ಗೆ ಮರಣೋತ್ತರವಾಗಿ ಕರ್ನಾಟಕ ರತ್ನ ಕೊಡಲಿದ್ದೇವೆ ಎಂದು ಸರ್ಕಾರ ಘೋಷಿಸಿದೆ.

Published by:Sandhya M
First published: