ಬಾಲಿವುಡ್ ನಟ ಶಾರುಖ್ ಖಾನ್ (Shah Rukh Khan) ಮತ್ತು ದೀಪಿಕಾ ಪಡುಕೋಣೆ (Deepika Padukone) ಅಭಿನಯದ ಬಹು ನಿರೀಕ್ಷಿತ ಪಠಾಣ್ (Pathaan)ಚಿತ್ರದ ಹಾಡು ರಿಲೀಸ್ ಆದಗಿನಿಂದ ವಿವಾದದಲ್ಲೇ ಸಿಲುಕಿದೆ. ಮೊದಲು ದೀಪಿಕಾ ಅವರಿಗೆ ಈ ರೀತಿಯ ಬಟ್ಟೆ ಹಾಕಿಕೊಳ್ಳೋದು ಬೇಕಿತ್ತಾ ಎಂದು ಎಲ್ಲೆಡೆ ಟ್ರೋಲ್ ಆಗಿತ್ತು. ಈಗ ಬೇಷರಂ ರಂಗ್ ಹಾಡಿನಲ್ಲಿ ದೀಪಿಕಾ ಪಡುಕೋಣೆ ಅವರ ಕೇಸರಿ ಬಣ್ಣದ ಬಿಕನಿ ವಿವಾದ ಸೃಷ್ಟಿಸಿದೆ. ಬೇಷರಂ ರಂಗ್ ಅಂದರೆ ಕನ್ನಡದಲ್ಲಿ ನಾಚಿಕೆ ಇಲ್ಲದ ಬಣ್ಣ ಎಂದು ಅರ್ಥ. ಹಾಗಾದ್ರೆ ಕೇಸರಿ ಬಣ್ಣಕ್ಕೆ ನಾಚಿಕೆ ಇಲ್ಲ ಎಂದು ಅವಮಾನ ಮಾಡಿದ್ದಾರೆ. ಪಠಾಣ್ ಸಿನಿಮಾವನ್ನು ಬಹಿಷ್ಕರಿಸಿ ಎಂದು ಹಲವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಒಂದು ವರ್ಗ ವಿರೋಧ ವ್ಯಕ್ತಪಡಿಸಿದ್ರೆ, ಇನ್ನೊಂದು ವರ್ಗ ಬೆಂಬಲ ನೀಡಿದೆ. ಅದಕ್ಕೆ ನಟ ಪ್ರಕಾಶ್ ರಾಜ್ (Prakash Raj) ಇಂಥದ್ದನ್ನೆಲ್ಲ ಇನ್ನೂ ಎಲ್ಲಿಯವರೆಗೆ ಸಹಿಸಿಕೊಳ್ಳಬೇಕು ಎಂದು ಪ್ರಶ್ನೆ ಮಾಡಿದ್ದಾರೆ.
ಬೈಕಾಟ್ ಪಠಾಣ್ ಟ್ರೆಂಡ್ಗೆ ಪ್ರಕಾಶ್ ರೈ ವಿರೋಧ
ಬೇಷರಂ ರಂಗ್ ಹಾಡಿನಲ್ಲಿ ನಲ್ಲಿ ದೀಪಿಕಾ ಅವರು ಕೇಸರಿ ಬಣ್ಣ ಬಿಕಿನಿ ಹಾಕಿದ್ದಾರೆ. ಈ ಹಾಡಿನ ಸಾಲು ದೀಪಿಕಾ ಅವರು ಹಾಕಿರುವ ಡ್ರೆಸ್ ಗೂ ಹೊಂದಾಣಿಕೆ ಆಗುತ್ತಿದೆ. ಕೇಸರಿ ಬಣ್ಣ ನಾಚಿಕಿಯಿಲ್ಲ ಬಣ್ಣನಾ ಎಂದು ನೆಟ್ಟಿಗರು ಗರಂ ಆಗಿದ್ದಾರೆ. ಅದ್ಕೆ ಬೈಕಾಟ್ ಪಠಾಣ್ ಟ್ರೆಂಡ್ ಶುರು ಮಾಡಿದ್ದಾರೆ. ಅದಕ್ಕೆ ಪ್ರಕಾಶ್ ರೈ ವಿರೋಧ ವ್ಯಕ್ತ ಪಡಿಸಿದ್ದಾರೆ.
ಅಸಹ್ಯಕರ, ಇನ್ನೂ ಸಹಿಸಿಕೊಳ್ಳಬೇಕಾ?
ಈ ವಿವಾದದ ಕುರಿತಾಗಿ ನಟ ಪ್ರಕಾಶ್ ರಾಜ್ ತಮ್ಮ ಟ್ವಿಟ್ಟರಲ್ಲಿ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. 'ಅಸಹ್ಯಕರ, ಇದನ್ನೆಲ್ಲ ನಾವು ಇನ್ನೂ ಎಲ್ಲಿಯವರೆಗೆ ಸಹಿಸಿಕೊಳ್ಳಬೇಕು? ಬಣ್ಣದ ಕುರುಡುತನ' ಎಂದು ಪೋಸ್ಟ್ ಹಾಕಿಕೊಮಡಿದ್ದಾರೆ. ಜೊತೆಗೆ #AndhBhakts ಮತ್ತು #justasking ಹ್ಯಾಷ್ಟ್ಯಾಗ್ ಬಳಸಿದ್ದಾರೆ.
Disgusting … How long should we tolerate these ..Colour Blind #AndhBhakts .. #justasking https://t.co/SSgxKpvcE9
— Prakash Raj (@prakashraaj) December 14, 2022
ಹಾಡಿಗೆ ಪ್ರಶಾಂತ್ ಸಂಬರ್ಗಿ ವಿರೋಧ
ಬಿಗ್ ಬಾಸ್ ಮನೆಯಿಂದ ಹೊರ ಬಂದಿರುವ ಪ್ರಶಾಂತ್ ಸಂಬರಗಿ ಪಠಾಣ್ ಸಿನಿಮಾದ ಹಾಡಿಗೆ ವಿರೋಧ ವ್ಯಕ್ತ ಪಡಿಸಿದ್ದಾರೆ. ದೀಪಿಕಾ ಪಡುಕೋಣೆ ಹಾಕಿರುವ ಕೇಸರಿ ಬಿಕಿನಿಗೆ ಟೀಕೆ ವ್ಯಕ್ತ ಪಡಿಸಿದ್ದಾರೆ.
ಇದನ್ನೂ ಓದಿ: Pathaan: ಹಿಂದೂ ಧರ್ಮಕ್ಕೆ ಅಪಮಾನ ಮಾಡಿದ್ರಾ ಶಾರುಖ್? ಜೋರಾಯ್ತು 'BoycottPathaan' ಕೂಗು!
ಬಾಲಿವುಡ್ ಚಿತ್ರೋದ್ಯಮ ಹಿಂದೂಗಳ ಭಾವನೆಗೆ ಹಲವಾರು ಬಾರಿ ನೋವು ಉಂಟು ಮಾಡಿದೆ. ದೀಪಿಕಾ ಅವರಿಗೆ ಬೇಕು ಅಂತಾನೇ ಕೇಸರಿ ಬಿಕಿನಿ ಹಾಕಿಸಲಾಗಿದೆ ಎಂದು ಪ್ರಶಾಂತ್ ಸಂಬರ್ಗಿ ಆರೋಪ ಮಾಡಿದ್ದಾರೆ.
ಬೇಷರಂ ರಂಗ್ ಹಾಡು ಕಾಪಿ ಮಾಡಲಾಗಿದ್ಯಾ?
ದೀಪಿಕಾ ಅವರ ಹೊಸ ಅವತಾರ ಮತ್ತು ಶಾರುಖ್ ಅವರ ಶರ್ಟ್ಲೆಸ್ ದೃಶ್ಯಗಳ ಈಗಾಗಲೇ ಟ್ರೋಲ್ ಆಗಿವೆ. ಈ ಮಧ್ಯೆ, ಈಗ ಹಾಡನ್ನು ಕಾಪಿ ಮಾಡಲಾಗಿದೆ ಎಂಬ ಆರೋಪಗಳು ಕೇಳಿ ಬಂದಿವೆ. ಹಾಡಿನ ಒಂದು ಭಾಗವನ್ನು ಫ್ರೆಂಚ್ ಗಾಯಕ ಮತ್ತು ಗೀತರಚನೆಕಾರ ಜೈನ್ ಅವರ ಸೂಪರ್ಹಿಟ್ ಟ್ರ್ಯಾಕ್ 'ಮಕೆಬಾ' ನಿಂದ ನಕಲು ಮಾಡಲಾಗಿದೆಯಂತೆ.
ಇದನ್ನೂ ಓದಿ: IMDB 2022ರ ಟಾಪ್ 10 ಸಿನಿಮಾಗಳು ಯಾವವು? KGF, ಕಾಂತಾರ, ಚಾರ್ಲಿಗೆ ಯಾವ ಸ್ಥಾನ?
ಜನವರಿ 25ಕ್ಕೆ ಚಿತ್ರ ಬಿಡುಗಡೆ
ಶಾರುಖ್ ಖಾನ್ ನಾಲ್ಕು ವರ್ಷಗಳ ನಂತರ ಪಠಾಣ್ ಮೂಲಕ ದೊಡ್ಡ ಪರದೆಯ ಮೇಲೆ ಕಾಣಿಸಿಕೊಳ್ಳಲಿದ್ದಾರೆ. ಆಕ್ಷನ್, ಥ್ರಿಲ್ಲರ್ ಚಿತ್ರದಲ್ಲಿ ಜಾನ್ ಅಬ್ರಹಾಂ ಕೂಡ ನಟಿಸಿದ್ದಾರೆ. ಮತ್ತು ಇದನ್ನು ಸಿದ್ಧಾರ್ಥ್ ಆನಂದ್ ನಿರ್ದೇಶಿಸಿದ್ದಾರೆ. ಚಿತ್ರವನ್ನು ಜನವರಿ 25, 2023 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ. ಇದು ಹಿಂದಿಯನ್ನು ಹೊರತುಪಡಿಸಿ ತಮಿಳು ಮತ್ತು ತೆಲುಗು ಡಬ್ಬಿಂಗ್ ಆವೃತ್ತಿಗಳಲ್ಲಿ ಬಿಡುಗಡೆಯಾಗಲಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ