• Home
  • »
  • News
  • »
  • entertainment
  • »
  • Prajwal Devaraj: ಈ ಬಾರಿಯೂ ಹುಟ್ಟುಹಬ್ಬ ಆಚರಿಸಿಕೊಳ್ಳಲ್ಲ ಪ್ರಜ್ವಲ್ ದೇವರಾಜ್​, ಅಭಿಮಾನಿಗಾಗಿ ಡೈನಾಮಿಕ್ ಪ್ರಿನ್ಸ್ ಈ ನಿರ್ಧಾರ

Prajwal Devaraj: ಈ ಬಾರಿಯೂ ಹುಟ್ಟುಹಬ್ಬ ಆಚರಿಸಿಕೊಳ್ಳಲ್ಲ ಪ್ರಜ್ವಲ್ ದೇವರಾಜ್​, ಅಭಿಮಾನಿಗಾಗಿ ಡೈನಾಮಿಕ್ ಪ್ರಿನ್ಸ್ ಈ ನಿರ್ಧಾರ

ಪ್ರಜ್ವಲ್ ದೇವರಾಜ್​

ಪ್ರಜ್ವಲ್ ದೇವರಾಜ್​

Prajwal Devaraj: ಈ ಜುಲೈ 4 ರಂದು ಪ್ರಜ್ವಲ್ ದೇವರಾಜ್​ ಹುಟ್ಟುಹಬ್ಬ, ಆದರೆ ಈ ಬಗ್ಗೆ ವಿಡಿಯೋವೊಂದನ್ನು ನಟ ಹಂಚಿಕೊಂಡಿದ್ದು, ಈ ಬಾರಿ ಹುಟ್ಟುಹಬ್ಬ ಆಚರಣೆ ಬೇಡ ಎಂದಿದ್ದಾರೆ.

  • Share this:

ಡೈನಾಮಿಕ್​ ಪ್ರಿನ್ಸ್​ (Dynamic Prince) ಪ್ರಜ್ವಲ್ ದೇವರಾಜ್​ (Prajwal Devaraj) ಅವರು ಇನ್ನೇನು 35ನೇ ವರ್ಷಕ್ಕೆ ಕಾಲಿಡಲಿದ್ದಾರೆ. ಆದರೆ ಈ ಸಲ ಅಭಿಮಾನಿಗಳ (Fans)  ಕಾರಣದಿಂದಾಗಿ ಪ್ರಜ್ವಲ್​ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ. ಕಳೆದ ಬಾರಿ ಕೂಡ ಕೊರೊನಾ (Corona) ಕಾರಣದಿಂದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುವುದಿಲ್ಲ ಎಂದಿದ್ದರು. ಈ ಬಾರಿ ಅಭಿಮಾನಿಯೊಬ್ಬರ ಪ್ರೀತಿಗಾಗಿ ಈ ನಿರ್ಧಾರ ಮಾಡಿದ್ದಾರೆ. ಇದು ಅಭಿಮಾನಿಗಳಿಗೆ ಬೇಸರ ತರಿಸಿದರೂ ಸಹ, ನಟನ ನಿರ್ಧಾರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.  


ವಿಡಿಯೋ ಮೂಲಕ ಅಭಿಮಾನಿಗಳಲ್ಲಿ ಮನವಿ


ಈ ಜುಲೈ 4 ರಂದು ಪ್ರಜ್ವಲ್ ದೇವರಾಜ್​ ಹುಟ್ಟುಹಬ್ಬ, ಆದರೆ ಈ ಬಗ್ಗೆ ವಿಡಿಯೋವೊಂದನ್ನು ನಟ ಹಂಚಿಕೊಂಡಿದ್ದು, ಈ ಬಾರಿ ಹುಟ್ಟುಹಬ್ಬ ಆಚರಣೆ ಬೇಡ ಎಂದಿದ್ದಾರೆ. ಹೌದು, ಇತ್ತೀಚೆಗಷ್ಟೇ ಪ್ರಜ್ವಲ್ ಅವರ ಅಪ್ಪಟ ಅಭಿಮಾನಿ ಸತೀಶ್ ಎಂಬುವವರು ನಿಧನರಾಗಿದ್ದು, ಈ ಹಿನ್ನಲೆ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ ಎಂದು ನಟ ಪ್ರಜ್ವಲ್ ದೇವರಾಜ್ ತಿಳಿಸಿದ್ದಾರೆ.


ವಿಡಿಯೋದಲ್ಲಿ, ಈ ವರ್ಷವೂ ಕೂಡ ನಾನು ಬರ್ತಡೇ ಆಚರಿಸಿಕೊಳ್ಳುತ್ತಿಲ್ಲ. ಪ್ರತಿ ವರ್ಷ ನನ್ನ ದಿನವನ್ನು ಹಬ್ಬವಾಗಿ ನೀವು ಸಲೆಬ್ರೇಟ್ ಮಾಡುತ್ತಿದ್ದೀರಿ. ನನಗೆ ಸಾಕಷ್ಟು ಪ್ರೀತಿಯನ್ನ ನೀಡಿದ್ದೀರಿ. ಕಳೆದ ಬಾರಿ ಕೂಡ ಕೊರೊನಾ ಕಾರಣದಿಂದ ನನ್ನ ಜನ್ಮದಿನವನ್ನು ಆಚರಿಸಿಕೊಂಡಿರಲಿಲ್ಲ. ಅಭಿಮಾನಿಗಳು ನನಗೆ ನೀಡುವ ಪ್ರಿತಿಯನ್ನು ನಾನು ಮರಳಿ ಕೊಡಬೇಕು. ಇತ್ತೀಚೆಗಷ್ಟೇ ನನಗೆ ಬಹಳ ಆಪ್ತವಾಗಿದ್ದ ನನ್ನ ಅಭಿಮಾನಿ ಸತೀಶ್ ನಮ್ಮೆಲ್ಲರನ್ನು ಬಿಟ್ಟು ಹೋಗಿದ್ದಾರೆ. ಹಾಗಾಗಿ ಈ ವರ್ಷ ಹುಟ್ಟುಹಬ್ಬ ಬೇಡ ಎಂದು ಪ್ರಜ್ವಲ್ ಅಭಿಮಾನಿಗಳ ಬಳಿ ಮನವಿ ಮಾಡಿದ್ದಾರೆ. ಅಭಿಮಾನಿಗಳಿಗೆ ಸ್ವಲ್ಪ ಬೇಸರವಾಗಿದ್ದರೂ ಸಹ ನೆಚ್ಚಿನ ನಟನ ಈ ಅದ್ಭುತ ನಿರ್ಧಾರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ
ಇದನ್ನೂ ಓದಿ: ಪವಿತ್ರಾ ಲೋಕೇಶ್ ಕತ್ತಲ್ಲಿ ನರೇಶ್‌ ಅಮ್ಮನ ನೆಕ್ಲೆಸ್ ಇದೆಯಾ? ರಮ್ಯಾ ರಘುಪತಿಯಿಂದ ಗಂಭೀರ ಆರೋಪ


ಇನ್ನು ಪ್ರಜ್ವಲ್ ದೇವರಾಜ್​ ಮಾತ್ರವಲ್ಲದೇ ಇಂದು ಜನ್ಮದಿನ ಆಚರಿಸಿಕೊಳ್ಳುತ್ತಿರುವ ಗೋಲ್ಡನ್ ಸ್ಟಾರ್ ಗಣೇಶ್​ ಕೂಡ ಹುಟ್ಟುಹಬ್ಬವನ್ನು ಅಭಿಮಾನಿಗಳ ಜೊತೆ ಆಚರಿಸಿಕೊಳ್ಳುತ್ತಿಲ್ಲ. ಇದಕ್ಕೆ ಅವರು ಕಾರಣವನ್ನೂ ನೀಡಿದ್ದಾರೆ. ಅಲ್ಲದೇ ಸಾಮಾಜಿಕ ಜಾಲತಾಣ ಟ್ವಿಟರ್​ ನಲ್ಲಿ ತಮ್ಮ ಫ್ಯಾನ್ಸ್ ಗೆ ಭಾವನಾತ್ಮಕ ಪತ್ರವನ್ನು ಬರೆದಿದ್ದಾರೆ. ಈ ಮೂಲಕ ಈ ಬಾರಿ ನಿಮ್ಮೊಂದಿಗೆ ಜನ್ಮದಿನವನ್ನು ಆಚರಿಸಿಕೊಳ್ಳಲಾಗುತ್ತಿಲ್ಲ ಕ್ಷಮೆಕೋರಿದ್ದಾರೆ.


ಗೋಲ್ಡನ್​ ಸ್ಟಾರ್​ ಕೂಡ ಬರ್ತ್ ಡೇ ಆಚರಿಸಿಕೊಳ್ಳುತ್ತಿಲ್ಲ


ಟ್ವಿಟರ್​ ಮೂಲಕ ಅಭಿಮಾನಿಗಳಿಗೆ ಪತ್ರ ಬರೆದಿರುವ ಅವರು, ‘ನನ್ನ ಕಲಾ ಬದುಕಿನ ಆರಂಭದ ದಿನಗಳಿಂದ ಶುರುವಾಗಿ ಇಲ್ಲಿಯ ತನಕ ನನ್ನಈ ಬಣ್ಣದ ಹಾದಿಯ ಪ್ರತಿ ಹೆಜ್ಜೆಯಲ್ಲೂ ನನ್ನೊಂದಿಗೆ ಹೆಜ್ಜೆ ಹಾಕಿ, ನನ್ನ ಯಶಸ್ಸನ್ನು ನಿಮ್ಮದೇ ಯಶಸ್ಸು ಎನ್ನುವಂತೆ ಸಂಭ್ರಮಿಸಿ ನೀವೆಲ್ಲರೂ ಖುಷಿಪಟ್ಟಿದ್ದೀರಿ. ಪ್ರತೀ ವರ್ಷವೂ ನನ್ನ ಹುಟ್ಟಿದ ದಿನದಂದು ರಾಜ್ಯದ ಮೂಲೆ ಮೂಲೆಗಳಿಂದ ನನ್ನ ಮನೆಯ ಬಳಿ ಬಂದು ಅತೀವ ಅಭಿಮಾನದಿಂದ ನನ್ನನ್ನು ಆಲಂಗಿಸಿ ಹರಸಿದ್ದೀರಿ. ನನ್ನೆಡೆಗಿನ ನಿಮ್ಮ ಈ ನಿಷ್ಕಲ್ಮಶ ಪ್ರೀತಿಭರಿತ ಅಭಿಮಾನಕ್ಕೆ ನಾನು ಸದಾ ಋಣಿ.


ನನ್ನ ಹುಟ್ಟುಹಬ್ಬದ ನೆಪದಲ್ಲಾದರೂ ನಾನು ನಿಮ್ಮನ್ನೆಲ್ಲಾ ವೈಯಕ್ತಿಕವಾಗಿ ಭೇಟಿ ಮಾಡಿ, ನಿಮ್ಮೆಲ್ಲರ ಪ್ರೀತಿಯನ್ನು ಅಸ್ವಾದಿಸುತ್ತಾ ನಿಮ್ಮೊಡನೆಯೇ ಸಂಭ್ರಮಿಸಿ, ನಿಮ್ಮ ಅಭಿಮಾನದ ಸವಿಯನ್ನು ಇಡೀ ದಿನ ಖುಷಿಯಿಂದ ಸವಿಯುವ ಹಂಬಲ ನನಗೂ ಇದೆ. ಆದರೆ ಕಳೆದ ಬಾರಿಯಂತೆ ಈ ಬಾರಿಯೂ ಸಹ ಸಮಯ ಅದಕ್ಕೆ ಅವಕಾಶ ಮಾಡಿಕೊಡುತ್ತಿಲ್ಲ. ಕೆಲ ಅನಿವಾರ್ಯ ಕಾರಣಗಳಿಂದಾಗಿ ನಾನು ನನ್ನ ಹುಟ್ಟಿದ ದಿನದಂದು, ಅಂದರೆ ಜುಲೈ 2ರಂದು ಮನೆಯಲ್ಲಿರಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ನಿಮ್ಮೆಲ್ಲರ ಕ್ಷಮೆ ಕೋರುತ್ತೇನೆ.


ಇದನ್ನೂ ಓದಿ: ಸೋಷಿಯಲ್ ಮೀಡಿಯಾದಲ್ಲಿ ಲೀಕ್ ಆಯ್ತು ಜೂ.ಎನ್​ಟಿಆರ್​ ನಂಬರ್, ಕಾಲ್ ಮಾಡಿ ಬೆಸ್ತು ಬಿದ್ದ ಫ್ಯಾನ್ಸ್


ನೀವೆಲ್ಲರೂ ಅಭಿಮಾನದಿಂದ ಪ್ರತೀ ಬಾರಿ ನನಗಾಗಿ ತರುವ ಹಾರ, ತುರಾಯಿ, ಕೇಕ್‌ ಇತ್ಯಾದಿಗಳ ಬದಲಿಗೆ, ಅಗತ್ಯವಿರುವ ಕಡೆ ನಿಮ್ಮ ಕೈಲಾದಷ್ಟು ನೆರವು ನೀಡುವ ಮೂಲಕ ನಿಮ್ಮೆಲ್ಲರ ಅಕ್ಕರೆಯ ಹಾರೈಕೆಗಳನ್ನು ನನಗೆ ತಲುಪಿಸಿಬಿಡಿ' ಎಂದು ನಟ ಗಣೇಶ್ ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ.

Published by:Sandhya M
First published: