ಕೆಜಿಎಫ್ 2 (KGF 2) ಸಿನಿಮಾದ ಬಳಿಕ ಪ್ರಶಾಂತ್ ನೀಲ್ (Prashanth Neel) ವಿಶ್ವದಾದ್ಯಂತ ಫೇಮಸ್ ಆಗಿದ್ದಾರೆ. ಇವರ ಮುಂದಿನ ಸಿನಿಮಾಗಾಗಿ ಅಭಿಮಾನಿಗಳು (Fans) ಕಾದು ಕುಳಿತಿದ್ದಾರೆ. ನಿರ್ದೇಶಕ ಪ್ರಶಾಂತ್ ನೀಲ್ ಈಗಾಗಲೇ ಪ್ರಭಾಸ್ ಜೊತೆ ಸಲಾರ್ ಸಿನಿಮಾ ಮಾಡುತ್ತಿದ್ದಾರೆ. ಇನ್ನೂ ಶೂಟಿಂಗ್ ಹಂತದಲ್ಲಿ ಸಿನಿಮಾ ಇದೆ. ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್, ಪ್ಯಾನ್ ಇಂಡಿಯಾ ಸೂಪರ್ ಸ್ಟಾರ್ ಪ್ರಭಾಸ್ (Prabhas) ಕಾಂಬಿನೇಷನ್ ನೋಡುವುದಕ್ಕೆ ಇಡೀ ವಿಶ್ವವೇ ಕಾದು ಕೂತಿದೆ. ಈಗ ಚಿತ್ರದ ಬಗ್ಗೆ ಹೊಸ ಅಪ್ಡೇಟ್ ಬಂದಿದೆ. ಅದು ಪ್ರಭಾಸ್ ರೋಲ್ ಬಗ್ಗೆ.
ಡಬಲ್ ರೋಲ್ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಪ್ರಭಾಸ್
ಸಲಾರ್ ಸಿನಿಮಾದಲ್ಲಿ ಪ್ರಭಾಸ್ ಡಬಲ್ ರೋಲ್ ಮಾಡಲಿದ್ದಾರಂತೆ. ಹೌದು, ಆದರೆ ಈ ಎರಡು ಪಾತ್ರಗಳನ್ನು ವಿರುದ್ದವಾಗಿರುತ್ತದೆ ಎಂಬ ಮಾಹಿತಿ ಇದೆ. ಈಗಾಗಲೇ ಶೂಟಿಂಗ್ ಭರದಿಂದ ಸಾಗಿದ್ದು, ಹೊಸ ಅವತಾರದಲ್ಲಿ ಪ್ರಭಾಸ್ ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಈ ಮೊದಲು ಎಸ್ ಎಸ್ ರಾಜಮೌಳಿ ನಿರ್ದೇಶನದ ಬಾಹುಬಲಿ ಸಿನಿಮಾದಲ್ಲಿ ಸಹ ಪ್ರಭಾಸ್ ತಂದೆ ಹಾಗೂ ಮಗನ ರೋಲ್ನಲ್ಲಿ ಕಾಣಿಸಿಕೊಂಡಿದ್ದರು. ಆ ಸಿನಿಮಾದಲ್ಲಿ ಒಟ್ಟಿಗೆ ಕಾಣಿಸಿಕೊಂಡಿರಲಿಲ್ಲ. ಆದರೆ ಈ ಬಾರಿ ಸಲಾರ್ ಸಿನಿಮಾದಲ್ಲಿ ದ್ವಿಪಾತ್ರದಲ್ಲಿ ಒಟ್ಟಿಗೆ ಕಾಣಿಸಿಕೊಳ್ಳಲಿದ್ದಾರಂತೆ.
ಇನ್ನು ಕಳೆದ ಬಾರಿ ಈ ಸಿನಿಮಾದ ನಿರ್ದೇಶಕ ಪ್ರಶಾಂತ್ ನೀಲ್ ಪ್ರಭಾಸ್ ತೂಕ ಕಡಿಮೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದ್ದರಂತೆ. ಅದೇ ರೀತಿ ಪ್ರಭಾಸ್ ಸಹ ತೂಕ ಇಳಿಸಿ ಪಾತ್ರಕ್ಕೆ ತಕ್ಕಂತೆ ರೆಡಿ ಆಗಿದ್ದಾರೆ. ಇನ್ನು ಕೆಲ ಮಾಹಿತಿಗಳ ಪ್ರಕಾರ ಕೆಜಿಎಫ್ ರೀತಿಯೇ ಸಲಾರ್ ಚಿತ್ರವನ್ನು ಸಹ ಎರಡು ಭಾಗಗಳಾಗಿ ಬಿಡುಗಡೆ ಮಾಡಲಾಗುತ್ತದೆ ಎಂದು ಹೇಳಲಾಗುತ್ತಿದೆ. ಪ್ರಶಾಂತ್ ನೀಲ್ 'ಸಲಾರ್' ಸಿನಿಮಾವನ್ನು ಮತ್ತೊಂದು ಲೆವೆಲ್ಗೆ ತೆಗೆದುಕೊಂಡು ಹೋಗಲು ನಿರ್ಧರಿಸಿದ್ದಾರೆ ಅನ್ನುವ ಮಾತುಗಳು ಕೇಳಿಬರುತ್ತಿವೆ.
ಇದನ್ನೂ ಓದಿ: ಸದ್ಯದಲ್ಲೇ ಸೆಟ್ಟೇರಲಿದೆ ಕಾಫಿ ಕಿಂಗ್ ಬಯೋಪಿಕ್, ತೆರೆಯ ಮೇಲೆ ಕಾಫಿ ಡೇ ಸಿದ್ಧಾರ್ಥ್ ಜೀವನಗಾಥೆ
ಪ್ರಶಾಂತ್ ನೀಲ್ ಜನರಿಗೆ ಅದ್ಧೂರಿಯಾಗಿ ಸಿನಿಮಾಗಳನ್ನು ತೋರಿಸುತ್ತಾರೆ. ಇದಕ್ಕೆ 'ಕೆಜಿಎಫ್' ಸಿನಿಮಾನೇ ಸಾಕ್ಷಿ. ಕೆಜಿಎಫ್ 2 ಸಹ ಹಿಟ್ ಆದ ಬೆನ್ನಲ್ಲೆ ಪ್ರಭಾಸ್ ಜೊತೆ ಮಾಡುತ್ತಿರುವ 'ಸಲಾರ್' ಸಿನಿಮಾವನ್ನೂ ಎರಡು ಭಾಗಗಳಲ್ಲಿ ರಿಲೀಸ್ ಮಾಡಲು ಆಲೋಚಿಸಿದ್ದು, 'ಕೆಜಿಎಫ್' ನಂತೆ ಬ್ರ್ಯಾಂಡ್ ಮಾಡಲು ನಿರ್ಧರಿಸಿದ್ದಾರೆ ಎಂಬ ಮಾತುಗಳಿಗೆ ಮತ್ತೊಮ್ಮೆ ರೆಕ್ಕೆ ಪುಕ್ಕ ಬಂದಿದೆ.
ಈ ವರ್ಷ ಬಿಡುಗಡೆಯಾಗಲ್ವಂತೆ ಸಿನಿಮಾ
ಈ ಬಗ್ಗೆ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲಂಸ್ ಆಗಲಿ, ಪ್ರಭಾಸ್ ಆಗಲಿ, ಇಲ್ಲಾ ಪ್ರಶಾಂತ್ ನೀಲ್ ಆಗಲಿ ಅಧಿಕೃತ ಮಾಹಿತಿಯನ್ನು ನೀಡಿಲ್ಲ. ಆದರೆ, ಟಾಲಿವುಡ್ ಕೆಲ ಮಾಧ್ಯಮಗಳಲ್ಲಿ ಈ ಬಗ್ಗೆ ವರದಿ ಬಂದಿವೆ, ಇದೀಗ ಕೆಜಿಎಫ್ 2 ಸಕ್ಸಸ್ ನಂತರ ಮತ್ತೆ ಮಾತು ಕೇಳಿ ಬಂದಿದೆ ಎನ್ನಲಾಗುತ್ತಿದೆ.
ಇದನ್ನೂ ಓದಿ: ಸ್ತ್ರೀ ರಕ್ಷಣೆ ಕಾನೂನು ಪುರುಷರಿಗೆ ಮಾರಕವೇ? ವೆಡ್ಡಿಂಗ್ ಗಿಫ್ಟ್ ಸಿನಿಮಾ ಟ್ರೇಲರ್ನಲ್ಲಿ ಏನ್ ಹೇಳ್ತಿದ್ದಾರೆ ನೋಡಿ
ಹಾಗೆಯೇ ಮೊನ್ನೆ ಬಂದ ಅಪ್ಡೇಟ್ ಪ್ರಕಾರ ಇದೇ ವರ್ಷಾಂತ್ಯದಲ್ಲಿ ಸಿನಿಮಾ ಶೂಟಿಂಗ್ ಅಂತ್ಯವಾಗಲಿದೆ. ಆದರೆ ಈ ವರ್ಷ ಚಿತ್ರ ತೆರೆಗೆ ಬರುತ್ತಿಲ್ಲ ಎಂಬುದು ಲೇಟೆಸ್ಟ್ ಮಾಹಿತಿಯಾಗಿದೆ. ಇದುವರೆಗೆ ಚಿತ್ರದ ಶೇ.30ರಷ್ಟು ಚಿತ್ರೀಕರಣ ಮಾತ್ರ ನಡೆದಿದ್ದು, ಉಳಿದ ಚಿತ್ರೀಕರಣ ಪೂರ್ಣಗೊಳ್ಳಲು ಸಾಕಷ್ಟು ಸಮಯ ಹಿಡಿಯಲಿದೆ ಎನ್ನಲಾಗುತ್ತಿದೆ. 'ಸಲಾರ್' ನಿರ್ಮಾಪಕ ವಿಜಯ್ ಕಿರಗಂದೂರು ಕೂಡ ಈ ವರ್ಷಾಂತ್ಯಕ್ಕೆ ಸಂಪೂರ್ಣ ಚಿತ್ರೀಕರಣ ಪೂರ್ಣಗೊಳ್ಳಲಿದೆ ಎಂದು ಇತ್ತೀಚೆಗೆ ಹೇಳಿದ್ದರು. ಇದರೊಂದಿಗೆ 2022ರ ಅಂತ್ಯದೊಳಗೆ ಚಿತ್ರದ ಚಿತ್ರೀಕರಣ ಪೂರ್ಣಗೊಳ್ಳುತ್ತದೆ ಎಂದು ಹೇಳಲಾಗುತ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ