ಹೊಸ ಲ್ಯಾಂಬೊರ್ಗಿನಿ ಖರೀದಿಸಿದ ಬಾಹುಬಲಿ! ಪ್ರಭಾಸ್ ಬಳಿ ಇರುವ ಕಾರುಗಳೆಷ್ಟು ಗೊತ್ತಾ?

ಇನ್ನು ಕೆಜಿಎಫ್ ಖ್ಯಾತಿಯ ಮಾಸ್ಟರ್ ಡೈರೆಕ್ಟರ್ ಪ್ರಶಾಂತ್ ನೀಲ್ ನಿರ್ದೇಶಿಸಲಿರುವ ಹಾಗೂ ಕನ್ನಡದ ಹೊಂಬಾಳೆ ಫಿಲಂನ ವಿಜಯ್ ಕಿರಗಂದೂರ್ ನಿರ್ಮಿಸಲಿರುವ ಸಲಾರ್ ಚಿತ್ರದಲ್ಲೂ ಪ್ರಭಾಸ್ ಹೀರೋ ಆಗಿದ್ದಾರೆ. ಇದೇ ಜನವರಿ ತಿಂಗಳಲ್ಲಿ ಸಿನಿಮಾದ ಮುಹೂರ್ತ ಕೂಡ ನೆರವೇರಿದ್ದು, ಚಿತ್ರೀಕರಣವೂ ಪ್ರಾರಂಭವಾಗಿದೆ.

ಪ್ರಭಾಸ್ ಖರೀದಿಸಿರುವ ಲ್ಯಾಂಬೊರ್ಗಿನಿ ಕಾರು.

ಪ್ರಭಾಸ್ ಖರೀದಿಸಿರುವ ಲ್ಯಾಂಬೊರ್ಗಿನಿ ಕಾರು.

  • Share this:
ಬಾಹುಬಲಿ ಸರಣಿಯ ಮೂಲಕ ಭಾರತದಾದ್ಯಂತ ಮನೆ ಮಾತಾದ ನಟ ಡಾರ್ಲಿಂಗ್ ಪ್ರಭಾಸ್. ಆ ಬಾಹುಬಲಿ ದಿ ಬಿಗಿನಿಂಗ್ ಹಾಗೂ ಬಾಹುಬಲಿ ದಿ ಕನ್‍ಕ್ಲೂಷನ್ ಸಿನಿಮಾಗಳ ಸೂಪರ್ ಸಕ್ಸಸ್ ಬಳಿಕ ನ್ಯಾಷನಲ್ ಸ್ಟಾರ್ ಎನಿಸಿಕೊಂಡ ಖ್ಯಾತಿ ಪ್ರಭಾಸ್‍ಗೆ ಸಲ್ಲುತ್ತದೆ. ಇಂತಹ ಪ್ರಭಾಸ್‍ಗೆ ಎಲ್ಲ ಸೂಪರ್​ಸ್ಟಾರ್​ಗಳಿಗೂ ಇರುವಂತೆಯೇ ಕಾರ್ ಕ್ರೇಜ್ ತುಂಬಾ ಇದೆ. ಅದಕ್ಕೆ ಸಾಕ್ಷಿ ಎಂಬಂತೆ ಇತ್ತೀಚೆಗಷ್ಟೇ ಡಾರ್ಲಿಂಗ್ ಪ್ರಭಾಸ್ ಐಷಾರಾಮಿ ಸ್ಪೋರ್ಟ್ಸ್ ಕಾರ್ ಲ್ಯಾಂಬೊರ್ಗಿನಿ ಖರೀದಿಸಿದ್ದಾರೆ.

ಹೌದು, ಪ್ರಭಾಸ್ ಈಗ ಬರೋಬ್ಬರಿ 6 ಕೋಟಿ ರೂಪಾಯಿ ಮೌಲ್ಯದ ಲ್ಯಾಂಬೊರ್ಗಿನಿ ಸ್ಫೋರ್ಟ್ಸ್ ಕಾರ್ ಮಾಲೀಕರಾಗಿದ್ದಾರೆ. ಆರೇಂಜ್ ಬಣ್ಣದ ಈ ಲ್ಯಾಂಬೊರ್ಗಿನಿ  ಅವೆಂಟಡೋರ್ ರೋಡ್‍ಸ್ಟರ್ 6498 ಸಿಸಿ ಸಾಮರ್ಥ್ಯ ಹೊಂದಿದ್ದು, 730 ಬಿಎಚ್‍ಪಿ ಪವರ್ ಹೊಂದಿದೆ. ಮಾತ್ರವಲ್ಲ ಕನ್ವರ್ಟಿಬಲ್ ಆಗಿರುವ ಈ ಲ್ಯಾಂಬೊರ್ಗಿನಿ  ಅವೆಂಟಡೊರ್ ರೋಡ್‍ಸ್ಟರ್ ಹಲವು ವಿಶೇಷತೆಗಳಿಂದ ಕೂಡಿದೆ.

ಈ ಲ್ಯಾಂಬೊರ್ಗಿನಿ ಜೊತೆಗೆ ಪ್ರಭಾಸ್ ಅವರ ಮನೆಯಲ್ಲಿ ಇನ್ನೂ ಹಲವು ಐಷಾರಾಮಿ ಕಾರುಗಳಿವೆ. ಬರೋಬ್ಬರಿ 9 ಕೋಟಿ ರೂಪಾಯಿ ಮೌಲ್ಯದ, ಭಾರತದಲ್ಲಿ ಕೆಲವೇ ಸಂಖ್ಯೆಯಲ್ಲಿರುವ ರೋಲ್ಸ್ ರಾಯ್ಸ್ ಫ್ಯಾಂಟಮ್ ಕೂಡ ಪ್ರಭಾಸ್ ಬಳಿಯಿದೆ. ಜತೆಗೆ ಬ್ರಿಟನ್ ರೇಂಜ್ ರೋವರ್ ಎಸ್‍ವಿ ಆಟೋಬಯೋಗ್ರಫಿಯಲ್ಲಿ ಕಸ್ಟಮೈಸ್ ಹಾಗೂ ಡಿಸೈನ್ ಮಾಡಿಸಿ ಭಾರತಕ್ಕೆ ಆಮದು ಮಾಡಿಕೊಂಡ ಕಸ್ಟಮ್ ಬಿಲ್ಟ್ ರೇಂಜ್ ರೋವರ್, ಸುಮಾರು 70 ಲಕ್ಷ ರೂಪಾಯಿ ಬೆಲೆಯ ಬಿಎಂಡಬ್ಲ್ಯೂ ಎಕ್ಸ್ 3, ಹಾಗೇ ಸುಮಾರು 2 ಕೋಟಿ ರೂಪಾಯಿ ಬೆಲೆಯ ಜಾಗ್ವಾರ್ ಎಕ್ಸ್‍ಜೆಆರ್ ಕೂಡ ಪ್ರಭಾಸ್ ಬಳಿಯಿದೆ.

ಇನ್ನು ಸಿನಿಮಾಗಳ ವಿಷಯಕ್ಕೆ ಬರುವುದಾದರೆ ಪ್ರಭಾಸ್ ಕೈಯಲ್ಲಿ ಸದ್ಯ ಮೂರು ಚಿತ್ರಗಳಿವೆ. 2019ರಲ್ಲಿ ರಿಲೀಸ್ ಆದ ಸಾಹೋ ಸೋಲಿನ ಬಳಿಕ ಎರಡು ವರ್ಷ ಅವರು ನಟಿಸಿದ ಯಾವುದೇ ಸಿನಿಮಾ ರಿಲೀಸ್ ಆಗಿಲ್ಲ. ಆದರೆ ರಾಧಾಕೃಷ್ಣ ಕುಮಾರ್ ನಿರ್ದೇಶಿಸುತ್ತಿರುವ ರಾಧೇಶ್ಯಾಮ್ ಚಿತ್ರದ ಕೆಲಸಗಳು ಅಂತಿಮ ಹಂತದಲ್ಲಿವೆ. ಇದೊಂದು ರೊಮ್ಯಾಂಟಿಕ್ ಡ್ರಾಮಾ ಚಿತ್ರವಾಗಿದ್ದು ಪ್ರಭಾಸ್‍ಗೆ ಪೂಜಾ ಹೆಗ್ಡೆ ನಾಯಕಿಯಾಗಿದ್ದಾರೆ. ಎಲ್ಲವೂ ಅಂದುಕೊಂಡಂತಾದರೆ ಇದೇ ಜುಲೈ 30ರಂದು ರಾಧೇಶ್ಯಾಮ್ ರಿಲೀಸ್ ಆಗಲಿದೆ.

ಪ್ರಭಾಸ್ ಖರೀದಿಸಿರುವ ಲ್ಯಾಂಬೊರ್ಗಿನಿ ಕಾರು.


ಇದನ್ನು ಓದಿ: ಹಾಲಿವುಡ್‍ನತ್ತ ಮತ್ತೊಬ್ಬ ಬಾಲಿವುಡ್ ಸುಂದರಿ....ಆಕ್ಷನ್ ಕ್ವೀನ್ ಆಗಲಿದ್ದಾರೆ ಜಾಕ್‍ಲೀನ್!

ಇನ್ನು ಕೆಜಿಎಫ್ ಖ್ಯಾತಿಯ ಮಾಸ್ಟರ್ ಡೈರೆಕ್ಟರ್ ಪ್ರಶಾಂತ್ ನೀಲ್ ನಿರ್ದೇಶಿಸಲಿರುವ ಹಾಗೂ ಕನ್ನಡದ ಹೊಂಬಾಳೆ ಫಿಲಂನ ವಿಜಯ್ ಕಿರಗಂದೂರ್ ನಿರ್ಮಿಸಲಿರುವ ಸಲಾರ್ ಚಿತ್ರದಲ್ಲೂ ಪ್ರಭಾಸ್ ಹೀರೋ ಆಗಿದ್ದಾರೆ. ಇದೇ ಜನವರಿ ತಿಂಗಳಲ್ಲಿ ಸಿನಿಮಾದ ಮುಹೂರ್ತ ಕೂಡ ನೆರವೇರಿದ್ದು, ಚಿತ್ರೀಕರಣವೂ ಪ್ರಾರಂಭವಾಗಿದೆ. ಈ ಆಕ್ಷನ್ ಥ್ರಿಲ್ಲರ್ ಚಿತ್ರದಲ್ಲಿ ನಾಯಕ ಪ್ರಭಾಸ್‍ಗೆ ಶ್ರುತಿ ಹಾಸನ್ ಜೋಡಿಯಾಗಿದ್ದು, ಸಿನಿಮಾ 2022ರ ಏಪ್ರಿಲ್ 14ರಂದು ತೆರೆಗೆ ಬರುವ ನಿರೀಕ್ಷೆಯಿದೆ.

ಇದರ ಜೊತೆ ಜೊತೆಗೆ ಪ್ರಭಾಸ್ ನಟಿಸಲಿರುವ ಮತ್ತೊಂದು ಬಹುನಿರೀಕ್ಷಿತ ಸಿನಿಮಾ ಆದಿಪುರುಷ್. ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಅತಿ ದೊಡ್ಡ ಬಜೆಟ್ ಸಿನಿಮಾ ಎನ್ನಲಾಗಿರುವ ಈ ಚಿತ್ರದಲ್ಲಿ ರಾಮಾಯಣದ ಕಥೆಗೆ ಥ್ರೀಡಿ ಸಿನಿಮಾ ರೂಪ ನೀಡಲಾಗುತ್ತಿದೆ. ಈಗಾಗಲೇ ಚಿತ್ರೀಕರಣ ಪೂರ್ವ ಕೆಲಸಗಳು ಭರದಿಂದ ಸಾಗಿದ್ದು, ಇನ್ನು ಕೆಲವೇ ದಿನಗಳಲ್ಲಿ ಶೂಟಿಂಗ್ ಪ್ರಾರಂಭವಾಗಲಿದೆ. ಚಿತ್ರದಲ್ಲಿ ಶ್ರೀರಾಮನಾಗಿ ಪ್ರಭಾಸ್ ನಟಿಸುತ್ತಿದ್ದು, ಸೀತೆಯಾಗಿ ಬಾಲಿವುಡ್ ನಟಿ ಕೃತಿ ಸನೋನ್ ಅಭಿನಯಿಸಲಿದ್ದಾರೆ. ಹಾಗೂ ಲಕ್ಷ್ಮಣನಾಗಿ ಸನ್ನಿ ಸಿಂಗ್ ನಟಿಸುತ್ತಿದ್ದು ರಾವಣನಾಗಿ ಸೈಫ್ ಅಲಿ ಖಾನ್ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾ ಕೂಡ 2022ರ ಆಗಸ್ಟ್ ತಿಂಗಳಲ್ಲಿ ತೆರೆಗೆ ಬರುವ ನಿರೀಕ್ಷೆಯಿದೆ.
Published by:HR Ramesh
First published: