• Home
  • »
  • News
  • »
  • entertainment
  • »
  • Adipurush: ಆದಿಪುರುಷ್ ಸಿನಿಮಾ ರಿಲೀಸ್ ಡೇಟ್​ ಮುಂದಕ್ಕೆ; ನಿರ್ದೇಶಕ ಓಂ ರಾವತ್ ಹೇಳಿದ್ದೇನು?

Adipurush: ಆದಿಪುರುಷ್ ಸಿನಿಮಾ ರಿಲೀಸ್ ಡೇಟ್​ ಮುಂದಕ್ಕೆ; ನಿರ್ದೇಶಕ ಓಂ ರಾವತ್ ಹೇಳಿದ್ದೇನು?

ಆದಿಪುರುಷ್ ಚಿತ್ರದ ರಿಲೀಸ್ ದಿನಾಂಕ ಮುಂದಕ್ಕೆ

ಆದಿಪುರುಷ್ ಚಿತ್ರದ ರಿಲೀಸ್ ದಿನಾಂಕ ಮುಂದಕ್ಕೆ

ಬಹುನಿರೀಕ್ಷಿತ ಆದಿಪುರುಷ್ ಚಿತ್ರದ ರಿಲೀಸ್ ದಿನಾಂಕವನ್ನು ಮುಂದೂಡಲಾಗಿದೆ. ಟೀಸರ್ ನೋಡಿದ ಜನ ಕಳಪೆ ಗ್ರಾಫಿಕ್ಸ್ ಎಂದು ಬೇಸರಗೊಂಡಿದ್ದಾರಂತೆ. ಅದಕ್ಕೆ ಉತ್ತಮ ಗ್ರಾಫಿಕ್ಸ್ ಗಾಗಿ ಚಿತ್ರದ ದಿನಾಂಕವನ್ನು ಮುಂದೂಡಲಾಗಿದೆ ಎಂದು ತಿಳಿದು ಬಂದಿದೆ.

  • News18 Kannada
  • Last Updated :
  • Hyderabad, India
  • Share this:

    ಬಹುನಿರೀಕ್ಷಿತ ಆದಿಪುರುಷ್ (Adipurush) ಚಿತ್ರದ ರಿಲೀಸ್ (Release) ದಿನಾಂಕವನ್ನು ಮುಂದೂಡಲಾಗಿದೆ (Postponed). 2023 ಜನವರಿಯಲ್ಲಿ ಈ ಚಿತ್ರ ಬಿಡುಗಡೆ ಆಗಬೇಕಿತ್ತು. ಚಿತ್ರದ ಬಿಡುಗಡೆ ದಿನಾಂಕವನ್ನು ಮುಂದೂಡಲಾಗಿದೆ ಎಂದು ನಿರ್ದೇಶಕ (Director0 ಓಂ ರಾವತ್ ಹೇಳಿದ್ದಾರೆ. 'ಆದಿಪುರುಷ್ ಚಿತ್ರದಲ್ಲಿ ಬಾಹುಬಲಿ ಖ್ಯಾತಿಯ ಪ್ರಭಾಸ್ (Prabhas) ರಾಮನ (Rama) ಪಾತ್ರ ಮಾಡುತ್ತಿದ್ದಾರೆ. ಪ್ರಭಾಸ್‍ನನ್ನು ರಾಮನನ್ನಾಗಿ ನೋಡಲು ಅಭಿಮಾನಿಗಳು ಕಾತುರದಿಂದ ಕಾಯ್ತಾ ಇದ್ದಾರೆ. ಆದ್ರೆ ಚಿತ್ರವನ್ನು 2023 ಜೂನ್ (June) ತಿಂಗಳಿಗೆ ಬಿಡುಗಡೆ ಮಾಡುವುದಾಗಿ ಚಿತ್ರತಂಡ ತಿಳಿಸಿದೆ. ಟೀಸರ್ ನೋಡಿದ ಜನ ಕಳಪೆ ಗ್ರಾಫಿಕ್ಸ್ ಎಂದು ಬೇಸರಗೊಂಡಿದ್ದಾರಂತೆ. ಅದಕ್ಕೆ ಉತ್ತಮ ಗ್ರಾಫಿಕ್ಸ್ ಗಾಗಿ ಚಿತ್ರದ ದಿನಾಂಕವನ್ನು ಮುಂದೂಡಲಾಗಿದೆ ಎಂದು ತಿಳಿದು ಬಂದಿದೆ.


    ರಾಮಾಯಣದ ಕಥೆ ಆಧಾರಿತ ಚಿತ್ರ
    ರಾಮಾಯಣದ ಕಥೆಯನ್ನು ಆಧಾರ ಇಟ್ಟುಕೊಂಡು ಆದಿಪುರುಷ್ ಚಿತ್ರ ಮಾಡಲಾಗುತ್ತಿದೆ. ಪ್ರಭಾಸ್ ಅವರು ರಾಮನ ಪಾತ್ರ ಮಾಡುತ್ತಿದ್ದಾರೆ. ಸೀತೆಯ ಪಾತ್ರವನ್ನು ಕೃತಿ ಸನೋನ್ ಮಾಡುತ್ತಿದ್ದಾರೆ. ರಾವಣನ ಪಾತ್ರದಲ್ಲಿ ಸೈಫ್ ಅಲಿ ಖಾನ್ ನಟಿಸುತ್ತಿದ್ದಾರೆ. ಚಿತ್ರ ನೋಡಲು ಪ್ರೇಕ್ಷಕರು ಕಾಯುತ್ತಿದ್ದಾರೆ.


    ಆದಿಪುರುಷ್ ತಂಡ ಎಡವಿದ್ದೇಲ್ಲಿ?
    ಆದಿಪುರುಷ್ ಸಿನಿಮಾವೂ ಪೌರಾಣಿಕ ಸಿನಿಮಾವಾಗಿದೆ. ಪೌರಾಣಿಕ ಸಿನಿಮಾಗಳನ್ನು ಕಟ್ಟಿಕೊಡಲು ಅತ್ಯಾಧುನಿಕ ಗ್ರಾಫಿಕ್ಸ್, ತಂತ್ರಜ್ಞಾನ ಬಳಸಬೇಕಾಗುತ್ತದೆ. ಈ ವಿಚಾರದಲ್ಲಿ ಚಿತ್ರತಂಡ ಎಡವಿದೆ. ಕಳಪೆ ಗ್ರಾಫಿಕ್ಸ್ ಬಳಸಿದ್ದಾರೆ ಎಂಬ ಅಪವಾದ ಪಡೆದಿದೆ. ಅದಕ್ಕೆ ಟೈಂ ತೆಗೆದುಕೊಂಡು ಅದನ್ನೆಲ್ಲಾ ಸರಿ ಮಾಡುವ ಪ್ರಯತ್ನ ಮಾಡ್ತಾ ಇದ್ದಾರೆ.


    ಇದನ್ನೂ ಓದಿ: Kamal Haasan Birthday: ಕಮಲ್ ಹಾಸನ್‍ಗೆ ಹುಟ್ಟುಹಬ್ಬದ ಸಂಭ್ರಮ; 35 ವರ್ಷಗಳ ನಂತರ ಒಂದಾದ ಮಣಿರತ್ನಂ-ನಾಯಕನ್ ಜೋಡಿ! 


    ನಿರ್ದೇಶಕ ಓಂ ರಾವತ್ ಈ ರೀತಿ ಹೇಳಿದ್ದಾರೆ
    'ಆದಿಪುರುಷ್ ಒಂದು ಸಿನಿಮಾ ಅಲ್ಲ. ರಾಮನ ಬಗ್ಗೆ ನಮಗೆ ಇರುವ ಭಕ್ತಿ ಮತ್ತು ಸಂಸ್ಕøತಿ-ಇತಿಹಾಸದ ಬಗ್ಗೆ ನಮಗೆ ಇರುವ ಬದ್ಧತೆಯನ್ನು ಇದು ಪ್ರತಿನಿಧಿಸುತ್ತದೆ. ಪ್ರೇಕ್ಷಕರಿಗೆ ಸಂಪೂರ್ಣ ದೃಶ್ಯ ವೈಭವವನ್ನು ನೀಡಲು ಚಿತ್ರತಂಡಕ್ಕೆ ಇನ್ನಷ್ಟು ಸಮಯ ಬೇಕಾಗಿದೆ. ಹಾಗಾಗಿ ಆದಿಪುರುಷ್ ಚಿತ್ರ ಜೂನ್ 16ರಂದು ರಿಲೀಸ್ ಆಗಲಿದೆ. ಭಾರತವು ಹೆಮ್ಮೆ ಪಡುವಂತಹ ಸಿನಿಮಾ ಮಾಡಲು ನಾವು ಪಣತೊಟ್ಟಿದ್ದೇವೆ. ನಾವು ಮುಂದುವರಿಯಲು ನಿಮ್ಮ ಪ್ರೀತಿ, ಬೆಂಬಲ ಇರಲಿ' ಎಂದು ಓಂ ರಾವತ್ ಟ್ವೀಟ್ ಮೂಲಕ ತಿಳಿಸಿದ್ದಾರೆ.


    ಟೀಸರ್ ನೋಡಿ ಬೇಸರ
    ಆದಿಪುರುಷ್ ಚಿತ್ರದ ಟೀಸರ್ ಅಕ್ಟೋಬರ್ 2ರಂದು ಅದ್ದೂರಿಯಾಗಿ ಅಯೋಧ್ಯೆಯಲ್ಲಿ ಬಿಡುಗಡೆ ಆಗಿತ್ತು. ಇದನ್ನು ಎಲ್ಲರೂ ಮೆಚ್ಚಿಕೊಳ್ಳುತ್ತಾರೆ ಎಂದು ನಿರ್ದೇಶಕರು ಅಂದುಕೊಂಡಿದ್ರು. ಆದ್ರೆ ಟೀಸರ್  ನಲ್ಲಿ ಕಳಪೆ ಗ್ರಾಫಿಕ್ಸ್ ಇದೆ ಎಂಬ ಕಾರಣಕ್ಕೆ ಜನರು ಟ್ರೋಲ್ ಮಾಡಿದರು. ಸರಿಯಾಗಿ  ಮೂಡಿ ಬಂದಿಲ್ಲ ಎಂದು ಹೇಳಿದ್ದರು. ಅದಕ್ಕೆ ಚಿತ್ರತಂಡ ಉತ್ತಮ ಗ್ರಾಫಿಕ್ಸ್ ಬಳಸಲು ನಿರ್ಧರಿಸಿದೆ.


    actor prabhas, adipurush movie release date postponed, adipurush release date, adipurush budget cast, ನಟ ಪ್ರಭಾಸ್, ಆದಿಪುರುಷ ಚಿತ್ರದ ಬಿಡುಗಡೆ ದಿನಾಂಕ ಮುಂದೂಡಿಕೆ, ಆದಿಪುರುಷ ಬಿಡುಗಡೆ ದಿನಾಂಕ, ಆದಿಪುರುಷ ಬಜೆಟ್, kannada news, karnataka news,
    ಆದಿಪುರುಷ್ ಚಿತ್ರದ ರಿಲೀಸ್ ದಿನಾಂಕ ಮುಂದಕ್ಕೆ


    ಆದಿಪುರುಷ್ ಟೀಸರ್​ ಸಿಕ್ಕಾಪಟ್ಟೆ ಟ್ರೋಲ್​!


    ಟ್ವಿಟರ್‌ನಲ್ಲಿ ಅನೇಕರು ಟೀಸರ್ ದೃಶ್ಯಗಳನ್ನು ಹಾಲಿವುಡ್ ಚಿತ್ರಗಳಾದ ಮಾರ್ವೆಲ್ಸ್ ಅವೆಂಜರ್ ಸೀರೀಸ್, ಗೇಮ್ ಆಫ್ ಥ್ರೋನ್ಸ್ ಹಾಗೂ ಇನ್ನಿತರ ಚಿತ್ರಗಳೊಂದಿಗೆ ಬಣ್ಣಿಸಿದ್ದಾರೆ. ಭಾರತದ ಸಂಸ್ಕೃತಿಯನ್ನು ಬಣ್ಣಿಸಬೇಕಾದ ಚಿತ್ರವು ಹಾಲಿವುಡ್ ಸಿನಿಮಾಗಳ ರೀತಿಯಲ್ಲಿಯೇ ಮೂಡಿಬಂದಿದೆ ಎಂಬುದು ಬಳಕೆದಾರರ ಅಭಿಮತವಾಗಿದೆ.


    ಇದನ್ನೂ ಓದಿ: Anushka Shetty birthday: ಬಾಹುಬಲಿ ಖ್ಯಾತಿಯ ಅನುಷ್ಕಾ ಶೆಟ್ಟಿಗೆ ಹುಟ್ಟುಹಬ್ಬದ ಸಂಭ್ರಮ; ಸ್ವೀಟಿಯ ಗೊತ್ತಿರದ ಗುಟ್ಟುಗಳು ಇವು! 


    30 ವರ್ಷಗಳಷ್ಟು ಪುರಾತನ ಅನಿಮೇಟೆಡ್ ರಾಮಾಯಣವು ಇದೀಗ ನಿರ್ಮಿಸಿರುವ ಅನಿಮೇಟೆಡ್ ಆದಿಪುರುಷ್‌ಗಿಂತ ಅತ್ಯುತ್ತಮವಾಗಿದೆ. ಆದಿಪುರುಷ್ ಸಿನಿಮಾ ನೋಡುವುದಕ್ಕಿಂತಲೂ ಈ ಚಿತ್ರವನ್ನು ವೀಕ್ಷಿಸಿ ಎಂದು ವಿನಂತಿಸುತ್ತೇವೆ.


    ಜಪಾನೀ ಜನರು ಓಂರಾವತ್‌ ಅವರ ಆದಿಪುರುಷ್‌ಗಿಂತ ಉತ್ತಮವಾದ ಸಿನಿಮಾ ಮಾಡುತ್ತಾರೆ. ಇದು ಅತಿದೊಡ್ಡ ಸ್ಕ್ಯಾಮ್ ಆಗಿದೆ ಎಂಬುದು ಬಳಕೆದಾರರೊಬ್ಬರ ಅಭಿಪ್ರಾಯವಾಗಿದೆ. ಆದಿಪುರುಷ್ ಅನಿಮೇಶನ್ ಕಾರ್ಟೂನ್‌ನಂತೆ ಕಂಡುಬಂದಿದೆ ಎಂಬುದು ಬಳಕೆದಾರರ ಅಭಿಪ್ರಾಯವಾಗಿದೆ.

    Published by:Savitha Savitha
    First published: