• Home
  • »
  • News
  • »
  • entertainment
  • »
  • Kareena Kapoor: ಕರೀನಾ ಅವರ ಫೇಮಸ್ ಡೈಲಾಗ್ ಹೇಳಿ ಹಣ ಸಂಪಾದಿಸ್ತಾರೆ ಈ ನಟಿ!

Kareena Kapoor: ಕರೀನಾ ಅವರ ಫೇಮಸ್ ಡೈಲಾಗ್ ಹೇಳಿ ಹಣ ಸಂಪಾದಿಸ್ತಾರೆ ಈ ನಟಿ!

ಇತ್ತೀಚಿನ ಸಂದರ್ಶನವೊಂದರಲ್ಲಿ, ಪಾಯಲ್ ಅವರು ಕರೀನಾ ಅವರ ಬಗ್ಗೆ ಮಾತಾಡುತ್ತಾ ಕರೀನಾ ಅವರಿಂದ ನಾನು ಸಾಕಷ್ಟು ಹಣವನ್ನು ಸಂಪಾದಿಸಿದ್ದೇನೆ ಎಂದು ಹೇಳಿದರು.

ಇತ್ತೀಚಿನ ಸಂದರ್ಶನವೊಂದರಲ್ಲಿ, ಪಾಯಲ್ ಅವರು ಕರೀನಾ ಅವರ ಬಗ್ಗೆ ಮಾತಾಡುತ್ತಾ ಕರೀನಾ ಅವರಿಂದ ನಾನು ಸಾಕಷ್ಟು ಹಣವನ್ನು ಸಂಪಾದಿಸಿದ್ದೇನೆ ಎಂದು ಹೇಳಿದರು.

ಇತ್ತೀಚಿನ ಸಂದರ್ಶನವೊಂದರಲ್ಲಿ, ಪಾಯಲ್ ಅವರು ಕರೀನಾ ಅವರ ಬಗ್ಗೆ ಮಾತಾಡುತ್ತಾ ಕರೀನಾ ಅವರಿಂದ ನಾನು ಸಾಕಷ್ಟು ಹಣವನ್ನು ಸಂಪಾದಿಸಿದ್ದೇನೆ ಎಂದು ಹೇಳಿದರು.

  • Trending Desk
  • Last Updated :
  • Bangalore, India
  • Share this:

ಸಾಮಾನ್ಯವಾಗಿ ಈ ಚಿತ್ರೋದ್ಯಮದಲ್ಲಿ ಅವಕಾಶ ಪಡೆಯಲು ಮೊದಲು ಚಿತ್ರ ತಯಾರಕರ ಬಳಿ ಹೋಗಿ ಕೆಲವು ಚಿತ್ರಗಳ ಡೈಲಾಗ್ ಗಳನ್ನು ಹೇಳಿ, ಯಾವುದಾದರೊಂದು ಸಿನೆಮಾದ (Cinema) ದೃಶ್ಯದಲ್ಲಿ ಮಾಡಿದ ನಟನೆ ಮಾಡಿ ತೋರಿಸಬೇಕಾಗುತ್ತದೆ. ಇಷ್ಟಕ್ಕೇ ಚಿತ್ರೋದ್ಯಮದಲ್ಲಿ ಎಂಟ್ರಿ ಸಿಗುವುದಿಲ್ಲ ಕಣ್ರೀ... ಇದರ ನಂತರ ನಟ ಮತ್ತು ನಟಿಯ ಲುಕ್ ಟೆಸ್ಟ್ (Look test) ಎಲ್ಲಾ ಮಾಡಿಸ್ತಾರೆ. ಚಿತ್ರಕ್ಕೆ ಬೇಕಾದ ಪಾತ್ರಕ್ಕೆ ಸರಿಯಾಗಿ ಹೊಂದಿಕೊಳ್ಳಲು ಯುವ ನಟ ನಟಿಯರಿಗೆ  (Actress) ಕೆಲವು ಕಾರ್ಯಾಗಾರಗಳನ್ನು ಸಹ ಏರ್ಪಡಿಸುತ್ತಾರೆ. ಒಟ್ಟಿನಲ್ಲಿ ಹೇಳುವುದಾದರೆ ಚಿತ್ರೋದ್ಯಮದಲ್ಲಿ ಅವಕಾಶ ಗಿಟ್ಟಿಸಿಕೊಳ್ಳುವುದು ಅಷ್ಟೊಂದು ಸುಲಭದ ಕೆಲಸವಂತೂ ಅಲ್ಲ ಎಂದು ಹೇಳಬಹುದು.


ನಟಿ ಕರೀನಾಳ ಡೈಲಾಗ್ ಹೇಳಿ ಅವಕಾಶ ಗಿಟ್ಟಿಸಿಕೊಂಡ ಪಾಯಲ್


ಇಲ್ಲೊಬ್ಬ ತೆಲುಗು ಮತ್ತು ಪಂಜಾಬಿ ಚಲನಚಿತ್ರಗಳಲ್ಲಿ ಪ್ರಧಾನವಾಗಿ ಕೆಲಸ ಮಾಡುವ ನಟಿ ಪಾಯಲ್ ರಜಪೂತ್ ಅವರು ನಟಿ ಕರೀನಾ ಕಪೂರ್ (Kareena Kapoor) ಅವರ ಅಭಿನಯದ ‘ಜಬ್ ವಿ ಮೆಟ್’ ಚಿತ್ರದಲ್ಲಿನ 'ಸಿಖ್ನಿ ಹೂಂ ಮೈ ಭಟಿಂಡಾ ಕಿ' ಎಂಬ ಡೈಲಾಗ್ ಅನ್ನು ಅನೇಕ ಆಡಿಷನ್ ಗಳಲ್ಲಿ ಹೇಳಿ ಅನೇಕ ಅವಕಾಶಗಳನ್ನು ಗಿಟ್ಟಿಸಿದ್ದಾರಂತೆ. ಅದರಿಂದ ತುಂಬಾ ಹಣ ಸಂಪಾದಿಸಿದ್ದೇನೆ ಅಂತ ಖುದ್ದು ಪಾಯಲ್ ಹೇಳಿಕೊಳ್ಳುತ್ತಾರೆ.




ಅಕ್ಟೋಬರ್ 21 ಬಿಡುಗಡೆಯಾದ ತೆಲುಗು ಚಿತ್ರ ‘ಜಿನ್ನಾ’ ದಲ್ಲಿ ನಟಿ ಪಾಯಲ್ ಸಹ ಕಾಣಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ವಿಷ್ಣು ಮಂಚು ಮತ್ತು ಸನ್ನಿ ಲಿಯೋನ್ ಕೂಡ ನಟಿಸಿದ್ದಾರೆ.


ಇದನ್ನೂ ಓದಿ: Taimur Ali Khan: ಪ್ರಶ್ನೆ ಪತ್ರಿಕೆಯಲ್ಲಿ ಕರೀನಾ ಕಪೂರ್​ ಮಗನ ಬಗ್ಗೆ ಪ್ರಶ್ನೆ: ತಬ್ಬಿಬ್ಬಾದ 6ನೇ ಕ್ಲಾಸ್​​ ವಿದ್ಯಾರ್ಥಿಗಳು!


ಇತ್ತೀಚಿನ ಸಂದರ್ಶನವೊಂದರಲ್ಲಿ, ಪಾಯಲ್ ಅವರು ಕರೀನಾ ಅವರ ಬಗ್ಗೆ ಮಾತಾಡುತ್ತಾ ಕರೀನಾ ಅವರಿಂದ ನಾನು ಸಾಕಷ್ಟು ಹಣವನ್ನು ಸಂಪಾದಿಸಿದ್ದೇನೆ ಎಂದು ಹೇಳಿದರು. ಅನೇಕ ಆಡಿಷನ್ ಗಳಲ್ಲಿ ‘ಜಬ್ ವಿ ಮೆಟ್’ ನ ಕರೀನಾ ಅವರ ಡೈಲಾಗ್ ಅನ್ನು ಬಳಸಿದ್ದೇನೆ ಎಂದು ಅವರು ಹೇಳಿದರು. ಕರೀನಾ 2007 ರಲ್ಲಿ ಬಿಡುಗಡೆಯಾದ ಆ ಚಿತ್ರದಲ್ಲಿ ‘ಗೀತ್’ ಎಂಬ ಪಾತ್ರವನ್ನು ನಿರ್ವಹಿಸಿದ್ದರು.


ತಮ್ಮ ನಟನೆಯ ಪ್ರಾರಂಭದ ದಿನಗಳ ಬಗ್ಗೆ ಹೇಳಿದ ಪಾಯಲ್


ಕನೆಕ್ಟ್ ಎಫ್ಎಂ ಕೆನಡಾದೊಂದಿಗಿನ ಸಂದರ್ಶನದಲ್ಲಿ, ಪಾಯಲ್ ಹಿಂದಿಯಲ್ಲಿ ಮಾತನಾಡುತ್ತಾ "ನಾನು ಮೊದಲು ಮುಂಬೈಗೆ ಬಂದಾಗ, ನನಗೆ ಏನೂ ಗೊತ್ತಿರಲಿಲ್ಲ. ನಾನು ನಟನೆಯಲ್ಲಿ ಯಾವುದೇ ರೀತಿಯ ತರಬೇತಿಯನ್ನು ಹೊಂದಿಲ್ಲದ ಕಾರಣ ನಾನು ಏನು ಮಾಡಬೇಕು ಎಂದು ತುಂಬಾನೇ ಯೋಚಿಸುತ್ತಿದ್ದೆ” ಎಂದು ಹೇಳಿದರು.


ಫೇಮಸ್ ಡೈಲಾಗ್ ಹೇಳಿ ಏನೆಲ್ಲಾ ಅವಕಾಶಗಳನ್ನು ಗಿಟ್ಟಿಸಿಕೊಂಡ್ರು ನೋಡಿ..


“ಆದರೆ ಸ್ವಲ್ಪ ಸಮಯದ ನಂತರ ಜನರು ನನ್ನನ್ನು ಆಡಿಷನ್ ಗಳಿಗೆ ಕರೆದಾಗ, ದಕ್ಷಿಣ ಭಾರತದ ಯಾವುದೋ ಒಂದು ಚಿತ್ರಕ್ಕಾಗಿ, ಚಿತ್ರದ ನಿರ್ಮಾಪಕರು ಈ ಹುಡುಗಿ ಸುಂದರವಾಗಿದ್ದಾಳೆ, ಮುಖ ಸಹ ಚಿತ್ರಕ್ಕೆ ಹೇಳಿ ಮಾಡಿಸಿದ ಹಾಗೆ ಇದೆ ಅಂತ ಹೇಳುತ್ತಿದ್ದರು” ಎಂದು ಹೇಳಿದರು.


ಆದರೆ ನಂತರ ಅವರು ನನ್ನನ್ನು 'ನೀವು ಏನು ಮಾಡಬಹುದು' ಎಂದು ಕೇಳುತ್ತಿದ್ದರು ಮತ್ತು ನಾನು ಅವರಿಗೆ 'ನಾನು ನಿಮಗೆ ಕರೀನಾ ಕಪೂರ್ ಅವರ ‘ಸಿಖ್ನಿ ಹೂಂ ಮೈ ಭಟಿಂಡಾ ಕಿ’ ಡೈಲಾಗ್ ಹೇಳಿ ತೋರಿಸುತ್ತೇನೆ’ ಅಂತ ಹೇಳಿ ತೋರಿಸಿ ಅವಕಾಶ ಗಿಟ್ಟಿಸಿಕೊಂಡೆ” ಎಂದು ಹೇಳಿದರು.


ಇದನ್ನೂ ಓದಿ: Kareena Kapoor: ಕರೀನಾ ಕಪೂರ್ ಗರ್ಭಿಣಿಯಾಗಿದ್ದಾಗ ಹೇಗಿತ್ತು ಲೈಂಗಿಕ ಜೀವನ? ಗುಟ್ಟು ರಟ್ಟು ಮಾಡಿದ ನಟಿ


“ನಂತರ ಸಹ ಇದೇ ಡೈಲಾಗ್ ಹೇಳಿ ನಾನು ಅನೇಕ ಜಾಹೀರಾತುಗಳಿಗೆ ಆಫರ್ ಗಳನ್ನು ಪಡೆದಿದ್ದೇನೆ, ಕನಿಷ್ಠ ಆರರಿಂದ ಏಳು, ಮತ್ತು ನನ್ನ ಮೊದಲ ಪ್ರದರ್ಶನವನ್ನು ಸಹ ಪಡೆದಿದ್ದೇನೆ. ಆದ್ದರಿಂದ, ಕರೀನಾ ಕಪೂರ್ ಅವರಿಗೆ ತುಂಬಾ ಧನ್ಯವಾದಗಳನ್ನು ಹೇಳಬೇಕು" ಎಂದು ಅವರು ಹೇಳಿದರು.


ಕರೀನಾ ಅವರ 'ಸಿಖ್ನಿ ಹೂಂ ಮೈ ಭಟಿಂಡಾ ಕಿ' ಡೈಲಾಗ್ ಅನ್ನು ಇನ್ನೂ ಅಭಿಮಾನಿಗಳು ಮರೆಯಲು ಸಾಧ್ಯವಾಗಿಲ್ಲ. ಇಮ್ತಿಯಾಜ್ ಅಲಿ ಅವರ ಈ ಚಿತ್ರದಲ್ಲಿ ನಟ ಶಾಹಿದ್ ಕಪೂರ್ ಕೂಡ ನಟಿಸಿದ್ದರು.

Published by:Divya D
First published: