ದಬಂಗ್ 3 ಅಡ್ಡಾದಿಂದ ಬಂತು ಬ್ರೇಕಿಂಗ್ ನ್ಯೂಸ್ : ಸಲ್ಮಾನ್ ಚಿತ್ರಕ್ಕೆ ಸುದೀಪ್ ಆಯ್ಕೆ ಹೇಗಾಯಿತು ಗೊತ್ತಾ?

ದಬಂಗ್ 3 ಸಿನಿಮಾದಲ್ಲಿ ಕಿಚ್ಚ ಸುದೀಪ್ ಅಭಿನಯಿಸುತ್ತಿರುವ ವಿಷಯ ನಿಮಗೆಲ್ಲ ತಿಳಿದೇ ಇದೆ. ಆದರೆ ಸುದೀಪ್ ಅವರಿಗೆ ಈ ಅವಕಾಶ ಅರಸಿ ಬಂದಿದ್ದಾದ್ರೂ ಹೇಗೆ? ಮೊದಲಿಗೆ ಈ ಪಾತ್ರಕ್ಕೆ ಕರುನಾಡ ಮಾಣಿಕ್ಯನೇ ಬೇಕು ಅಂತ ಸೂಚಿಸಿದ್ದಾದರೂ ಯಾರು ಗೊತ್ತಾ? ಮುಂದೆ ಓದಿ ಇಲ್ಲಿದೆ ವಿವರ... 

Anitha E | news18
Updated:April 29, 2019, 5:37 PM IST
ದಬಂಗ್ 3 ಅಡ್ಡಾದಿಂದ ಬಂತು ಬ್ರೇಕಿಂಗ್ ನ್ಯೂಸ್ : ಸಲ್ಮಾನ್ ಚಿತ್ರಕ್ಕೆ ಸುದೀಪ್ ಆಯ್ಕೆ ಹೇಗಾಯಿತು ಗೊತ್ತಾ?
ಸಲ್ಲು-ಸುದೀಪ್​​
Anitha E | news18
Updated: April 29, 2019, 5:37 PM IST
'ದಬಂಗ್ 3' ಸಿನಿಮಾದಲ್ಲಿ ಕಿಚ್ಚ ಸುದೀಪ್ ಅಭಿನಯಿಸುತ್ತಿರುವ ವಿಷಯ ನಿಮಗೆಲ್ಲ ತಿಳಿದೇ ಇದೆ. ಆದರೆ ಸುದೀಪ್ ಅವರಿಗೆ ಈ ಅವಕಾಶ ಅರಸಿ ಬಂದಿದ್ದಾದ್ರೂ ಹೇಗೆ? ಮೊದಲಿಗೆ ಈ ಪಾತ್ರಕ್ಕೆ ಕರುನಾಡ ಮಾಣಿಕ್ಯನೇ ಬೇಕು ಅಂತ ಸೂಚಿಸಿದ್ದಾದರೂ ಯಾರು ಗೊತ್ತಾ? ಮುಂದೆ ಓದಿ ಇಲ್ಲಿದೆ ವಿವರ...

ಇದೇ ಮೊದಲ ಬಾರಿಗೆ 'ದಬಂಗ್-3' ಮೂಲಕ ಸಲ್ಲು-ಸುದೀಪ್ ತೆರೆ ಹಂಚಿಕೊಳ್ಳುತ್ತಿದ್ದಾರೆ. ಈ ವಿಷಯ ಕೇಳಿಯೇ ಇಬ್ಬರ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. ಯಾಕಂದ್ರೆ ಸಲ್ಮಾನ್‍ಗೆ ಉತ್ತರ ಭಾರತದಲ್ಲಿ ದೊಡ್ಡ ಹೆಸರಿದ್ದರೆ,  ಸುದೀಪ್‍ಗೆ ದಕ್ಷಿಣ ಭಾರತದ ಸಿನಿ ಇಂಡಸ್ಟ್ರಿಯಲ್ಲಿ ಅವರದ್ದೇ ಆದ ಹೆಸರು ಹಾಗೂ ಸ್ಥಾನವಿದೆ.

ಇದನ್ನೂ ಓದಿ: ಸಂಜಯ್​ ಲೀಲಾ ಬನ್ಸಾಲಿಗೆ ನೋ ಎಂದ ರಶ್ಮಿಕಾ: 'ಡಿಯರ್​ ಕಾಮ್ರೆಡ್'​ಗೆ ಗುಡ್​ ಬೈ ಹೇಳಿದ ಟಾಲಿವುಡ್​ ಲಿಲ್ಲಿ..!

ಈಗ ಇಬ್ಬರು ಒಂದೇ ಸಿನಿಮಾದಲ್ಲಿ ಕಾಣಿಸಿಕೊಂಡ್ರೆ, ಅದರ ಮೇಲೆ ಹುಟ್ಟೋ ನಿರೀಕ್ಷೆ ಯಾವ ಮಟ್ಟಕ್ಕೆ ಅಂತ ಪದಗಳಲ್ಲಂತೂ ಹೇಳೋಕೆ ಸಾಧ್ಯವೇ ಇಲ್ಲ. ಅಷ್ಟಕ್ಕೂ ಇಂತಹದ್ದೊಂದು ಅವಕಾಶ ಸುದೀಪ್‍ಗೆ ಬಂದಿದ್ದಾದರೂ ಹೇಗೆ ಎಂಬ ಪ್ರಶ್ನೆ ಹಲವರಲ್ಲಿ ಹುಟ್ಬೋದು ಸಹಜ. ಅದಕ್ಕೆ ಉತ್ತರ ನಮ್ಮ ಕನ್ನಡದ ಹೆಮ್ಮೆಯ ಪ್ರತಿಭೆ ಪ್ರಭುದೇವ.

ನಟ-ನಿರ್ದೇಶಕ ಪ್ರಭುದೇವ


ನಿರ್ದೇಶಕ ಪ್ರಭುದೇವ 'ದಬಂಗ್ 3' ಚಿತ್ರದ ಸ್ಕ್ರಿಪ್ಟ್ ಮಾಡುವಾಗಲೇ ಸಿಕಂದರ್ ಪಾತ್ರಕ್ಕೆ ಸುದೀಪ್ ಸೂಕ್ತ ಎಂದೆನಿಸಿತ್ತಂತೆ.  ಈ ವಿಷ್ಯವನ್ನ ಚಿತ್ರತಂಡಕ್ಕೆ ಹೇಳಿದ್ದೇ ತಡ ಇಡೀ ಚಿತ್ರತಂಡ ವಾವ್ ಅಂತ ಪ್ರತಿಕ್ರಿಯಿಸಿದೆ. ಚಿತ್ರದ ನಿರ್ಮಾಪಕ ಸೊಹೈಲ್ ಖಾನ್ ಹಾಗೂ ಸುದೀಪ್ ಒಳ್ಳೆಯ ಸ್ನೇಹಿತರು. ಇನ್ನು ಚಿತ್ರದ ನಾಯಕ ಸಲ್ಮಾನ್ ಹಾಗೂ ಸುದೀಪ್ ನಡುವೆಯೂ ಒಳ್ಳೆಯ ಬಾಂಧವ್ಯ ಇದೆ.

ಹೀಗಾಗಿ ಸುದೀಪ್ ಹೆಸರು ಪ್ರಭುದೇವ ಹೇಳಿದ್ದೇ ತಡ 'ದಬಂಗ್ 3'ನಲ್ಲಿ ಕಿಚ್ಚ ಅಭಿನಯಿಸೋದು ಫಿಕ್ಸ್ ಆಯ್ತಂತೆ. ಆ ನಂತರ ಫಾರ್ಮಾಲಿಟೀಸ್ ಪ್ರಕಾರ ನಿರ್ಮಾಪಕ ಸೊಹೈಲ್ ಖಾನ್ ಸುದೀಪ್ ಜೊತೆ ಮಾತನಾಡಿ, ಪಾತ್ರದ ಬಗ್ಗೆ ಹೇಳಿದ್ದಾರಂತೆ.
Loading...

ಅಂದಹಾಗೆ, ಈ ಚಿತ್ರದ ಚಿತ್ರೀಕರಣ  ಏಪ್ರಿಲ್ 1 ರಿಂದಲೇ ಆರಂಭವಾಗಿದ್ದು, ಇದೇ ವರ್ಷದ ಕೊನೆಯಲ್ಲಿ ಚಿತ್ರಮಂದಿರಗಳ ಅಂಗಳಕ್ಕೆ ಬರೋದು ಖಚಿತ ಎಂದು ಹೇಳಲಾಗುತ್ತಿದೆ. ಒಟ್ಟಾರೆ ಕನ್ನಡದ ಕಿಚ್ಚ ಸುದೀಪ್ ಹಾಗೂ ಬಾಲಿವುಡ್ ಬಾಕ್ಸಾಫಿಸ್ ಸುಲ್ತಾನ್ ಜೋಡಿಯನ್ನು ಕಣ್ತುಂಬಿಕೊಳ್ಳಲು ಚಿತ್ರಪ್ರೇಮಿಗಳು ಕಾತರರಾಗಿರೋದಂತೂ ಸುಳ್ಳಲ್ಲ.

ತೋಟದ ಮನೆಯಲ್ಲಿನ ಹಸುವಿನಿಂದ ಹಾಲು ಕರೆದ ಡಿಬಾಸ್​ ಹಾಗೂ ಮಗ ವಿನೀಶ್​
First published:April 29, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...