ಸಾರಾ ಅಲಿ ಖಾನ್​ - ಕಾರ್ತಿಕ್​ ಆರ್ಯನ್​ ಬ್ರೇಕಪ್​: ಸತ್ಯ ಬಾಯಿಬಿಟ್ಟ ನವಾಬ ಸೈಫ್​..!

Sara And Karthik Aryan: ಸಾರಾ ಹಾಗೂ ಕಾರ್ತಿಕ್​ ಆರ್ಯನ್​​ ಲವ್​ ಆಜ್​ ಕಲ್​ ಸಿನಿಮಾದ ಸೀಕ್ವೆಲ್​ನಲ್ಲಿ ಅಭಿನಯಿಸುತ್ತಿದ್ದಾರೆ. ಈ ಸಿನಿಮಾದ ಚಿತ್ರೀಕರಣದಿಂದಾಗಿಯೇ ಈ ಜೋಡಿಯ ನಡುವೆ ಪ್ರೇಮಾಂಕುರವಾಗಿದ್ದು ಎಂಬ ಸುದ್ದಿ ಇದೆ. ಹೀಗಿರುವಾಗಲೇ ಈ ಜೋಡಿಯ ನಡುವೆ ಬ್ರೇಕಪ್​ ಆಗಿದೆ ಅನ್ನೋ ಟಾಕ್​ ಈಗ ಕೇಳಿ ಬರುತ್ತಿದೆ.  

news18-kannada
Updated:October 18, 2019, 4:02 PM IST
ಸಾರಾ ಅಲಿ ಖಾನ್​ - ಕಾರ್ತಿಕ್​ ಆರ್ಯನ್​ ಬ್ರೇಕಪ್​: ಸತ್ಯ ಬಾಯಿಬಿಟ್ಟ ನವಾಬ ಸೈಫ್​..!
ಸಾರಾ ಹಾಗೂ ಕಾರ್ತಿಕ್​ ಆರ್ಯನ್​
  • Share this:
ಬಿ-ಟೌನ್​ನ ಫೇಮಸ್​ ರೊಮ್ಯಾಂಟಿಕ್ ಜೋಡಿ ಸಾರಾ ಅಲಿ ಖಾನ್​ ಹಾಗೂ ಕಾರ್ತಿಕ್​ ಆರ್ಯನ್​ ಡೇಟಿಂಗ್​ ಮಾಡುತ್ತಿರುವ ವಿಷಯ ಗೊತ್ತೇ ಇದೆ. ದಿನ ಬೆಳಗಾದರೆ ಸಾಕು ಈ ವಿಷಯವಾಗಿ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗಳು ನಡೆಯುತ್ತಿರುತ್ತವೆ.

ಸಾರಾ ಹಾಗೂ ಕಾರ್ತಿಕ್​ ಆರ್ಯನ್​​ 'ಲವ್​ ಆಜ್​ ಕಲ್​' ಸಿನಿಮಾದ ಸೀಕ್ವೆಲ್ 'ಲವ್​ ಆಜ್ ಕಲ್​ 2' ​ನಲ್ಲಿ ಅಭಿನಯಿಸುತ್ತಿದ್ದಾರೆ. ಈ ಸಿನಿಮಾದ ಚಿತ್ರೀಕರಣದಿಂದಾಗಿಯೇ ಈ ಜೋಡಿಯ ನಡುವೆ ಪ್ರೇಮಾಂಕುರವಾಗಿದ್ದು ಎಂಬ ಸುದ್ದಿ ಇದೆ. ಹೀಗಿರುವಾಗಲೇ ಈ ಜೋಡಿಯ ನಡುವೆ ಬ್ರೇಕಪ್​ ಆಗಿದೆ ಅನ್ನೋ ಟಾಕ್​ ಈಗ ಕೇಳಿ ಬರುತ್ತಿದೆ.

  View this post on Instagram
 

Happy Birthday Princess @saraalikhan95 ❤️ And Eid Mubarak (this time without the mask )


A post shared by KARTIK AARYAN (@kartikaaryan) on


ಕಳೆದ ಕೆಲ ದಿನಗಳಿಂದ ಈ ಜೋಡಿಯ ಬ್ರೇಕಪ್​ ಸುದ್ದಿ ಹರಿದಾಡುತ್ತಿದ್ದು, ಇವರ ಸಂಬಂಧದ ಬಗ್ಗೆ ಖುದ್ದು ಸಾರಾರ ತಂದೆ ಸೈಫ್​ ಮಾತನಾಡಿರುವುದು ವಿಶೇಷ. ಪತ್ರಿಕೆಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಸೈಫ್​ ಮಗಳನ್ನು ಸ್ಟಾರ್​ ಮಾಡುವ ಬದಲಾಗಿ ಉತ್ತಮ ಕಲಾವಿದೆಯನ್ನಾಗಿ ಮಾಡಲು ಪ್ರೋತ್ಸಾಹಿಸುತ್ತೇನೆ ಎಂದಿದ್ದಾರೆ.
ಇದನ್ನೂ ಓದಿ: ನೇಹಾ ಕಕ್ಕರ್​ಗೆ ಬಲವಂತವಾಗಿ ಮುತ್ತಿಟ್ಟ ಅಭಿಮಾನಿ: ಕಣ್ಣೀರಿಟ್ಟ ಗಾಯಕಿ..!

'ಸಾರಾ ಸ್ಟಾರ್​ ಆಗುವುದಕ್ಕಿಂತ ಹೆಚ್ಚಾಗಿ ಒಳ್ಳೆಯ ನಟಿಯಾಗಬೇಕೆಂದು ನಾನು ಬಯಸುತ್ತೇನೆ. ಈ ಕುರಿತಾಗಿ ಅವಳೊಂದಿಗೆ ಮಾತನಾಡುತ್ತಲೇ ಇರುತ್ತೇನೆ. ಅಲ್ಲದೆ ವ್ಯಕ್ತಿಗತವಾಗಿ ಸಾರಾ ಒಳ್ಳೆಯ ಹುಡುಗಿ. ಯಾರೊಂದಿಗೆ ಇರಬೇಕು, ಏನು ಮಾಡಬೇಕು ಎಂಬುದರ ಅರಿವು ಅವಳಿಗಿದೆ. ಅವಳು ಒಳ್ಳೆಯವರನ್ನೇ ಇಷ್ಟಪಡುತ್ತಾಳೆ. ಆ ಹುಡುಗ ಒಳ್ಳೆಯವನಾಗಿರುವುದರಿಂದಲೇ ಅವಳು ಅವನನ್ನು ಇಷ್ಟಪಡುತ್ತಿದ್ದಾಳೆ' ಎಂದಿದ್ದಾರೆ ಸೈಫ್​ ಅಲಿಖಾನ್​.

 

Kareena Kapoor: ಮದುವೆಗೆ ಮುಂಚೆ ಕರೀನಾ ಕಪೂರ್​ ಇಟ್ಟಿದ್ದ ಷರತ್ತು ಏನು ಗೊತ್ತಾ..?


 
First published: October 18, 2019, 4:02 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading