• Home
  • »
  • News
  • »
  • entertainment
  • »
  • Made In China: ರಿಲೀಸ್ ಡೇಟ್​ ಅನೌನ್ಸ್ ಮಾಡಿದ ಕನ್ನಡದ ಮೊದಲ ವರ್ಚುವಲ್ ಸಿನಿಮಾ, ಆದ್ರೆ ಮಲ್ಟಿಪ್ಲೆಕ್ಸ್‌ನಲ್ಲಷ್ಟೇ ಬಿಡುಗಡೆಯಂತೆ

Made In China: ರಿಲೀಸ್ ಡೇಟ್​ ಅನೌನ್ಸ್ ಮಾಡಿದ ಕನ್ನಡದ ಮೊದಲ ವರ್ಚುವಲ್ ಸಿನಿಮಾ, ಆದ್ರೆ ಮಲ್ಟಿಪ್ಲೆಕ್ಸ್‌ನಲ್ಲಷ್ಟೇ ಬಿಡುಗಡೆಯಂತೆ

ಮೇಡ್​ ಇನ್ ಚೈನಾ

ಮೇಡ್​ ಇನ್ ಚೈನಾ

ಕನ್ನಡದ ಮೊದಲ ವರ್ಚುವಲ್​ ಸಿನಿಮಾ ‘ಮೇಡ್ ಇನ್ ಚೈನಾ’ (Made In China) ಚಿತ್ರವು ಬಿಡುಗಡೆಯ ದಿನಾಂಕ ಘೋಷಣೆ ಮಾಡಿದೆ. ಮೇಡ್ ಇನ್ ಚೈನಾ ಸಿನಿಮಾದಲ್ಲಿ ನಾಗಭೂಷಣ್ ಹಾಗೂ ಪ್ರಿಯಾಂಕಾ ತಿಮ್ಮೇಶ್‌ ನಟಿಸಿದ್ದಾರೆ.

  • Share this:

ಕನ್ನಡದ ಮೊದಲ ವರ್ಚುವಲ್​ ಸಿನಿಮಾ ‘ಮೇಡ್ ಇನ್ ಚೈನಾ’ (Made In China) ಚಿತ್ರವು ಬಿಡುಗಡೆಯ ದಿನಾಂಕ (Date) ಘೋಷಣೆ ಮಾಡಿದೆ. ಮೇಡ್ ಇನ್ ಚೈನಾ ಸಿನಿಮಾದಲ್ಲಿ (Movie) ನಾಗಭೂಷಣ್ (Nagabhushan) ಹಾಗೂ ಪ್ರಿಯಾಂಕಾ ತಿಮ್ಮೇಶ್‌ ನಟಿಸಿದ್ದಾರೆ. ಈಗಾಗಲೇ ಟೀಸರ್ (Teaser) ಮೂಲಕ‌ ಪ್ರೇಕ್ಷಕರಲ್ಲಿ ಸಾಕಷ್ಟು ನಿರೀಕ್ಷೆ ಹೆಚ್ಚಿಸಿದ್ದ ಮೇಡ್ ಇನ್ ಚೈನಾ ಸಿನಿಮಾ ಜೂನ್‌ 17ರಂದು ಕೇವಲ ಮಲ್ಟಿಪ್ಲೆಕ್ಸ್‌ಗಳಲ್ಲಷ್ಟೇ ಬಿಡುಗಡೆಯಾಗಲಿದೆ. ಅಂದ ಹಾಗೆ ನಾಗಭೂಷಣ್ ಅವರು ಇಕ್ಕಟ್, ಬಡವ ರಾಸ್ಕಲ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಈಗ ನಾಗಭೂಷಣ್ ಮತ್ತು ಪ್ರಿಯಾಂಕಾ ತಿಮ್ಮೇಶ್‌ ನಟನೆಯ ಮೇಡ್ ಇನ್ ಚೈನಾ ಸಿನಿಮಾ ಡೇಟ್ ರಿಲೀಸ್ ಆಗಿದ್ದು, ಸಖತ್ ಸೆನ್ಸೇಷನ್ ಕ್ರಿಯೇಟ್ ಮಾಡಿದೆ. ಈ ಹಿಂದೆ ಸಿನಿಮಾ ಟೀಸರ್ ಬಿಡುಗಡೆಯ ಮೂಲಕ ಸಾಕಷ್ಟು ಸದ್ದು ಮಾಡಿತ್ತು. ಈ ಚಿತ್ರ ಆರಂಭದಿಂದ ಹಿಡಿದು ಕೊನೆವರೆಗೂ ವಿಡಿಯೋ ಕಾಲ್ ಮೂಲಕವೇ ನಡೆಯಲಿದೆ. 


‘ಮೇಡ್​ ಇನ್​ ಚೈನಾ’ ರಿಲೀಸ್ ಡೇಟ್ ಅನೌನ್ಸ್:


ಅನೇಕ ಚಿತ್ರಗಳಿಗೆ ಛಾಯಾಗ್ರಾಹಕರಾಗಿ ಕೆಲಸ ಮಾಡಿದ್ದ ಪ್ರೀತಂ ತೆಗ್ಗಿನಮನೆ  ‘ಮೇಡ್​ ಇನ್​ ಚೈನಾ’ ಚಿತ್ರದ ಮೊದಲ ಬಾರಿಗೆ ನಿರ್ದೇಶನಕ್ಕೆ ಕಾಲಿಟ್ಟಿದ್ದಾರೆ. ಜೊತೆಗೆ ಚಿತ್ರಕ್ಕೆ ಛಾಯಾಗ್ರಹಣ, VFX​, ಸಂಕಲನದ ಜವಾಬ್ದಾರಿಯನ್ನೂ ಪ್ರೀತಂ ನಿರ್ವಹಿಸಿದ್ದಾರೆ.ಚಿತ್ರವು ಇದೇ ವರ್ಷ ಜೂನ್​ 17ಕ್ಕೆ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.


ಸಾಫ್ಟ್ ವೇರ್‌ ಉದ್ಯೋಗಿಯೊಬ್ಬ ಚೀನಾಗೆ ಹೋದ ವೇಳೆ ಕೊರೋನಾದಿಂದಾಗಿ ಲಾಕ್‌ಡೌನ್‌ ಘೋಷಣೆಯಾಗುತ್ತದೆ. ಅಲ್ಲದೇ ಕೊರೋನಾ ಸೋಂಕು ತಗುಲಿದ ಕಾರಣ ಅವನ ಮನೆಯನ್ನು ಸೀಲ್‌ಡೌನ್‌ ಮಾಡಲಾಗುತ್ತದೆ. ಇತ್ತ ಭಾರತದಲ್ಲಿ ಹೀರೋನ ಪತ್ನಿ ಗರ್ಭಿಣಿ ಆಗಿರುತ್ತಾರೆ. ಇಂಥ ಸನ್ನಿವೇಶದಲ್ಲಿ ಆತ ಅನುಭವಿಸುವ ನೋವು, ತೊಳಲಾಟ, ದುಃಖದ ಕಂಟೆಂಟ್ ಟ್ರೇಲರ್ ಲ್ಲಿ ಕಟ್ಟಿಕೊಡಲಾಗಿದೆ.


ಇದನ್ನೂ ಓದಿ: Brahmastra Trailer: ಬ್ರಹ್ಮಾಸ್ತ್ರ ಟ್ರೈಲರ್​ಗೆ ಬಾಲಿವುಡ್​ ಶೇಕ್​! ರಣಬೀರ್​ನ ಶಿವನ ಅವತಾರಕ್ಕೆ ಫ್ಯಾನ್ಸ್​ ಫಿದಾ


ವರ್ಚುವಲ್‌ ಸಿನಿಮಾಗಳನ್ನು ಚಿತ್ರಮಂದಿರಗಳ ನೊಡಬೇಕು:


ಇನ್ನು, ಚಿತ್ರದ ಕುರಿತು ಮಾತನಾಡಿದ ನಿರ್ದೇಶಕ ಪ್ರೀತಂ, ‘ಮಲೆಯಾಳಂ ಹಾಗೂ ಬಾಲಿವುಡ್​ ಗಳಲ್ಲಿ ಈಗಾಗಲೇ ಈ ರೀತಿಯ ವರ್ಚುವಲ್ ಸಿನಿಮಾಗಳು ತೆರೆಕಂಡಿವೆ. ಆದರೆ ಈ ಸಿನಿಮಾಗಳು ಕೇಲವ ಓಟಿಟಿ ಅಲ್ಲಿ ಬಿಡುಗಡೆಯಾಗಿದ್ದವು. ಆದರೆ ಕನ್ನಡದ ಮೊದಲ ವರ್ಚುವಲ್ ಸಿನಿಮಾವನ್ನು ಚಿತ್ರಮಂದಿರ ಅದರಲ್ಲಿಯೂ ಕೇವಲ ಮಲ್ಟಿಫ್ಲೆಕ್ಸ್ ಗಳಲ್ಲಿಯೇ ಬಿಡುಗಡೆ ಮಾಡಬೇಕೆಂದು ನಾವು ಚಿಂತಿಸಿ ಈ ಸಿನಿಮಾವನ್ನು ಸಿದ್ಧಪಡಿಸಿದ್ದೇವೆ. ಚಿತ್ರಮಂದಿರಗಳಲ್ಲೂ ಇಂಥ ಸಿನಿಮಾವನ್ನು ಜನರು ವೀಕ್ಷಿಸಬೇಕು ಎನ್ನುವುದು ನಮ್ಮ ಆಸೆ. ಅಲ್ಲದೇ ನೈಜ ಘಟನೆಗಳನ್ನು ಆಧರಿಸಿ ಕಥೆ ಹೆಣೆಯಲಾಗಿದೆ’ ಎಂದು ಹೇಳಿದ್ದಾರೆ.


ಫಾರಿನ್​ನಲ್ಲಿ ಲಾಕ್​ ಆದ ನಾಗಭೂಷಣ್​:


ಇನ್ನು ಲಾಕ್ ಡೌನ್ ನಲ್ಲಿ ಫಾರಿನಲ್ಲಿ ಲಾಕ್ ಆಗುವ ನವ ಮದುಮಗನ ಪಾತ್ರದಲ್ಲಿ ನಾಗಭೂಷಣ್ ಕಾಣಿಸಿದ್ರೆ. ನಾಯಕಿಯಾಗಿ ಬಿಗ್ ಬಾಸ್ ಖ್ಯಾತಿಯ ಪ್ರಿಯಾಂಕ ತಿಮ್ಮೇಶ್ ಕಾಣಿಸಿದ್ದಾರೆ. ಬಡವ ರಾಸ್ಕಲ್ ಚಿತ್ರದಲ್ಲಿ ತಮ್ಮ ನಟನೆಯ ಮೂಲಕ ಕಾಮಿಡಿಯ  ಕಚಗುಳಿ ಇಟ್ಟಿದ್ದ ನಾಗಭೂಷಣ ಈ ಚಿತ್ರದಲ್ಲೂ ಪ್ರೇಕ್ಷಕರಿಗೆ ಹಾಸ್ಯವನ್ನು ಉಣಬಡಿಸಲು ತವಕದಲ್ಲಿದ್ದಾರೆ. ಅಂದಹಾಗೇ ‘ಮೇಡ್ ಇನ್ ಚೈನಾ’ ಕನ್ನಡದ ಮೊದಲ ವರ್ಚುವಲ್ ಸಿನಿಮಾವಾಗಿದ್ದು, ಚಿತ್ರದ ಕ್ಯಾಮರಾ ಕೆಲಸ ಇಲಿ ಇಂಟ್ರೆಸ್ಟಿಂಗ್ ಆಗಿರಲಿದೆ.


ಇದನ್ನೂ ಓದಿ: Salaar: ಸಲಾರ್​ ಚಿತ್ರದ ರಿಲೀಸ್ ಕುರಿತು ಹೊಸ ಅಪ್​​ಡೇಟ್​, ಈ ಬಾರಿ ನೀಲ್​ ಮಾಡಿದ್ದಾರಂತೆ ಬಿಗ್​ ಪ್ಲಾನ್


ಮೇಡ್‌ ಇನ್‌ ಚೈನಾ ತಾರಾಬಳಗ:


ಮೇಡ್‌ ಇನ್‌ ಚೈನಾ ಚಿತ್ರಕ್ಕೆ ಎನ್.ಕೆ. ಸ್ಟುಡಿಯೋಸ್ ಬ್ಯಾನರ್‌ನಡಿ ನಂದಕಿಶೋರ್ ಈ ಸಿನಿಮಾಗೆ ಬಂಡವಾಳ ಹೂಡಿದ್ದಾರೆ. ಚಿತ್ರದಲ್ಲಿ ಗೌರವ್ ಶೆಟ್ಟಿ, ಅಶ್ವಿನ್ ರಾವ್ ಪಲ್ಲಕ್ಕಿ, ಅರುಣ ಬಾಲರಾಜ್, ರವಿ ಭಟ್ ಕೂಡ ನಟಿಸಿದ್ದಾರೆ. ನಿಶ್ಚಲ್ ವಿ ಹಾಗೂ ಪ್ರೀತಂ ತೆಗ್ಗಿನಮನೆ ಸಿನಿಮಾಗೆ ಚಿತ್ರಕಥೆ ಬರೆದಿದ್ದಾರೆ. ವಿವಾನ್ ರಾಧಾಕೃಷ್ಣ ಸಂಗೀತ ಸಂಯೋಜನೆ ಮಾಡಿದ್ದಾರೆ. ಕ್ರಿಸ್ಟಲ್ ಪಾರ್ಕ್ ಬ್ಯಾನರ್ ನಡಿ‌ ಈ ಸಿನಿಮಾವನ್ನು ನಿರ್ಮಾಪಕ ಟಿ ಆರ್ ಚಂದ್ರಶೇಖರ್ ಪ್ರಸ್ತುತಪಡಿಸುತ್ತಿದ್ದಾರೆ.

Published by:shrikrishna bhat
First published: