ಕಳೆದ ವರ್ಷ ಅಕ್ಟೋಬರ್‌ನಲ್ಲಿ (October) ನಾಗ ಚೈತನ್ಯ (Naga Chaitanya) ಮತ್ತು ಸಮಂತಾ ರುತ್ ಪ್ರಭು (Samantha Ruth Prabhu) ತಾವು ಬೇರೆ ಬೇರೆಯಾಗುತ್ತಿರುವ ಬಗ್ಗೆ ಘೋಷಿಸಿದಾಗ ಅದು ಅವರಿಬ್ಬರ ಫ್ಯಾನ್ಸ್ಗೆ (Fans)ಬೇಸರ ಮೂಡಿಸಿತ್ತು. ಈ ಇಬ್ಬರೂ ದೂರವಾಗುತ್ತಿದ್ದಾರೆ ಎಂಬ ಸುದ್ದಿ ಅವರು ಅಧಿಕೃತವಾಗಿ ಹೇಳುವ ಮೊದಲಿನಿಂದಲೂ ಸುದ್ದಿಯಲ್ಲಿತ್ತು. ಆದರೆ ಅವರಿಬ್ಬರೂ ಮಾತ್ರ ಬೇರೆಯಾಗಲು ಕಾರಣ ಏನು ಎಂಬ ಕುರಿತು ಮೌನವಾಗಿಯೇ ಇದ್ದಾರೆ. ಆದರೆ ನಾಗ ಚೈತನ್ಯ ಈ ಬಾರಿ ಸಮಂತಾ ಜೊತೆಗಿನ ವಿಚ್ಛೇದನ ಹೇಗೆ ಅವರ ವೃತ್ತಿಯ ಮೇಲೆ ಪರಿಣಾಮ ಬೀರಿದೆ ಎಂಬುದನ್ನ ಬಹಿರಂಗವಾಗಿ ಹೇಳಿದ್ದಾರೆ.
ವೃತ್ತಿ ಬೇರೆ ವೈಯಕ್ತಿಕ ಬದುಕು ಬೇರೆ
ನನ್ನ ವೈಯಕ್ತಿಕ ಜೀವನವು ನನ್ನ ವೃತ್ತಿ ಜೀವನದ ಮೇಲೆ ಪರಿಣಾಮ ಬೀರದಂತೆ ನಾನು ನನ್ನನ್ನು ಸಿದ್ದಮಾಡಿಕೊಂಡಿದ್ದೇನೆ. ಆದರೆ ನಿಸ್ಸಂಶಯವಾಗಿ ವೈಯಕ್ತಿಕ ಜೀವನದ ವಿಚಾರ ಹೊರ ಬಂದಾಗ ಅದು ನಿಮ್ಮ ವೃತ್ತಿ ಜೀವನಕ್ಕಿಂತ ಹೆಚ್ಚು ಸುದ್ದಿಯಾಗುತ್ತದೆ. ಅದು ನಿಜವಾಗಿಯೂ ನಿಮ್ಮಲ್ಲಿ ಹತಾಶೆಯನ್ನು ಉಂಟುಮಾಡುತ್ತದೆ. ನಿಮ್ಮ ವೈಯಕ್ತಿಕ ಜೀವನವನ್ನು ನಿಮ್ಮ ವೃತ್ತಿ ಜೀವನಕ್ಕೆ ಜನರು ಸೇರಿಸುವುದು ನಿಮಗೆ ಇಷ್ಟವಾಗುವುದಿಲ್ಲ. ನಾನು ಕೂಡ ಇದನ್ನು ಮಾಡುವುದಿಲ್ಲ. ವೃತ್ತಿ ಜೀವನ ಮತ್ತು ವೈಯಕ್ತಿಕ ಜೀವನ ಬೇರೆ ಬೇರೆ. ನಾನು ಎರಡನ್ನು ಮಿಕ್ಸ್ ಮಾಡುವುದಿಲ್ಲ. ಎರಡರ ನಡುವೆ ನಾನು ಸ್ಪಷ್ಟವಾಗಿ ತಡೆಗೋಡೆಯನ್ನು ಸೃಷ್ಟಿಸಿದ್ದೇನೆ ಎಂದು ನಾಗ ಚೈತನ್ಯ ಖಾಸಗಿ ಸಂಸ್ಥೆಗೆ ನೀಡಿದ ವಿಶೇಷ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: ರಣ ವಿಕ್ರಮ ಬೆಡಗಿಯ ಸೌಂದರ್ಯಕ್ಕೆ ಸಾಟಿ ಯಾರು? ಈ ನಟಿ ಹಾಕೋ ಫೋಟೋಗಳಿಗೆಲ್ಲಾ ಫಿದಾ ಆಗ್ತಾರೆ ಫ್ಯಾನ್ಸ್!
ಕೆಲವೊಮ್ಮೆ ಅವರು ನನ್ನ ವೈಯಕ್ತಿಕ ಜೀವನವನ್ನು ನನ್ನ ಚಲನಚಿತ್ರಗಳಿಗೆ ಜೋಡಿಸಿ ಮಾತನಾಡುವುದು, ಯಾರೋ ಹಾಗೇ ಹೇಳಿದರು ಮತ್ತು ಈಗಾಯಿತು ಎನ್ನುವುದು ಜೊತೆ, ಯಾವುದಕ್ಕೂ ಯಾವುದನ್ನೋ ಜೋಡಿಸುವುದು ನನಗೆ ಬೇಸರ ತರಿಸಿದೆ. ಆದರೆ ದುರದೃಷ್ಟವಶಾತ್, ಇಂದು ಅದು ಆಗುತ್ತಿದೆ. ಹಾಗೆಯೇ ಒಂದು ಸುದ್ದಿ ಇನ್ನೊಂದು ಸುದ್ದಿಯನ್ನು ಬದಲಿಸುತ್ತದೆ, ಆದ್ದರಿಂದ ನಾನು ಕಷ್ಟಪಟ್ಟು ಕೆಲಸ ಮಾಡುವುದನ್ನು ಕಲಿತಿದ್ದೇನೆ. ನನ್ನ ಕೆಲಸ ಹೆಚ್ಚು ಸುದ್ದಿಯಾಗುವಂತೆ ಮಾಡುತ್ತಿದ್ದೇನೆ, ಅದು ಆಗಿಯೇ ಆಗುತ್ತದೆ ಎಂದಿದ್ದಾರೆ.
ಸಮಂತಾ ಕೂಡ ಗರಂ ಆಗಿದ್ದಾರಂತೆ
ಇನ್ನು ಈ ಮಧ್ಯೆ ಸಮಂತಾ ಪದೇ ಪದೇ ತಮ್ಮ ವಯಯಕ್ತಿಕ ಜೀವನ ಚರ್ಚೆಯಾಗುತ್ತಿರುವ ಬಗ್ಗೆ ಕೋಪಗೊಂಡಿದ್ದಾರೆ. ಸಮಂತಾ ತನ್ನ ಸಿನಿಮಾ ಜೀವನದಲ್ಲಿ ಬ್ಯುಸಿ ಇದ್ದು, ಅದಕ್ಕಾಗಿ ಹಗಲಿರುಳು ದುಡಿಯುತ್ತಿದ್ದಾರೆ. ಹಾಗಾಗಿ ತನ್ನ ಪ್ರೇಕ್ಷಕರು ಮತ್ತು ಅಭಿಮಾನಿಗಳು ತನ್ನ ಕಲೆಯ ಬಗ್ಗೆ ಮಾತ್ರ ಮಾತನಾಡಬೇಕೆಂದು ಬಯಸುತ್ತಾರೆ ಮತ್ತು ವೈಯಕ್ತಿಕ ಜೀವನದ ಬಗ್ಗೆ ಮಾತನಾಡುವುದು ಇಷ್ಟವಾಗುವುದಿಲ್ಲ. ಆದರೆ, ಇದು ಸಾಧ್ಯವಾಗುತ್ತಿಲ್ಲ ಎಂದು ಬೇಸರಗೊಂಡಿದ್ದಾರಂತೆ. ಅದರಲ್ಲೂ ಇತ್ತೀಚೆಗೆ ಆಕೆಯ ಬಗ್ಗೆ ಮತ್ತು ಆಕೆಯ ವೈವಾಹಿಕ ಜೀವನದ ಬಗ್ಗೆ ಸಾಕಷ್ಟು ಸುದ್ದಿಗಳು ಹರಿದಾಡುತ್ತಿರುವುದು ನಟಿಯ ಅಸಮಾಧಾನಕ್ಕೆ ಕಾರಣವಾಗಿದೆ. ಆದರೆ ಇದ್ಯಾವುದು ತನ್ನ ಕೆಲಸದ ಮೇಲೆ ಪರಿಣಾಮ ಬೀರದಂತೆ ನಿರ್ವಹಿಸಿಕೊಂಡು ಹೋಗುತ್ತಿದ್ದಾರೆ.
ಇದನ್ನೂ ಓದಿ: ಆರನೇ ದಿನವೂ ಅಬ್ಬರಿಸುತ್ತಿದ್ದಾನೆ ವಿಕ್ರಾಂತ್ ರೋಣ, 150 ಕೋಟಿಯತ್ತ ಕಿಚ್ಚನ ಸಿನಿಮಾ ಪಯಣ
2017ರ ಅಕ್ಟೋಬರ್ 7ರಂದು ಗೋವಾದಲ್ಲಿ ಈ ಜೋಡಿಯ ಮದುವೆಯಾಗಿತ್ತು. ಈ ಜೋಡಿ ನಾಲ್ಕನೇ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಳ್ಳಬೇಕಿತ್ತು. ಆದರೆ ಅದೇ ಸಮಯದಲ್ಲಿ ಈ ಜೋಡಿ ಬೇರೆಯಾಗಿದೆ. ಅಧಿಕೃತವಾಗಿ ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ತುಂಬಾ ಯೋಚನೆ ಮಾಡಿ ನಾನು ಮತ್ತು ಚೈತನ್ಯ ನಮ್ಮದೇ ಆದ ದಾರಿಗಳಲ್ಲಿ ಸಾಗಲು ತೀರ್ಮಾನಿಸಿದ್ದೇವೆ. 10ಕ್ಕೂ ವರ್ಷಗಳ ನಮ್ಮ ಗೆಳೆತನ ನಂತರ ಮದುವೆ, ನಾವು ಪ್ರತ್ಯೇಕವಾದರೂ ಒಂದು ಅವಿನಾಭಾವ ಸಂಬಂಧ ಇದ್ದೇ ಇರುತ್ತೆ. ನಮ್ಮ ಕಷ್ಟದ ಸಮಯದಲ್ಲಿ ನಮಗೆ ಜೊತೆಯಾಗಿರಿ ಎಂದು ಪೋಸ್ಟ್ ಮಾಡಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ