2020ಕ್ಕೆ ಕಾಲಿಟ್ಟಾಗ ಹೊಸ ವರ್ಷ ಎಂದು ಜನರು ಸಂಭ್ರಮಿಸಿದ್ದರು. ಆದರೆ ಈಗ ಈ ವರ್ಷ ಯಾಕಾದರೂ ಬಂತೋ ಅಂತ ಹೇಳುವಂತಾಗಿದೆ. ಹೌದು, ನಿನ್ನೆಯಷ್ಟೆ ಸ್ಯಾಂಡಲ್ವುಡ್ ನಟ ಚಿರಂಜೀವಿ ಸರ್ಜಾ ಇಹಲೋಕ ತ್ಯಜಿಸಿದರು. ಈಗ ಮತ್ತೊಂದು ಸಾವಿನ ಸುದ್ದಿ ಬರ ಸಿಡಿಲಿನಂತೆ ಬಡಿದಿದೆ.
ಬಹು ಭಾಷಾ ನಟ ಮುರಳಿ ಶರ್ಮಾ ಅವರ ತಾಯಿ ಪದ್ಮಾ ಶರ್ಮಾ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಭಾನುವಾರ ಮುಂಬೈನ ಅವರ ಮನೆಯಲ್ಲೇ ಈ ಘಟನೆ ನಡೆದಿದ್ದು, ಅಗಲಿದ ಪದ್ಮಾ ಅವರಿಗೆ 67 ವರ್ಷವಾಗಿತ್ತು.
![Actor Murli Sharmas mother Padma passed away]()
ನಟ ಮುರಳಿ ಶರ್ಮಾ
ಟಾಲಿವುಡ್ ಹಾಗೂ ಬಾಲಿವುಡ್ನಲ್ಲಿ ತಮ್ಮ ಅಭಿನಯದ ಮೂಲಕ ತಮ್ಮದೇ ಆದ ಸ್ಥಾನ ಸಂಪಾದಿಸಿಕೊಂಡಿರುವ ನಟ ಮರಳಿ ಶರ್ಮಾ. ಖಳ ನಟನಾಗಿ, ಪೋಷಕ ನಟನಾಗಿ ಮನೆ ಮಾತಾಗಿರುವ ಶರ್ಮಾ ಅಲಾ ವೈಕುಂಠಪುರಲೋ ಸಿನಿಮಾದ ಯಶಸ್ಸಿನ ಖುಷಿಯಲ್ಲಿದ್ದರು.
ಇದನ್ನೂ ಓದಿ: Saif-Kareena: ಮಾಸ್ಕ್ ಇಲ್ಲದೆ ತೈಮೂರ್ ಜೊತೆ ಹೊರಗಡೆ ಬಂದು ಟ್ರೋಲ್ ಆದ ಸೈಫ್-ಕರೀನಾ: ಬುದ್ಧಿ ಹೇಳಿದ ಪೊಲೀಸ್..!
'ಅಲಾ ವೈಕುಂಠಪುರಂಲೋ' ಸಿನಿಮಾದಲ್ಲಿ ಅಲ್ಲು ಅರ್ಜುನ್ ತಂದೆ ವಾಲ್ಮೀಕಿ ಪಾತ್ರದಲ್ಲಿ ಪ್ರೇಕ್ಷಕರನ್ನು ರಂಜಿಸಿದ್ದ ನಟನಿಗೆ ತಾಯಿಯ ಅಗಲಿಕೆ ನಿಜಕ್ಕೂ ಭರಿಸಲಾರದ ನೋವನ್ನುಂಟು ಮಾಡಿದೆ.
ಇದನ್ನೂ ಓದಿ: Ramya: ಚಿರಂಜೀವಿ ಸರ್ಜಾ ಜೊತೆಗಿನ ನೆನಪು ಮೆಲುಕು ಹಾಕಿದ ನಟಿ ರಮ್ಯಾ
'ದಿಲ್ ವಿಲ್ ಪ್ಯಾರ್ ವ್ಯಾರ್' ಸಿನಿಮಾದ ಮೂಲಕ ಮುರಳಿ ಶರ್ಮಾ ಬಾಲಿವುಡ್ಗೆ ಎಂಟ್ರಿ ಕೊಟ್ಟು, 'ಮೈ ಹೂ ನಾ', 'ಧಮಾಲ್', 'ಜಾನೆ ತೂ ಯಾ ಜಾನೆ ನಾ', 'ಬೇಬಿ', 'ಗೋಲ್ಮಾಲ್ ರಿರ್ಟನ್ಸ್', 'ಬದ್ಲಾಪುರ್', 'ಸ್ಟ್ರೀಟ್ ಡ್ಯಾನ್ಸರ್ 3ಡಿ', ಸಾಕಷ್ಟು ತೆಲುಗು, ಮರಾಠಿ ಹಾಗೂ ತಮಿಳು ಸಿನಿಮಾಗಳಲ್ಲಿ ಪೋಷಕ ನಟರಾಗಿ ಕಾಣಿಸಿಕೊಂಡಿದ್ದಾರೆ.
HDB Rakshit Shetty: ಸರಳವಾಗಿ ಹುಟ್ಟುಹಬ್ಬ ಆಚರಿಸಿಕೊಂಡ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ..!
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ