ಇಂದು ಬರುತ್ತಾರೆ, ನಾಳೆ ಬರುತ್ತಾರೆ ಎಂದು ಕಾಯುತ್ತಿದ್ದ ಈ ನಟನ (Actors) ಅಭಿಮಾನಿಗಳಿಗೆ (Fans) ಶಾಕ್ ಆಗಿದೆ. ಬದುಕಿ ಬರುತ್ತಾರೆ ಎಂದುಕೊಂಡಿದ್ದ ಯುವನಟ ಮರದ ಬಾಕ್ಸ್ ಒಳಗೆ ಮೃತದೇಹವಾಗಿ ಪತ್ತೆಯಾಗಿದ್ದಾರೆ. ನಟನ ಕುತ್ತಿಗೆಯ ಸುತ್ತ ಮೆಟಲ್ ವೈರ್ ಬಿಗಿಯಲಾಗಿತ್ತು. ಕೈಗಳನ್ನು ಕಟ್ಟಲಾಗಿತ್ತು. ಯುವ ನಟ ದಿಢೀರ್ ನಾಪತ್ತೆಯಾಗಿದ್ದರು. ಸುಂದರ ನಗುವಿನ, ಎನರ್ಜೆಟಿಕ್ ಕಲಾವಿದ ಶ್ವಾನ ಪ್ರಿಯನೂ ಆಗಿದ್ದರು. ನಾಯಿಗಳೆಂದರೆ ತುಂಬಾ ಪ್ರೀತಿ (Love) ತೋರಿಸುತ್ತಿದ್ದ ಈ ನಟ ನಾಪತ್ತೆಯಾಗಿದ್ದಾಗ (Missing) ಅವರ ಅಭಿಮಾನಿಗಳು ಆತಂಕಕ್ಕೊಳಗಾಗಿದ್ದರು. ಆದರೆ ನಟ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ನಾಪತ್ತೆಯಾಗಿದ್ದ ನಟ ಜೆಫರ್ಸನ್ ಅಥವಾ ಜೆಫ್ ಮಕಾಡೋ ಡಾ ಕೋಸ್ತಾ ಕ್ಯಾಂಪೋ ಗ್ರಾಂಡ್ ಸಮೀಪದ ಜಾಗದಲ್ಲಿ ಹೂತಿಟ್ಟ ಪೆಟ್ಟಿಗೆಯಲ್ಲಿ ಪತ್ತೆಯಾಗಿದ್ದಾರೆ. ನಟನನ್ನು ಕೊಂದು ಪೆಟ್ಟಿಗೆಯೊಳಗೆ ಹಾಕಿ 2 ಮೀಟರ್ ಆಳದಲ್ಲಿ ಹೂತಿಡಲಾಗಿತ್ತು.
ಮೇ 22ರಂದು ನಟನ ಮೃತದೇಹ ಪತ್ತೆಯಾಗಿದೆ. 44 ವರ್ಷದ ನಟನ ಮೃತದೇಹವನ್ನು ಫಾರೆನ್ಸಿಕ್ ವಿಭಾಗದ ಸಿಬ್ಬಂದಿ ನೆರವಿನಿಂದ ಪತ್ತೆ ಮಾಡಲಾಗಿದೆ. ಫಿಂಗರ್ ಪ್ರಿಂಟ್ ನೆರವಿನಿಂದ ಮೃತದೇಹ ಪತ್ತೆ ಮಾಡಲಾಗಿದೆ.
ಇದನ್ನೂ ಓದಿ: Celebrity Marriage: ಅಕ್ಕ-ತಮ್ಮನಂತೆ ಕಾಣ್ತೀರಿ! ವೈವಾಹಿಕ ಜೀವನಕ್ಕೆ ಕಾಲಿಟ್ಟ ಸೌತ್ ಜೋಡಿ ಟ್ರೋಲ್
ನಾಪತ್ತೆಯಾಗಿದ್ದ ನಟನ ಯುನಿಟ್ನಿಂದ ಇಂಟರ್ವ್ಯೂ ಆಗಿದ್ದ ಮಹಿಳೆಯ ಪ್ರಾಪರ್ಟಿಯಲ್ಲಿಯೇ ಮೃತದೇಹವನ್ನು ಹೂತಿಡಲಾಗಿತ್ತು. ಆದರೆ ನನಗೆ ಜೆಫ್ನನ್ನು ಗೊತ್ತಿಲ್ಲ, ಪ್ರಾಪರ್ಟಿ ಬೇರೊಬ್ಬ ವ್ಯಕ್ತಿಗೆ ಬಾಡಿಗೆಗೆ ನೀಡಲಾಗಿತ್ತು ಎಂದು ಅವರು ಹೇಳಿದ್ದಾರೆ. ಪ್ರಾಪರ್ಟಿ ಬಾಡಿಗೆಗೆ ಪಡೆದ ವ್ಯಕ್ತಿಯನ್ನೂ ಪೊಲೀಸರು ಪತ್ತೆ ಮಾಡಿದ್ದಾರೆ.
ಇತ್ತೀಚೆಗೆ ಹಿಂದಿ ಕಿರುತೆರೆ ನಟಿ ವೈಭವಿ ಉಪಾಧ್ಯಾಯ ಅವರು ಕಾರು ಅಪಘಾತದಲ್ಲಿ ಮೃತಪಟ್ಟಿದ್ದರು. ಸಾರಾಭಾಯ್ ವರ್ಸಸ್ ಸಾರಾ ಭಾಯ್ ಶೋ ಮೂಲಕ ಖ್ಯಾತಿ ಗಳಿಸಿದ್ದ ನಟಿ ರಸ್ತೆ ಅಪಘಾತದಲ್ಲಿ ಸೋಮವಾರ ಮೃತಪಟ್ಟಿದ್ದರು. ಶೋ ನಿರ್ಮಾಪಕ ಜೆಡಿ ಮಜೆಥಿಯಾ ಅವರು ಈ ಸುದ್ದಿಯನ್ನು ಶೇರ್ ಮಾಡಿದ್ದಾರೆ. ಬದುಕು ಅನಿಶ್ಚಿತ. ಉತ್ತಮ ನಟಿ, ಗೆಳತಿ, ಜಾಸ್ಮಿನ್ ಎಂದೇ ಪ್ರಸಿದ್ಧಳಾಗಿದ್ದ ವೈಭವಿ ಉಪಾಧ್ಯಾಯ ಮೃತಪಟ್ಟಿದ್ದಾರೆ. ಅಪಘಾತದಲ್ಲಿ ನಟಿ ಸಾವನ್ನಪ್ಪಿದ್ದಾರೆ. ಅವರ ಮೃತದೇಹ ನಾಳೆ ಮುಂಬೈಗೆ ಬರಲಿದೆ. ವೈಭವಿ ಆತ್ಮಕ್ಕೆ ಶಾಂತಿ ಸಿಗಲಿ ಎಂದು ನಿರ್ಮಾಪಕ ಟ್ವೀಟ್ ಮಾಡಿದ್ದರು.
ನಟಿಗೆ ಅಪಘಾತ ಆಗುವ ಸಂದರ್ಭ ಅವರು ತಮ್ಮ ಭಾವೀ ಪತಿಯೊಂದಿಗೆ ಹಿಮಾಚಲ ಪ್ರದೇಶದಲ್ಲಿ ಪ್ರಯಾಣಿಸುತ್ತಿದ್ದರು. ಆದರೆ ಅವರ ಕಾರು ಕಂಟ್ರೋಲ್ ಕಳೆದುಕೊಂಡಿದೆ. ಸುದ್ದಿ ತಿಳಿಯುತ್ತಿದ್ದಂತೆ ನಟಿಯ ಸಹೋದರ ಹಿಮಾಚಲ ಪ್ರದೇಶಕ್ಕೆ ಬಂದಿದ್ದಾರೆ.
ನಟ, ನಿರ್ದೇಶಕ ದೇವೆನ್ ಭೋಜನಿ ಅವರು ಕೂಡಾ ನಟಿಯ ಸಾವಿನ ಬಗ್ಗೆ ಆಘಾತ ವ್ಯಕ್ತಪಡಿಸಿದ್ದಾರೆ. ನಟಿಯ ಫೋಟೋ ಶೇರ್ ಮಾಡಿ ಶಾಕಿಂಗ್! ಉತ್ತಮ ನಟಿ, ಗೆಳತಿ ವೈಭವಿ ಇನ್ನಿಲ್ಲ ಎಂದು ಬರೆದಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ