Milind And Ankita: ಪತ್ನಿ ಅಂಕಿತಾ ಫಿಟ್ನೆಸ್​​ನಿಂದ ಪ್ರಭಾವಿತರಾದ ನಟ ಮಿಲಿಂದ್ ಸೋಮನ್!

ಫಿಟ್ನೆಸ್ ಅಂತ ಬಂದಾಗ ಬಾಲಿವುಡ್ ನಟ ಮಿಲಿಂದ್ ಸೋಮನ್ ಅವರ ಹೆಸರು ಎಲ್ಲರಿಗಿಂತ ಸ್ವಲ್ಪ ಮೇಲೆಯೇ ಕಾಣಿಸುತ್ತದೆ. ಏಕೆಂದರೆ ಮಿಲಿಂದ್ ಸೋಮನ್ ಅವರು ತಮ್ಮ 56 ವರ್ಷ ವಯಸ್ಸಿನಲ್ಲಿಯೂ ತಮ್ಮ ದೇಹವನ್ನು ಒಳ್ಳೆ 30 ವರ್ಷ ವಯಸ್ಸಿನ ಯುವಕರಂತೆ ಫಿಟ್ ಆಗಿ ಇಟ್ಟುಕೊಂಡಿದ್ದಾರೆ. ಇವರ ಈ ಫಿಟ್ನೆಸ್ ಕ್ರೇಜ್​ಗೆ ಅವರ ಪತ್ನಿಯೇ ಸ್ಫೂರ್ಥಿ ಎನ್ನುವುದು ನಿಮಗೆ ಗೊತ್ತೇ?

ಮಿಲಿಂದ್ ಸೋಮನ್ ಮತ್ತು ಅಂಕಿತಾ ಕೊನ್ವಾರ್

ಮಿಲಿಂದ್ ಸೋಮನ್ ಮತ್ತು ಅಂಕಿತಾ ಕೊನ್ವಾರ್

  • Share this:
ಫಿಟ್ನೆಸ್ (Fitness) ಎಂಬ ವಿಷಯಕ್ಕೆ ಬಂದರೆ ಈ ಕ್ರೀಡಾಪಟುಗಳು, ಸಿನಿಮಾ ತಾರೆಯರು ಎಲ್ಲರಿಗಿಂತಲೂ ಒಂದು ಹೆಜ್ಜೆ ಮುಂದೇನೆ ಇರುತ್ತಾರೆ.  ಹೌದು. ಈ ಚಿತ್ರೋದ್ಯಮದ ಬಹುತೇಕ ನಟ (Actor), ನಟಿಯರು (Actress) ತಮ್ಮ ಫಿಟ್ನೆಸ್ ಕಾಪಾಡಿಕೊಳ್ಳಲು ಪ್ರತಿದಿನ ಜಿಮ್ ಗೆ (Gym) ಹೋಗಿ ಗಂಟೆಗಟ್ಟಲೆ ಕಠಿಣವಾದ ತಾಲೀಮು ಮಾಡುವುದು ಮತ್ತು ಯೋಗಾಭ್ಯಾಸ ಮಾಡುವುದನ್ನು ನಾವು ನೋಡುತ್ತೇವೆ. ಈಗಂತೂ ನಟ ಮತ್ತು ನಟಿಯರು ಮಾಡುವ ಅನೇಕ ವ್ಯಾಯಾಮ (Exercise) ಮತ್ತು ಯೋಗಾಭ್ಯಾಸದ ವಿಡಿಯೋಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಆಗಾಗ್ಗೆ ಹಂಚಿಕೊಳ್ಳುತ್ತಲೇ ಇರುವುದನ್ನು ನಾವು ನೋಡುತ್ತೇವೆ. ಒಟ್ಟಿನಲ್ಲಿ ಫಿಟ್ ಆಗಿರುವುದು ಇವತ್ತಿನ ದಿನಗಳಲ್ಲಿ ತುಂಬಾನೇ ಮುಖ್ಯವಾಗಿದೆ.

ಪತಿಯಂತೆಯೇ ಫಿಟ್ನೆಸ್ ಬಗ್ಗೆ ತುಂಬಾನೇ ಆಸಕ್ತಿ ಹೊಂದಿರುವ ಅಂಕಿತಾ

ಫಿಟ್ನೆಸ್ ಅಂತ ಬಂದಾಗ ಬಾಲಿವುಡ್ ನಟ ಮಿಲಿಂದ್ ಸೋಮನ್ ಅವರ ಹೆಸರು ಎಲ್ಲರಿಗಿಂತಲೂ ಸ್ವಲ್ಪ ಮೇಲೆಯೇ ನಮಗೆ ಕಾಣಿಸುತ್ತದೆ. ಏಕೆಂದರೆ ಮಿಲಿಂದ್ ಸೋಮನ್ ಅವರು ತಮ್ಮ 56 ವರ್ಷ ವಯಸ್ಸಿನಲ್ಲಿಯೂ ತಮ್ಮ ದೇಹವನ್ನು ಒಳ್ಳೆ 30 ವರ್ಷ ವಯಸ್ಸಿನ ಯುವಕರಂತೆ ಫಿಟ್ ಆಗಿ ಇಟ್ಟುಕೊಂಡಿರುವುದೇ ಇದರ ರಹಸ್ಯ. ಆದರೆ ಬಹುತೇಕರಿಗೆ ಇವರ ಹೆಂಡತಿ 31 ವರ್ಷ ವಯಸ್ಸಿನ ಅಂಕಿತಾ ಕೊನ್ವಾರ್ ಅವರು ತಮ್ಮ ಪತಿಯಂತೆಯೇ ಫಿಟ್ನೆಸ್ ಬಗ್ಗೆ ತುಂಬಾನೇ ಆಸಕ್ತಿ ಹೊಂದಿರುವವರೆಂದು ತಿಳಿದಿಲ್ಲ.

ಇದನ್ನೂ ಓದಿ: Pilates Girls: ಸಾರಾ, ಕಂಗನಾ, ಜಾನ್ವಿ ಕಪೂರ್‌ ಈ ಮೂರು ಜನರಲ್ಲೂ ಒಂದು ಕಾಮನ್ ವಿಚಾರ ಇದೆ, ಅದೇನು ನೋಡಿ

ಆರೋಗ್ಯಕರ ಜೀವನಶೈಲಿಯನ್ನು ಕಾಪಾಡಿಕೊಳ್ಳಲು ಇವರಿಬ್ಬರು ಸವಾಲಿನ ಭೂಪ್ರದೇಶದಲ್ಲಿ ಚಾರಣಕ್ಕೆ ಹೋಗುವುದು, ಮ್ಯಾರಥಾನ್ ನಲ್ಲಿ ಓಡುವುದು, ಫಿಟ್ನೆಸ್ ಸ್ಪರ್ಧೆಗಳಲ್ಲಿ ಭಾಗವಹಿಸುವುದು, ಯೋಗ ಅಭ್ಯಾಸ ಮತ್ತು ಇತರ ಅನೇಕ ಚಟುವಟಿಕೆಗಳನ್ನು ಆನಂದಿಸುತ್ತಾರೆ. ಅವರು ವಿನೋದಕ್ಕಾಗಿ ವ್ಯಾಪಕವಾಗಿ ಪ್ರಯಾಣಿಸಿದರೂ ಸಹ, ದಂಪತಿಗಳು ವ್ಯಾಯಾಮ ಮಾಡುವುದನ್ನು ಒಂದು ದಿನವು ಮಿಸ್ ಮಾಡಿಕೊಳ್ಳುವುದಿಲ್ಲವಂತೆ.

ಇವರ ಇತ್ತೀಚಿನ ವೈರಲ್ ವಿಡಿಯೋ 

ಇದಕ್ಕೆ ಪುರಾವೆ ಬೇಕೆ ನಿಮಗೆ? ಅವರ ವೈಯಕ್ತಿಕ ಇನ್‌ಸ್ಟಾಗ್ರಾಮ್ ಖಾತೆಯ ಪುಟಗಳನ್ನು ತ್ವರಿತವಾಗಿ ಇಣುಕಿ ನೋಡುವ ಮೂಲಕ ನೀವು ಇದನ್ನು ತುಂಬಾನೇ ಚೆನ್ನಾಗಿ ಅರ್ಥ ಮಾಡಿಕೊಳ್ಳಬಹುದು. ಇದಲ್ಲದೆ, ಅಂಕಿತಾ ಅವರ ಇತ್ತೀಚಿನ ಪೋಸ್ಟ್ ನಮ್ಮ ಸಮರ್ಥನೆಯನ್ನು ಬೆಂಬಲಿಸುತ್ತದೆ. ಏಕೆಂದರೆ ಅವರು ಲಡಾಖ್ ನಲ್ಲಿ ರಜಾ ದಿನಗಳಲ್ಲಿದ್ದಾಗ ಅವರ ಸೊಂಟದ ಚಲನಶೀಲತೆಯನ್ನು ಪರೀಕ್ಷಿಸಿದರು. ಅವರ ಪತಿ ಮಿಲಿಂದ್ ಸೋಮನ್ ಅವರಿಂದ ಪ್ರಶಂಸೆಯನ್ನು ಸಹ ಪಡೆದರು.

ಅಂಕಿತಾ ಇತ್ತೀಚೆಗೆ ತಮ್ಮ ಇನ್‌ಸ್ಟಾಗ್ರಾಮ್ ನಲ್ಲಿ "ನಿಮ್ಮ ಸೊಂಟದ ಚಲನಶೀಲತೆಯನ್ನು ಪರಿಶೀಲಿಸಿಕೊಳ್ಳಿ" ಎಂಬ ಶೀರ್ಷಿಕೆಯೊಂದಿಗೆ ತನ್ನ ವಿಡಿಯೋವನ್ನು ಅಪ್ಲೋಡ್ ಮಾಡಿದ್ದಾರೆ. 31 ವರ್ಷದ ಫಿಟ್ನೆಸ್ ಉತ್ಸಾಹಿ ರಗ್ಗಿನ ಮೇಲೆ ಮಲಗಿ, ಮೋಡ ಕವಿದ ನೀಲಿ ಆಕಾಶ, ಸುತ್ತಲೂ ಪರ್ವತಗಳ ಹಿನ್ನೆಲೆಯ ವಾತಾವರಣದಲ್ಲಿ ಯೋಗಾಭ್ಯಾಸ ಮಾಡುತ್ತಿರುವ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ವೀಡಿಯೋದಲ್ಲಿ, ಅವರು ತನ್ನ ಸೊಂಟದ ಚಲನೆಯನ್ನು ಸುಧಾರಿಸಲು ಯೋಗ ಹರಿವಿನ ಆಸನವನ್ನು ಮಾಡಿ ತೋರಿಸಿದ್ದಾರೆ.

ಅಂಕಿತಾ ಹಚ್ಚಿಕೊಂಡ ಆ ವಿಡಿಯೋದಲ್ಲೇನಿದೆ 
ಪಿಂಕ್ ಟ್ಯಾಂಕ್ ಟಾಪ್ ಮತ್ತು ಗಾಢ ಗುಲಾಬಿ ಯೋಗ ಪ್ಯಾಂಟ್ ಧರಿಸಿ ಅಂಕಿತಾ ತನ್ನ ಕೈಗಳನ್ನು ಮಡಚಿಕೊಂಡು ಚಾಪೆಯ ಮೇಲೆ ಅಡ್ಡಗಾಲಿಟ್ಟು ಕುಳಿತಿರುವುದನ್ನು ವಿಡಿಯೋದ ಆರಂಭದಲ್ಲಿ ನೋಡಬಹುದು. ನಂತರ ಅವರು ತನ್ನ ಕಾಲುಗಳನ್ನು ಹಿಂದಕ್ಕೆ ಎಳೆದುಕೊಂಡು ಮತ್ತು ಯಾವುದೇ ಸಹಾಯವಿಲ್ಲದೆ ತನ್ನ ದೇಹವನ್ನು ಮೊಣಕಾಲುಗಳ ಮೇಲೆ ಸಮತೋಲನಗೊಳಿಸುತ್ತಾಳೆ. ನಂತರ ನೇರವಾಗಿ ಎದ್ದು ನಿಲ್ಲುತ್ತಾರೆ, ಯಾವುದೇ ಸಹಾಯವಿಲ್ಲದೆ ರಗ್ಗಿನ ಮೇಲೆ ಮತ್ತೆ ಕುಳಿತುಕೊಳ್ಳುತ್ತಾರೆ ಮತ್ತು ಹಾಗೆಯೇ ಒಂದೆರಡು ಬಾರಿ ಮಾಡುತ್ತಾರೆ. ಈ ಯೋಗ ಹರಿವಿನ ದಿನಚರಿಯು ಸೊಂಟದ ಚಲನೆಯನ್ನು ಸುಧಾರಿಸುವುದರ ಜೊತೆಗೆ ಪ್ರಮುಖ ಸ್ನಾಯುಗಳನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ:  Breast Cancer: ಸ್ತನ ಕ್ಯಾನ್ಸರ್ ವಿರುದ್ಧ ಹೋರಾಡಿ ಗೆದ್ದಿರುವ ಕಿರುತೆರೆ ನಟಿ! ಅವರ ಆಹಾರ ಪದ್ಧತಿ ಹೀಗಿದೆ

ಅಂಕಿತಾ ಅವರ ಪೋಸ್ಟ್ ಗೆ ಅವರ ಫಾಲೋವರ್ಸ್ ಗಳಿಂದ ಅನೇಕ ಲೈಕ್ ಮತ್ತು ಕಾಮೆಂಟ್ ಗಳು ಬಂದಿವೆ. ಆಕೆಯ ಸಂಗಾತಿ ಮಿಲಿಂದ್ ಸೋಮನ್ ಕೂಡ ಈ ಕ್ಲಿಪ್ ಅನ್ನು ತುಂಬಾನೇ ಇಷ್ಟಪಟ್ಟರು ಮತ್ತು ಅವರನ್ನು ಹೊಗಳಿದರು. "ಇದು ಅದ್ಭುತ ಆಂಕಿ" ಅಂತ ಒಬ್ಬರು ಕಾಮೆಂಟ್ ಮಾಡಿದರೆ, ಇನ್ನೊಬ್ಬರು "ಇದು ಅದ್ಭುತವಾಗಿದೆ" ಎಂದು ಹೇಳಿದ್ದಾರೆ.
Published by:Ashwini Prabhu
First published: