ಸ್ಯಾಂಡಲ್ವುಡ್ನ ನಟಿ ಮೇಘನಾ ರಾಜ್ (Meghana Raj) ಕನ್ನಡ ಚಿತ್ರರಂಗದಲ್ಲಿ (Sandalwood) ತಮ್ಮದೇ ಆದ ನಟನೆಯ ಮೂಲಕ ಛಾಪು ಮೂಡಿಸಿದವರು. ಮೇಘನಾ ರಾಜ್ ಅವರ ಮುದ್ದು ಮಗನ ಜೊತೆ ವಿಡಿಯೋಗಳನ್ನು ಆಗ್ಗಾಗ್ಗೆ ಹಂಚಿಕೊಳ್ಳುತ್ತಿರುತ್ತಾರೆ. ಅಲ್ಲದೇ ಮಗ ರಾಯನ್ ರಾಜ್ ಸರ್ಜಾ (Raayan Raj Sarja) ಅವರ ಕ್ಯೂಟ್ ಫೋಟೋಗಳನ್ನೂ ಸಹ ಅಭಿಮಾನಿಗಳ ಜೊತೆ ಹಂಚಿಕೊಳ್ಳುವ ಮೇಘನಾ ಅವರು ಕಳೆದ ಕೆಲ ದಿನಗಳ ಹಿಂದೆ ಶೇರ್ ಮಾಡಿದ್ದ ವಿಡಿಯೋ ಒಂದು ಸಖತ್ ವೈರಲ್ ಆಗಿತ್ತು. ಇದೀಗ ಅದೇ ರೀತಿ ರಾಯನ್ ವಿಡಿಯೋವನ್ನು ಕನ್ನಡದ ಹಿರಿಯ ನಟಿ ಶ್ರುತಿ ಅವರ ಮಗಳು ಮತ್ತು ಗಾಯಕಿ ಗೌರಿ ಶ್ರುತಿ (Gowri Shruthi) ಅವರು ತಮ್ಮ ಇನ್ಸ್ಟಾಗ್ರಾಂ ನಲ್ಲಿ ಹಂಚಿಕೊಂಡಿದ್ದಾರೆ.
ರಾಯನ್ ರಾಜ್ ಸರ್ಜಾ ಕಿಚ್ಚ ಸುದೀಪ್ (Sudeep) ಅಭಿನಯದ ಬಹುನಿರೀಕ್ಷಿತ ವಿಕ್ರಾಂತ್ ರೋಣ (Vikrant Rona) ಚಿತ್ರದ ರಕ್ಕಮ್ಮಾ ಹಾಡಿಗೆ ಹೆಜ್ಜೆ ಹಾಕಿದ್ದಾನೆ. ಈ ವಿಡಿಯೋ ಸಹ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.
ರಾ.. ರಾ.. ರಕ್ಕಮಾ ಹಾಡಿಗೆ ಹೆಜ್ಜೆ ಹಾಕಿದ ರಾಯನ್:
ಕನ್ನಡ ಗಾಯಕಿ ಗೌರಿ ಶ್ರುತಿ ಅವರು ತಮ್ಮ ಗಾಯನದ ಜೊತೆಗೆ ಸಾಮಾಜಿಕ ಜಾಲತಾಣದಲ್ಲಿಯೂ ಸಕ್ರಿಯರಾಗಿರುತ್ತಾರೆ. ಅದರಂತೆ ಅವರು ಪಾರ್ಟಿಯೊಂದರಲ್ಲಿ ಮೇಘನಾ ರಾಜ್ ಅವರ ಪುತ್ರ ರಾಯನ್ ರಾಜ್ ಸರ್ಜಾ ಅವರೊಂದಿಗೆ ಸಖತ್ ಎಂಜಾಯ್ ಮಾಡಿದ್ದಾರೆ. ಅಲ್ಲದೇ ರಾಯನ್ ರಾಜ್ ಸರ್ಜಾ ಜೊತೆ ರೀಲ್ಸ್ ಮಾಡಿದ್ದು ಸಖತ್ ವೈರಲ್ ಆಗುತ್ತಿದೆ. ಹೌದು, ರಾಯನ್ ಜೊತೆ ಗೌರಿ ಅವರು ನಟ ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷಿತ ವಿಕ್ರಾಂತ್ ರೋಣ ಚಿತ್ರದ ರಾ.. ರಾ.. ರಕ್ಕಮ್ಮಾ ಹಾಡಿಗೆ ರೀಲ್ಸ್ ಮಾಡಿದ್ದಾರೆ.
View this post on Instagram
ಇದನ್ನೂ ಓದಿ: Meghana Raj: ಅಮ್ಮ ಅಂತ ಹೇಳಿಕೊಟ್ರು ಅಪ್ಪ ಎಂದ ರಾಯನ್, ಚಿರು ಮಗನ ಮುದ್ದಾದ ವಿಡಿಯೋ ನೋಡಿ
ಅಪ್ಪನನ್ನು ನೆನೆದ ರಾಯನ್ ರಾಜ್:
ರಾಯನ್ ರಾಜ್ ಸರ್ಜಾ ಅವರ ಜೊತೆ ಮೇಘನಾ ರಾಜ್ ವಿಡಿಯೋ ಹಂಚಿಕೊಂಡಿದ್ದು, ನೆಟ್ಟಿಗರ ಮನ ಗೆದ್ದಿದೆ. ಹೌದು ವಿಡಿಯೋದಲ್ಲಿ ಮೇಘನಾ ಮಗನಿಗೆ ಅಮ್ಮ ಎಂದು ಕರೆಯುವುದನ್ನ ಹೇಳಿಕೊಡುತ್ತಿದ್ದಾರೆ. ರಾಯನ್ ಕೂಡ ಮೇಘನಾ ಹೇಳಿದ ರೀತಿಯೇ ಹೇಳುತ್ತಿರುತ್ತಾನೆ. ಅವರು ಅಮ್ಮ ಎಂಬುದನ್ನ ವಿಭಿನ್ನವಾಗಿ ಹೇಳಿದರೂ ಸಹ ರಾಯನ್ ಹಾಗೆಯೇ ಹೇಳುತ್ತಾನೆ, ಈ ವಿಡಿಯೋ ಬಹಳ ಮುದ್ದಾಗಿದ್ದು, ಎಲ್ಲರಿಗೂ ಇಷ್ಟವಾಗಿದೆ. ಆದರೆ ಈ ವಿಡಿಯೋದ ಕೊನೆಯಲ್ಲಿ ಮಾತ್ರ ರಾಯನ್ ಅಮ್ಮ ಎಂದು ಹೇಳಿಕೊಟ್ಟರೆ ಅಪ್ಪ ಎನ್ನುತ್ತಾನೆ. ಇದು ಎಲ್ಲರ ಮನಸ್ಸನ್ನು ಗೆದ್ದಿದೆ.
View this post on Instagram
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ