Mega Star Chiranjeevi: ಬಡ ಕಲಾವಿದರಿಗೆ ಧನಸಹಾಯ ಮಾಡಲು ಮುಂದಾದ ಮೆಗಾಸ್ಟಾರ್​ ಚಿರು-ರಾಮ್​ಚರಣ್​..!

Mega Star Chiranjeevi donates one Crore: ಪವನ್​ ಕಲ್ಯಾಣ್​ ಅವರು ಹಣ ನೀಡುವುದಾಗಿ ಹೇಳಿದ ಬೆನ್ನಲ್ಲೇ ಅವರ ಅಣ್ಣ ಮೆಗಾಸ್ಟಾರ್​ ಚಿರಂಜೀವಿ ಸಹ ಬಡ ಸಿನಿ ಕಲಾವಿದರ ಸಹಾಯಕ್ಕೆ ಮುಂದಾಗಿದ್ದಾರೆ. ಬಡ ಕಲಾವಿದರಿಗೆ ಹಣ ಸಹಾಯ ಮಾಡುವುದಾಗಿ ಟ್ವೀಟ್​ ಮಾಡಿದ್ದಾರೆ.

Anitha E | news18-kannada
Updated:March 26, 2020, 6:39 PM IST
Mega Star Chiranjeevi: ಬಡ ಕಲಾವಿದರಿಗೆ ಧನಸಹಾಯ ಮಾಡಲು ಮುಂದಾದ ಮೆಗಾಸ್ಟಾರ್​ ಚಿರು-ರಾಮ್​ಚರಣ್​..!
ಚಿರಂಜೀವಿ
  • Share this:
ಟಾಲಿವುಡ್​ ಪವರ್ ಸ್ಟಾರ್ ಹಾಗೂ ಚಿರಂಜೀವಿ ಅವರ ತಮ್ಮ ಪವನ್​ ಕಲ್ಯಾಣ್​ ಸದ್ಯ ಬೆಳಿಗ್ಗೆಯಷ್ಟೆ ಕೊರೋನಾ ವಿರುದ್ಧ ಹೋರಾಡಲು ಪ್ರಧಾನಮಂತ್ರಿ ಪರಿಹಾರ ನಿಧಿಗೆ ಒಂದು ಕೋಟಿ ಹಾಗೂ ಆಂಧ್ರ-ತೆಲಂಗಾಣಕ್ಕೆ ತಲಾ 50 ಲಕ್ಷ ಹಣ ನೀಡುವುದಾಗಿ ಟ್ವೀಟ್ ಮಾಡಿದ್ದರು.

ಪವನ್​ ಕಲ್ಯಾಣ್​ ಅವರು ಹಣ ನೀಡುವುದಾಗಿ ಹೇಳಿದ ಬೆನ್ನಲ್ಲೇ ಅವರ ಅಣ್ಣ ಮೆಗಾಸ್ಟಾರ್​ ಚಿರಂಜೀವಿ ಸಹ ಬಡ ಸಿನಿ ಕಲಾವಿದರ ಸಹಾಯಕ್ಕೆ ಮುಂದಾಗಿದ್ದಾರೆ. ಬಡ ಕಲಾವಿದರಿಗೆ ಹಣ ಸಹಾಯ ಮಾಡುವುದಾಗಿ ಟ್ವೀಟ್​ ಮಾಡಿದ್ದಾರೆ.

 

ಕೊರೋನಾದಿಂದಾಗಿ ಇಡೀ ದೇಶವೇ ಸ್ತಬ್ಧವಾಗಿದೆ. ಇದರ ಪರಿಣಾಮ ಬಡ ಸಿನಿ ಕಲಾವಿದರ ದೈನಂದಿನ ಜೀವನದ ಮೇಲೂ ಆಗಿದೆ. ಅದಕ್ಕಾಗಿ ಅವರಿಗಾಗಿ ಒಂದು ಕೋಟಿ ನೀಡುವುದಾಗಿ ಚಿರು ಟ್ವೀಟ್​ ಮಾಡಿದ್ದಾರೆ.

The lockdown situation while mandatory to deal with the #CoronaCrisis,also adversely impacts the lives of daily wage workers & lower income groups in the country including the #TeluguFilmIndustry.Keeping this in mind I am donating Rs.1 Cr for providing relief to the Film workers.ಅಪ್ಪ ಹಾಗೂ ಚಿಕ್ಕಪ್ಪನ ದಾರಿಯಲ್ಲೇ ನಡೆಯುತ್ತಿರುವ ನಟ ರಾಮ್​ಚರಣ್​ ಸಹ ಕೊರೋನಾ ವಿರುದ್ಧ ಹೋರಾಟಕ್ಕೆ ಕೈ ಜೋಡಿಸಿದ್ದು, 70 ಲಕ್ಷ ಹಣ ನೀಡುವುದಾಗಿ ಹೇಳಿಕೊಂಡಿದ್ದಾರೆ.

Hope this tweet finds you in good health. At this hour of crisis, inspired by @PawanKalyan garu, I want to do my bit by contributing to aid the laudable efforts of our governments...ಚಿರಂಜೀವಿ ಸದ್ಯ ತಮ್ಮ 152ನೇ ಸಿನಿಮಾ'ಆಚಾರ್ಯ' ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಕೊರೋನಾ ಭೀತಿಯಿಂದಾಗಿ ಸದ್ಯಕ್ಕೆ ಸಿನಿಮಾದ ಕೆಲಸಗಳಿಗೆ ಬ್ರೇಕ್​ ಬಿದ್ದಿದೆ. ಈ ಚಿತ್ರವನ್ನು ಕೊರಟಾಲ ಶಿವ ನಿರ್ದೇಶಿಸುತ್ತಿದ್ದಾರೆ.

Nikhil-Revathi: ಬೇವು ಬೆಲ್ಲ ಹಂಚಿಕೊಂಡು ಸುಖ-ದುಖಃದಲ್ಲಿ ಸಮಪಾಲು ಸ್ವೀಕರಿಸುವುದಾಗಿ ಸಾರಿದ ನಿಖಿಲ್​-ರೇವತಿ..!

First published: March 26, 2020, 5:21 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading