Master Anand: ವಿನಯ್ ಗುರೂಜಿ ಕನಸು ನನಸು ಮಾಡಿದ ಮಾಸ್ಟರ್ ಆನಂದ್, ಗ್ರೀನ್​ ಗೆಳೆಯರಿಂದ ಅದ್ಭುತ ಕಾರ್ಯ

Sandalwood: ದಾವಣಗೆರೆಯಲ್ಲಿ ಅವಧೂತ ವಿನಯ್ ಗುರುಜಿ  ಅವರ ಗ್ರೀನ್ ಗೆಳೆಯರ ವತಿಯಿಂದ ಸ್ವಚ್ಚತಾ ಕಾರ್ಯವನ್ನು ಹಮ್ಮಿಕೊಳ್ಳಲಾಗಿತ್ತು. ಹರಿಹರದ ರಾಘವೇಂದ್ರ ಮಠದ ಹಿಂಭಾಗ ನದಿ ತಟವನ್ನು  ಶುಚಿಗೊಳಿಸುವ ಕಾರ್ಯದಲ್ಲಿ ಮಾಸ್ಟರ್ ಆನಂದ್ ಭಾಗಿಯಾಗಿದ್ದು, ಎಲ್ಲರ ಜೊತೆ ಸೇರಿ ಕ್ಲೀನ್ ಮಾಡಿದ್ದಾರೆ.

ನಟ ಮಾಸ್ಟರ್ ಆನಂದ್

ನಟ ಮಾಸ್ಟರ್ ಆನಂದ್

  • Share this:
ಸ್ಯಾಂಡಲ್​ ವುಡ್​ (Sandalwood) ಅಥವಾ ಯಾವುದೇ ಚಿತ್ರರಂಗದ ತಾರೆಯರು ಸಾಮಾಜಿಕ ಕೆಲಸಗಳನ್ನು (Social Work) ಮಾಡುತ್ತಾರೆ. ಈ ಮೂಲಕ ಜನರಿಗೆ ಕೆಲವೊಂದು ವಿಚಾರಗಳ ಬಗ್ಗೆ ಅರಿವು ಮೂಡಿಸುವ ಪ್ರಯತ್ನ ಮಾಡಲಾಗುತ್ತದೆ. ಹಾಗೆಯೇ ನಟ, ನಿರೂಪಕ ಮಾಸ್ಟರ್ ಆನಂದ್ (Master Anand) ಕೂಡ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡಿದ್ದು, ನದಿ ತಟ ಶುಚಿಗೊಳಿಸುವ ಮೂಲಕ ಮಾದರಿಯಾಗಿದ್ದಾರೆ. ದಾವಣಗೆರೆಯ(Davanagere)  ಹರಿಹರ ತುಂಗಭದ್ರಾ ನದಿ ತಟವನ್ನು ನಟ ಮಾಸ್ಟರ್ ಆನಂದ್ ಶುಚಿಗೊಳಿಸಿದ್ದು, ಈ ಕಾರ್ಯ ಜನರ ಮೆಚ್ಚುಗೆಗೆ ಪಾತ್ರವಾಗಿದೆ.

ದಾವಣಗೆರೆಯಲ್ಲಿ ಅವಧೂತ ವಿನಯ್ ಗುರೂಜಿ  ಅವರ ಗ್ರೀನ್ ಗೆಳೆಯರ ವತಿಯಿಂದ ಸ್ವಚ್ಚತಾ ಕಾರ್ಯವನ್ನು ಹಮ್ಮಿಕೊಳ್ಳಲಾಗಿತ್ತು. ಹರಿಹರದ ರಾಘವೇಂದ್ರ ಮಠದ ಹಿಂಭಾಗ ನದಿ ತಟವನ್ನು ಶುಚಿಗೊಳಿಸುವ ಕಾರ್ಯದಲ್ಲಿ ಮಾಸ್ಟರ್ ಆನಂದ್ ಭಾಗಿಯಾಗಿದ್ದು, ಎಲ್ಲರ ಜೊತೆ ಸೇರಿ ಕ್ಲೀನ್ ಮಾಡಿದ್ದಾರೆ.

ಈ ಕಾರ್ಯಕ್ಕೆ  ಬೆಂಗಳೂರಿನಿಂದ 20 ಜನರ ತಂಡ ದಾವಣಗೆರೆಗೆ ತೆರಳಿತ್ತು. ಆ 20 ಜನರು ಹಾಗು ಹರಿಹರದ ಸ್ಥಳೀಯ ನಾಗರಿಕರೂ ಸೇರಿ ನದಿ ಶುಚಿಗೊಳಿಸೋ ಕಾರ್ಯವನ್ನು ಮಾಡಿದ್ದಾರೆ.  ಅಲ್ಲದೇ, ನದಿ ತಟದ ಸ್ವಚ್ಛತೆ ಮುಗಿದ ನಂತರ  ಹರಿಹರೇಶ್ವರ ದೇವಸ್ಥಾನದ ಹಿಂಭಾಗವನ್ನು ಸಹ ಸ್ವಚ್ಚ ಮಾಡುವ ಕೆಲಸ ಆಗಿದ್ದು, ತಂಡದ ಸದ್ಯಸರು ಸೇರಿ ಉತ್ತಮ ಕಾರ್ಯ ಮಾಡಿದ್ದಾರೆ.

ಇನ್ನು ಸ್ವಚ್ಛತೆ ಕೆಲಸ ಮುಗಿದ ನಂತರ ಮಾದ್ಯಮಗಳ ಜೊತೆ ಮಾತನಾಡಿದ ನಟ ಮಾಸ್ಟರ್ ಆನಂದ್,  ಸ್ವಚ್ಛತೆ ಮಾಡುವುದು  ವಿನಯ್ ಗುರುಜಿ ಅವರ ಕನಸಾಗಿತ್ತು. ಅವರು ಯಾರಿಗೂ ಸ್ವಚ್ಚತೆ ಮಾಡಿ ಅಂತ ಹೇಳದೆ ಅವರ ಆ ಕಾರ್ಯ ಮಾಡಿದ್ದಾರೆ.  ಆದ್ದರಿಂದ  ದತ್ತಪೀಠ ಸೇರಿ ಹಲವು ಸ್ಥಳಗಳು ಸ್ವಚ್ಚವಾಗಿವೆ. ಹೀಗಾಗಿ ನಾವು ಏನಾದ್ರೂ ಮಾಡಬೇಕಲ್ಲ ಅಂತ ಹೇಳಿ ಸ್ನೇಹಿತರ ಜೊತೆ ಬಂದು ಸ್ವಚ್ಚತೆ ಮಾಡಿದ್ದೇವೆ ಎಂದು ತಿಳಿಸಿದ್ದಾರೆ.ಈ ಸ್ವಚ್ಚತಾ ಅಭಿಯಾನ ಈ ಮೂಲಕ ಜನರ ಮನೆಗೆ ಹಾಗೂ ಮನಸ್ಸಿಗೆ ಹೋಗುತ್ತದೆ. ಇಂತಹ ತಂಡ ಬಂದು ಸ್ವಚ್ಚತಾ ಕೆಲಸ ಮಾಡಿದ್ದಾರೆ ಎಂಬುದು ಅವರಿಗೆ ತಿಳಿದಾಗ ನಾವು ಕಸ ಚೆಲ್ಲಬಾರದು ಅನ್ನೋ ಭಾವನೆ ಬರುತ್ತೆ. ಜನರಲ್ಲಿ ಅರಿವು ಮೂಡಿಸುವ ದೃಷ್ಟಿಯಿಂದ ನಾವು ಈ ಅಭಿಯಾನ ಆರಂಭಿಸಿದ್ದೇವೆ ಎಂದು ದಾವಣಗೆರೆಯ ಹರಿಹರದಲ್ಲಿ ಮಾಸ್ಟರ್ ಆನಂದ್ ಹೇಳಿದ್ದಾರೆ.

ಅಲ್ಲದೇ, ನಾವು ಯಾವುದೇ ಸಾಮಾಜಿಕ ಕಾರ್ಯ ಮಾಡಲು ಸಿದ್ದರಾಗಿದ್ದೇವೆ. ಅದು, ಇದು ಎಂದಿಲ್ಲ. ಗೋ ಸೇವೆ, ಅಂಗವಿಕಲರಿಗೆ ಸಹಾಯ ಅಥವಬಾ ದೃಷ್ಟಿ ಹೀನರಿಗೆ ಇರಬಹುದು. ಯಾವುದೇ ಆದರೂ ಸರಿ. ನಮ್ಮಿಂದ ಇನ್ನೊಬ್ಬರಿಗೆ ಸಹಾಯವಾಗುತ್ತದೆ ಎಂದರೆ ಅದಕ್ಕೆ ನಾವು ಸಿದ್ದ ಎಂದಿದ್ದಾರೆ.

ಇದನ್ನೂ ಓದಿ: ಹಿಟ್​ ಆಗಿದ್ದು ಕಮಲ್ ಸಿನಿಮಾ, ಪಾರ್ಟಿ ಕೊಟ್ಟಿದ್ದು ಮೆಗಾಸ್ಟಾರ್​! ಇವ್ರಿಗ್​ ಸಾಥ್​ ಕೊಟ್ರು ಸಲ್ಲು ಭಾಯ್​

ಅಲ್ಲದೇ ನಾವು ಮಾಡುವ ಕಾರ್ಯದಿಂದ ನಾಲ್ಕು ಜನ ಪ್ರೇರಿತರಾಗಿ ಇನ್ನೂ ಹಲವು ಉತ್ತಮ ಕಾರ್ಯಗಳನ್ನು ಮಾಡಬಹುದು, ಇದರಿಂದ ಜನರಲ್ಲಿ ಅರಿವು ಹೆಚ್ಚಾಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
Published by:Sandhya M
First published: