• ಹೋಂ
 • »
 • ನ್ಯೂಸ್
 • »
 • ಮನರಂಜನೆ
 • »
 • The Vial: ಸಾಕ್ಷ್ಯಚಿತ್ರಕ್ಕೆ ದನಿಯಾಗಿದ್ದೇಕೆ ಮನೋಜ್ ಬಾಜಪೇಯಿ? ಅನುಭವ ಹಂಚಿಕೊಂಡ ಬಾಲಿವುಡ್ ನಟ

The Vial: ಸಾಕ್ಷ್ಯಚಿತ್ರಕ್ಕೆ ದನಿಯಾಗಿದ್ದೇಕೆ ಮನೋಜ್ ಬಾಜಪೇಯಿ? ಅನುಭವ ಹಂಚಿಕೊಂಡ ಬಾಲಿವುಡ್ ನಟ

'ದಿ ವೈಲ್' ಡಾಕ್ಯುಮೆಂಟರಿ

'ದಿ ವೈಲ್' ಡಾಕ್ಯುಮೆಂಟರಿ

ಭಾರತದ ವ್ಯಾಕ್ಸಿನೇಷನ್ ಡ್ರೈವ್ ಬಗ್ಗೆ ಬೆಳಕು ಚೆಲ್ಲುವ ಸಾಕ್ಷ್ಯಚಿತ್ರ ‘ದಿ ವೈಲ್ - ಇಂಡಿಯಾಸ್ ವ್ಯಾಕ್ಸಿನ್ ಸ್ಟೋರಿ'. ಇದಕ್ಕೆ ಧ್ವನಿ ನೀಡಿದ್ದ ಬಾಲಿವುಡ್ ಖ್ಯಾತ ನಟ ಮನೋಜ್ ಬಾಜಪೇಯಿ ಈ ಅನುಭವದ ಬಗ್ಗೆ ಹೇಳಿಕೊಂಡಿದ್ದಾರೆ.

 • Share this:

ಕೋವಿಡ್ (Covid) ಮಹಾಮಾರಿಯನ್ನು ಭಾರತ ಮಣಿಸಿದ್ದು ಹೇಗೆ? ಕೊರೊನಾಗೆ ಮದ್ದು (Corona Vaccine) ಕಂಡು ಹಿಡಿಯಲು ಪಟ್ಟ ಪ್ರಯತ್ನವೇನು? ಹೇಗಿತ್ತು ಭಾರತದ ವ್ಯಾಕ್ಸಿನೇಷನ್ ಹೋರಾಟ? ಈ ಎಲ್ಲಾ ವಿಚಾರಗಳ ಬಗ್ಗೆ ಬೆಳಕು ಚೆಲ್ಲುವ ಸಾಕ್ಷ್ಯಚಿತ್ರವೇ ಹಿಸ್ಟರಿ ಟಿವಿ18ನ (History TV18) ಡಾಕ್ಯುಮೆಂಟರಿ ‘ದಿ ವೈಲ್ - ಇಂಡಿಯಾಸ್ ವ್ಯಾಕ್ಸಿನ್ ಸ್ಟೋರಿ' (he Vail -India's Vaccine Story') ಈ ಸಾಕ್ಷ್ಯಚಿತ್ರಕ್ಕೆ ಧ್ವನಿ ನೀಡಿದ್ದು ಬಾಲಿವುಡ್‌ನ ಖ್ಯಾತ ನಟ ಮನೋಜ್ ಬಾಜಪೇಯಿ (Manoj Bajpayee). ಈ ಅನುಭವದ ಬಗ್ಗೆ ಖುದ್ದು ಮನೋಜ್ ಬಾಜಪೇಯಿ ಅವರೇ ಹೇಳಿಕೊಂಡಿದ್ದಾರೆ. ದೇಶದ ನಂಬಲಾಗದ ಕೋವಿಡ್ -19 ಲಸಿಕೆ ಪ್ರಯಾಣದ ಇತಿಹಾಸದ ಬಗ್ಗೆ ಮಾತನಾಡಿದ ಮನೋಜ್ ಬಾಜಪೇಯಿ, ಆರೋಗ್ಯ ಕ್ಷೇತ್ರದ ಕಾರ್ಯಕರ್ತರು ಮತ್ತು ಇತರರಿಗೆ ಗೌರವ ಸಲ್ಲಿಸುವ, ಅವರ ಕೊಡುಗೆ ಸ್ಮರಿಸುವ ಸಾಕ್ಷ್ಯಚಿತ್ರ ಇದಾಗಿದೆ. ಸಾಂಕ್ರಾಮಿಕ ರೋಗದ ವಿರುದ್ಧ ಭಾರತದ ಹೋರಾಟದಲ್ಲಿ ದೊಡ್ಡ ಬದಲಾವಣೆಯನ್ನು ಮಾಡಿದೆ ಅಂತ ಅವರು ಅಭಿಪ್ರಾಯಪಟ್ಟಿದ್ದಾರೆ.


‘ದಿ ವೈಲ್ - ಇಂಡಿಯಾಸ್ ವ್ಯಾಕ್ಸಿನ್ ಸ್ಟೋರಿ'ಯಲ್ಲಿ ಏನಿದೆ?


ಹಿಸ್ಟರಿ ಟಿವಿ18 ತಯಾರಿಸಿದ ಸಾಕ್ಷ್ಯಚಿತ್ರ ‘ದಿ ವೈಲ್ - ಇಂಡಿಯಾಸ್ ವ್ಯಾಕ್ಸಿನ್ ಸ್ಟೋರಿ' ಭಾರತದ ವ್ಯಾಕ್ಸಿನೇಷನ್ ಡ್ರೈವ್ ಬಗ್ಗೆ ಬೆಳಕು ಚೆಲ್ಲುತ್ತದೆ. ಮನೋಜ್ ಬಾಜಪೇಯಿ ನಿರೂಪಿಸಿದ ಈ ಸಾಕ್ಷ್ಯಚಿತ್ರವು ಕೋವಿಡ್ -19 ಲಸಿಕೆ ತಯಾರಿಕೆ ವೇಳೆ ಏನಾಯಿತು ಎಂಬುದರ  ಕಥೆಯನ್ನು ಹೇಳಲಿದೆ. ಇದು ಅಭೂತಪೂರ್ವ ಟೈಮ್‌ಲೈನ್‌ಗಳಲ್ಲಿ ಲಸಿಕೆಯನ್ನು ತಯಾರಿಸುವಲ್ಲಿ, ಅಭಿವೃದ್ಧಿಪಡಿಸುವಲ್ಲಿ ಮತ್ತು ತಲುಪಿಸುವಲ್ಲಿ ದೇಶದ ಯಶಸ್ಸನ್ನು ಬಹಿರಂಗಪಡಿಸುತ್ತದೆ.


ಡಾಕ್ಯುಮೆಂಟರಿ ಬಗ್ಗೆ ಮನೋಜ್ ಬಾಜಪೇಯಿ ಹೇಳಿದ್ದೇನು? “ನನಗೆ ಇದು ಮುಂಚೂಣಿಯ ಕಾರ್ಯಕರ್ತರು ಮತ್ತು ದೊಡ್ಡ ಬದಲಾವಣೆಯನ್ನು ಮಾಡಿದ ಇತರರಿಗೆ ಗೌರವ ಸಲ್ಲಿಸುವ ಮಾರ್ಗವಾಗಿದೆ. ಕೋವಿಡ್ ಸಮಯದಲ್ಲಿ ನಾವೆಲ್ಲರೂ ನಮ್ಮ ಮನೆಯೊಳಗೆ ಆರಾಂ ಆಗಿ ಇದ್ದೆವು. ಆದರೆ ಸಾವಿರಾರು ಜನರು ಹೊರಗೆ ಕೆಲಸ ಮಾಡುತ್ತಿದ್ದರು. ಜೊತೆಗೆ ವಿಜ್ಞಾನಿಗಳು, ಕುಟುಂಬ ಜೀವನವನ್ನು ತ್ಯಾಗ ಮಾಡಿದ ಮತ್ತು ತಮ್ಮ ಜೀವನವನ್ನು ಪಣಕ್ಕಿಟ್ಟ ಮುಂಚೂಣಿಯ ಕಾರ್ಯಕರ್ತರು ಎಲ್ಲರೂ ಕೋವಿಡ್ ವಿರುದ್ಧ ಹೋರಾಡುತ್ತಿದ್ದರು. ಈ ಸಾಕ್ಷ್ಯಚಿತ್ರವು ಅವರ ಕೊಡುಗೆಯನ್ನು ಸ್ಮರಿಸುತ್ತದೆ” ಅಂತ ಮನೋಜ್ ಬಾಜಪೇಯಿ ಹೇಳಿದ್ದಾರೆ.


ಇದನ್ನೂ ಓದಿ: The Vial: ಹಿಸ್ಟರಿ ಟಿವಿ18ನ 'ದಿ ವೈಲ್'ನಲ್ಲಿ ಕೋವಿಡ್ ವ್ಯಾಕ್ಸಿನೇಷನ್ ಚಿತ್ರಣ, ಮಾರ್ಚ್ 24ರಂದು ಡಾಕ್ಯುಮೆಂಟರಿ ಅನಾವರಣ


ಯಶಸ್ಸಿನ ಹಿಂದೆ ಅನೇಕ ಸವಾಲುಗಳು


ಎರಡು ದಿನಗಳಲ್ಲಿ ಪ್ರಾಜೆಕ್ಟ್‌ಗಾಗಿ ರೆಕಾರ್ಡಿಂಗ್ ಪೂರ್ಣಗೊಳಿಸಿದ ಮನೋಜ್ ಬಾಜಪೇಯಿ, ಸಾಕ್ಷ್ಯಚಿತ್ರಕ್ಕೆ ನಿರೂಪಕನಾಗಿ ನಟಿಸಿರುವುದು ಸಿನಿಮಾದಲ್ಲಿ ನಟಿಸಿದಷ್ಟು ಸುಲಭವಲ್ಲ. ಭಾರತದ ಲಸಿಕೆ ಕಥೆಯು ಬಹುಮುಖಿಯಾಗಿತ್ತು. ಲಸಿಕೆ ಪಡೆದುಕೊಳ್ಳು ಜನರು ಹಿಂಜರಿದರೂ. ಆದರೆ 1.3 ಬಿಲಿಯನ್ ಭಾರತೀಯರಿಗೆ ಕಾರ್ಯತಂತ್ರಗಳನ್ನು ಯೋಜಿಸಿದ ಮತ್ತು ಕಾರ್ಯಗತಗೊಳಿಸಿದ ಬೃಹತ್ ಇನಾಕ್ಯುಲೇಷನ್ ಡ್ರೈವ್‌ನಲ್ಲಿ ಕೆಲವು ಸವಾಲುಗಳು ದೊಡ್ಡ ಅಡೆತಡೆಗಳನ್ನು ದಾಟಿ ಯಶಸ್ವಿಯಾಯ್ತು ಅಂತ ಮನೋಜ್ ಬಾಜಪೇಯಿ ಹೇಳಿದ್ದಾರೆ.
ಡಾಕ್ಯುಮೆಂಟರಿಯಲ್ಲಿ ಹಲವರ ಅಭಿಪ್ರಾಯ


‘ದಿ ವೈಲ್ - ಇಂಡಿಯಾಸ್ ವ್ಯಾಕ್ಸಿನ್ ಸ್ಟೋರಿ’ ಹಲವು ಪ್ರಥಮಗಳು ಮತ್ತು ಹಲವಾರು ಅನ್ಟೋಲ್ಡ್ ಸ್ಟೋರಿಗಳನ್ನು ಹೊಂದಿದೆ. ಮೊದಲ ಬಾರಿಗೆ, ಕೋವಿಡ್ -19 ಸಾಂಕ್ರಾಮಿಕ ರೋಗದ ವಿರುದ್ಧ ಭಾರತದ ವಿಜಯದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ವಿವರವಾಗಿ ಮಾತನಾಡಿದ್ದಾರೆ. ಈ ಸಾಕ್ಷ್ಯಚಿತ್ರವು ಲಸಿಕೆ ತಯಾರಕರ ಸಂದರ್ಶನಗಳನ್ನು ಒಳಗೊಂಡಿದೆ. ಸೆರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ ಸಿಇಒ ಪೂನಾವಾಲಾ ಮತ್ತು ಭಾರತ್ ಬಯೋಟೆಕ್‌ನ ಅಧ್ಯಕ್ಷ ಡಾ ಕೃಷ್ಣ ಸೇರಿದಂತೆ ಹಲವರು ಮಾತನಾಡಿದ್ದಾರೆ.


ಪ್ರತಿಯೊಬ್ಬರೂ ಇದನ್ನು ವೀಕ್ಷಿಸಲಿ


“ಸಾಕ್ಷ್ಯಚಿತ್ರವು ಲಸಿಕೆ ಹೇಗೆ ಬಂದಿತು ಮತ್ತು ಅದನ್ನು ಜನಸಾಮಾನ್ಯರಿಗೆ ಹೇಗೆ ವಿತರಿಸಲಾಯಿತು ಎಂಬುದರ ಕುರಿತು ವಿವರಿಸುತ್ತದೆ. ಪ್ರತಿಯೊಬ್ಬರೂ ಅದನ್ನು ವೀಕ್ಷಿಸಬೇಕು. ಕೋವಿಡ್ ಹೊಡೆದೋಡಿಸಲು ವ್ಯಾಕ್ಸಿನ್ ತಯಾರಕರು ಶ್ರಮಿಸಿದ್ದಾರೆ. ನೀವು ಸಾಕ್ಷ್ಯಚಿತ್ರವನ್ನು ವೀಕ್ಷಿಸಿದಾಗ, ಅದನ್ನು ಲಘುವಾಗಿ ತೆಗೆದುಕೊಳ್ಳಬೇಡಿ ಅಂತ ಬಾಜಪೇಯಿ ಹೇಳಿದ್ರು.
ವ್ಯಾಕ್ಸಿನೇಷನ್‌ನಲ್ಲಿ ಭಾರತದ ಸಾಧನೆ

top videos


  ಭಾರತವು 1.3 ಬಿಲಿಯನ್ ಜನಸಂಖ್ಯೆಯನ್ನು ಕನಿಷ್ಠ ಒಂದು ಡೋಸ್ ಲಸಿಕೆಯೊಂದಿಗೆ ಚುಚ್ಚುಮದ್ದು ನೀಡುವುದರ ಮೂಲಕ ಜಾಗತಿಕವಾಗಿ ದೊಡ್ಡ ಪಾತ್ರವನ್ನು ವಹಿಸಿದೆ. ಭಾರತದ ವ್ಯಾಕ್ಸಿನೇಷನ್ ಡ್ರೈವ್ ಮೂಲಕ 100 ದೇಶಗಳಲ್ಲಿ 232.43 ಮಿಲಿಯನ್ ಡೋಸ್ ಕೋವಿಡ್ -19 ಲಸಿಕೆಯನ್ನು ಒದಗಿಸಲಾಗಿದೆ ಎಂಬುದು ಭಾರತದ ಸಾಧನೆಗೆ ಹಿಡಿದ ಸಾಕ್ಷಿಯಾಗಿದೆ.

  First published:

  ಸುದ್ದಿ 18ಕನ್ನಡ ಟ್ರೆಂಡಿಂಗ್

  ಮತ್ತಷ್ಟು ಓದು