ಬಾಲಿವುಡ್​ ಖಳನಟ ಮಹೇಶ್ ಆನಂದ್​ ನಿಧನ; ಕೊಳೆತ ಸ್ಥಿತಿಯಲ್ಲಿ ದೇಹ ಪತ್ತೆ

ಮುಂಬೈನ ಅವರ ಮನೆಯಲ್ಲಿ ಕೊಳೆತ ಸ್ಥಿತಿಯಲ್ಲಿ ದೇಹ ಪತ್ತೆಯಾಗಿದ್ದು, ಇದು ಆತ್ಮಹತ್ಯೆಯೋ ಅಥವಾ ಸಹಜ ಸಾವೋ ಎಂಬುದು ಇನ್ನೂ ನಿಗೂಢವಾಗಿದೆ ಎಂದು ಮುಂಬೈ ಪೊಲೀಸರು ತಿಳಿಸಿದ್ಧಾರೆ.

Latha CG | news18
Updated:February 10, 2019, 11:17 AM IST
ಬಾಲಿವುಡ್​ ಖಳನಟ ಮಹೇಶ್ ಆನಂದ್​ ನಿಧನ; ಕೊಳೆತ ಸ್ಥಿತಿಯಲ್ಲಿ ದೇಹ ಪತ್ತೆ
ಮಹೇಶ್​ ಆನಂದ್​
Latha CG | news18
Updated: February 10, 2019, 11:17 AM IST
ಮುಂಬೈ,(ಫೆ.10): ಬಾಲಿವುಡ್​ನ ಹಲವಾರು ಚಿತ್ರಗಳಲ್ಲಿ ಖಳನಾಯಕನಾಗಿ ನಟಿಸಿದ್ದ ಮಹೇಶ್​ ಆನಂದ್ ತಮ್ಮ 57 ವಯಸ್ಸಿನಲ್ಲಿ​ ಶನಿವಾರ ನಿಧನರಾಗಿದ್ದಾರೆ.

ಮುಂಬೈನ ಅವರ ಮನೆಯಲ್ಲಿ ಕೊಳೆತ ಸ್ಥಿತಿಯಲ್ಲಿ ದೇಹ ಪತ್ತೆಯಾಗಿದ್ದು, ಇದು ಆತ್ಮಹತ್ಯೆಯೋ ಅಥವಾ ಸಹಜ ಸಾವೋ ಎಂಬುದು ಇನ್ನೂ ನಿಗೂಢವಾಗಿದೆ ಎಂದು ಮುಂಬೈ ಪೊಲೀಸರು ತಿಳಿಸಿದ್ಧಾರೆ.

80 ಮತ್ತು 90ರ ದಶಕದ ಚಲನಚಿತ್ರಗಳಲ್ಲಿ ಖಳನಾಯಕ ನಟರಾಗಿದ್ದ ಮಹೇಶ್‌ ಅಪಾರ ಜನಪ್ರಿಯತೆ ಗಳಿಸಿದ್ದರು. ಅನೇಕ ಬಾಲಿವುಡ್​ ಸಿನಿಮಾಗಳಲ್ಲಿ ವಿಲನ್ ಪಾತ್ರದಲ್ಲಿ ಕಾಣಿಸಿಕೊಂಡಿರುವ ಮಹೇಶ್​ ಹಲವಾರು ದಿಗ್ಗಜರ ಜೊತೆ ತೆರೆ ಹಂಚಿಕೊಂಡಿದ್ದಾರೆ. ಕಳೆದ ತಿಂಗಳು ತೆರೆಕಂಡ 'ರಂಗೀಲಾ ರಾಜಾ' ಚಿತ್ರ ಮಹೇಶ್​ ಆನಂದ್​ ನಟಿಸಿದ ಕೊನೆಯ ಚಿತ್ರವಾಗಿದೆ. ಕುರುಕ್ಷೇತ್ರ, ಸ್ವರ್ಗ, ಕೂಲಿ ನಂ.1, ವಿಜೇತ ಇನ್ನೋ ಮೊದಲಾದ ಚಿತ್ರಗಳಲ್ಲಿ ನಟಿಸಿದ್ದಾರೆ.

TRAILER: 'ಆನೆ ನಡೆದಿದ್ದೇ ದಾರಿ ತಾಕತ್ತಿದ್ದರೆ ಕಟ್ಟಾಕು': 'ಯಜಮಾನ'ನ ಮಾಸ್​ ಎಂಟ್ರಿ

ಮಹೇಶ್​ ಆನಂದ್​ ಕಳೆದ 18 ವರ್ಷಗಳಿಂದ ತೆರೆ ಮೇಲೆ ಕಾಣಿಸಿಕೊಂಡಿರಲಿಲ್ಲ. 18 ವರ್ಷಗಳ ಬಳಿಕ ರಂಗೀಲಾ ರಾಜಾ ಚಿತ್ರದಲ್ಲಿ ಅವಕಾಶ ಸಿಕ್ಕಿತ್ತು. ಅದೇ ಕೊನೆಯ ಸಿನಿಮಾ ಕೂಡ ಆಯಿತು. ಸಿನಿಮಾಗಳಲ್ಲಿ ಅವಕಾಶ ಸಿಗದ ಕಾರಣ ಕುಸ್ತಿ ಪಂದ್ಯಗಳಲ್ಲಿ ತೊಡಗಿದ್ದರು. ತಮ್ಮ ಜೀವಿತದ ಕೆಲವು ಸಮಯದಲ್ಲಿ ಆರ್ಥಿಕ ಸಂಕಷ್ಟವನ್ನು ಸಹ ಅನುಭವಿಸಿದ್ದರು.

ಮಹೇಶ್​ ಆನಂದ್​ಗೆ ಕುಡಿತದ ಚಟವಿದ್ದು, ಹೆಂಡತಿಯಿಂದ ದೂರಾಗಿ ಒಂಟಿಯಾಗಿ ಬದುಕುತ್ತಿದ್ದರು. ಅವರ ಪತ್ನಿ ಮಾಸ್ಕೋನಲ್ಲಿ ಇದ್ದರು ಎನ್ನಲಾಗಿದೆ. ಮಹೇಶ್​ ಸಾವಿನ ಹಿಂದಿನ ಕಾರಣ ಇನ್ನೂ ಅಸ್ಪಷ್ಟವಾಗಿದ್ದು, ಮರಣೋತ್ತರ ಪರೀಕ್ಷೆ ಬಳಿಕ ತಿಳಿದು ಬರಲಿದೆ ಎಂದು ವೈದ್ಯರು ತಿಳಿಸಿದ್ದಾರೆ.

First published:February 10, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...