Veerappan Web Series: ಮತ್ತೆ ವೀರಪ್ಪನ್​ ಪಾತ್ರದಲ್ಲಿ ನಟ ಕಿಶೋರ್​: ನಾಲ್ಕು ಭಾಷೆಗಳಲ್ಲಿ ರಿಲೀಸ್ ಆಗಲಿದೆ ವೆಬ್​ ಸಿರೀಸ್​..!

Veerappan-Hunger For Killing: ಸ್ಯಾಂಡಲ್​ವುಡ್​ನಲ್ಲಿ ಈ ಹಿಂದೆ ಅಟ್ಟಹಾಸ ಎಂಬ ಸಿನಿಮಾ ಮಾಡಿದ್ದ ನಿರ್ದೇಶಕ ಎಎಂಆರ್ ರಮೇಶ್ ಈಗ ವೀರಪ್ಪನ್​ ಕಥೆಯನ್ನು ವೆಬ್​ ಸಿರೀಸ್ ಮಾಡಲು ಹೊರಟ್ಟಿದ್ದಾರೆ. ಅಟ್ಟಹಾಸ ಚಿತ್ರದಲ್ಲಿ ನಟ ಕಿಶೋರ್​ ವೀರಪ್ಪನ್​ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈಗ ವೆಬ್​ ಸರಣಿಯ್ಲಲೂ ಅವರೇ ವೀರಪ್ಪನ್​ ಆಗಿ ಮುಂದುವರೆಯಲಿದ್ದಾರೆ.

Anitha E | news18-kannada
Updated:July 20, 2020, 3:49 PM IST
Veerappan Web Series: ಮತ್ತೆ ವೀರಪ್ಪನ್​ ಪಾತ್ರದಲ್ಲಿ ನಟ ಕಿಶೋರ್​: ನಾಲ್ಕು ಭಾಷೆಗಳಲ್ಲಿ ರಿಲೀಸ್ ಆಗಲಿದೆ ವೆಬ್​ ಸಿರೀಸ್​..!
ವೀರಪ್ಪನ್​ ವೆಬ್​ ಸಿರೀಸ್​ನಲ್ಲಿ ನಟ ಕಿಶೋರ್​
  • Share this:
ಪೊಲೀಸರು ಹಾಗೂ ಜನರ ನಿದ್ದೆಗೆಡಿಸಿದ್ದ ಕಾಡುಗಳ್ಳ ಹಾಗೂ ದಂತಚೋರ ವೀರಪ್ಪನ್​ ಮೇಲೆ ಈಗಾಗಲೇ ಸಿನಿಮಾ ಬಂದಿದೆ. ಈಗ ಇದೇ ವೀರಪ್ಪನ್​ ಕಥೆ ವೆಬ್​ ಸಿರೀಸ್ ಆಗಲಿದೆ. ವೀರಪ್ಪನ್​ ಮೇಲೆ ಸಿನಿಮಾ ಮಾಡಿದ್ದ ನಿರ್ದೇಶಕ ಹಾಗೂ ನಟ ಕಿರೋಶ್​ ಈ ವೆಬ್​ ಸಿರೀಸ್​ಗಾಗಿ ಮತ್ತೆ ಜೈ ಜೋಡಿಸಿದ್ದಾರೆ.

ಸ್ಯಾಂಡಲ್​ವುಡ್​ನಲ್ಲಿ ಈ ಹಿಂದೆ 'ಅಟ್ಟಹಾಸ' ಎಂಬ ಸಿನಿಮಾ ಮಾಡಿದ್ದ, ನಿರ್ದೇಶಕ ಎಎಂಆರ್ ರಮೇಶ್ ಈಗ ವೀರಪ್ಪನ್​ ಕಥೆಯನ್ನು ವೆಬ್​ ಸಿರೀಸ್ ಮಾಡಲು ಹೊರಟ್ಟಿದ್ದಾರೆ. 'ಅಟ್ಟಹಾಸ' ಚಿತ್ರದಲ್ಲಿ ನಟ ಕಿಶೋರ್​ ವೀರಪ್ಪನ್​ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈಗ ವೆಬ್​ ಸರಣಿಯ್ಲಲೂ ಅವರೇ ವೀರಪ್ಪನ್​ ಆಗಿ ಮುಂದುವರೆಯಲಿದ್ದಾರೆ.

Actor Kishore starrer web series based on veerappan story will be releasing in four languages
ವೀರಪ್ಪನ್​


'ಕಾಡುಗಳ್ಳ ವೀರಪ್ಪನ್​ ಕಥೆಯನ್ನು ಒಂದು ಸಿನಿಮಾದಲ್ಲಿ ಹೇಳುವಂತದ್ದಲ್ಲ. ಮುಖ್ಯವಾದದ್ದನ್ನು ಮಾತ್ರ ಸಿನಿಮಾದಲ್ಲಿ ಹೇಳಲಾಗಿತ್ತು. ಈಗ ಸುದೀರ್ಘವಾಗಿ ವೀರಪ್ಪನ್​ ಬಗ್ಗೆ ವೆಬ್​ ಸಿರೀಸ್​​ನಲ್ಲಿ ತೋರಿಸಲಾಗುವುದು. ಆಗಸ್ಟ್​ನಿಂದ ವೀರಪ್ಪನ್​ ವೆಬ್​ಸರಣಿಯ ಚಿತ್ರೀಕರಣ ಆರಂಭಿಸಲಾಗುವುದು. ಅಟ್ಟಹಾಸ ಸಿನಿಮಾಗಾಗಿ ಚಿತ್ರೀಕರಿಸಿದ್ದ ಕೆಲವು ದೃಶ್ಯಗಳಲ್ಲೂ ಇದರಲ್ಲಿ ಬಳಸಿಕೊಳ್ಳಲಾಗುವುದು' ಎಂದು ನಿರ್ದೇಶಕ ರಮೇಶ್​ ಹೇಳಿದ್ದಾರೆ.

Vaishnavi: ಕ್ಲಾಸಿ ಲುಕ್​ನಲ್ಲಿ ಕಾಣಿಸಿಕೊಂಡ ಅಗ್ನಿಸಾಕ್ಷಿ ಖ್ಯಾತಿಯ ನಟಿ ವೈಷ್ಣವಿ..!



10 ಗಂಟೆಯಲ್ಲಿ 12 ಸಂಚಿಕೆಗಳಲ್ಲಿ  ಕಾಡುಗಳ್ಳನ ಸಂಪೂರ್ಣ ಕಥೆ ಹೇಳಲಾಗುವುದಂತೆ. ಇನ್ನು ಇದರ ಚಿತ್ರೀಕರಣವನ್ನು ಆದಷ್ಟು ಬೇಗ ಅಂದರೆ, ಸೆಪ್ಟೆಂಬರ್​ನಲ್ಲೇ ಮುಗಿಸಲು ಪ್ರಯತ್ನಿಸಿ, ಡಿಸೆಂಬರ್​ ಹೊತ್ತಿಗೆ ಇದನ್ನು ರಿಲೀಸ್​ ಮಾಡಲು ಯೋಜಿಸಲಾಗಿದೆಯಂತೆ. ​ಕಿಶೋರ್​ ಜತೆ ಬಾಲಿವುಡ್​ನ ಕೆಲವು ಕಲಾವಿದರೂ ಇರಲಿದ್ದಾರಂತೆ. ಈ ಕುರಿತಾಗಿ ಸದ್ಯದಲ್ಲೇ ಮಾಹಿತಿ ನೀಡುವುದಾಗಿ ನಿರ್ದೇಶಕರು ತಿಳಿಸಿದ್ದಾರೆ.ಇದನ್ನೂ ಓದಿ: ಅರಿಶಿಣ ಶಾಸ್ತ್ರದ ಫೋಟೋ ಹಂಚಿಕೊಂಡ ಪ್ರಿನ್ಸ್​ ಮಡದಿ ನಮ್ರತಾ ಶಿರೋಡ್ಕರ್​..!

ನಟ ಕಿಶೋರ್ ಸಹ ಈ ಹಿಂದೆಯೇ ಹೇಳಿದ್ದರು. ಇನ್ನು ಮುಂದೆ ಸಿನಿಮಾಗಳ ಆಯ್ಕೆಯಲ್ಲಿ ಚೂಸಿಯಾಗಲಿದ್ದೇನೆ. ಜೊತೆಗೆ ವೆಬ್​ ಸರಣಿಯಲ್ಲೂ ನಟಿಸುತ್ತೇನೆ ಎಂದಿದ್ದರು. ಸದ್ಯ ಲಾಕ್​ಡೌನ್​​ನಲ್ಲಿ ತಮ್ಮ ತೋಟದಲ್ಲಿ ಕೃಷಿ ಮಾಡುವುದರಲ್ಲಿ ಬ್ಯುಸಿಯಾಗಿದ್ದಾರೆ ಈ ನಟ.

ಇದನ್ನೂ ಓದಿ: Meghana Gaonkar: ಇಂಗ್ಲಿಷ್​ ರ‍್ಯಾಪ್​ ಸಾಂಗ್​ ಹಾಡಿದ ಮೇಘನಾ ಗಾಂವ್ಕ​ರ್​: ಇಲ್ಲಿದೆ ವಿಡಿಯೋ..!
Published by: Anitha E
First published: July 20, 2020, 3:20 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading