ಕಾಂತಾರ (Kantara) ನಟ ಕಿಶೋರ್ (Kishore) ಅವರು ಸೋಷಿಯಲ್ ಮಿಡಿಯಾದಲ್ಲಿ (Social Media) ತುಂಬಾ ಆ್ಯಕ್ಟಿವ್ ಆಗಿದ್ದಾರೆ. ನಟ ಆಗಾಗ ಹೊಸ ಪೋಸ್ಟ್ಗಳನ್ನು ಶೇರ್ ಮಾಡುತ್ತಲೇ ಇರುತ್ತಾರೆ. ವಿಶೇಷವಾಗಿ ಏನಾದರೂ ಗಂಭೀರವಾದ ವಿಚಾರ, ಚರ್ಚೆಯಲ್ಲಿರುವ ಟಾಪಿಕ್ಗಳ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ತಿಳಿಸುತ್ತಾರೆ. ಬೆಂಗಳೂರಿನಲ್ಲಿ (Bengaluru) ಏಪ್ರಿಲ್ 29ರಂದು ಮಧ್ಯಾಹ್ನ ಕೆಲವೊಂದು ಪ್ರದೇಶದಲ್ಲಿ ಭಾರೀ ಮಳೆಯಾಗಿದ್ದು(Rain) ಅದರ ಕೆಲವು ವಿಡಿಯೋಸ್ ವೈರಲ್ (Viral) ಆಗಿದೆ. ಅವುಗಳಲ್ಲಿ ಒಂದು ವಿಡಿಯೋವನ್ನು ನಟ ಕಿಶೋರ್ ಶೇರ್ ಮಾಡಿದ್ದು ತಮ್ಮ ಕೆಲವು ವ್ಯೂಗಳನ್ನು ಶೇರ್ ಮಾಡಿದ್ದಾರೆ.
ದೇವರಕೆರೆ ಎಂಬುದು ಬೆಂಗಳೂರು ದಕ್ಷಿಣ ಭಾಗದಲ್ಲಿರುವ 1000 ವರ್ಷ ಹಿಂದಿನ ಶುದ್ಧ ನೀರಿನ ಕೆರೆ. ಇದು ಹೊಯ್ಸಳ ಕಾಲದ ಕೆರೆ ಎಂದು ಹೇಳಲಾಗುತ್ತದೆ. ಈ ಕೆರೆ ಎಲ್ಲಿವರೆಗೆ ಅರಣ್ಯ ಇಲಾಖೆಯ ಸುಪರ್ದಿಯಲ್ಲಿತ್ತೋ ಅಲ್ಲಿಯವರೆಗೆ ಈ ಕೆರೆ ಸುಸ್ಥಿರ ಶುದ್ಧ ನೀರಿನ ಕೆರೆಯಾಗಿ ಸುಂದರ ಮತ್ತು ಸ್ವಚ್ಛವಾಗಿತ್ತು.
ಆದರೆ 10 ವರ್ಷಗಳ ಹಿಂದೆ ಈ ಕೆರೆಯನ್ನು ಬಿಬಿಎಂಪಿ ಬಿಟ್ಟುಕೊಡಲಾಯಿತು. ಬಿಬಿಎಂಪಿ ಅಭಿವೃದ್ಧಿಯ ಹೆಸರಿನಲ್ಲಿ 5 ವರ್ಷಕ್ಕಿಂತ ಕಡಿಮೆ ಅವಧಿಯಲ್ಲಿಯೇ ಈ ಕೆರೆಯನ್ನು ಕೊಂದುಬಿಟ್ಟರು. ಅನಗತ್ಯ ಅಭಿವೃದ್ಧಿ ಗುತ್ತಿಗೆ ಕಾಮಗಾರಿಗಳು ಕೋಟಿಗಟ್ಟಲೆ ತೆರಿಗೆ ಪಾವತಿದಾರರ ಹಣವನ್ನು ಮಳೆನೀರಿನ ಚರಂಡಿಗಳಿಗೆ ಒಳಚರಂಡಿಯನ್ನು ಜೋಡಿಸಲು ವ್ಯಯಿಸಲಾಗುತ್ತದೆ.
View this post on Instagram
ಇದನ್ನೂ ಓದಿ: Rashmika Mandanna: ಸೌತ್ನ ಸ್ಟಾರ್ ಹೀರೋಗಳನ್ನೆಲ್ಲ ಹಿಂದಿಕ್ಕಿ ರಶ್ಮಿಕಾ ಹೊಸ ದಾಖಲೆ
ವಿಡಿಯೋ ನೋಡಿ ನೆಟ್ಟಿಗರೇನಂದ್ರು?
ಅಭಿವೃದ್ಧಿಯ ಹೆಸರಲ್ಲಿ ಹಾಳಾಗಿರುವ ಇಂತಹ ಇನ್ನೆಷ್ಟು ಸಂಪನ್ಮೂಲಗಳು ಇದಿಯೋ ಗೊತ್ತಿಲ್ಲ ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ. ಇದರ ವಿರುದ್ಧ ಕೆರೆ ಅವಲಂಬಿತ ಪ್ರದೇಶದ ಜನರಿಂದ ಆಂದೋಲನವೇ ಆಗಬೇಕು ಎಂದಿದ್ದಾರೆ ಇನ್ನೊಬ್ಬರು.
ನಮ್ಮ ಭ್ರಷ್ಟ ರಾಜಕಾರಣಿಗಳು ದೇಶ ಅಭಿವೃದ್ಧಿ ಮಾಡುತ್ತಿಲ್ಲ ಸರ್. ದೇಶದ ಪ್ರಕೃತಿ , ವಿಕೃತಿ , ಆರ್ಥಿಕತೆ, ನಮ್ಮಂತಹ ಬಡವರ ಜೀವನ ಹಾಳು ಮಾಡುತ್ತಾ , ತಮ್ಮ ವಂಶಾಭಿವೃದ್ಧಿ ಆಗುವಷ್ಟು ಕೊಟ್ಯಂತರ ದುಡ್ಡು ಮಾಡುತ್ತಿದ್ದಾರೆ ಸರ್ ಎಂದು ಕಮೆಂಟ್ ಮಾಡಿದ್ದಾರೆ ಇನ್ನೊಬ್ಬರು.
ಕೆರೆಯಲ್ಲಿ ನೀರಿಲ್ಲದಾಗ ಕೆಟ್ಟ ನೀರು ಹರಿಸಿ ಹಾಳುಮಾಡೋದು. ಮಳೆ ಬಿದ್ದು ಅದೇ ಕೆರೆಗಳು ಉಕ್ಕಿ ಹರಿದಾಗ ಬಾಯಿ ಬಡಕೊಳ್ಳೋದು. ಮೇಲೆ ಯಾರಿದ್ದಾರೆ ಅನ್ನೋದು ಆಮೇಲೆ, ತೊಂದರೆ ಆದಾಗ ನಮ್ಮ ಜೊತೆ ಯಾರು ಇರುತ್ತಾರೆ ಅನ್ನೋದು ಮುಖ್ಯ ಅನ್ನೋದು ನಿಮ್ಮ ಮಾತುಗಳಿಂದ ನಾವು ತಿಳ್ಕೊಬೇಕು ಸರ್. ನೀವು ಉತ್ತಮ ಕೆಲಸ ಮಾಡುತ್ತಿದ್ದೀರಿ ಎಂದಿದ್ದಾರೆ.
ನಮ್ಮ ಭ್ರಷ್ಟ ರಾಜಕಾರಣಿಗಳು ನಮ್ಮ ದೇಶ ಅಭಿವೃದ್ಧಿ ಮಾಡುತ್ತಿಲ್ಲ. ವಿನಾಶ ಮಾಡುತ್ತಿದ್ದಾರೆ ಸರ್. ಹೊಟ್ಟೆ ಉರಿಯುತ್ತೆ ಕಿಶೋರ್ ಅವ್ರೆ ! ನಾವೇನಾದರೂ ಮಾಡಬಹುದೇ ಎಂದಿದ್ದಾರೆ ಇನ್ನೊಬ್ಬರು.
ಕಿಶೋರ್ ಅವರು ಶೇರ್ ಮಾಡಿರುವ ವಿಡಿಯೋಗೆ 4 ಸಾವಿರಕ್ಕೂ ಹೆಚ್ಚು ಲೈಕ್ಸ್ ಬಂದಿದೆ. ವಿಡಿಯೋ ನೋಡಿದ ನೆಟ್ಟಿಗರು ಬಿಬಿಎಂಪಿ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ