sandalwoodಸ್ಯಾಂಡಲ್ವುಡ್ ನಟ ಕಿಶೋರ್ ತಮ್ಮ ನೈಜ ಅಭಿನಯದಿಂದಲೇ ಕನ್ನಡ ಸಿನಿ ಪ್ರಿಯರ ಮನಸ್ಸಿನಲ್ಲಿ ಜಾಗ ಮಾಡಿಕೊಂಡಿದ್ದಾರೆ. ಇಂತಹ ನಟ ಈ ಹಿಂದೆ ಕೈಯಲ್ಲಿ ಹಾರೆ ಹಿಡಿದು ಭೂಮಿ ಅಗೆಯುತ್ತಿದ್ದ ಚಿತ್ರ ವೈರಲ್ ಆಗಿತ್ತು. ಆಗಲೇ ಎಲ್ಲರೂ ಕಿಶೋರ್ ಬಣ್ಣದ ಬದುಕಿಗೆ ವಿದಾಯ ಹೇಳಿ ಭೂಮಿತಾಯಿಯ ಮಗನಾಗಲು ಹೊರಟಿದ್ದಾರಾ ಎಂದು ಮಾತನಾಡಿಕೊಳ್ಳೋಕೆ ಆರಂಭಿಸಿದ್ದರು.
ಆಗಲೇ ಕಿಶೋರ್, ತಾವು ಸಿನಿಮಾದ ಜೊತೆಗೆ ಕೃಷಿ ಮಾಡಲು ಮುಂದಾಗಿರುವುದಾಗಿ ಸ್ಪಷ್ಟಪಡಿಸಿದ್ದರು. ಸಾಲದಕ್ಕೆ ಕಮರ್ಷಿಯಲ್ ಸಿನಿಮಾಗಳಿಗಿಂತ ಹೆಚ್ಚಾಗಿ ಸಂದೇಶ ಕೊಡುವ ಕತೆಗಳಿಗೆ ಈಗ ಒತ್ತು ಕೊಡುತ್ತಿರುವುದಾಗಿಯೂ ಹೇಳಿಕೊಂಡಿದ್ದರು. ವೆಬ್ ಸರಣಿಗಳ ಜೊತೆಗೆ ಬಹಳ ಚೂಸಿಯಾಗಿ ಸಿನಿಮಾಗಳ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ ಕಿಶೋರ್.
![Actor Kishore dons directorial hat for Black and White]()
ಕಿಶೋರ್
ಸಿನಿಮಾ ಬಿಟ್ಟು ಉಳಿದ ಸಮಯದಲ್ಲಿ ಕೃಷಿಯಲ್ಲಿ ತೊಡಗಿಕೊಂಡಿದ್ದಾರೆ. ಸದ್ಯ ಲಾಕ್ಡೌನ್ನಲ್ಲಿ ತಮ್ಮ ತೋಟದಲ್ಲಿ ಗೋಡೆಗಳ ಮೇಲೆ ಸಗಣಿಯಿಂದ ಚಿತ್ತಾರ ಬಿಡಿಸುತ್ತಿದ್ದಾರೆ. ಅದಂರೆ ಪಕ್ಕಾ ಮಣ್ಣಿನ ಮಗನಂತೆ ಸದ್ಯ ಫುಲ್ ಟೈಮ್ ಕೃಷಿ ಮಾಡುತ್ತಿದ್ದು, ಅದರ ಚಿತ್ರಗಳನ್ನು ಆಗಾಗ ತಮ್ಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಳ್ಳುತ್ತಿರುತ್ತಾರೆ.
ಕಿಶೋರ್ ಅವರಿಗೆ ಬೆಂಗಳೂರಿನ ಹೊರ ವಲಯದಲ್ಲಿ ಹಾಗೂ ಮತ್ತೆ ಮಲೆನಾಡಿನಲ್ಲಿ ತೋಟವಿದೆಯಂತೆ. ಸಿನಿಮಾ ಇಲ್ಲದಾಗ ಕಿಶೋರ್ ಹಾಗೂ ಅವರ ಪತ್ನಿ ಅಲ್ಲಿಗೆ ಹೋಗಿ ಕೃಷಿಯಲ್ಲಿ ತೊಡಗಿಕೊಳ್ಳುತ್ತಾರಂತೆ. ಈಗಲೂ ಸಹ ಗೋಡೆ ಮೇಲಿನ ಬರವಣಿಗೆ ಅಂತ ಕಿಶೋರ್ ಕೈಯಲ್ಲಿ ಬೆರಣಿ ಹಿಡಿದು ಸೆಲ್ಫಿ ತೆಗೆದುಕೊಂಡಿದ್ದಾರೆ. ಆದರೆ ಇದು ಎಲ್ಲಿ ತೆಗೆದುಕೊಂಡ ಚಿತ್ರ ಅನ್ನೋದು ತಿಳಿದು ಬಂದಿಲ್ಲ.
50ನೇ ವಯಸ್ಸಿನಲ್ಲೂ ಬೋಲ್ಡ್ ಫೋಟೋಶೂಟ್ಗೆ ಪೋಸ್ ಕೊಟ್ಟಿದ್ದ ನಟಿ ಶ್ರೀದೇವಿ..!
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ